ಆ ಹುಡುಗನ ಹೆಸರು ಪ್ರತೀಕ್‌, ವಯಸ್ಸು 29. ಅವನು ತನ್ನ ಮನೆಯಲ್ಲಿ ಸೀಮಾ (25)ಳ ಬಗ್ಗೆ ಹೇಳಿದಾಗ, ಮನೆಯ ಮೇಲೆ ಪರ್ವತವೇ ಕುಸಿದು ಬಿತ್ತು ಎನ್ನುವ ರೀತಿಯಲ್ಲಿ ಎಲ್ಲರೂ ವರ್ತಿಸಿದರು.

ಸೀಮಾಳ ಬಗ್ಗೆ ಕೇಳಿದಾಗ, ಮನೆಯವರು ಎರಡು ರೀತಿಯ ಏಟು ತಿಂದವರಂತೆ ವರ್ತಿಸಿದರು. ಸೀಮಾ ತಮ್ಮ ರಾಜ್ಯದವಳಲ್ಲ (ಭಾಷೆ) ಎನ್ನುವುದು ಮೊದಲನೇ ಕಾರಣವಾಗಿದ್ದರೆ, ಅವಳು ತಮ್ಮ ಜಾತಿಗೆ ಸೇರಿದವಳಲ್ಲ ಎನ್ನುವುದು ಎರಡನೇ ಕಾರಣವಾಗಿತ್ತು.

ಅಂದಹಾಗೆ ಪ್ರತೀಕ್‌ ಮತ್ತು ಸೀಮಾ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಜೊತೆ ಜೊತೆಗೆ ಸಮಯ ಕಳೆಯುತ್ತಿದ್ದುದರಿಂದ ಅವರಲ್ಲಿ ಒಳ್ಳೆಯ ಹೊಂದಾಣಿಕೆ ಉಂಟಾಗಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಅವರ ಪ್ರೀತಿ ಮತ್ತು ಮದುವೆ ಸಂಬಂಧದ ನಡುವೆ ಅವರ ಜಾತಿ ಅಡ್ಡ ಬರುತ್ತಿದೆ. ಪ್ರತೀಕ್‌ ಮೇಲ್ಜಾತಿಗೆ ಸೇರಿದ್ದರೆ, ಸೀಮಾ ಹಿಂದುಳಿದ ವರ್ಗಕ್ಕೆ ಸೇರಿದವಳಾಗಿದ್ದಳು.

ಈ ಬಗ್ಗೆ ಪ್ರತೀಕ್‌ ನ ಮನೆಯಲ್ಲಿ ಸಾಕಷ್ಟು ಗಲಾಟೆಯಾಗಿತ್ತು. ನಗರದ ಜೀವನಶೈಲಿಯಲ್ಲಿ ಬೆಳೆದವರಾಗಿಯೂ ಜಾತಿಯ ಸಮಸ್ಯೆ ಅವರ ಕೆಲಸ ಕಾರ್ಯಗಳಲ್ಲಿ ಅಡ್ಡಿಯನ್ನುಂಟು ಮಾಡುತ್ತಿತ್ತು. ನಮ್ಮ ಜಾತಿ ಶ್ರೇಷ್ಠ, ನಿಮ್ಮದು ಕೀಳುಜಾತಿ ಎನ್ನುವ ಭೇದಭಾವ ಶತಶತಮಾನಗಳಿಂದ ನಮ್ಮ ಸಮಾಜದಲ್ಲಿ ನಡೆದುಕೊಂಡು ಬಂದಿದೆ. ಪ್ರತೀಕನ ಮನೆಯವರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿಬಿಟ್ಟರು. ಸಂಬಂಧಿಕರು ಕೂಡ ಈ ಮದುವೆಯೇನಾದರೂ ನಡೆದರೆ ನಾವು ನಿಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರು.

ಕೊನೆಗೊಮ್ಮೆ ಈ ಮದುವೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು. ಪ್ರತೀಕ್‌ ಅದೆಷ್ಟೊ ಸಲ ತನ್ನ ಮನೆಯವರನ್ನು ವಿನಂತಿಸಿಕೊಂಡ. ಆದರೆ ಅವರು ಹಿಂದೆ ಸರಿಯದಿದ್ದಾಗ, ಪ್ರತೀಕ್‌ ಮತ್ತು ಸೀಮಾ ಇಬ್ಬರೂ ರಿಜಿಸ್ಟ್ರಾರ್ ಕಛೇರಿಗೆ ಹೋಗಿ ಮದುವೆ ಮಾಡಿಕೊಂಡರು.

ಸಧ್ಯ ಅವರಿಬ್ಬರೂ ತಮ್ಮ ಕುಟುಂಬಗಳಿಂದ ದೂರವಿದ್ದು, ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪ್ರತೀಕ್‌ ಮಾತ್ರ ಒಂದಿಲ್ಲೊಂದು ದಿನ ಸೀಮಾಳನ್ನು ಮನೆಯವರು ಸೊಸೆಯಾಗಿ ಒಪ್ಪಿಕೊಳ್ಳುತ್ತಾರೆಂದು ನಂಬಿಕೆ ಇಟ್ಟುಕೊಂಡಿದ್ದಾನೆ.

ಸಂಬಂಧ ಮತ್ತು ಜಾತಿ

ಪ್ರತೀಕ್‌ ಮತ್ತು ಸೀಮಾರದ್ದು ನಗರದ ಪ್ರಕರಣ. ಅವರು ಕಾನೂನಿನ್ವಯ ಆಸರೆ ಪಡೆದುಕೊಂಡು ತಮ್ಮ ಮದುವೆ ನಡೆಸಿಕೊಂಡರು. ಆದರೆ ಭಾರತದ ಪ್ರತಿಯೊಂದು ಕಡೆ ಹೀಗಾಗುವುದೇ ಇಲ್ಲ. ಹಳ್ಳಿಗಳಲ್ಲಿ ಹೀಗೆ ಮಾಡುವುದಿಲ್ಲ. ಆ ಬಗ್ಗೆ ಯೋಚಿಸುವುದು ಕೂಡ ತಪ್ಪು ಎನಿಸಲ್ಪಡುತ್ತದೆ. ಇತ್ತೀಚೆಗಂತೂ ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಮರ್ಯದಾ ಹತ್ಯೆಯಂತಹ ಸುದ್ದಿಗಳು ಬರುತ್ತಿರುತ್ತವೆ. ಅವನ್ನು ನೋಡಿ ನಿಜಕ್ಕೂ ಆತಂಕವಾಗುತ್ತದೆ.

