ಒಳಾಂಗಣ ಅಲಂಕಾರವೆನ್ನುವುದು ಹೊಸ ವಿಷಯವೇನಲ್ಲ. ಬಹಳ ಹಿಂದಿನಿಂದಲೂ ನಮ್ಮ ಹಿರಿಯರು, ಅಮ್ಮಅಜ್ಜಿಯರು ಎಲ್ಲ ಗೃಹ ಕೃತ್ಯಗಳನ್ನೂ ಮಾಡಿ ಮುಗಿಸಿ ಮನೆ ಅಲಂಕರಣವನ್ನೂ ಮಾಡುತ್ತಿದ್ದರು. ಮನೆ ಸುಂದರವಾಗಿ ಕಾಣಬೇಕು, ನೋಡಿದರು ಮೆಚ್ಚಬೇಕೆನ್ನುವ ಭಾವನೆ ಅನಾದಿ ಕಾಲದಿಂದಲೂ ಬಂದದ್ದೇ. ತಮಗೆ ತಿಳಿದ ರೀತಿಯಲ್ಲಿ ಮನೆಯನ್ನು ಅಂದವಾಗಿ ಕಾಣುವಂತೆ ಮಾಡಲು ಶ್ರಮಿಸುತ್ತಿದ್ದರು. ಮನೆಯ ಮುಂಬಾಗಿಲಿಗೆ ತೋರಣ ಕಟ್ಟುವುದು, ಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸುವುದು, ಬಾಗಿಲಿಗೆ ತಾವೇ ಕಸೂತಿ ಮಾಡಿದ ಪರದೆಗಳನ್ನು ಇಳಿಬಿಡುವುದು, ದಿಂಬುಗಳಿಗೆ ಶುಭರಾತ್ರಿ ಅಥವಾ ಗುಡ್‌ ನೈಟ್‌ ಎನ್ನುವ ಸಂದೇಶವನ್ನು ಬಣ್ಣ ಬಣ್ಣದ ರೇಷ್ಮೆ ದಾರಗಳಿಂದ ಕಸೂತಿ ಹಾಕುವುದು, ಹೊದಿಕೆಗಳು, ಬಾಗಿಲ ಪರದೆಗಳು ಎಲ್ಲ ಮನೆಯ ಗೃಹಿಣಿಯ ಚಾಕಚಕ್ಯತೆ ಮತ್ತು ಚುರುಕುತನಕ್ಕೆ ಪ್ರತಿಬಿಂಬದಂತಿರುತ್ತಿದ್ದವು.

ಇನ್ನು ವಿನ್ಯಾಸದ ವಿಷಯಕ್ಕೆ ಬಂದಾಗ ನಾಜೂಕಾದ ಕೆತ್ತನೆಯ ಕಂಬಗಳು, ತೊಟ್ಟಿಮನೆ, ಬಾಗಿಲಿಗೆ ಮರದ ಕೆತ್ತನೆ, ಕೊನೆಗೆ ಕುಳಿತುಕೊಳ್ಳುವ ಆಸನಗಳಲ್ಲೂ ಸುಂದರ ಕೆತ್ತನೆ ಮನೆಯ ಸೌಂದರ್ಯಕ್ಕೆ ಪೂರಕವಾಗಿದ್ದರೆ, ನಕಾಶೆಯ ದೀಪಸ್ತಂಭಗಳು, ಹಜಾರದಲ್ಲಿ ಇಳಿಬಿಟ್ಟ ತೂಗುದೀಪಗಳು, ಪಡಸಾಲೆಯಲ್ಲಿ ಗೋಡೆಗೆ ನೇತುಹಾಕಿದ ಸುಂದರ ರವಿವರ್ಮನ ಪಠಗಳು, ಮೂಲೆಯಲ್ಲಿ ತ್ರಿಕೋನಾಕಾರದ ಮೇಜು, ಅದರ ಮೇಲೆ ಹೊಳೆಯುವ ಹಿತ್ತಾಳೆಯ ಹೂಜಿ, ಅದರೊಳಗೆ ನಗು ನಗು ಬಣ್ಣ ಬಣ್ಣದ ಹೂಗಳು ದಿನಕ್ಕೊಂದು ರೀತಿಯಲ್ಲಿ ಸಿಂಗಾರಗೊಳ್ಳುತ್ತಿದ್ದವು. ಕೆಂಪು ಬಣ್ಣದ ಹೊಳೆಯುವ ಕಾವಿ ನೆಲದ ಮೇಲೂ ಸುತ್ತಲೂ ಬಳ್ಳಿಯ ಎಳೆಗಳ ರಂಗೋಲಿಯನ್ನು ಬಿಡಲಾಗುತ್ತಿತ್ತು. ಒಂದೆರಡು ದಿನ ಅಳಿಯದೆ ಇರಬೇಕೆಂದು ಅಕ್ಕಿಹಿಟ್ಟಿನ ರಂಗೋಲಿ ತಯಾರಿಸುತ್ತಿದ್ದರು. ನಮ್ಮಮ್ಮ ಅದನ್ನು ಒಂದು ಬಟ್ಟೆಯಲ್ಲಿ ತೋರು ಬೆರಳಿನಿಂದ ಹಿಡಿದು ಎಳೆಬಿಡುತ್ತಿದ್ದುದ್ದನ್ನು ನಾನೂ ಸಹ ಕಣ್ಣಾರೆ ಕಂಡಿದ್ದೇನೆ. ಕೊನೆಗೆ ಪಾತ್ರೆ ಜೋಡಿಸುವ ಹಲಗೆಯ ಪಠಾರಗಳ ಮೇಲೂ ರಂಗೋಲಿ ಬಿಡುತ್ತಿದ್ದರು. ಹಬ್ಬವೆಂದಾಗ ಅವರ ಆಸಕ್ತಿಗೆ ಗರಿ ಮೂಡುತ್ತಿತ್ತು. ವಾರ, ಹದಿನೈದು ದಿನಗಳ ಮುಂಚೆಯೇ ಸಿದ್ಧತೆ ಪ್ರಾರಂಭವಾಗುತ್ತಿತ್ತು. ಹಬ್ಬದ ದಿನ ಮನೆಯೆಲ್ಲಾ ಸುಂದರವಾಗಿ ಕಂಗೊಳಿಸುತ್ತಿತ್ತು. ಅಂತೂ ವಿನ್ಯಾಸ ಮತ್ತು ಅಲಂಕಾರ ಒಂದಕ್ಕೊಂದು ಪೂರಕವಾಗಿದ್ದಾಗ ಆಕರ್ಷಕ ನೋಟ ಸಾಧ್ಯ.

