ಹಬ್ಬ ಅಥವಾ ಯಾವುದೇ ಸಂದರ್ಭ ಇರಬಹುದು, ನಮ್ಮನ್ನು ನಾವು ಅಲಂಕರಿಸಿಕೊಳ್ಳುವುದರ ಜೊತೆಗೆ ಮನೆಯ ವಾತಾವರಣವನ್ನು ರೊಮ್ಯಾಂಟಿಕ್ ಗೊಳಿಸಿ ಕೊಳ್ಳುವುದು ಹಬ್ಬದ ವಾತಾವರಣವನ್ನು ಮತ್ತಷ್ಟು ರಂಗೇರಿಸುತ್ತದೆ. ನೀವು ಮಾಡ ಬೇಕಾದುದು ಇಷ್ಟೆ, ಕೋಣೆಗೆ ರೊಮ್ಯಾಂಟಿಕ್ ಲುಕ್ ನೀಡಲು ಲೈಟ್ ಕಲರ್ ನ ನೆಟ್ ಪರದೆ ಅಳವಡಿಸಿ. ನೀವು ಎರಡು ಪದರಗಳುಳ್ಳ ಪರದೆ ಕೂಡ ಹಾಕಬಹುದು. ಅದರಲ್ಲಿ ಒಂದು ಪದರ ಟಿಶ್ಶೂವಿನದ್ದು, ಇನ್ನೊಂದು ಪದರ ದಪ್ಪನೆಯ ಫ್ಯಾಬ್ರಿಕ್ ನದು ಆಗಿರಲಿ. ರೇಷ್ಮೆಯ ಪರದೆಗಳು ಕೋಣೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಪರದೆಗಳ ಜೊತೆಗೆ ನೀವು ಮಂಚದ ಮೇಲೆ ರೇಷ್ಮೆಯ ಬೆಡ್ ಶೀಟ್ ಹಾಕಿದರೆ ಮನೆಯಲ್ಲಿ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಕಳೆಕಟ್ಟುತ್ತದೆ.
ಡ್ರಾಯಿಂಗ್ ರೂಮ್ ಫರ್ನೀಚರ್
ಹಬ್ಬದ ಸಂದರ್ಭದಲ್ಲಿ ಅಥವಾ ಯಾವುದಾದರೂ ವಿಶೇಷ ಸಂದರ್ಭದಲ್ಲಿ ಮನೆಗೆ ಅತಿಥಿಗಳು ಬರುವುದು ಸಹಜ. ಅತ್ಯಂತ ಅಚ್ಚುಕಟ್ಟಾದ ಹಾಗೂ ಸ್ವಚ್ಛವಾದ ಡ್ರಾಯಿಂಗ್ ರೂಮ್ ನೋಡಿ ಅತಿಥಿಗಳು ನಿಮ್ಮ ಬಗ್ಗೆ ಪ್ರಭಾವಿತರಾಗದೇ ಇರುವುದಿಲ್ಲ.
ಡ್ರಾಯಿಂಗ್ ರೂಮ್ ನಲ್ಲಿ ಪೀಠೋಪಕರಣಗಳನ್ನು ಅತ್ಯಂತ ಆಕರ್ಷಕವಾಗಿ ಕಾಣುವಂತೆ ಇಡಿ. ಕೋಣೆಯ ಆಕಾರವನ್ನು ಗಮನ ದಲ್ಲಿಟ್ಟುಕೊಂಡೇ ಪೀಠೋಪಕರಣಗಳನ್ನು ಖರೀದಿಸಿ.
ಸೋಫಾದ ಡಿಸೈನ್ ಕೂಡ ಡ್ರಾಯಿಂಗ್ ರೂಮಿನ ಆಕಾರಕ್ಕನುಗುಣವಾಗಿಯೇ ಇರಲಿ. ಒಂದು ವೇಳೆ ಕೋಣೆ ದೊಡ್ಡದಾಗಿದ್ದರೆ 2 ಸೋಫಾ ಕೂಡ ಹಾಕಬಹುದು. ಹಾಗೆ ನೋಡಿದರೆ ಅತ್ಯಂತ ಭಾರದ ಸೋಫಾಗಳಿಗಿಂತ ಸಾದಾ ಸೋಫಾಗಳೇ ಹೆಚ್ಚು ಉಪಯುಕ್ತ ಎಂದು ಭಾವಿಸಲಾಗುತ್ತದೆ. ಆದರೆ ಇದು ಅವರವರ ಆಸಕ್ತಿಯ ವಿಷಯವಾಗಿದೆ.