ಭಾರತದಲ್ಲಿ ಜಾತಿ ವ್ಯವಸ್ಥೆ ಶತ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಅದು ಕೇವಲ ಸಮಾಜದಲ್ಲಷ್ಟೇ ದ್ವೇಷ  ಹರಡುವುದಿಲ್ಲ, ಅದು ಹಲವರ ಸಾವಿಗೂ ಕಾರಣವಾಗುತ್ತದೆ. ಇಂತಹದರಲ್ಲಿ ಜಾತಿ ಶುದ್ಧತೆಯ ಹೆಸರಿನಲ್ಲಿ ಪ್ರೇಮಿಗಳನ್ನು ಹಾಗೂ ವಿವಾಹಿತರನ್ನು ಟಾರ್ಗೆಟ್‌ ಮಾಡಲಾಗುತ್ತದೆ.

ಕೆಲವು ಭಯಾನಕ ಘಟನೆಗಳು

ಅಕ್ಟೋಬರ್‌ 2020ರಲ್ಲಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಮರ್ಯಾದಾ ಹತ್ಯೆಯಂತಹ ಘಟನೆಯೊಂದು ನಡೆಯಿತು. ತಂದೆಯೊಬ್ಬ ತನ್ನ ಮಗಳನ್ನೇ ಕೊಂದು ಹಾಕಿದ. ಅವಳು ಮಾಡಿದ ತಪ್ಪು ಇಷ್ಟೇ ಅವಳು ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಅವನನ್ನು ಮದುವೆಯಾಗಲು ಹೊರಟಿದ್ದಳು. ಅದು ಆಶ್ಚರ್ಯಕರ ಸಂಗತಿಯೆಂದರೆ, ಈ ಘಟನೆಯ ಬಗ್ಗೆ ಮಾಹಿತಿ ಇದ್ದೂ ಕೂಡ ಗ್ರಾಮದ ಯಾರೊಬ್ಬರೂ ಪೊಲೀಸರ ಮುಂದೆ ಬಾಯಿ ಬಿಡಲಿಲ್ಲ, ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಇದರರ್ಥ ಇಷ್ಟೇ, ಆ ಘಟನೆಗೆ ಸಾಮಾಜಿಕ ಮಾನ್ಯತೆ ಸಿಕ್ಕಿರುವುದು.

ಈ ತೆರನಾದ ಘಟನೆಗಳು ಬಹಳಷ್ಟು ಕಡೆ ನಡೆಯುತ್ತಿರುತ್ತವೆ. ಆದರೆ ಯಾರೊಬ್ಬರೂ ಬಾಯಿ ಬಿಡದೇ ಇರುವುದರಿಂದ ಅಂತಹ ಪ್ರಕರಣಗಳು ಬಹಿರಂಗವಾಗುವುದಿಲ್ಲ. ಹಾಗೊಂದು ವೇಳೆ ಕುಟುಂಬದವರು ತಮ್ಮ ಮಗ ಅಥವಾ ಮಗಳ ಮದುವೆಯನ್ನು ಬೇರೆ ಜಾತಿಯವರೊಂದಿಗೆ ಮಾಡಲು ಸಿದ್ಧರಾದರೆ, ಅದಕ್ಕೆ ಊರಿನ ಪಂಚರು ಒಪ್ಪಿಗೆ ಕೊಡದೆ, ದಂಡ ಹಾಕುವುದಾಗಿ ಇಲ್ಲಿ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕುತ್ತಾರೆ.

ಒಂದು ವರದಿಯ ಪ್ರಕಾರ, 2014-17ರ ನಡುವೆ ಭಾರತದಲ್ಲಿ ಒಟ್ಟು 300 ಮರ್ಯಾದಾ ಹತ್ಯೆಯ ಪ್ರಕರಣಗಳು ಘಟಿಸಿದ್ದವು. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣಗಳು ಹೆಚ್ಚಿಗೆ ನಡೆದಿದ್ದವು.

ಸ್ವಗೋತ್ರದ ಸಮಸ್ಯೆ

ಭಾರತದಲ್ಲಿ ಇಬ್ಬರು ಪ್ರೇಮಿಗಳಿಗೆ ತಮ್ಮಿಚ್ಛೆಯಂತೆ ಮದುವೆಯಾಗಲು ಸಮಾಜ ಅವಕಾಶ ಕೊಡುವುದು ಕಡಿಮೆಯೇ. ಹೆಚ್ಚಿನ  ಪ್ರಕರಣಗಳಲ್ಲಿ ಅದು ಅಡ್ಡಿಯನ್ನುಂಟು ಮಾಡಲು ಪ್ರಯತ್ನಿಸುತ್ತದೆ. ಅಮಿತ್‌ ಹಾಗೂ ಪ್ರಿಯಾ ನಡುವೆ ಅಡ್ಡಿಯಾದದ್ದು ಜಾತಿಯಲ್ಲ. ಇಬ್ಬರೂ ಒಂದೇ ಜಾತಿಯವರು. ಅವರಿಗೆ ಅಡ್ಡಗಾಲಾದುದು ಗೋತ್ರ. ಸಮಾನ ಗೋತ್ರ ಇರುವುದಾದರೆ ಸೋದರ ಸೋದರಿಯಾಗುತ್ತಾರೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ. ಒಂದೇ ಗೋತ್ರದವರು ವಿವಾಹವಾಗಲು ಅರ್ಹರಲ್ಲ. ಪರಿಚಯವಿಲ್ಲದಿದ್ದರೂ, ರಕ್ತ ಸಂಬಂಧವುಳ್ಳವರಿಗೆ ಎಲ್ಲೋ ಒಂದು ಕಡೆ ಸಂಬಂಧ ಇರುತ್ತದೆ ಎನ್ನುವುದನ್ನು ಒತ್ತಿ ಹೇಳಲಾಗುತ್ತದೆ.

