ಗಝಲ್ ಅಲಘ್
ಗಝಲ್ ಅಲಘ್ ಎಂಥ ಅದ್ಭುತ ಶಕ್ತಿ ಎಂದರೆ, ತನ್ನ ಮಗುವಿನ ಸಂಕಷ್ಟಗಳ ನಿವಾರಣೆಗಾಗಿ, ತನಗೆ ಮಾತ್ರವಲ್ಲದೆ ಇತರ ಎಲ್ಲಾ ಹೆಂಗಸರಿಗೂ ಮಾದರಿಯಾಗುವಂತೆ ಒಂದು ಬಿಸ್ ನೆಸ್ ಆರಂಭಿಸಿ, ಪರಿಹಾರ ಕಂಡುಕೊಂಡರು. ಆಕೆ ನ್ಯಾಚುರ್ ಬೇಬಿ ಬ್ಯೂಟಿ ಪ್ರಾಡಕ್ಟ್ಸ್ ತಯಾರಿಸುವ `ಮಾಮಾ ಅರ್ಥ್' ಕಂಪನಿ ಸ್ಥಾಪಿಸಿದರು. ಇದು ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯಕ್ಕೆ ಬೇಕಾದ ಉತ್ಪನ್ನ ತಯಾರಿಸುತ್ತದೆ. ಜೊತೆಗೆ ಸಣ್ಣ ಶಿಶುಗಳಿಗೂ ಕೂಡ.
ಈಕೆಗೆ ಬಿಸ್ ನೆಸ್ ಟುಡೇ ಫಾರ್ಚ್ಯೂನ್ ಇಂಡಿಯಾದ ಮೋಸ್ಟ್ ಪವರ್ ವುಮನ್-2023, ಅಂಡರ್, ಫಾಸ್ಟ ಫಾರ್ವರ್ಡ್ ವುಮನ್ ಅಚೀರ್ಸ್ ಅವಾರ್ಡ್, ಬಿಸ್ ನೆಸ್ ಟುಡೇ ಮೋಸ್ಟ್ ಪವರ್ ವುಮನ್-2024, ಬಿಸ್ ನೆಸ್ ವರ್ಲ್ಡ್-40 ಅಂಡರ್ 40 ಇತ್ಯಾದಿ ಪ್ರಶಸ್ತಿಗಳು ಅರಸಿ ಬಂದವು. ಕಲೆಯ ಅಭಿರುಚಿಯುಳ್ಳ ಈಕೆಯ ರಚನೆಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಗಳು ಮಾಮೂಲಿ ಎನಿಸಿವೆ. ದೇಶದ ಅತಿ ಶ್ರೇಷ್ಠ ಸಾಧನೆಯ 10 ಮಂದಿ ಮಹಿಳಾ ಕಲಾವಿದರಲ್ಲಿ ಈಕೆ ಒಬ್ಬರೆನಿಸಿದ್ದಾರೆ ಕಾರ್ಪೊರೇಟ್ ಟ್ರೇನರ್, ಅಪ್ಪಟ ದೀಶೀ ಕಲಾವಿದೆ, ಜವಾಬ್ದಾರಿಯುತ ತಾಯಿಯಾಗಿರುವ ಈಕೆ ಕೌಟುಂಬಿಕ ಹಾಗೂ ವೃತ್ತಿಪರ ರಂಗದಲ್ಲೂ ಸಹ ಸೈ ಎನಿಸಿದ್ದಾರೆ. ಈಕೆ ಸೋನಿ ಚಾನೆಲ್ ನ `ಶಾರ್ಕ್ ಟ್ಯಾಂಕ್' ಶೋ-1ರ ಪ್ರಮುಖ ಜಜ್ ಗಳಲ್ಲಿ ಒಬ್ಬರು. ಈಕೆ 2024ರ ಸ್ಟಾರ್ಟ್ ಅಪ್ ಕಮಿಟಿಯ ಸಹ ಅಧ್ಯಕ್ಷೆಯೂ ಹೌದು.
