ಹೊಸ ವರ್ಷ ಆರಂಭವಾಗಿ ಆಗಲೇ ತಿಂಗಳು ಕಳೆದಿದೆ. ಚಳಿಯ ರಂಗು ಹೆಚ್ಚುತ್ತದೆ. ಇಂತಹದರಲ್ಲಿಯೂ ಕೆಲವರು ತಮ್ಮ ಮನೆಗೆ ಹೊಸ ರಂಗು ರೂಪ ಕೊಡಲು ನೋಡುತ್ತಾರೆ. ಸುಂದರವಾದ ಬಣ್ಣಗಳು ಮನೆಯ ಕೋಣೆಗಳ ಅಂದ ಹೆಚ್ಚಿಸಲು ಕಾರಣವಾಗುತ್ತವೆ. ಜೊತೆ ಜೊತೆಗೆ ಮನಸ್ಸಿಗೆ ಖುಷಿ ಮತ್ತು ಶಾಂತಿಯ ಅನುಭವ ನೀಡುತ್ತದೆ. ಅದ್ಹೇಗೆ ಅಂತಾ ತಿಳಿದುಕೊಳ್ಳಿ.
ಗೋಡೆಗಳಿಗೆ ಬ್ರೈಟ್ ಕಲರ್ಸ್
ಚಳಿಗಾಲದ ಸಮಯದಲ್ಲಿ ಮನೆಗೆ ಪೇಂಟ್ ಮಾಡಿಸಲು ಯಾವ ಬಣ್ಣ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ನೀವಿದ್ದರೆ, ಮನೆಗೆ ಬ್ರೈಟ್ ಲುಕ್ ಕೊಡಲು ಇಲ್ಲಿವೆ ಕೆಲವು ಸಲಹೆ ಸೂಚನೆಗಳು :
ಬಿಳಿ : ಈ ಬಣ್ಣವನ್ನು ಚಳಿಗಾಲದಲ್ಲಿ ಬಹಳ ಇಷ್ಟಪಡಲಾಗುತ್ತದೆ. ನೀವು ಇಷ್ಟಪಟ್ಟರೆ ಬಿಳಿ ಬಣ್ಣದ ಜೊತೆಗೆ ಬೇರೆ ಬೇರೆ ಬಣ್ಣಗಳನ್ನು ಮೇಳೈಸಿ ಮನೆಗೆ ಹೊಸ ಲುಕ್ ಕೊಡಬಹುದು.
ಕ್ರಿಮ್ ಸನ್ : ಲಿವಿಂಗ್ ರೂಮ್ ಗೆ ಪೇಂಟ್ ಮಾಡಬೇಕಿದ್ದರೆ, ಅದು ನಿಮಗೆ ಸ್ವಲ್ಪ ಚಾಲೆಂಜಿಂಗ್ ಅನಿಸಬಹುದು. ಆದರೆ ನೀವು ಕೊಡುವ ಬಣ್ಣ ಹೇಗಿರಬೇಕೆಂದರೆ, ಕೋಣೆಗೆ ಪ್ರವೇಶಿಸಿದ ಯಾರೇ ಆಗಲಿ ಒಂದು ವಿಶಿಷ್ಟ ಅನುಭವ ಪಡೆದುಕೊಳ್ಳುವಂತಾಗಬೇಕು.
ನೀಲಿ : ನೀಲಿ ಬಣ್ಣ ಯಾವುದೇ ಋತುಮಾನದ ವಿಶಿಷ್ಟ ಬಣ್ಣವಾಗಿದೆ. ಈ ಪ್ರೀತಿಯ ಬಣ್ಣ ಗೋಡೆಗಳಿಗೆ ವಿಶಿಷ್ಟ ಹೊಳಪು ಕೊಡುತ್ತದೆ. ಅದು ಬ್ರೈಟ್ ಆಗಬಹುದು ಅಥವಾ ತಿಳಿವರ್ಣದ್ದಾಗಿರಬಹುದು. ಅದನ್ನು ಚಳಿಗಾಲದಲ್ಲಿ ಸಾಕಷ್ಟು ಇಷ್ಟಪಡಲಾಗುತ್ತದೆ.