ಈಗಲೂ ಮನೆಯನ್ನು ಅಂದವಾಗಿಟ್ಟುಕೊಳ್ಳುವ ಮನಸ್ಸು ಪ್ರತಿಯೊಬ್ಬರದು. ಆದರೆ ಅಲಂಕರಿಸುವ ಕಾನ್ಸೆಪ್ಟ್ ಸ್ವಲ್ಪ ಬದಲಾಗಿದೆ. ಮನೆಯನ್ನು ಕಟ್ಟುವಾಗಲೇ ಒಳಾಂಗಣ ವಿನ್ಯಾಸ ಹೇಗಿರಬೇಕೆನ್ನುವುದನ್ನು ನಿರ್ಧರಿಸುತ್ತಾರೆ. ನಿರ್ಮಾಣದ ಹಂತದಲ್ಲೇ ಎಲ್ಲ ನಿರ್ಧಾರವಾದರೆ ಅಳವಡಿಕೆ ಸುಲಭವಾಗುತ್ತದೆ. ಅಲ್ಲದೆ, ಕಾಲಕ್ಕನುಗುಣವಾಗಿ ಬದಲಾವಣೆ ಅನಿವಾರ್ಯ. ಒಂದು ಕಾಲಕ್ಕೆ ಬರಿಯ ಕುಸುರಿ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದುದು ನಂತರ ಸರಳತೆಗೆ ಜನ ಮಾರುಹೋದರು. ಪಾಶ್ಚಾತ್ಯ ಶೈಲಿಯನ್ನು ಮೆಚ್ಚಿಕೊಂಡರು. ಅವರದೆಲ್ಲಾ ಬಹಳ ಸಿಂಪಲ್, ಆದರೂ ಎಷ್ಟು ಚೆನ್ನ ಎನ್ನುವ ಭಾವನೆ ಮೂಡಿಬಂದಿತು. ಮಾರುಕಟ್ಟೆಗೆ ಹೊಸ ರೀತಿಯ ಸಾಮಾನುಗಳು ಬರಲಾರಂಭಿಸಿದವು. ಹೆಚ್ಚು ಹೆಚ್ಚು ಗಾಜಿನ ಬಳಕೆ ಪ್ರಾರಂಭವಾಯಿತು. ಕಿಟಕಿ ಮತ್ತು ಬಾಗಿಲುಗಳನ್ನು ವಿಶಾಲವಾಗಿರಿಸಲಾರಂಭಿಸಿದರು. ಹಿಂದೆ ನಿವೇಶನಕ್ಕೆ ಅಂತಹ ಬೆಲೆ ಇಲ್ಲದಿದ್ದರಿಂದ ಸ್ಥಳದ ಉಪಯುಕ್ತತೆಗೆ ಅಂತಹ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಆದರೆ ನಿವೇಶನಗಳ ಬೆಲೆಗಳು ಗಗನಕ್ಕೇರಿದಾಗ ಒಂದೊಂದು ಅಂಗುಲ ಬೆಲೆಯುಳ್ಳದ್ದು ಮತ್ತು ಅದನ್ನು ಯಾವ ರೀತಿ ಬಳಸಿಕೊಳ್ಳಬೇಕೆನ್ನುವ ವಿಷಯಕ್ಕೆ ವಿನ್ಯಾಸಕಾರರು ಗಮನ ನೀಡಲಾರಂಭಿಸಿದರು. ಅಂತೆಯೇ ನೋಡಲು ಚೆಂದವಿರಬೇಕು ಮತ್ತು ಖರ್ಚು ಕಡಿಮೆ ಇರಬೇಕು, ಸಣ್ಣ ನಿವೇಶನದಲ್ಲೂ ಚಂದದ ಮನೆ ಕಟ್ಟಬೇಕೆನ್ನುವ ಸಾಲುಗಳು ಬಂದಾಗ ಮತ್ತಷ್ಟು ಬದಲಾವಣೆಗಳು ಮೂಡಿಬಂದವು. ಮನೆಯಲ್ಲಿ ಹೆಚ್ಚಿನ ವಿಭಾಗಗಳನ್ನು ಮಾಡದೆ, ಓಪನ್‌ ಕಿಚನ್‌, ಪಡಸಾಲೆ, ಡೈನಿಂಗ್ ಮತ್ತು ಅಡುಗೆಮನೆಯ ಮಧ್ಯೆ ಒಂದು ಆಕರ್ಷಕ ವಿಭಾಗ ಅರ್ಥಾತ್‌ ಪಾರ್ಟಿಷನ್‌ ಗಳು ಬಳಕೆಗೆ ಬಂದವು. ಈ ರೀತಿ ಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಿನ ವಾತಾವರಣಕ್ಕೆ, ಪರಿಸ್ಥಿತಿಗೆ ತಕ್ಕಂತೆ ಮಾಡಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