ಅಮಿತ್‌ ತಾತನ ಊರಿನವಳು ಪ್ರಿಯಾ, ತಾತನ ಊರಿಗೆ ಆಗಾಗ ಅಮಿತ್‌ ಹೋಗಿ ಬರುತ್ತಿದ್ದುದರಿಂದ ಪ್ರಿಯಾ ಪರಿಚಯವಾಗಿದ್ದಳು. ಆ ಪರಿಚಯವೇ ಪ್ರೇಮವಾಗಿ, ವಿವಾಹದಲ್ಲಿ ಮುಂದಾಗುವಂತೆ ಮಾಡಿತ್ತು. ಆದರೆ ಮನೆಯವರಿಗೆ ಈ ವಿಷಯ ಗೊತ್ತಾದಾಗ, ಅವರು ಆ ಮದುವೆಗೆ ಬಲವಾಗಿ ವಿರೋಧಿಸಿದರು. ಹುಡುಗ ಹುಡುಗಿ ಒಂದೇ ಗೋತ್ರದವರಾದ್ದರಿಂದ ಈ ಮದುವೆ ಸಾಧ್ಯವೇ ಇಲ್ಲವೆಂದು ಗ್ರಾಮಸ್ಥರು ಹೇಳಿದರು. ಆ ಬಳಿಕ ಅವರಿಬ್ಬರು ಮಾತನಾಡಬಾರದೆಂದು ಆದೇಶ ಹೊರಡಿಸಲಾಯಿತು.

ಇದು ಊರಿನ ವಿಷಯವಾಗಿತ್ತು ಹಾಗೂ ಸ್ಥಳೀಯ ಸಮಾಜ ಕೂಡ ಅವರ ವಿರುದ್ಧ ನಿಂತಿತು. ಇದರ ಪರಿಣಾಮ ಏನಾಯಿತೆಂದರೆ, ಪ್ರಿಯಾಳ ಮದುವೆಯನ್ನು ತರಾತುರಿಯಲ್ಲಿ ಯಾವುದೊ ಒಬ್ಬ ಅಪರಿಚಿತ ವ್ಯಕ್ತಿಯ ಜೊತೆ ಮಾಡಿದರು. ಆ ವ್ಯಕ್ತಿಯ ಬಗ್ಗೆ ಅವಳಿಗೆ ಯಾವುದೇ ಆಸಕ್ತಿ ಇರಲಿಲ್ಲ.

ಭಾಷೆ ಮತ್ತು ಸಂಸ್ಕೃತಿಯ ಸಮಸ್ಯೆ

ಭಾರತದಲ್ಲಿ ಎಂತಹ ಪ್ರಕರಣಗಳು ಬರುತ್ತಿಯೆಂದರೆ, ಪ್ರೇಮಿಗಳು ಸಾಮಾಜಿಕ ಒತ್ತಡಕ್ಕೆ ಮಣಿದು ತಮ್ಮ ಇಚ್ಛೆಗಳಿಗೆ ತೀಲಾಂಜಲಿ ಕೊಡಬೇಕಾಗುತ್ತದೆ. ಇದು ಕೇವಲ ಜಾತಿ ಗೋತ್ರಕ್ಕಷ್ಟೇ ಸಂಬಂಧಿಸಿಲ್ಲ. ಇದು ಎರಡು ಕುಟುಂಬಗಳು ರೀತಿ ನೀತಿಯಲ್ಲಿ ಭಾಷೆ ಸಂಸ್ಕೃತಿಯಲ್ಲಿ ವಿಭಿನ್ನವಾಗಿದ್ದರೂ ಅದೂ ಕೂಡ ಮದುವೆಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಒಂದೇ ರಾಜ್ಯದಲ್ಲಿ ಭಾಷೆ ಸಂಸ್ಕೃತಿ ವಿಭಿನ್ನವಾಗಿರುತ್ತದೆ. ಅದೇ ಇನ್ನೊಂದು ರಾಜ್ಯದ ವಿಭಿನ್ನತೆ ವಿಶಿಷ್ಟವಾಗಿರುತ್ತದೆ. ಹಿಮಾಚಲ ಪ್ರದೇಶದ ವಿಕ್ರಮ್ ತನ್ನ ಪ್ರೇಯಸಿ ವಿಭಾಳ ಬಗ್ಗೆ ಮನೆಯವರಿಗೆ ಹೇಳಿದಾಗ, ಕುಟುಂಬದವರು ದಂಗಾಗಿ ಹೋದರು. ವಿಕ್ರಮ್ ಹಾಗೂ ವಿಭಾ ದೆಹಲಿ ವಿವಿಯ ಸೌತ್‌ ಕ್ಯಾಂಪಸ್‌ ನ ರಾಮ್ ಲಾಲ್ ‌ಕಾಲೇಜಿನಲ್ಲಿ ಜೊತೆ ಜೊತೆಗೆ ಓದುತ್ತಿದ್ದರು. ಆಗಲ್ ಅವರ ಪರಿಚಯವಾಗಿ ಪ್ರೀತಿಯಾಗಿ 8 ವರ್ಷಗಳ ಅವರ ಪ್ರೀತಿ ಮದುವೆಯಾಗುವ ಹಂತಕ್ಕೆ ತಲುಪಿತ್ತು. ಅವರು ತಮ್ಮ ಕುಟುಂಬದವರ ಎದುರು ತಮ್ಮ ವಿಷಯ ಹೇಳಲು ಗಟ್ಟಿ ನಿರ್ಧಾರ ಮಾಡಿದರು. ಭಾಷೆ ಸಂಸ್ಕೃತಿ ಹೆಸರಿನಲ್ಲಿ ವಿಕ್ರಮ್ ನ ಮನೆಯವರು ಹೇಳುವುದೇನೆಂದರೆ, ಎರಡು ಕುಟುಂಬಗಳ ಭಾಷೆ, ಸಂಸ್ಕೃತಿ ಹಾಗೂ ರೀತಿನೀತಿಯಲ್ಲಿ ಸಾಕಷ್ಟು ಅಂತರವಿದೆ. ಹೀಗಾಗಿ ಪರಸ್ಪರರಲ್ಲಿ ಹೊಂದಾಣಿಕೆ ಆಗುವುದಿಲ್ಲ. ಅದಕ್ಕೂ ಮಿಗಿಲಾಗಿ ಬಂಗಾಳಿ ಜನರು ಬಹಳ ಚಾಲಾಕಿಗಳು. ವಿಭಾ ತಮ್ಮ ಮಗ ವಿಕ್ರಮ್ ನನ್ನು ತನ್ನ ವಶಕ್ಕೆ ಪಡೆಯುತ್ತಾಳೆ ಎಂದು ಹೇಳುತ್ತಾರೆ.

