ಹೊಸ ವರ್ಷ ಸಾಮಾನ್ಯವಾಗಿ ಚಳಿಗಾಲದಲ್ಲಿಯೇ ಬರುತ್ತದೆ. ಹೀಗಾಗಿ ಈ ಕಾಲದಲ್ಲಿ ಹೋಮ್ ಡೆಕೋರ್‌ ನಲ್ಲಿ ಅಷ್ಟಿಷ್ಟು ಬದಲಾವಣೆ ಅಗತ್ಯವಾಗುತ್ತದೆ. ಲೇಯರಿಂಗ್‌ ಎಕ್ಸ್ ಟ್ರಾ ಕಂಫರ್ಟ್‌ ಮತ್ತು ವಾರ್ಮ್ ಫ್ಯಾಬ್ರಿಕ್‌ ಹೀಗೆ ಇಂಟೀರಿಯರ್‌ ನಲ್ಲಿ ಚಿಕ್ಕಪುಟ್ಟ ಬದಲಾವಣೆ ಮಾಡಿಕೊಂಡು ಈ ಟಾಸ್ಕ್ನಲ್ಲಿ ಕಡಿಮೆ ಶ್ರಮ ಹಾಗೂ ಕಡಿಮೆ ಖರ್ಚಿನಲ್ಲಿ ಮಾಡಿ ಮುಗಿಸಬಹುದು. ಇಲ್ಲಿವೆ ಕೆಲವು ಹೋಮ್ ಡೆಕೋರ್‌ ಟಿಪ್ಸ್ :

ಕಲರ್ಸ್‌: ಚಳಿಗಾಲ ಹಾಗೂ ಬೇಸಿಗೆ ಕಾಲದ ಅಂತರ ಬಣ್ಣಗಳಿಂದಲೇ ಸ್ಪಷ್ಟವಾಗುತ್ತದೆ. ಬೇಸಿಗೆಯಲ್ಲಿ ತಿಳಿವರ್ಣದ ಬಳಕೆ ಇಷ್ಟವಾಗುತ್ತದಾದರೆ, ಅದೇ ಚಳಿಗಾಲದಲ್ಲಿ ವಾರ್ಮ್ ಹಾಗೂ ಬ್ರೈಟ್‌ ಕಲರ್ಸ್‌ ಚೆನ್ನಾಗಿ ಕಾಣಿಸುತ್ತವೆ. ನೀವು ಈ ಸೀಸನ್‌ ನಲ್ಲಿ ಮನೆಗೆ ಪೇಂಟ್‌ ಮಾಡಿಸುನನರಿದ್ದರೆ, ವಾರ್ಮ್ ಹಾಗೂ ಬ್ರೈಟ್‌ ಕಲರ್ಸ್‌ ನ್ನೇ ಆಯ್ಕೆ ಮಾಡಿ. ಈ ಬಣ್ಣಗಳು ಮನೆಯಲ್ಲಿ ಬೆಚ್ಚಗಿನ ಅನುಭವ ನೀಡುತ್ತದೆ. ಜೊತೆಗೆ ಇದರಿಂದ ಮನೆ ಡಾರ್ಕ್‌ ಆಗಿಯೂ ಗೋಚರಿಸುತ್ತದೆ. ಇದರ ಹೊರತಾಗಿ ರೆಡ್‌, ಆರೆಂಜ್‌ ಮತ್ತು ಯೆಲ್ಲೋ ಬಣ್ಣಗಳಿಂದ ಮನೆಯಲ್ಲಿ ಎನರ್ಜಿಯ ಸಂಚಲನಾಗುತ್ತದೆ.

ಒಂದು ಸಂಗತಿ ಗಮನದಲ್ಲಿರಲಿ, ನೀವು ಎರಡು ಕಾಂಟ್ರಾಸ್ಟ್ ಬಣ್ಣಗಳನ್ನು ಏಕಕಾಲಕ್ಕೆ ಬಳಸದಿರಿ. ಉದಾಹರಣೆಗೆ ಒಂದು ಬಣ್ಣವನ್ನು ತಿಳಿಯಾಗಿಯೂ ಮತ್ತೊಂದನ್ನು ಗಾಢವಾಗಿ ಬಳಸಿ ಕೋಣೆಗೆ ಹಾರ್ಡ್‌ ಲುಕ್‌ ಕೊಡಬಹುದು.

