ಸಾಧಕರಿಗೆ ಆತ್ಮೀಯ ಅಭಿನಂದನೆ :

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾಪೀಠ ವಾರ್ಡ್‌ ನ ಸದಸ್ಯರಾದ ಎಂ. ವೆಂಕಟೇಶ್‌ (ಸಂಗಾತಿ)ರವರ 50ನೇ ಹುಟ್ಟುಹಬ್ಬ ಸುವರ್ಣ ಸಂಭ್ರಮದ ಪ್ರಯುಕ್ತ ಮೌಂಟ್‌ ಜಾಯ್‌ ಎಕ್ಸ್ ಟೆನ್ಶನ್‌ ನ ಕಮ್ಮಾರಿ ಸಂಘ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ವಿಶಿಷ್ಟ ವರ್ಣರಂಜಿತ ವಿನೂತನ ಕಾರ್ಯಕ್ರಮದಲ್ಲಿ ಕ್ರೀಡೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್‌ ಎ. ಹರಿದಾಸ ಭಟ್ಟ, ಯುವ ಬರಹಗಾರ ಗುರುರಾಜ ಪೋಶೆಟ್ಟಿ ಹಳ್ಳಿ (ಪ್ರಣವ) ಮುಂತಾದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.  ಬಿ.ಬಿ.ಎಂ.ಪಿ.ಯ ಮಹಾಪೌರ ಬಿ.ಎಸ್‌. ಸತ್ಯನಾರಾಯಣ, ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಬಸವನಗುಡಿ ವಿಧಾನಸಭಾ ಕ್ಷೇತ್ರದ ಎಲ್.ಎ. ರವಿಸುಬ್ರಹ್ಮಣ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಹೊಸ ಕೃತಿಯ ಲೋಕಾರ್ಪಣೆ :

ಹುಬ್ಬಳ್ಳಿಯ ಚೇಂಬರ್‌ ಆಫ್‌ ಕಾಮರ್ಸ್‌ ನಲ್ಲಿ, ನೃಪತುಂಗ ಸಾಹಿತ್ಯ ವೇದಿಕೆ ವತಿಯಿಂದ, ಭಾಸ್ಕರ ಹೆಗಡೆ ವಿರಚಿತ `ನಂಬಿಕೆ ಮತ್ತು ವಾಸ್ತು' ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಸಮಾರಂಭದಲ್ಲಿ ಪ್ರಮುಖ ಸಾಹಿತಿಗಳಾದ ಆರೂರು ಲಕ್ಷ್ಮಣ ಶೇಟ್‌, ನಿರಂಜನ ವಾಲಿಶೆಟ್ಟರ್‌, ತಾಲೂಕಾ ಚುಟುಕ ಸಾಹಿತ್ಯಾಧ್ಯಕ್ಷರಾದ ಪದ್ಮಜಾ ಉಮರ್ಜಿ, ಸಿ.ಜಿ. ಧಾರವಾಡ ಶೆಟ್ಟರ್‌, ಚೆನ್ನಬಸಪ್ಪ ಹೊರಕೇರಿ ಮುಂತಾದವರು ಉಪಸ್ಥಿತರಿದ್ದರು.

ಮನಸೂರೆಗೊಂಡ ಚಿತ್ರಕಲಾ ಪ್ರದರ್ಶನ :