ಇಬ್ಬರು ವಯಸ್ಕರು ಪರಸ್ಪರ ಮದುವೆಗೆ ಸಿದ್ಧರಾಗಿದ್ದಾರೆ. ಅಂತಹ ಸ್ಥಿತಿಯಲ್ಲಿ ಉಳಿದವರು ಅವರ ಮದುವೆಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕೇ ಹೊರತು ಆ ಮದುವೆಯನ್ನು ಮುರಿಯುವ ಕೆಲಸ ಮಾಡಬಾರದು. ವಿಕ್ರಮ್ ಗೆ ವಿಭಾಳ ಜೊತೆಗೆ ಜೀವನ ಕಳೆಯಬೇಕು. ಇಂತಹ ಸ್ಥಿತಿಯಲ್ಲಿ ಅವರ ಇಷ್ಟಕ್ಕೆ ಆದ್ಯತೆ ಕೊಡಬೇಕು. ಎರಡನೇ ವಿಷಯ ಸಂಸ್ಕೃತಿ ಪರಸ್ಪರ ಹೊಂದಾಣಿಕೆಯಾಗದಿದ್ದರೆ, ಆ ಸಮಸ್ಯೆ ವಿಭಾಳದ್ದು. ಅವಳು ತನ್ನ ಮನೆ ಬಿಟ್ಟು ವಿಕ್ರಮ್ ನ ಮನೆಗೆ ಬಂದಾಗ ಅವಳು ವಿಕ್ರಮ್ ನ ಮನೆಯ ಸಂಸ್ಕೃತಿಯಲ್ಲಿ ಒಂದಾಗಲು ಪ್ರಯತ್ನಿಸಬಹುದು. ಜೊತೆಗೆ ತನ್ನ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬಹುದು.

ಅಂತರ್ಜಾತಿಯ ವಿವಾಹಕ್ಕೆ ವಿರೋಧ

ಪ್ರಸ್ತುತ ಸ್ಥಿತಿಯಲ್ಲಿ ಯಾವ ರೀತಿಯ ಸಾಮಾಜಿಕ ಹಾಗೂ ರಾಜಕೀಯ ವಾತಾವರಣ ಪಸರಿಸಿದೆಯೆಂದರೆ, ಅದು ಪ್ರೇಮ ವಿವಾಹಗಳಿಗೆ ಬಗೆ ಬಗೆಯ ಅಡೆತಡೆಯುಂಟು ಮಾಡುತ್ತಿದೆ. ಅದರಲ್ಲೂ ಬೇರೆ ಜಾತಿಯವರನ್ನು ಮದುವೆಯಾಗುವವರನ್ನು ಬಹುದೊಡ್ಡ ಪ್ರಮಾಣದಲ್ಲಿ ವಿರೋಧಿಸಲಾಗುತ್ತದೆ.

ಭಾರತದಲ್ಲಿ ಅಂತರ್ಜಾತಿಯ ಮದುವೆಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತದೆ. ಕುಟುಂಬ, ಸಂಬಂಧಿಕರು ಹಾಗೂ ಸಮಾಜದ ಮುಖಾಂತರ ಅಂತರ್ಜಾತಿಯ ಮದುವೆಗಳನ್ನು ಮುಕ್ತವಾಗಿಯೇ ವಿರೋಧಿಸಲಾಗುತ್ತದೆ. ಯಾವ ಸರ್ಕಾರಗಳು ಅವರ ಬೆಂಗಾವಲಿಗೆ ನಿಲ್ಲಬೇಕಾಗಿತ್ತೊ, ಅವರಿಗೆ ಸಹಾಯ ಸಹಕಾರ ನೀಡಬೇಕಿತ್ತೊ, ಅವೇ ಸರ್ಕಾರಗಳು ಈಗ ಮತಾಂತರ ವಿರೋಧಿ ಕಾನೂನು ಜಾರಿಗೆ ತಂದು ಅಂತರ್ಜಾತಿಯ ವಿವಾಹಗಳ ಮೇಲೆ ನಿರ್ಬಂಧ ಹೇರಲು ಹಣಿಸುತ್ತಿವೆ.