ಲೇಯರಿಂಗ್‌ : ಚಳಿಗಾಲದಲ್ಲಿ ಯಾವ ರೀತಿ ಲೇಯರಿಂಗ್‌ ನಿಂದ ದೇಹವನ್ನು ಬೆಚ್ಚಗಿಡಲು ಉಪಾಯ ಅನುಸರಿಸಲಾಗುತ್ತದೋ, ಅದೇ ರೀತಿ ಮನೆಗೆ ಕೂಡ ಲೇಯರಿಂಗ್‌ ನಿಂದ ವಾರ್ಮ್ ಲುಕ್‌ ಕೊಡಬಹುದಾಗಿದೆ. ಈ ಸೀಸನ್‌ ನಲ್ಲಿ ವಾರ್ಮ್ ಲುಕ್‌ ಕೊಡಲು ಕಾರ್ಪೆಟ್‌ ಗಳು, ಬ್ಲಾಂಕೆಟ್‌ ಗಳ ಮೇಲೆ ಹೆಚ್ಚು ಇನ್‌ ವೆಸ್ಟ್ ಮಾಡಿ. ಇತ್ತೀಚೆಗೆ  ಮಾರುಕಟ್ಟೆಯಲ್ಲಿ ಹಲವು ಬಣ್ಣಗಳು, ಡಿಸೈನ್ ಗಳು, ಪ್ಯಾಟರ್ನ್‌, ಸೈಜ್‌ ನಲ್ಲಿ ಕಾರ್ಪೆಟ್‌ ಗಳು ಲಭಿಸುತ್ತವೆ.

ಕೆಲವು ಹೆಚ್ಚುವರಿ ಪಿಲ್ಲೋಸ್ ಮತ್ತು ಕುಶನ್ಸ್ ಕೂಡ ತೆಗೆದಿರಿಸಿಕೊಳ್ಳಿ. ಅವುಗಳ ಕಲರ್ಸ್, ಟೆಕ್ಚರ್‌ ಮತ್ತು ಮೆಟೀರಿಯಲ್ ಹೇಗಿರಬೇಕೆಂದರೆ, ಎಂತಹ ಜಾಗದಲ್ಲಾದರೂ ಬೆಚ್ಚಗಿನ ಅನುಭವ ಕೊಡಬೇಕು. ಆದರೆ, ಓವರ್‌ ಲೋಡ್‌ ಅಂದರೆ ಯಾವುದೂ ಅತಿಯಾಗದಂತೆ ಗಮನಹರಿಸಿ.

ಹಲವು ಬಣ್ಣಗಳು ಅಥವಾ ಟೆಕ್ಸ್ ಚರ್‌ ಬದಲಿಗೆ ಏಕರೀತಿಯ ಟೋನ್ಸ್ ಬಳಸಿ ಮನೆಯನ್ನು ಕಂಫರ್ಟಬಲ್ ಆಗಿ ಮಾಡಿ. ಒಂದು ಸಂಗತಿ ಗಮನದಲ್ಲಿರಲಿ, ನೀವು ಯಾವುದೇ ಕಾರ್ಪೆಟ್‌ ಖರೀದಿಸಿದರೂ ಅದು ಮನೆಯ ವಿನ್ಯಾಸ ಹಾಗೂ ಬಣ್ಣಕ್ಕೆ ಅನುಸಾರವಾಗಿಯೇ ಇರಲಿ.

ಲೈಟಿಂಗ್‌ : ವಿದ್ಯುದ್ದೀಪಗಳ ಬಗ್ಗೆ ಪ್ರಸ್ತಾಪಿಸಬೇಕೆಂದರೆ, ನೀವು ನಿಮ್ಮ ಕೋಣೆಯನ್ನು ಟಾಸ್ಕ್ ಹಾಗೂ ಆಕ್ಸೆಂಟ್‌ ಲೈಟಿಂಗ್‌ ನಿಂದ  ವಾರ್ಮ್ ಆಗಿಡಬಹುದು. ಇದರ ಹೊರತಾಗಿ ರೂಮ್ ನ್ನು ಸುಂದರ ಹಾಗೂ ಬೆಚ್ಚಗಿಡಲು ಫ್ಲೋರ್‌ ಹಾಗೂ ವಾಲ್ ಲೈಟಿಂಗ್‌ ನ್ನು ಉಪಯೋಗಿಸಬಹುದು. ಫ್ಲೋರೊಸೆಂಟ್‌ ಬಲ್ಬ್ ಗಳ ಬದಲು ಟಂಗಸ್ಟನ್‌ ಬಲ್ಬ್ ಗಳನ್ನು ಉಪಯೋಗಿಸಿ. ಏಕೆಂದರೆ ಅದು ಕೋಣೆಗೆ ವಾರ್ಮ್ ಲುಕ್‌ ಕೊಡುತ್ತದೆ.