ಕಂದು : ಈ ಬಣ್ಣ ಯಾವುದೇ ಮಹಿಳೆಗೆ ಹೆಚ್ಚು ಪ್ರೀತಿ ಪಾತ್ರ ಎನಿಸುತ್ತದೆ. ಏಕೆಂದರೆ ಈ ಬಣ್ಣದಿಂದ ಗೋಡೆಗೆ ತಗುಲಿದ ಕೊಳೆ ಕಂಡುಬರುವುದೇ ಇಲ್ಲ. ಮತ್ತೊಂದು ವಿಷಯ ಅದನ್ನು ಸ್ವಚ್ಛ ಮಾಡುವುದು ಸುಲಭ.
ಕಿತ್ತಳೆ : ಈ ಬಣ್ಣ ನಿಮ್ಮ ಮನೆಗೆ ಸುಂದರ ಲುಕ್ ಕೊಡುತ್ತದೆ. ಇದರಲ್ಲಿ ಬೇರೆ ಬೇರೆ ಶೇಡ್ಸ್ ಲಭ್ಯವಿದ್ದು, ಅವು ಸಾಕಷ್ಟು ಆಕರ್ಷಣೆಗೆ ಕಾರಣವಾಗುತ್ತದೆ.
ಐವರಿ : ಚಳಿಗಾಲದಲ್ಲಿ ಐವರಿ ಬಣ್ಣ ಬಹಳ ಉತ್ತಮವಾದ ಆಯ್ಕೆ. ಅದು ನಿಮ್ಮ ಗೋಡೆಗಳನ್ನು ಹೊಳಪುಳ್ಳದ್ದಾಗಿ ಕಾಣಿಸುವಂತೆ ಮಾಡುತ್ತದೆ. ಈ ಬಣ್ಣವನ್ನು ನೀವು ಲಿವಿಂಗ್ ರೂಮ್ ಹಾಗೂ ಬೆಡ್ ರೂಮ್ ನಲ್ಲಿ ಉಪಯೋಗಿಸಬಹುದು.
ಹಸಿರು : ಹಸಿರು ಎಂತಹ ಒಂದು ಬಣ್ಣವೆಂದರೆ ಅದು ಕಣ್ಣಿಗೆ ಹಿತವನ್ನುಂಟು ಮಾಡುತ್ತದೆ. ಇದನ್ನು ತಿಳಿಯಾಗಿ ಕಾಣುವ ರೀತಿಯಲ್ಲಿ ಬಳಸಿದರೆ ನಿಮ್ಮ ರೂಮ್ ಎಷ್ಟು ವಿಶಾಲವಾಗಿದೆ ಎಂಬುದರ ಅನುಭವ ಉಂಟಾಗುತ್ತದೆ.
ಗುಲಾಬಿ : ಗುಲಾಬಿ ಬಣ್ಣ ಮನೆ ಹಾಗೂ ಪ್ರಾಂಗಣವನ್ನು ದೊಡ್ಡದೆಂಬಂತೆ ಹಾಗೂ ಅದಕ್ಕೆ ಬ್ರೈಟ್ ಲುಕ್ ನೀಡುತ್ತದೆ.
ಕೆಂಪು : ಇದು ಮನೆ ಹಾಗೂ ಕೋಣೆಗಳಿಗೆ ಉಜ್ವಲ ಲುಕ್ ಕೊಡುತ್ತದೆ. ನೀವು ಇಷ್ಟಪಟ್ಟರೆ ಕೆಂಪು ಬಣ್ಣದ ಜೊತೆಗೆ ಬೇರೆ ಬಣ್ಣವನ್ನು ಮ್ಯಾಚ್ ಮಾಡಬಹುದಾಗಿದೆ. ಇದನ್ನು ರೋಮ್ಯಾಂಟಿಕ್ ಬಣ್ಣ ಎಂದೂ ಹೇಳಲಾಗುತ್ತದೆ. ಹೀಗಾಗಿ ಇದನ್ನು ಬೆಡ್ ರೂಮಿನಲ್ಲಿ ಹೊಡೆಸಲು ಮರೆಯಬೇಡಿ.
ಗೋಡೆಗೆ ಹೊಂದುವ ಪರದೆಗಳು