ಈಕೆ ಚಂಡೀಘಡ ರಾಜ್ಯದ ಒಂದು ಅವಿಭಕ್ತ ಕುಟುಂಬಕ್ಕೆ ಸೇರಿದವರು. ಮೂಲತಃ ಬಿಸ್ ನೆಸ್ ಕುಟುಂಬ ಇವರದು. ಲಾಭ ಇದ್ದರೆ ಮಾತ್ರ ಅದು ಬಿಸ್ ನೆಸ್, ಇತ್ಯಾದಿ ಕೇಳಿಕೊಂಡೇ ಬೆಳೆದರು. ಶಾಲಾ ಕಾಲೇಜಿನ ಆಟಪಾಠ, ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದು. ಮುಂದೆ ಎಂಜಿನಿಯರಿಂಗ್ ಸೇರಿದರೂ ಆಸಕ್ತಿ ಎಲ್ಲಾ ಬಿಸ್ ನೆಸ್ ನಲ್ಲೇ ಇತ್ತು.
ನಿಮಗೆ ಇಷ್ಟವಿಲ್ಲದ ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಪರಿಶ್ರಮ ಪಟ್ಟರೂ ಪ್ರಗತಿ ಸಾಧ್ಯವಿಲ್ಲ. ಬದಲಿಗೆ ನಿಮ್ಮ ಅಭಿರುಚಿಗೆ ತಕ್ಕಂಥ ಕ್ಷೇತ್ರದಲ್ಲಿ ಹೆಚ್ಚು ಕಷ್ಟಪಟ್ಟಾಗ ಮಾತ್ರ ಯಶಸ್ಸು ಸಾಧ್ಯ, ಎನ್ನುತ್ತಾರೆ.
ಹೀಗಾಗಿ ತಮ್ಮ ಮೆಚ್ಚಿನ ಕಂಪ್ಯೂಟರ್ ನಿಂದ ಡಿಪ್ಲೊಮಾ ಪಡೆದರು. ಹೀಗೆ ಕೋ ಆಪರೇಟಿವ್ ಕೆರಿಯರ್ ಆರಂಭಿಸಿದರು. 4 ವರ್ಷ ಈ ರೀತಿ ತಮ್ಮ ಸಾಫ್ಟ್ ವೇರ್ ಕೌಶಲದ ವೃತ್ತಿಯಲ್ಲಿದ್ದರು.
ಮದುವೆ ನಂತರ ನಿಮ್ಮ ಜೀವನ ಹೇಗೆ ಬದಲಾಯ್ತು? ಹೊಸ ಕಂಪನಿ ಆರಂಭಿಸಿದ್ದು ಹೇಗೆ? ವರುಣ್ ಜೊತೆ ಸ್ನೇಹ, ಪ್ರೇಮ ಮದುವೆಯಲ್ಲಿ ಮುಕ್ತಾಯವಾಯಿತು. ಮದುವೆ ನಂತರ ಆತ ಕೆಲಸಕ್ಕಾಗಿ ಫಿಲಿಪೈನ್ಸ್ಗೆ ಹೊರಟಾಗ ಇವರೂ ಹೊರಡಬೇಕಾಯ್ತು. ಅಲ್ಲಿ ಹೆಚ್ಚಿನ ಬಿಡುವಿನ ಸಮಯ ಪೇಂಟಿಂಗ್ ಮುಂದುವರಿಸಲು ಸಹಕಾರಿಯಾಯ್ತು. ಪತಿಯ ನೆರವಿನಿಂದ ಅದನ್ನು ಆರ್ಟ್ ಅಕಾಡೆಮಿಗಳಿಗೆ ಕಳುಹಿಸಿದರು. ಹೀಗೆ ನ್ಯೂಯಾರ್ಕ್ ಆರ್ಟ್ ಅಕಾಡೆಮಿ ಸೇರಿ ಈಕೆ ಪ್ರೊಫೆಶನಲಿ ಅದನ್ನು ಕಲಿಯುವಂತಾಯ್ತು. ಅಲ್ಲಿಂದ ಮುಂದೆ ಕಲಾವಿದೆಯಾಗಿ ಬೆಳೆದು ಅಸಂಖ್ಯಾತ ಪ್ರದರ್ಶನ ಏರ್ಪಡಿಸುವಂತಾಯ್ತು.