ಸಾಮಾನ್ಯವಾಗಿ ಈ ಸೀಸನ್ನಿನಲ್ಲಿ ಜನರು ದಪ್ಪನೆಯ ಪರದೆ ಅಳಡಿಸುತ್ತಾರೆ. ಇಲ್ಲವೇ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಾರೆ. ಇದರಿಂದಾಗಿ ಮನೆಯ ಮಾಲಿನ್ಯ ಹೊರಗೆ ಹೋಗಲು ಮನೆಯ ಒಂದು ಖಾಲಿ ಗೋಡೆಯ ಮೇಲೆ ಕನ್ನಡಿ ಅಳವಡಿಸಿ.

ಗ್ಲಾಸ್‌ ವರ್ಕ್‌ ನ ಕೆಲವು ಆ್ಯಕ್ಸೆಸರಿಗಳನ್ನು ಅವಶ್ಯವಾಗಿ ಹಾಕಿ. ಏಕೆಂದರೆ ಅಲ್ಲಿ ಬೆಳಕು ಪ್ರತಿಬಿಂಬವಾಗಿ ಬೇರೆ ಮೂಲೆಗಳ ತನಕ ತಲುಪಬೇಕು. ಚಳಿಗಾಲದ ಮಂದ ಬಿಸಿಲು ಮನೆಯ ಪ್ರತಿಯೊಂದು ಕಡೆ ಬರಬೇಕು. ಅದಕ್ಕಾಗಿ ಒಂದಷ್ಟು ಹೆಚ್ಚುವರಿ ಪ್ರಯತ್ನ ಮಾಡಬೇಕು. ಯೆಲ್ಲೋ ಅಂಡರ್‌ ಟೋನ್‌ ಇರುವ ಬಲ್ಬ್ ಅಳವಡಿಸಿ. ಇದರ ಹೊರತಾಗಿ ಡಾರ್ಕ್‌ ಕಾರ್ನರ್‌ ಗಳಲ್ಲಿ ಸ್ಟೇಟ್‌ ಮೆಂಟ್‌ ಲೈಟ್‌ ಹಾಕಿ.

ಕಿಚನ್‌ : ಮಾಡರ್ನ್‌ ಡೆಕೋರ್‌ ನಲ್ಲಿ ಅಡುಗೆಮನೆಯ ರೂಪ ಹೆಚ್ಚು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಈಗ ಒಂದು ವಿಶಿಷ್ಟ ಶೈಲಿಯ ವರ್ಕ್‌ ಟಾಪ್ಸ್ ಅಥವಾ ಯೂನಿಟ್ಸ್ ಗೋಚರಿಸುವುದಿಲ್ಲ. ಮಿಕ್ಸಿಂಗ್‌ ಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಸ್ಲೀಕ್‌ ವರ್ಕ್‌ ಟಾಪ್‌, ಡಾರ್ಕ್‌ ಕ್ಯಾಬಿನೇಟರಿಯ ಜೊತೆಗೆ ಕ್ಲೀನ್‌ ಮಾರ್ಬಲ್ದ್ ಸ್ಪ್ಯಾಶ್‌ ಬ್ಯಾಕ್‌ ನಿಂದ ಈ ಸೀಜನ್‌ ಕಿಚನ್‌ ಗೆ ಹೊಸ ಲುಕ್ ದೊರಕಬಹುದು.

