ಮನೆಯ ಕೆಲಸಕಾರ್ಯಗಳೇ ಇರಬಹುದು ಅಥವಾ ಅಫೀಸಿನ ವ್ಯಸ್ತತೆ, ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಇದು ಕೇವುಲ ಗೃಹಿಣಿಯನ್ನಷ್ಟೇ ಬಾಧಿಸುವುದಿಲ್ಲ, ಉದ್ಯೋಗಸ್ಥ ಹಾಗೂ ಉನ್ನತ ಶಿಕ್ಷಣ ಪಡೆದವರನ್ನು ಹಿಂಸಿಸುತ್ತದೆ. ಇಲ್ಲಿ ನಾವು ನಿಮಗಾಗಿ ಕೆಲವು ಪ್ರಶ್ನೆಗಳನ್ನು ಕೊಟ್ಟಿದ್ದು, ಅವುಗಳಿಗೆ ಉತ್ತರ ಕೊಡುವುದರ ಮೂಲಕ ನೀವೆಷ್ಟು ಆರೋಗ್ಯ ಪ್ರಜ್ಞೆ ಹೊಂದಿರುವಿರಿ ಎನ್ನುವುದನ್ನು ತಿಳಿದುಕೊಳ್ಳಿ.

ನೀವು ಪ್ರತಿದಿನ ನಿಶ್ಚಿತವಾಗಿ 8-10 ಗ್ಲಾಸ್‌ ನೀರು ಸೇವಿಸುತ್ತೀರಾ?

(ಅ) ಹೌದು, ಖಂಡಿತ.

(ಬ) ಕೇವಲ 4-5 ಗ್ಲಾಸ್‌ ಮಾತ್ರ.

(ಕ) ಕುಡಿಯಲು ಆಗುದೇವು ಇಲ್ಲ.

ನೀವು ಪ್ರತಿದಿನ ಸುತ್ತಾಡಲು ಹೋಗುತ್ತೀರಾ?

(ಅ) ಅದು ದಿನಚರಿಯ ಒಂದು ಭಾಗ.

(ಬ) ಒಮ್ಮೊಮ್ಮೆ ಮಾರ್ಕೆಟ್‌ ಗೆ ಹೋಗ್ತೀನಿ.

(ಕ) ಹೋಗಲು ಸಮಯವೇ ಸಿಗುವುದಿಲ್ಲ.

ನೀವು ಎದ್ದ 2-3 ಗಂಟೆಯೊಳಗೆ ತಿಂಡಿ ಸೇವನೆ ಮಾಡುತ್ತೀರಾ?

(ಅ) ಹೌದು. 8 ಗಂಟೆಗೆ ಕುಟುಂಬದವರ ಜೊತೆ ತಿನ್ನುತ್ತೇನೆ.

(ಬ) ಸಮಯಾವಕಾಶ ಸಿಕ್ಕರೆ ತಿಂತೀನಿ, ಇಲ್ಲವಾದರೆ ತಡವಾಗಿ ತಿಂತೀನಿ.

(ಕ) ಎಲ್ಲ ಕೆಲಸ ಮುಗಿಸಿ 10-30ರ ಬಳಿಕವೇ ತಿಂತೀನಿ.

ಉಪಾಹಾರ ಮಾಡುವಾಗ ನಿಮ್ಮ ಮನಸ್ಥಿತಿ?

(ಅ) ಅತ್ಯಂತ ಉತ್ಸಾಹದಿಂದ ಉಪಾಹಾರ ಸೇವಿಸ್ತೀನಿ.

(ಬ) ಕೆಲಸ ಮಾಡ್ತಾ ಮಾಡ್ತಾ ಉಪಾಹಾರದ ಶಾಸ್ತ್ರ ಮುಗಿಸ್ತೀನಿ.

(ಕ) ಟಿ.ವಿ. ಮುಂದೆ ಕುಳಿತು ತಿಂಡಿ ತಿಂತೀನಿ. ತಿಂಡಿ ತಿಂದಿದ್ದೇ ಗೊತ್ತಾಗುವುದಿಲ್ಲ.

ನಿಮಗೆ ಮೇಲಿಂದ ಮೇಲೆ ದಣಿವಿನ ಅನುಭೂತಿ ಉಂಟಾದಾಗ ನೀವೇನು ಮಾಡುತ್ತೀರಿ?

(ಅ) ಡಾಕ್ಟರ್‌ ಅಪಾಯಿಂಟ್‌ ಮೆಂಟ್‌ ತೆಗೆದುಕೊಳ್ಳುವೆ.

(ಬ) ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವೆ.

(ಕ) ಪೇನ್‌ ಕಿಲ್ಲರ್‌ ತಗೊಳ್ತೀನಿ.

ನಿಮ್ಮ ಆಹಾರದಲ್ಲಿ ಹಣ್ಣು, ಹಾಲು ಅಥವಾ ಒಣಹಣ್ಣುಗಳು ಸೇರ್ಪಡೆಯಾಗಿರುತ್ತವೆಯೇ?

(ಅ) ದಿನ ಒಂದಿಲ್ಲೊಂದು ಹಣ್ಣುಗಳು ಇದ್ದೇ ಇರುತ್ತವೆ.