cccc1

ಚಿಕ್ಕಲ್ಲಸಂದ್ರದ ಬೆಂಗಳೂರು ಇಂಟರ್‌ ನ್ಯಾಷನಲ್ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಜರುಗಿದ ಸಾಂಸ್ಕೃತಿಕ ಉತ್ಸವದಲ್ಲಿ ಖ್ಯಾತ ಚಿತ್ರಕಲಾವಿದ ಶಿವಕುಮಾರ್‌ ರಚಿಸಿದ ನೂರಾರು ತೈಲವರ್ಣದ ಕಲಾಕೃತಿಗಳು ಹಾಗೂ ಅಪರೂಪದ ಛಾಯಾಚಿತ್ರಗಳು ಪ್ರದರ್ಶನಗೊಂಡು ಎಲ್ಲರ ಮನಸೂರೆಗೊಂಡವು. ಅದರಲ್ಲೂ ಪ್ರಸ್ತುತ ಹೆಣ್ಣಿನ ಮೇಲೆ ನಡೆಯುತ್ತಿರುವ ಲೈಂಗಿಕ ಹಲ್ಲೆಯನ್ನು ಬಿಂಬಿಸುವ ಕಲಾಕೃತಿಯಂತೂ ಮನೋಜ್ಞವಾಗಿ ಮೂಡಿಬಂದಿತ್ತು.

ಭರತನಾಟ್ಯ ರಂಗಪ್ರವೇಶ :

DSC_0136

ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರಂ ಸೇವಾ ಸದನದಲ್ಲಿ ಕುಮಾರಿ ಅಶಿತಾಳ ಭರತನಾಟ್ಯ ರಂಗಪ್ರವೇಶ ಶಾಸ್ತ್ರೋಕ್ತವಾಗಿ ನೆರವೇರಿತು. ಸುಪರ್ಣಾ ವೆಂಕಟೇಶ್‌ ರ ನೇತೃತ್ವದಲ್ಲಿ ತರಬೇತಿ ಪಡೆದಿದ್ದ ಅಶಿತಾ, ಸಾಯಿ ಆರ್ಟ್ಸ್ ಇಂಟರ್‌ ನ್ಯಾಷನಲ್ ಸಂಸ್ಥೆಯ ಮಾರ್ಗದರ್ಶನದಲ್ಲಿ ತನ್ನ ಅಮೋಘ ನೃತ್ಯಾರ್ಪಣೆಯಿಂದ ಜನಮಾನಸವನ್ನು ಗೆದ್ದುಕೊಂಡಳು.

ಸನ್ಮಾನ ಸಮಾರಂಭ :

ಕೋಲಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಚುಟುಕು ಸೌರಭ ಕಾವ್ಯೋತ್ಸವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕವಿ ವೇ.ಎಸ್‌. ಕೃಷ್ಣಮೂರ್ತಿ, ತುಮಕೂರಿನ ಪದ್ಮಾ ಕೃಷ್ಣಮೂರ್ತಿ, ಗದಗದ ಕೊತ್ತಲ ಮಹದೇವಪ್ಪ ಹಾಗೂ ಸಾಗರದ ಜಿ. ನಾಗರಾಜ ತೊಂಟ್ರಿರವರಿಗೆ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಡಾ. ಎಂ.ಜಿ.ಆರ್‌. ಅರಸ್‌ `ಚುಟುಕು ಭೂಷಣ' ಪ್ರಶಸ್ತಿ ನೀಡಿ ಗೌರವಿಸಿದರು. ಕೋಲಾರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಡಾ. ಕೆ.ಎಂ.ಜೆ. ಮೌನಿ, ಕಾರ್ಯಾಧ್ಯಕ್ಷ ಅರವಿಂದ್‌ ಭೀ.ಕಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮನೆಯಂಗಳವೇ ನಾಟ್ಯಾಲಯ :

honour

ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತ್ಯಾಗರಾಜನಗರದ ಆಯುರ್ವೇದ ಪಂಡಿತರಾದ ಪ್ರಸಾದ್ ರಂಗಾಚಾರ್‌ ರ ಮನೆಯಂಗಳದ ಉತ್ಸವದಲ್ಲಿ ಶ್ರೀಕೃಷ್ಣ ಜಯಂತಿಯನ್ನು ವೈಭವವಾಗಿ ಆಚರಿಸಲಾಯಿತು. ಇದರ ಸಲುವಾಗಿ ಖ್ಯಾತ ನಾಟ್ಯ ವಿದೂಷಿ ಮೀರಾ ಹಾಗೂ ಶಿಷ್ಯ ವೃಂದದಿಂದ ಜರುಗಿದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