ಸ್ಕ್ಯಾಂಡ್ಕ್ಯಾಂಡಲ್ಸ್ : ನೀವು ಎಂತಹ ಕ್ಯಾಂಡಲ್ಸ್ ಆಯ್ಕೆ ಮಾಡಬೇಕೆಂದರೆ, ಅವು ಮನೆಯ ಡೆಕೋರೇಶನ್‌ ನ್ನು ಕಾಂಪ್ಲಿಮೆಂಟ್ ಮಾಡಬೇಕು. ಯಾವುದಾದರೂ ಒಂದು ಮೂಲೆಯಲ್ಲಿ ಹೋಲ್ಡರ್ಸ್ ನಲ್ಲಿ ಇವನ್ನು ಅಳವಡಿಸಿ. ಇಲ್ಲವೇ ಪ್ಲೇಟ್‌ ಅಥವಾ ಬೌಲ್ ‌ನಲ್ಲಿ ಅಳವಡಿಸಿ ಮನೆಯಲ್ಲಿ ಫೈರ್‌ ಪ್ಲೇಸ್‌ ಇದ್ದರೆ ಅದರ ಆಸುಪಾಸು ಕಾಫಿ ಟೇಬಲ್, 2-3 ಕುರ್ಚಿಗಳನ್ನು ಹಾಕಿ ಇಲ್ಲವೇ ಮೂಲೆಯಲ್ಲಿ ಕ್ಯಾಂಡಲ್ಸ್ ಉರಿಸಿ. ಕ್ಯಾಂಡಲ್ ಗಳು ಮನೆಗೆ ಬಿಸಿಯ ಅನುಭವ ನೀಡುತ್ತವೆ. ಲೈಟ್‌ ಸ್ಟಾಂಡ್‌ ಕ್ಯಾಂಡಲ್ಸ್ ಅಥವಾ ಗಂಧದ ಕಡ್ಡಿ ಪ್ರಯೋಗ ಕೂಡ ಮಾಡಬಹುದು.

ವಿಂಡೋ ಸೀಟ್‌ : ಮನೆಯಲ್ಲಿ ಬೆಚ್ಚನೆಯ ಅನುಭವವಾಗಲು ಡಾರ್ಕ್‌ ಶೇಡ್‌ ನ ಪರದೆ ಅಳವಡಿಸಿ. ಇದರಿಂದ ಬೆಚ್ಚನೆಯ ಅನುಭವ ಉಂಟಾಗುತ್ತದೆ. ಆದರೆ ಬೆಳಗ್ಗೆ  ಹೊತ್ತು ಅವನ್ನು ತೆಗೆಯಲು ಮರೆಯದಿರಿ. ಇದರ ಹೊರತಾಗಿ ವಿಂಟರ್‌ ಹಾಲಿಡೇಯಲ್ಲಿ ವಿಂಡೋ ಶೀಟ್‌ ನಿಮ್ಮ ಕಂಫರ್ಟ್‌ ನ್ನು ಹೆಚ್ಚಿಸುತ್ತದೆ.

ಪೂರ್ವ ದಿಸೆಯ ಕಿಟಕಿಗೆ ಒಂದು ಕೋಝಿಯಂತಹ ಸೀಟಿಂಗ್‌ ಅರೇಂಜ್‌ ಮೆಂಟ್‌ ಮಾಡಿ. ಈ ಜಾಗ ಪುಸ್ತಕ ಓದಲು, ಸುಸ್ತು ನಿವಾರಿಸಿಕೊಳ್ಳಲು, ಸಂಗೀತ ಆಲಿಸಲು ಉಪಯೋಗವಾಗುತ್ತದೆ. ಇದನ್ನು ಪಫೀ ಸೀಟ್‌ ಕುಶನ್ಸ್ ಹಾಗೂ ದಿಂಬುಗಳಿಂದ ಅಲಂಕರಿಸಿ. ಕಿಟಕಿಯಿಂದ ಹೊರಗೆ ನೋಡಿದಾಗ, ಹಸಿರು ದೃಶ್ಯ ಕಾಣಿಸಬೇಕು. ಪ್ರತಿಯೊಂದು ಋತುಮಾನಕ್ಕೆ ತಕ್ಕಂತೆ ಬದಲಾವಣೆ ಮಾಡುವುದರಿಂದ ಮನೆಗೆ ಹೊಸ ಬಣ್ಣ, ರೂಪ ದೊರಕುತ್ತದೆ.

