ಪ್ರತಿಯೊಬ್ಬ ತರುಣಿ ತಾನು ಇತರರಿಗಿಂತ ಹಾಟ್‌ ಆಗಿ ಕಂಡುಬರಲು ಯತ್ನಿಸುತ್ತಾಳೆ. ಆದರೆ ಇದಕ್ಕಾಗಿ ಆಕೆ ತನ್ನ ಡ್ರೆಸ್‌ ಸಹ ಅಷ್ಟೇ ವಿಶಿಷ್ಟವಾಗಿರಬೇಕು ಎಂಬುದನ್ನು ಗಮನಿಸಬೇಕು, ಆಗ ಮಾತ್ರವೇ ಅವಳು ಹಾಟ್‌ ಎನಿಸಲು ಸಾಧ್ಯ. ಜೊತೆಗೆ ಆಕೆಯ ಚರ್ಮ ಸಹ ಅಷ್ಟೇ ಹೊಳಪಿನಿಂದ ಕೂಡಿರಬೇಕು, ಅದು ಪ್ಲಸ್‌ ಪಾಯಿಂಟ್‌. ಈ ಕೆಳಗಿನ ಸಲಹೆಗಳನ್ನು ಅನುಸರಿಸಿದರೆ ಯಾವ ತರುಣಿಯಾದರೂ ಹಾಟ್‌ ಎನಿಸಬಲ್ಲಳು :

ಫ್ಯಾಷನ್‌ ಟ್ರೆಂಡ್‌ ನಲ್ಲಿ ಹಾಟ್‌ ಸೈಡ್‌ ಕ್ಲೀವೇಜ್‌ ಋತುವಿಗೆ ತಕ್ಕಂತೆ ಫ್ಯಾಷನ್‌ ಟ್ರೆಂಡ್‌ ಆಗಾಗ ಬದಲಾಗುತ್ತಲೇ ಇರುತ್ತದೆ. ಇತ್ತೀಚೆಗೆ ಸೈಡ್‌ ಕ್ಲೀವೇಜ್‌ ಪ್ರದರ್ಶಿಸುವ ಫ್ಯಾಷನ್‌ ಹಾಟ್‌ ಟ್ರೆಂಡ್‌ ಎನಿಸಿದೆ. ಬಾಲಿವುಡ್‌ ಪಾರ್ಟಿ ಇರಲಿ ಅಥವಾ ರೆಡ್‌ ಕಾರ್ಪೆಟ್ ಫ್ಯಾಷನ್‌, ಎಲ್ಲಾ ಕಡೆ ನಿಮಗೆ ಈ ಫ್ಯಾಷನ್‌ ಟ್ರೆಂಡ್‌ನಲ್ಲಿರುವುದು ಗೊತ್ತಾಗುತ್ತದೆ. ಬಾಲಿವುಡ್‌ ನ ಗ್ಲಾಮರಸ್‌ ಸ್ಟಾರ್ಸ್‌ ಮಲ್ಲಿಕಾ ಶೆರಾವತ್‌ ಹಾಗೂ ಮಂದಿರಾ ಬೇಡಿ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಹಾಟ್‌ ಆಗಿ ಕಂಡುಬರಲು ಸೈಡ್‌ ಕ್ಲೀವೇಜ್‌ನ್ನೇನೋ ಪ್ರದರ್ಶಿಸಲು ಸಿದ್ಧರಾಗಿದ್ದಾಯ್ತು, ಆದರೆ ಮತ್ತೊಂದು ಮುಖ್ಯ ವಿಷಯ ಎಂದರೆ ನೀವು ನಿಮ್ಮ ಚರ್ಮದ ಮೈಕಾಂತಿ ಹಾಗೂ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನವಿಡಬೇಕು. ನಿಮ್ಮ ತ್ವಚೆಗೆ ಹೆಚ್ಚಿನ ಶೈನಿಂಗ್‌ ಇಲ್ಲದಿದ್ದರೆ ನೀವು ಸೆಕ್ಸೀ ಆಗಿ ಕಂಡುಬರಲಾರಿರಿ.