ಕೆಲವು ಕಡೆಗಳಂತೂ ಅಂತರ್ಜಾತಿಯ ಜೋಡಿಗಳನ್ನು ಹುಡುಕಿ ಅವರಿಗೆ ಹಿಂಸೆ ನೀಡಲಾಗುತ್ತದೆ. ಅದರಲ್ಲಿ ಪೊಲೀಸರು ಕೂಡ ಬೆಂಬಲ ಕೊಡುತ್ತಿರುವುದು ನಿಜಕ್ಕೂ ಖೇದದ ಸಂಗತಿ. ಪೊಲೀಸ್‌ ಬಲದ ನೆಪದಲ್ಲಿ ಆ ಜೋಡಿಗಳನ್ನು ಪ್ರತ್ಯೇಕಗೊಳಿಸಲಾಗುತ್ತದೆ ಹಾಗೂ ಅವರನ್ನು ಬಂಧಿಸಲು ಕೂಡ ಹಿಂದೆ ಮುಂದೆ ನೋಡುತ್ತಿಲ್ಲ. ಅವರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಕೂಡ ಹಾಕಲಾಗುತ್ತದೆ. ವಿವಾಹಿತ ಮಹಿಳೆಯನ್ನು ಬಲವಂತವಾಗಿ ತಂದೆಯ ಕಸ್ಟಡಿಗೆ ಕೊಡಲಾಗುತ್ತದೆ.

ಪ್ರೇಮಿಗಳಿಗೆ ಈಗ ತಮ್ಮ ಕುಟುಂಬ ಸಮಾಜವನ್ನಷ್ಟೇ ಅಲ್ಲ, ಸರ್ಕಾರವನ್ನು ಕೂಡ ಓಲೈಸಬೇಕಾದ ಸವಾಲನ್ನು ಎದುರಿಸಬೇಕಾಗಿ ಬಂದಿದೆ.

ವಿವಾದಿತ ಕಾನೂನಿನಡಿ ಸಂಘರ್ಷ

ವಿವಾದಿತ ಮತಾಂತರ ನಿಷೇಧ ಕಾನೂನು ಉತ್ತರ ಪ್ರದೇಶದಲ್ಲಿ ಜಾರಿಗೆ ಬಂದ ನಂತರ ಅಲಹಾಬಾದ್‌ ಹೈಕೋರ್ಟ್‌ ಎದುರು ಹಲವು ಅಂತರ್ಜಾತಿಯ ವಿವಾಹ ಪ್ರಕರಣಗಳು ಬರತೊಡಗಿವೆ. ಅಂತಹದೇ ಒಂದು ಪ್ರಕರಣದಲ್ಲಿ ಸಿಲುಕಿದ ಶಿಖಾ(21) ಹಾಗೂ ಸಲ್ಮಾನ್‌ ಮೊದಲು ಕುಟುಂಬದವರನ್ನು ಸಂಬಂಧಿಕರನ್ನು ಮತ್ತು ಸಮಾಜದವರನ್ನು ಎದುರಿಸಬೇಕಾಗಿ ಬಂತು. ಆ ಬಳಿಕ ಅವರು ಮದುವೆಯಾಗಲು ಯಶಸ್ವಿಯಾದಾಗ, ಈಗ ಅವರು ಸರ್ಕಾರದ ವಿರುದ್ಧ ಸಂಘರ್ಷ ನಡೆಸಬೇಕಾದ ಸ್ಥಿತಿ ಬರಲಿದೆ.

ಈ ಕುರಿತಂತೆ ಜಸ್ಟಿಸ್‌ ಪಂಕಜ್‌ ನಕ್ವಿ ಹಾಗೂ ವಿವೇಕ್‌ ಅಗ್ರವಾಲ್ ‌ಅವರಿದ್ದ ಪೀಠ ಹೇಳಿದ್ದೇನೆಂದರೆ, ಶಿಖಾ ತನ್ನ ಗಂಡನ ಜೊತೆಗೆ ಇರಲು ಯತ್ನಿಸುತ್ತಾಳೆ ಮತ್ತು ಅವಳು ಸ್ವತಂತ್ರಳು. ತನ್ನ ಇಚ್ಛೆಯ ಮೇರೆಗೆ ಜೀವಿಸಬಹುದು.

ಅದಕ್ಕೂ ಮುನ್ನ ಕೋರ್ಟ್‌ ಶಿಖಾಳನ್ನು ಒತ್ತಾಯಪೂರ್ವಕವಾಗಿ ಅವಳ ತಂದೆಯ ಕಸ್ಟಡಿಗೆ ಕೊಟ್ಟ ಬಗೆಗಿನ ಶಿಫಾರಸಿನ ಮೇರೆಗೆ ಸಿಡಬ್ಲ್ಯೂಸಿಗೆ ಹೇಳಿದ್ದೇನೆಂದರೆ, ಅವಳ ಇಚ್ಛೆಯಿಲ್ಲದೆ ಸಿಡಬ್ಲ್ಯೂಸಿಯ ಮುಖಾಂತರ ಹೀಗೆ ಮಾಡಲಾಯಿತು.

ಈ ಸಂಗತಿಗಳು ವಿವಾದಿತ ಕಾನೂನಿನಡಿ ಅಂತಾರ್ಜಾತಿಯ ವೈವಾಹಿಕ ಜೋಡಿಗಳಿಗೆ ತೊಂದರೆ ಕೊಡಲಾಗುತ್ತದೆ ಎನ್ನುವುದು ತಿಳಿಯುತ್ತದೆ. ಅದಕ್ಕೂ ಮೊದಲು ಕೋಲ್ಕತ್ತಾ ಹೈಕೋರ್ಟ್‌ ಕೂಡ ಪುನರುಚ್ಚರಿಸಿತು.

“ಯಾವುದೇ ವಯಸ್ಕ ವ್ಯಕ್ತಿ ತನ್ನಿಚ್ಛೆಗೆ ಅನುಸಾರ ಮದುವೆ ಮಾಡಿಕೊಂಡು, ಧರ್ಮ ಪರಿವರ್ತನೆ ಮಾಡಿಕೊಂಡು ತನ್ನ ತಂದೆಯ ಮನೆಯಲ್ಲಿ ವಾಸಿಸಲು ಇಚ್ಛಿಸುದಿಲ್ಲವೆಂದರೆ, ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲಾಗದು.”