ಹೂಗಳ ಬಗ್ಗೆ ಗಮನ ಕೊಡಿ : ಚಳಿಗಾಲದಲ್ಲಿ ಬಣ್ಣ ಬಣ್ಣದ ಹೂಗಳು ಮನೆಗೆ ನ್ಯಾಚುರಲ್ ಲುಕ್‌ ನೀಡುತ್ತವೆ. ಅವನ್ನು ಮನೆಯ ಇಂಟೀರಿಯರ್‌ ಡೆಕೊರೇಶನ್‌ ಗೂ ಕೂಡ ಬಳಸಿಕೊಳ್ಳಬಹುದು. ಟ್ಯೂಬ್‌ ರೋಸ್‌, ಬಣ್ಣ ಬಣ್ಣದ ಗ್ಲ್ಯಾಡಿಯೋಲಾ ಚಳಿಗಾಲಕ್ಕೆ ಶೋಭೆ ನೀಡುತ್ತವೆ. ಸುಗಂಧರಾಜ ಹೂವಿನ ಮಂದ ಸುವಾಸನೆ ಮನೆಯನ್ನು ಘಮಘಮ ಎನ್ನುವಂತೆ ಮಾಡುತ್ತದೆ. ಪ್ಲಾಂಟರ್ಸ್ ನ್ನು ಗಾಢ ಬಣ್ಣದಿಂದ ಪೇಂಟ್‌ ಮಾಡಿ ಹೊಸ ಲುಕ್‌ ಕೊಡಬಹುದು. ಚಳಿಗಾಲದಲ್ಲಿ ಒಂದಿಷ್ಟು ತೇವಾಂಶ ಕಡಿಮೆಯಾದರೂ ಹೂಗಿಡಗಳು ಮುದುಡಲಾರಂಭಿಸುತ್ತವೆ. ಹೀಗಾಗಿ ಹೂಗಿಡಗಳಿಗೆ ನೀರು ಹಾಕುವುದನ್ನ ಮರೆಯಬೇಡಿ. ಹೂಗಳು ನೈಸರ್ಗಿಕ ಅನುಭವ ನೀಡುತ್ತವೆ. ಒಂದು ವೇಳೆ ನಿಮಗೆ ಅಲರ್ಜಿ ಉಂಟಾದರೆ ಕೃತಕ ಹೂಗಳನ್ನು ಬಳಸಬಹುದು.

ಸಂಗತಿಗಳನ್ನು ಗಮನದಲ್ಲಿಡಿ

ಮನೆಯ ಇಂಟೀರಿಯರ್‌ ನ ಅರ್ಧ ಕಥೆಯನ್ನು ಅಲ್ಲಿನ ಪೀಠೋಪಕರಣಗಳೇ ಹೇಳುತ್ತವೆ. ಆದರೆ ಪೀಠೋಪಕರಣಗಳು ದುಬಾರಿ ಬೆಲೆಯದ್ದಾಗಿರಬೇಕು, ಆಗಲೇ ಅವು ಒಳ್ಳೆಯ ಗುಣಮಟ್ಟದ್ದಾಗಿರುತ್ತವೆ ಎಂದೇನಿಲ್ಲ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲೂ ಉತ್ತಮ ಗುಣಮಟ್ಟದ ಪೀಠೋಪಕರಣಗಳು ಲಭ್ಯ. ನಿಮ್ಮ ಗಮನ ಎಲ್ಲಿ ಕೇಂದ್ರೀಕೃತವಾಗಿರಬೇಕೆಂದರೆ, ಆ ಫರ್ನೀಚರ್ ನೋಡಲು ಸುಂದರವಾಗಿರಬೇಕು ಹಾಗೂ ಮನೆಯ ಇತರೆ ಪೀಠೋಪಕರಣಗಳ ಜೊತೆ ಹೊಂದಾಣಿಕೆ ಆಗುವಂತಿರಬೇಕು. ಜೊತೆಗೆ ಅದು ಸಿಂಪಲ್ ಮತ್ತು ಆರಾಮದಾಯಕ ಆಗಿರಬೇಕು. ನೀವು ತಂದಿರುವ ಫರ್ನೀಚರ್‌ ಹೇಗಿರಬೇಕೆಂದರೆ, ಮನೆಯ ಯಾರಾದರೂ ಅದನ್ನು ಸುಲಭವಾಗಿ ಬಳಸುವಂತಿರಬೇಕು. ಎಷ್ಟೋ ಸಲ ಫರ್ನೀಚರ್‌ ನ್ನು ಬೇರೆ ಬೇರೆ ಪ್ಲೇಸಿಂಗ್‌ ನಿಂದಲೂ ಕೋಣೆಯ ಲುಕ್‌ ಬದಲಿಸಬಹುದು. ಹೀಗಾಗಿ ಕಾಲಕಾಲಕ್ಕೆ ಸೆಟ್ಟಿಂಗ್‌ ಚೇಂಜ್‌ ಮಾಡುತ್ತ ಇರಿ.