ಟ್ರೆಂಡ್ನಲ್ಲಿದೆ ಬಿಕಿನಿ ವ್ಯಾಕ್ಸ್

ನಮ್ಮ ಸಿನಿಮಾ ನಟಿಯರ ಚರ್ಮ ಹೇಗೆ ಫಳಫಳ ಹೊಳೆಯುತ್ತಿರುತ್ತದೆ ಎಂಬುದನ್ನು ನೀವು ಗಮನಿಸಿರಬಹುದು. ಇದೆಲ್ಲ ಅವರಿಗೆ ನೈಸರ್ಗಿಕವಾಗಿಯೇ ದೊರಕಿದ್ದು ಎಂದೇನಲ್ಲ. ಅವರು ತಮ್ಮ ಚರ್ಮವನ್ನು ಮತ್ತಷ್ಟು ಸುಂದರ ಸುಮನೋಹರವಾಗಿಸಲು, ಸಾಧಾರಣ ವ್ಯಾಕ್ಸ್ ನಿಂದ ಬಿಕಿನಿ ವ್ಯಾಕ್ಸ್ ವರೆಗೂ ಮಾಡಿಸುತ್ತಾರೆ. ಸಾಮಾನ್ಯವಾಗಿ ಬ್ಯೂಟಿಪಾರ್ಲರ್‌ ಗಳಿಗೆ ಹೋಗುವ ಎಲ್ಲಾ ಮಹಿಳೆಯರೂ ವ್ಯಾಕ್ಸಿಂಗ್‌ ಮಾಡಿಸಿಯೇ ಇರುತ್ತಾರೆ. ಆದರೆ ಇತ್ತೀಚೆಗೆ ಹೈಫೈ ಪಾರ್ಲರ್‌ ಗಳಲ್ಲಿ ಬಿಕಿನಿ ವ್ಯಾಕ್ಸ್ ಚಾಲ್ತಿಯಲ್ಲಿದೆ. ಈ ವ್ಯಾಕ್ಸ್ ದೇಹದ ಮೇಲಿನ ಅನಗತ್ಯ ಕೂದಲನ್ನು ಸಂಪೂರ್ಣ ತೊಲಗಿಸುತ್ತದೆ. ಬ್ಯೂಟೀಶಿಯನ್‌ ಭಾಷೆಯಲ್ಲಿ ದೇಹದ ಗುಪ್ತಾಂಗಗಳ ವ್ಯಾಕ್ಸ್ ನ್ನು ಬಿಕಿನಿ ವ್ಯಾಕ್ಸ್ ಎನ್ನಲಾಗುತ್ತದೆ.

ಬಿಕಿನಿ ವ್ಯಾಕ್ಸ್ ನಿಂದ ಬ್ಯೂಟಿಫುಲ್ ಸ್ಕಿನ್

sexylook

ಸಾಮಾನ್ಯವಾಗಿ ಹಿಂದಿನ ಬ್ಯೂಟಿ ಪಾರ್ಲರ್‌ ಗಳಲ್ಲಿ ಈ ಸೌಲಭ್ಯ ಇರುತ್ತಿರಲಿಲ್ಲ, ಆದರೆ ಇಂದಿನ ಹೈಫೈ ಪಾರ್ಲರ್‌ ಗಳಲ್ಲಿ ಬಿಕಿನಿ ವ್ಯಾಕ್ಸ್ ಸೌಲಭ್ಯವಿದೆ. ಕೆಲವು ಮಹಿಳೆಯರು ತಮ್ಮ ಹೈಜೀನ್‌ ಗಾಗಿ ಇದನ್ನು ಮಾಡಿಸಿಕೊಂಡರೆ, ಹಲವರು ದೈಹಿಕ ಸಮಾಗಮಗಳಲ್ಲಿ ಹೊಸತನ ತರಿಸಲಿಕ್ಕೂ ಇದನ್ನು ಮಾಡಿಸುತ್ತಾರೆ. ಇದನ್ನು ಫುಲ್ ಬ್ರೆಝಿಲಿಯನ್‌ ವ್ಯಾಕ್ಸಿಂಗ್‌ ಎಂದೂ ಹೇಳಬಹುದು.