ಈಗ ಸ್ಥಿತಿ ಏನಾಗಿದೆಯೆಂದರೆ, ಈ ಎಲ್ಲ ಗೊಂದಲಗಳ ಕಾರಣದಿಂದ ಪ್ರೇಮಿಗಳು ಹೆದರುವಂತಾಗಿದೆ. ಮದುವೆಯಾಗಲು ಮುಂದೆ ಸಾಗಬೇಕಾ ಅಥವಾ ಬೇಡವಾ ಎಂದು ಯೋಚಿಸಬೇಕಾಗಿದೆ.

ಕಾನೂನು ಏನು ಹೇಳುತ್ತದೆ?

ಭಾರತದಲ್ಲಿ ಮದುವೆ ವಯಸ್ಸು ಪುರುಷರಿಗೆ 21 ಹಾಗೂ ಮಹಿಳೆಯರಿಗೆ 18 ವರ್ಷ ಎಂದು ನಮೂದಾಗಿದೆ. ಇಂತಹದರಲ್ಲಿ ಇಬ್ಬರೂ ತಮ್ಮಿಚ್ಛೆಯಂತೆ ಮದುವೆ ಮಾಡಿಕೊಳ್ಳಲು ಸ್ವತಂತ್ರರಾಗಿರುತ್ತಾರೆ. ಭಾರತದಲ್ಲಿ ಹೆಚ್ಚಿನ ಮದುವೆಗಳು ಧಾರ್ಮಿಕ ಕಾನೂನು ಹಾಗೂ ಪರ್ಸನಲ್ ಲಾ ಬೋರ್ಡ್‌ ನ ಪ್ರಕಾರ ನಡೆಯುತ್ತವೆ. ಇಲ್ಲಿರುವ ಷರತ್ತು ಏನೆಂದರೆ, ಅವರಿಬ್ಬರೂ ಅದೇ ಧರ್ಮದವರಾಗಿರಬೇಕು.

ನ್ಯಾಷನಲ್ ಕೌನ್ಸಿಲ್ ‌ಆಫ್‌ ಎಂಪ್ಲಾಯ್‌ ಎಕನಾಮಿಕ್‌ ರಿಸರ್ಚ್‌ ಮುಖಾಂತರ 2014ರಲ್ಲಿ ಪ್ರಕಟಿಸಿದ ಒಂದು ವರದಿಯ ಪ್ರಕಾರ, ಭಾರತದಲ್ಲಿ ಶೇ.5ರಷ್ಟು ಅಂತರ್ಜಾತಿಯ ಮತ್ತು ಅಂತರ ಧಾರ್ಮಿಕ ವಿವಾಹಗಳು ನಡೆಯುತ್ತವೆ ಹಾಗೂ ಶೇ.95ರಷ್ಟು ಮದುವೆಗಳು ತಮ್ಮ ಜಾತಿ ಸಮುದಾಯದೊಳಗೆ ನಡೆಯುತ್ತವೆ.

ಹಿಂದೂ ವಿವಾಹ ಅಧಿನಿಯಮ 1955ರಲ್ಲಿ ಇವರು ಪ್ರಕಾರ ಹಿಂದೂ ಸಿಖ್‌, ಜೈನ, ಬೌದ್ಧ ಪರಸ್ಪರರಲ್ಲಿ ಮದುವೆಯಾಗಬಹುದು. ಅದೇ ರೀತಿಯಲ್ಲಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌, ಭಾರತೀಯ ಕ್ರಿಶ್ಚಿಯನ್‌ ವಿವಾಹ ಅಧಿನಿಯಮ 1872, ಪಾರ್ಸಿ ವಿವಾಹ ಮತ್ತು ನಿಷೇಧ ಅಧಿನಿಯಮ 1936 ಇದ್ದು, ಇಲ್ಲಿ ವಿರುದ್ಧ ಧರ್ಮದವರು ಮದುವೆ ಮಾಡಿಕೊಳ್ಳಬಹುದು. ಇಂತಹ ಸ್ಥಿತಿಯಲ್ಲಿ ಯಾರಾದರೂ ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾಗಬೇಕಿದ್ದರೆ, ಆಗ ತನ್ನ ಧರ್ಮ ಬದಲಿಸಬೇಕಾಗುತ್ತದೆ.

ಇಂತಹ ಸ್ಥಿತಿಯಲ್ಲಿ 1954ರಲ್ಲಿ ವಿಶೇಷ ವಿವಾಹ ಅಧಿನಿಯಮ 1954 ತಂದಿತ್ತು. ಇದರಲ್ಲಿ ಯಾವುದೇ ವ್ಯಕ್ತಿಗೆ ಧರ್ಮ ಬದಲಿಸಬೇಕಾದ ಅಗತ್ಯ ಬೀಳುವುದಿಲ್ಲ. ಈ ಅಧಿನಿಯಮದ ಪ್ರಕಾರ, ಇಬ್ಬರಲ್ಲಿ ಒಬ್ಬರು ಯಾವುದೇ ಧರ್ಮ ಪರಿವರ್ತನೆಯಿಲ್ಲದೆ, ಅಧಿಕೃತ ವಿವಾಹ ಮಾಡಿಕೊಳ್ಳಬಹುದು. ಈ ಅಧಿನಿಯಮ ಅನುಚ್ಛೇದ 21ರ ಜೀವಿಸುವ ಹಕ್ಕಿನ ಪ್ರಕಾರ, ತನ್ನ ಸಂಗಾತಿಯನ್ನು ತಾನೇ ಆಯ್ದುಕೊಳ್ಳುವ ಸ್ವಾತಂತ್ರ್ಯಕ್ಕೆ ಒತ್ತು ಕೊಡುತ್ತದೆ.