ಮನೆಯಲ್ಲಿ ನಿರುಪಯುಕ್ತ ಅಥವಾ ಮುರಿದ ಸಾಮಾನುಗಳನ್ನು ಇಡಬೇಡಿ. ಅದರಿಂದ ಮನೆಯ ಅಲಂಕಾರಕ್ಕೆ ಮೆರುಗು ಇರುವುದಿಲ್ಲ. ಜೊತೆಗೆ ಅದು ಕಾರಣವಿಲ್ಲದೆ ಜಾಗ ಆವರಿಸಿಕೊಂಡಿರುತ್ತದೆ. ಮನೆಯಲ್ಲಿ ಎಷ್ಟು ಹೆಚ್ಚುವರಿ ಸಾಮಾನುಗಳು ಇರುತ್ತವೆ ಅವನ್ನು ಸರಿಯಾಗಿ ಇಡಲು ಅಷ್ಟೇ ತೊಂದರೆಯಾಗುತ್ತದೆ.

ಡೈನಿಂಗ್‌ ಟೇಬಲ್ ನ ಕುರ್ಚಿಗಳ ಮೇಲೆ ಫೋಮ್ ಅಥವಾ ಫ್ಯಾಬ್ರಿಕ್‌ ಇದ್ದರೆ, ಅವು ಚಳಿಗಾಲದಲ್ಲಿ ಬಿಸಿಯ ಅನುಭವ ನೀಡುತ್ತವೆ. ಅದರ ಮೇಲೆ ಡಿಸೈನ್‌ ಕವರ್‌ ಅಳವಡಿಸಬಹುದು. ಕುರ್ಚಿಗಳ ಮೇಲೆ ಸಿಲ್ಕ್ ನ ಫ್ಯಾಬ್ರಿಕ್‌ ಕೂಡ ಚಳಿಗಾಲದ ದಿನಗಳಲ್ಲಿ ಬಿಸಿಯ ಅನುಭವ ನೀಡುತ್ತದೆ.

ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಫೈರ್‌ ಪ್ಲೇಸ್‌ ನ್ನು ಬಳಸಲಾಗುವುದಿಲ್ಲ. ನಿಮಗೆ ಬೇಕಿದ್ದರೆ ಆರ್ಟಿಫಿಶಿಯಲ್ ಫೈರ್ ಸ್ಪೇಸ್‌ ನ್ನು ಬಳಸಬಹುದು. ಮನೆಯನ್ನು ಎಷ್ಟು ಬಿಸಿಯಾಗಿ, ಪ್ರಖರವಾಗಿ, ಆರಾಮದಾಯಕವಾಗಿ ಇಡುತ್ತೀರೊ ಅದು ನಮ್ಮನ್ನು ಅಷ್ಟೇ ಆರಾಮದಾಯಕಾಗಿ ಇಡುತ್ತದೆ. ಹಾಗಿದ್ದರೆ ತಡವೇಕೆ? ನಿಮ್ಮ ಮನೆಯಲ್ಲಿ ನಿಮ್ಮ ಬಜೆಟ್‌ ಗೆ ತಕ್ಕಂತೆ ಅಲಂಕರಿಸಿ ಖುಷಿದಾಯಕವಾಗಿಸಿ. ನಿಮ್ಮ ಮನೆಯ ಹೊಸ ರೂಪ, ಹೊಸ ವರ್ಷದ ಅಭಿವೃದ್ಧಿಯ ಉಡುಗೊರೆಯಾಗಿ ಪರಿಣಮಿಸುತ್ತದೆ.

ಪುಷ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