ಇಂದಿನ ಲೇಟೆಟ್ ಫ್ಯಾಷನ್‌ ನಲ್ಲಿ ಪೇಸ್ಟಲ್ ಕಲರ್‌ ಟ್ರೆಂಡ್‌ ನಲ್ಲಿದೆಯೇ ಅಥವಾ ನಿಯಾನ್‌? ಪ್ಲೇರ್‌ ಪ್ರಿಂಟ್ಸ್ ಚಾಲ್ತಿಯಲ್ಲಿದೆಯೇ ಅಥವಾ ಸ್ಟ್ರೈಪ್ಸ್? ಕಾಟನ್‌ ಹೆಚ್ಚು ಟ್ರೆಂಡಿಯೇ ಅಥವಾ ಶಿಫಾನ್‌.....? ನೋ....ನೋ....ನೋ....! ನೀವು ಇಷ್ಟೆಲ್ಲ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಬನ್ನಿ, ಈ ಕುರಿತಾಗಿ ನಮ್ಮ ಫ್ಯಾಷನ್‌ ಡಿಸೈನರ್ಸ್‌ ಏನು ಹೇಳುತ್ತಾರೆಂದು ವಿವರವಾಗಿ ನೋಡೋಣ......

ಫ್ಯಾಷನ್‌ಬ್ಯೂಟಿ ಒಂದನ್ನೊಂದು ಬಿಟ್ಟಿರಲಾಗದು. ನೀವು ಎಂತಹ ಉಡುಗೆ ಧರಿಸುತ್ತೀರಿ, ಹೇಗೆ ಬೇರೆಯವರ ಎದುರು ನಿಮ್ಮನ್ನು ನೀವು ಪ್ರಸ್ತುತಪಡಿಸುತ್ತೀರಿ, ನಿಮ್ಮ ಉಡುಗೆ ಎಷ್ಟು ಠಾಕುಠೀಕಾಗಿದೆ, ನಿಮ್ಮ ಗ್ಲಾಮರ್‌ ಕೋಶೆಂಟ್‌ ಎಷ್ಟು, ನೀವು ಎಲ್ಲಾ ವಿಧದಲ್ಲೂ ಅಪ್‌ ಟು ಡೇಟ್‌ ಆಗಿದ್ದೀರಾ..... ಇತ್ಯಾದಿ ಎಲ್ಲಾ ವಿಷಯಗಳೂ ನೀವು ಲೇಟೆಸ್ಟ್ ಫ್ಯಾಷನ್‌ ಕುರಿತು ಎಷ್ಟು ತಿಳಿದುಕೊಂಡಿದ್ದೀರಿ ಎನ್ನುವುದರನ್ನು ಅವಲಂಬಿಸಿದೆ.

ಆಕರ್ಷಕ ವ್ಯಕ್ತಿತ್ವ ಹೊಂದಲಿಕ್ಕಾಗಿ ಕೇವಲ ಸೌಂದರ್ಯ ಒಂದೇ ಮಾನದಂಡಲ್ಲ... ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಜೊತೆ ಹೆಜ್ಜೆ ಹಾಕುವುದೂ ಅಷ್ಟೇ ಮುಖ್ಯ. ಬನ್ನಿ, ಆಧುನಿಕ ಲೇಟೆಸ್ಟ್ ಫ್ಯಾಷನ್‌ ಟ್ರೆಂಡ್‌ ಕುರಿತು ವಿವರವಾಗಿ ತಿಳಿದುಕೊಳ್ಳೋಣ?:

ಲ್ಯಾಗಿಂಗ್ಸ್ ಮತ್ತು ಕುರ್ತಿಗಳು :

ವಿವಿಧ ಡಿಸೈನಿನ ಬಗೆಬಗೆಯ ಕಲರ್‌ ಫುಲ್ ಕುರ್ತಿಗಳ ಜೊತೆ ಟೈಟ್‌ ಫಿಟೆಡ್‌ ಲ್ಯಾಗಿಂಗ್ಸ್ ಲೇಟೆಸ್ಟ್ ಫ್ಯಾಷನ್‌ ಟ್ರೆಂಡ್‌ ಎನಿಸಿದೆ. ಸಿಂಪಲ್ ಹಾಗೂ ಸ್ಟೈಲಿಶ್‌ ಆಗಿ ಕಂಡುಬರುವ ಈ ಉಡುಗೆ, ಪ್ರತಿಯೊಬ್ಬ ವಯಸ್ಸಿನವರು ಹಾಗೂ ಯಾವುದೇ ವಿಧದ ದೈಹಿಕ ರಚನೆಯುಳ್ಳವರಿಗೂ ಕಂಫರ್ಟೆಬಲ್ ಎನಿಸುತ್ತದೆ. ಮೈಕಟ್ಟು ಎಂಥದೇ ಇರಲಿ, ಅವರ ಗಾತ್ರ ಹೇಗೇ ಇರಲಿ, ಸ್ಟ್ರೆಚೆಬಲ್ ಆದಕಾರಣ ಲ್ಯಾಗಿಂಗ್ಸ್ ಎಲ್ಲ ಮಂದಿಗೂ ಫಿಟ್‌ ಆಗುತ್ತದೆ.