ಕಾನೂನಿನ ಕೊರತೆಗಳು

ಇಷ್ಟೆಲ್ಲದರ ಹೊರತಾಗಿ ಈ ಕಾನೂನಿನಲ್ಲಿ ಕೆಲವು ಕೊರತೆಗಳು ಕೂಡ ಇವೆ. ಆ ಕಾರಣದಿಂದಾಗಿ ಪ್ರೇಮಿಗಳಿಗೆ ಮದುವೆಯಾಗಲು ತೊಂದರೆ ಆಗುತ್ತಿದೆ. ಇದರಲ್ಲಿ ಮನೆಯವರ ಒಪ್ಪಿಗೆ ಇದ್ದರೆ ಸರಿ, ಇಲ್ಲದಿದ್ದರೆ ನೋಟೀಸ್‌ ಕೊಟ್ಟು 30 ದಿನಗಳೊಳಗೆ ತಕರಾರು ತೆಗೆದರೆ ಮದುವೆಗೆ ಅಡೆತಡೆ ಉಂಟಾಗಬಹುದು.

ಇದೇ ಕಾರಣದಿಂದ, ಈ ಎಲ್ಲ ಗೊಂದಲಗಳಿಂದ ಪಾರಾಗಲು ಪ್ರೇಮಿಗಳು ಧಾರ್ಮಿಕ ಕಾನೂನುಗಳಲ್ಲಿನ ಸರಳ ಪ್ರಕ್ರಿಯೆಗಳಿಂದ ಧರ್ಮ ಪರಿವರ್ತನೆಗೂ ತಯಾರಾಗುತ್ತಾರೆ. ಹಾಗೆ ನೋಡಿದರೆ, ಧರ್ಮ ಯುವ ಜೋಡಿಗಳಿಗೆ ಅಷ್ಟೇನೂ ಮಹತ್ವದ ಸಂಗತಿ ಅಲ್ಲ. ಆದರೆ ಅದರ ಬಗ್ಗೆ ಕೆಲವರು ಸುಮ್ಮನೇ ಕೂಗೆಬ್ಬಿಸುತ್ತಿರುತ್ತಾರೆ.

ಈಗ ಮುಖ್ಯ ವಿಷಯ ಏನೆಂದರೆ, ಭಾರತೀಯ ಸಂವಿಧಾನದ ಅನುಚ್ಛೇದ 21 ಮೌಲಿಕ ಹಕ್ಕುಗಳ ಒಂದು ಭಾಗವಾಗಿದ್ದು, ಅದರಲ್ಲಿ ಸ್ಪಷ್ಟವಾಗಿ ಹೇಳಿರುವುದೇನೆಂದರೆ, ಭಾರತದ ಕಾನೂನಿನ ಮುಖಾಂತರ ಸ್ಥಾಪಿತವಾದ ಯಾವುದೇ ಪ್ರಕ್ರಿಯೆಯ ಹೊರತಾಗಿ ಯಾವುದೇ ವ್ಯಕ್ತಿ, ಬೇರೆ ವ್ಯಕ್ತಿಗೆ ಅವರ ಜೀವಿತವಾಗಿರುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತಗೊಳಿಸಲಾಗುವುದಿಲ್ಲ.

ಇದರ ಅರ್ಥ, ಆ ವ್ಯಕ್ತಿ ಯಾರನ್ನೇ ಪ್ರೇಮಿಸಲಿ ಅಥವಾ ಯಾರನ್ನೇ ಒಪ್ಪಲಿ ಅದು ಅವರ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಹಕ್ಕಾಗಿದೆ. ಇಂತಹದರಲ್ಲಿ ಅಲಹಾಬಾದ್‌ ಹೈಕೋರ್ಟ್‌ ಎದುರು ಬರುತ್ತಿರುವ ಖೊಟ್ಟಿ ಮೊಕದ್ದಮೆಗಳ ವಿರುದ್ಧ ಹೀಗೆಯೇ ಪ್ರಸ್ತಾಪಿಸಲಾಗುತ್ತದೆ. ಇಲ್ಲಿ ಏಳು ಸಮಸ್ಯೆಯೆಂದರೆ, ಸಂವಿಧಾನದ ಒಪ್ಪಿಗೆ ಇರುವಂತಹ ಮದುವೆಗಳಿಗೆ ಬೇರೆ ಯಾರಾದರೂ ಏಕೆ ಸಮಸ್ಯೆ ತಂದೊಡ್ಡಬೇಕು?

ಸಮ್ಮಿಶ್ರ ಸಂಸ್ಕೃತಿಯ ಭಯ

ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಸಮಾಜಕ್ಕೆ ಭಯ ಇರುವ ಸಂಗತಿ ಯಾವುದೆಂದರೆ, ಅದು ಸಮ್ಮಿಶ್ರ ಸಂಸ್ಕೃತಿಯದ್ದು ಸಾವಿರಾರು ವರ್ಷಗಳಿಂದ ಜನರು ತಮ್ಮನ್ನು ತಾವು ಮಾನಸಿಕ ದಾಸ್ಯದ ಬೇಡಿಗಳಿಂದ ಕಟ್ಟಿ ಹಾಕಿ ಡಬ್ಬಗಳಲ್ಲಿ ನೋಡುವ ಅಭ್ಯಾಸ ಮಾಡಿಕೊಂಡಿದ್ದಾರೆ, ಆ ಡಬ್ಬಗಳು ಧರ್ಮಗಳಿದ್ದು, ಜಾತಿಗಳದ್ದು, ಬಡ ಶ್ರೀಮಂತರದ್ದು, ಇದೇ ಕಾರಣದಿಂದ ಅವರು ಸಮಾಜದಲ್ಲಿ ಅಷ್ಟಿಷ್ಟು ಬದಲಾವಣೆಯಾದರೂ ಸಾಕು ವಿಚಲಿತರಾಗುತ್ತಾರೆ. ಈ ಪ್ರೇಮ ವಿವಾಹಗಳು ಕೂಡ ಅವರಿಗೆ ಇದೇ ರೀತಿಯ ನೋವು ಕೊಡುತ್ತಿವೆ. ಸಾವಿರಾರು ವರ್ಷಗಳಿಂದ ಜಮೆಗೊಂಡ ಮೂಢನಂಬಿಕೆಗಳಿಗೆ ಗಾಢ ಪೆಟ್ಟು ಬೀಳುತ್ತದೆ. ಜಾತಿ ಮತ್ತು ಧರ್ಮದಿಂದ ಹೊರಬಂದು ಮದುವೆ ಮಾಡಿಕೊಳ್ಳುವುದು ಅವರ ನಂಬಿಕೆಗೆ ಬಲವಾದ ಪೆಟ್ಟು ಕೊಡುತ್ತಿದೆ. ಅಂತರ್ಜಾತಿಯ ಮದುವೆಯ ಬಳಿಕ ಹುಟ್ಟುವ ಮಕ್ಕಳು ಮುಸ್ಲಿಂ, ಹಿಂದೂ, ಬ್ರಾಹ್ಮಣರಾಗದೆ ಅವರು ಮನುಷ್ಯರಾಗುತ್ತಾರೆ.