ಪೀಠೋಪಕರಣಗಳ ನಿರ್ವಹಣೆ
ವುಡನ್ ಫರ್ನೀಚರ್ ಗಳ ಮೇಲಿನ ಜಿಗುಟು ಕಲೆಗಳನ್ನು ತೊಡೆದುಹಾಕಲು, ನೀರಿನಲ್ಲಿ ಗಂಜಿ ಮಿಶ್ರಣ ಮಾಡಿ ಪೀಠೋಪಕರಣಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಒರೆಸಿ.
ಪೀಠೋಪಕರಣಗಳಿಗೆ ಹೊಳಪು ತರಲು ಸೋಪ್ ನೀರಿನ ದ್ರಾವಣ ತಯಾರಿಸಿಕೊಂಡು, ಅದರಲ್ಲಿ ಒಂದು ಚಮಚ ಟರ್ಪೆಂಟೈನ್ ಸೇರಿಸಿ. ಈಗ ಈ ದ್ರಾವಣವನ್ನು ಪೀಠೋಪಕರಣದ ಮೇಲೆ ಹಚ್ಚಿ ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಹಳೆಯ ಪೀಠೋಪಕರಣಗಳು ಕೂಡ ಹೊಳಪು ಪಡೆದುಕೊಳ್ಳುತ್ತವೆ.
ಮನೆಯಲ್ಲಿ ಅಮೃತಶಿಲೆ ಇಲ್ಲಿ ಟೈಲ್ಸ್ ಹಾಕಿರಬಹುದು. ನೀವು ಮನೆಯನ್ನು ಹೊಳಪುಳ್ಳದ್ದಾಗಿ ಕಾಣಬೇಕೆಂದರೆ ಅದರ ನಿಯಮಿತ ಸ್ವಚ್ಛತೆ ಅತ್ಯವಶ್ಯ.
ಟೈಲ್ಸ್ ಸ್ವಚ್ಛಗೊಳಿಸಲು ಯಾವಾಗಲೂ ಲಿಕ್ವಿಡ್ ಸೋಪ್ ನ್ನೇ ಬಳಸಿ. ಟೈಲ್ಸ್ ಮೇಲೆ ಒಂದೆರಡು ಹನಿ ಸೋಪ್ ವಾಟರ್ ಹಾಕಿ ಒರೆಸಿ. ನೀವು ಟೈಲ್ಸ್ ಸ್ವಚ್ಛಗೊಳಿಸುವ ಸ್ಟ್ರಾಂಗ್ ಸೋಪ್ ಉಪಯೋಗಿಸುತ್ತಿದ್ದಲ್ಲಿ ಅದರಲ್ಲಿ ಆ್ಯಸಿಡ್ ಅಂಶ ಇರಬಾರದು.
ಸೋಪ್ ನ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅಮೋನಿಯಾ ಮಿಶ್ರಣ ಮಾಡಿ ಟೈಲ್ಸ್ ಮೇಲೆ ಲೇಪಿಸಿ, ಸ್ವಲ್ಪ ಹೊತ್ತು ಬಿಟ್ಟು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಟೈಲ್ಸ್ ಮೇಲಿನ ಕಲೆ ಹೊರಟುಹೋಗುತ್ತದೆ.
ನಿಂಬೆ ಹಣ್ಣಿನ ರಸವನ್ನು ಟೈಲ್ಸ್ ಮೇಲೆ ಲೇಪಿಸಿ. ಸ್ವಲ್ಪ ಹೊತ್ತಿನ ಬಳಿಕ ನೀರಿನಿಂದ ಟೈಲ್ಸ್ ಸ್ವಚ್ಛಗೊಳಿಸಿ.
– ಪಿ. ಮಂಜುಶಾ ಶರ್ಮ.