ಹೊಸ ಟ್ರೆಂಡ್‌ ನ ವಿಷಯದ ಕುರಿತು ಹೇಳುವಾಗ ಮೊದಲೆಲ್ಲ ಕುರ್ತಿ ಜೊತೆ ಮ್ಯಾಚಿಂಗ್‌ ಲ್ಯಾಗಿಂಗ್ಸ್ ನ ಟ್ರೆಂಡ್‌ ಇತ್ತು. ಆದರೆ ಈಗ ಕಾಂಟ್ರಾಸ್ಟ್ ಕಲರ್‌ ನ ಲ್ಯಾಗಿಂಗ್ಸ್ ಚಾಲ್ತಿಯಲ್ಲಿದೆ. ಇದೇ ತರಹ ಈಗ ಪಿಂಕ್‌, ಗ್ರೀನ್‌, ರೆಡ್‌ ಇತ್ಯಾದಿ ಮಲ್ಟಿ ಕಲರ್ಡ್ ಕುರ್ತಿಗಳಿಗೆ ಬದಲಾಗಿ ಕಾಂಟ್ರಾಸ್ಟ್ ಕಲರ್‌ ನ ಕುರ್ತಿಗಳು ಚಾಲ್ತಿಯಲ್ಲಿವೆ. ಹ್ಞಾಂ, ಕುರ್ತಿಗಳು ಬ್ರೈಟ್‌ ಕಲರ್‌ ನಲ್ಲಿದ್ದರೆ ಲ್ಯಾಗಿಂಗ್ಸ್ ಲೈಟ್‌ ಕಲರ್‌ ಇರಬೇಕು. ಅಕಸ್ಮಾತ್‌ ಕುರ್ತಿ ಬ್ಲ್ಯಾಕ್‌ವೈಟ್‌ ಆಗಿದ್ದರೆ, ನೀವು ಯಾವುದೇ ಯೋಚನೆಯಿಲ್ಲದೆ ಯೆಲ್ಲಾ ಲ್ಯಾಗಿಂಗ್ಸ್ ಧರಿಸಬಹುದು. ಸಡಿಲ ಕುರ್ತಿ ಜೊತೆ ಟೈಟ್‌ ಲ್ಯಾಗಿಂಗ್ಸ್ ಫ್ಯಾಷನ್‌ ಸ್ಟೇಟ್‌ ಮೆಂಟ್‌ ಆಗಿದೆ.

ಕೊಚ್ಚಿನ್‌ ಮೂಲದ ಫ್ಯಾಷನಿಸ್ಟ ಮಾಡೆಲ್ ನಯನಾ ನೆಲ್ಸನ್‌ ರ ಪ್ರಕಾರ, ``ಭವಿಷ್ಯದಲ್ಲಿ ಒಂದು ಸ್ಪೆಷಲ್ ಡ್ರೆಸ್‌ ಫ್ಯಾಷನ್ ಜಗತ್ತಿನಲ್ಲಿ ಮಹತ್ವದ ಸ್ಥಾನ ಪಡೆಯಲಿದೆ. ಅದೆಂದರೆ ಲೂಸ್‌ ಬೆಲ್ ಪ್ಯಾಂಟ್‌ಕುರ್ತಾ. ಶಿಫಾನ್‌ ಮೆಟೀರಿಯಲ್ ನಲ್ಲಿ ಲಭ್ಯವಿರುವ ಈ ಡ್ರೆಸ್‌ನ ಲೆಂಥ್‌ ತುಸು ಕಡಿಮೆ ಇರುತ್ತದೆ.''

ಟಾಪ್ಸ್ : ಇತ್ತೀಚಿನ ದಿನಗಳಲ್ಲಿ ಫ್ಲೇಯರ್ಡ್‌ ಟಾಪ್‌ಶರ್ಟ್‌ ಟಾಪ್‌ ಟ್ರೆಂಡ್‌ನಲ್ಲಿವೆ. ಇದರ ಜೊತೆಯಲ್ಲೇ ಯೂಥ್‌ ಗೆ ಇಷ್ಟವಾಗುವಂಥ ಮತ್ತೊಂದು ಮಾಡ್‌ ಡ್ರೆಸ್‌ ಸಹ ಫ್ಯಾಷನ್‌ ಜಗತ್ತಿನಲ್ಲಿ ಭದ್ರ ನೆಲೆ ಕಾಣುತ್ತಿದೆ, ಅದುವೇ ಬೆಲೂನ್‌ ಟಾಪ್‌. ನೀವು ದಪ್ಪ ಅಥವಾ ಸಣ್ಣ ಇರಲಿ, ಪ್ರತಿಯೊಬ್ಬರಿಗೂ ಸೂಟ್‌ ಆಗುವ ಈ ಟಾಪ್‌ ಧರಿಸಲು ಕಂಫರ್ಟೆಬಲ್ ಹಾಗೂ ನೋಡಲು ಸ್ಮಾರ್ಟ್‌ ಎನಿಸುತ್ತದೆ. ಟಮಿ ಹೊರಗೆ ಇಣುಕಿದ್ದರೂ ಸಹ, ಬೆಲೂನ್‌ ಟಾಪ್‌ ನಿಂದ ಅದನ್ನು ಮುಚ್ಚಬಹುದಾಗಿದೆ. ಇದರಿಂದ ದಪ್ಪಗಿರುವವರು ತಮ್ಮನ್ನು ಸ್ಲಿಮ್ ಎಂಬಂತೆ ಸ್ಮಾರ್ಟಾಗಿ ತೋರಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