ಇವೇ ಸಂಗತಿಗಳು ಸಮಾಜದ ಕಟ್ಟಾ ವೈರಿ, ರೂಢಿವಾದಿ ಮತ್ತು ಧಾರ್ಮಿಕ ಮತಾಂಧರಾಗಲು ಬಿಡುವುದಿಲ್ಲ. ತಮ್ಮ ಪರಂಪರೆ ಹೊರಟುಹೋಗುತ್ತದೆ ಎಂಬ ಭಯ ಅವರಿಗೆ ಕಾಡುತ್ತಿರುತ್ತದೆ. ತಮ್ಮ ವಿರುದ್ದ ಬಂಡಾಯ ಎದ್ದರೆ ಏನು ಗತಿ ಎಂಬ ಚಿಂತೆ ಇರುತ್ತದೆ. ಅವರು ಶಕ್ತಿಯನ್ನು ತಮ್ಮ ಕೈಯಲ್ಲಿಯೇ ಕೇಂದ್ರಿಕೃತರಾಗಲು ಇಚ್ಛಿಸುತ್ತಾರೆ. ಜನರಲ್ಲಿ ಒಡಕನ್ನುಂಟು ಮಾಡುವುದು ಅವರ ರಾಜ ಗದ್ದುಗೆಯನ್ನು ಭದ್ರಪಡಿಸುತ್ತದೆ. ಅವರ ರಾಜಕೀಯ ಆರಂಭ ಮತ್ತು ಅಂತ್ಯ ಪರಸ್ಪರರ ವಿಭಿನ್ನತೆಯನ್ನು ಕೆದರುವುದೇ ಆಗಿರುತ್ತದೆ. ಈ ತೆರನಾದ ಮದುವೆಗಳಿಂದ ಜನರು ಧಾರ್ಮಿಕ ಮೂಢನಂಬಿಕೆಗಳಿಂದ ಕಟ್ಟಿದ ಭ್ರಮೆಯನ್ನು ಒಪ್ಪಲಾರರು. ಸಮ್ಮಿಶ್ರ ಸಂಸ್ಕೃತಿಯಿಂದ ಹುಟ್ಟಿದ ಮಕ್ಕಳು ಎಂದೂ ತಮ್ಮ ಧಾರ್ಮಿಕ ಕೆಸರೆರಚಾಟದಲ್ಲಿ ಬರುವುದಿಲ್ಲ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಾಗುತ್ತದೆ. ಇದೇ ಕಾರಣದಿಂದ ರಾಜಕೀಯದ ಗದ್ದುಗೆಯಲ್ಲಿರುವವರು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಅವರ ಭಿನ್ನತೆಯನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಾರೆ.

ಸಾಮಾನ್ಯಾಗಿ ಸಮ್ಮಿಶ್ರ ಸಂಸ್ಕೃತಿಯ ಜನರು ಸಮಾನತೆ ಹಾಗೂ ಮಾನವ ಹಕ್ಕುಗಳ ಪರವಾಗಿರುತ್ತಾರೆ. ಅವರು ಧರ್ಮದ ಕಂದಾಚಾರಿಗಳ ಬಲೆಯಲ್ಲಿ ಸುಲಭವಾಗಿ ಸಿಕ್ಕುವುದಿಲ್ಲ. ಅವರಿಗೆ ಧರ್ಮದ ಬೋಧನೆಗಳಿಗಿಂತ ಹೆಚ್ಚಾಗಿ ಕರ್ಮದ ಗಳಿಕೆಯಲ್ಲಿ ಹೆಚ್ಚು ವಿಶ್ವಾಸವಿರುತ್ತದೆ. ಈ ಕಾರಣಗಳಿಂದ ಧರ್ಮದ ಕಂದಾಚಾರಿಗಳಿಗೆ ಈ ತೆರನಾದ ಜನರು ಇಷ್ಟವಾಗುವುದಿಲ್ಲ. ಹೀಗಾಗಿ ಇವರ ಮೂಲ ಪ್ರಯತ್ನ ಏನಾಗಿರುತ್ತದೆಂದರೆ, ಇಂತಹ ಸ್ಥಿತಿ ನಿರ್ಮಾಣವಾಗುವ ಮೊದಲೇ ಅದಕ್ಕೆ ಕಡಿವಾಣ ಹಾಕುವುದಾಗಿರುತ್ತದೆ. ಆದರೆ ಯಾರೊಬ್ಬರೂ ಪ್ರೀತಿಯನ್ನು ತಡೆಯಲು ಆಗುವುದಿಲ್ಲ. ಇಂತಹ ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಅದನ್ನು ತಡೆಯಲು ಆಗದಿದ್ದರೆ ಇವನ್ನು ಸಮಾಜದಲ್ಲಿ ಹೇಗೆ ತಾನೇ ತಡೆಯುತ್ತಾರೆ?

ರೋಹಿಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