ಹಾಟ್ಔಟ್ಫಿಟ್ಸ್ ಕ್ಯಾರಿ ಮಾಡುವುದಕ್ಕಾಗಿ

ಬಾಲಿವುಡ್‌ ನ ಈ ಟ್ರೆಂಡ್‌ ನ್ನು ಈ ದಿನಗಳಲ್ಲಿ ಸಾಮಾನ್ಯ ಹುಡುಗಿಯರು ಸಹ ಫಾಲೋ ಮಾಡುತ್ತಿದ್ದಾರೆ. ಕಾಲೇಜು ಕಿಶೋರಿಯರು ಗುಡ್‌ ಲುಕಿಂಗ್ಸ್ ಗಾಗಿ ಬಿಕಿನಿ ವ್ಯಾಕ್ಸ್ ಮಾಡಿಸಿಕೊಳ್ಳುತ್ತಾರೆ. ಮಾಡೆಲ್ ‌ಹಾಗೂ ಆ್ಯಕೆಲ್ ಟ್ರಸ್‌ ನಂಥ ಔಟ್‌ ಫಿಟ್ಸ್ ಧರಿಸಲು ಇದು ಅತ್ಯಗತ್ಯ ಎಂದು ಭಾವಿಸುತ್ತಾರೆ. ಒಂದು ಕಡೆ ಹುಡುಗಿಯರು ತಾವು ವೆಸ್ಟರ್ನ್‌ ಔಟ್‌ ಫಿಟ್ಸ್ ಧರಿಸುವುದಕ್ಕಾಗಿಯೇ ಬಿಕಿನಿ ವ್ಯಾಕ್ಸ್ ಮಾಡಿಸುತ್ತೀವಿ ಎಂದರೆ, ಇನ್ನೊಂದೆಡೆ ಮಹಿಳೆಯರು ತಮ್ಮ ಪಾರ್ಟ್‌ ನರ್‌ ಈ ರೀತಿಯ ವ್ಯಾಕ್ಸಿಂಗ್‌ ಮಾಡಿಸಲು ಒತ್ತಾಯಿಸುತ್ತಾರೆ ಎನ್ನುತ್ತಾರೆ.

ಬಿಕಿನಿ ವ್ಯಾಕ್ಸ್ ಬಳಕೆ

ಬಿಕಿನಿ ವ್ಯಾಕ್ಸ್ ಗಾಗಿ, ದೇಹದ ಪ್ರತಿಯೊಂದು ಭಾಗವನ್ನೂ ಚಾಕಲೇಟ್‌ ವ್ಯಾಕ್ಸ್ ನಿಂದ ಶುಚಿಗೊಳಿಸಲಾಗುತ್ತದೆ. ಇಡೀ ದೇಹ ಕೇಶರಹಿತವಾಗುತ್ತದೆ ಹಾಗೂ ಚರ್ಮ ಮೇಣದಂತೆ ಹೊಸತಾಗಿ ಹೊಳೆಯತೊಡಗುತ್ತದೆ. ನಿಯಮಿತವಾಗಿ ಈ ವ್ಯಾಕ್ಸ್ ಮಾಡಿಸುವುದರಿಂದ ನೋವು ಕಡಿಮೆ ಆಗುತ್ತದೆ. 1 ತಿಂಗಳಿನವರೆಗೂ ಇದರ ಪ್ರಭಾವ ಇರುತ್ತದೆ.

ವಹಿಸಬೇಕಾದ ಎಚ್ಚರಿಕೆ

ಬಿಕಿನಿ ವ್ಯಾಕ್ಸ್ ನ್ನು ಸದಾ ತಜ್ಞರ ಮಾರ್ಗದರ್ಶನದಲ್ಲೇ ಮಾಡಿಸಬೇಕು, ಏಕೆಂದರೆ ಕೆಲವು ಅಂಗಾಂಗಳು ಬಹಳ ಸಂವೇದನಾಶೀಲವಾಗಿರುತ್ತವೆ. ಒಂದು ಸಣ್ಣ ತಪ್ಪು ನಿಮ್ಮನ್ನು ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿಸಿಬಿಡಬಹುದು.

ನಿಧಿ ಗೋಪಾಲ್‌.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