(ಬ) ಎಂದಾದರೊಮ್ಮೆ.

(ಕ) ಅವನ್ನೆಲ್ಲ ತಿಂದರೆ ದಪ್ಪಗಾಗ್ತೀನಿ.

ನೀವು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುತ್ತೀರಾ?

(ಅ) 3-4 ತಿಂಗಳಿಗೊಮ್ಮೆ.

(ಬ) ಅನಾರೋಗ್ಯಪೀಡಿತಳಾದಾಗ ಮಾತ್ರ.

(ಕ)  ನಾನು ಆರೋಗ್ಯದಿಂದಿರುವೆ. ಅದರ ಅವಶ್ಯಕತೆಯಾದರೂ ಏನಿದೆ?

ನೀವು ಫಾಸ್ಟ್ ಫುಡ್ತಿನ್ನುತ್ತೀರಾ?

(ಅ) 15 ದಿನಕ್ಕೊಮ್ಮೆ.

(ಬ) ಆಗಾಗ ಮನೆಯಲ್ಲಿಯೇ ತಯಾರಿಸ್ತೀನಿ.

(ಕ) ನನಗೆ ಅವು ಬಹಳ ಇಷ್ಟ.

ನಿಮ್ಮ ಬಟ್ಟೆಗಳ ಸೈಜ್ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತ ಹೊರಟಿದ್ದರೆ?

(ಅ) ಹಾಗೇನಾದರೂ ಅನ್ನಿಸಿದರೆ ತಕ್ಷಣವೇ ಡಯೆಟ್‌ ಚಾರ್ಟ್‌ ಅನುಸರಿಸುವೆ.

(ಬ) ಉಪಾಹಾರ ಮಾಡುವುದನ್ನು ನಿಲ್ಲಿಸುವೆ.

(ಕ)  ಬೊಜ್ಜು ಕರಗಿಸುವ ಯಾವುದಾದರೂ ಔಷಧಿಗೆ ಆರ್ಡರ್‌ ಕೊಡುವೆ.

ವ್ಯಾಯಾಮದ ಬಗ್ಗೆ ನಿಮ್ಮ ಅಭಿಪ್ರಾಯ?

(ಅ) ಅದು ಅತ್ಯಂತ ಅವಶ್ಯಕ.

(ಬ) ನಿಯಮಿತವಾಗಿ ಮಾಡಲು ಆಗುವುದಿಲ್ಲ.

(ಕ) ಸ್ವಲ್ಪ ಸಮಯ ಮಾಡಿ ನಿಲ್ಲಿಸಿ ಬಿಡ್ತೀನಿ.

ಸಿಹಿತಿಂಡಿಗಳು ನಿಮಗೆಷ್ಟು ಇಷ್ಟ?

(ಅ) ಮಿತ ಪ್ರಮಾಣದಲ್ಲಿ, ಕ್ಯಾಲೋರಿಯನ್ನು ಗಮನದಲ್ಲಿಟ್ಟುಕೊಂಡು ತಿನ್ನುವೆ.

(ಬ) ಕಿಟಿ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ತಿನ್ನಲೇಬೇಕಾಗುತ್ತದೆ.

(ಕ) ಸಿಹಿ ತಿಂಡಿಗಳೇ ನನ್ನ ದೌರ್ಬಲ್ಯ.

ಹೆಲ್ತ್ ಮೀಟರ್

ನಿಮ್ಮ ಹೆಚ್ಚಿನ ಉತ್ತರಗಳು `ಅ’ ಆಗಿದ್ದಲ್ಲಿ ನಿಮಗೆ ಅಭಿನಂದನೆ. ನೀವು ನಿಜವಾಗಿಯೂ ಆರೋಗ್ಯದ ಬಗ್ಗೆ ಜಾಗರೂಕರಾಗಿರುವಿರಿ. ಒಂದು ವೇಳೆ ನಿಮ್ಮ ಹೆಚ್ಚಿನ ಉತ್ತರಗಳು `ಬ’ ಆಗಿದ್ದರೆ, ನಿಮ್ಮ  ಅಭ್ಯಾಸಗಳು, ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವುದೇ ವಿಶೇಷ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳುತ್ತವೆ.

ನಿಮ್ಮ ಹೆಚ್ಚಿನ ಉತ್ತರಗಳು `ಕ’ ಆಗಿದ್ದರೆ, ನೀವು ಈವರೆಗೆ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿರುವಿರಿ ಎಂಬುದನ್ನು ತೋರಿಸಿಕೊಡುತ್ತವೆ. ಈ ರೀತಿಯಾಗಿ ನೀವು ಗಂಭೀರ ರೋಗಗಳಿಗೆ ತುತ್ತಾಗಬಹುದು. ಸಕಾಲಕ್ಕೆ ಎಚ್ಚೆತ್ತು ನಿಮ್ಮ ದಿನಚರಿ ಹಾಗೂ ಆಹಾರದಲ್ಲಿ ಬದಲಾವಣೆ ಮಾಡಿಕೊಂಡು ಆರೋಗ್ಯದಿಂದಿರಿ.

ರುಚಿತಾ ಪ್ರಮೋದ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