ಆ ಹುಡುಗನ ಹೆಸರು ಪ್ರತೀಕ್‌, ವಯಸ್ಸು 29. ಅವನು ತನ್ನ ಮನೆಯಲ್ಲಿ ಸೀಮಾ (25)ಳ ಬಗ್ಗೆ ಹೇಳಿದಾಗ, ಮನೆಯ ಮೇಲೆ ಪರ್ವತವೇ ಕುಸಿದು ಬಿತ್ತು ಎನ್ನುವ ರೀತಿಯಲ್ಲಿ ಎಲ್ಲರೂ ವರ್ತಿಸಿದರು.

ಸೀಮಾಳ ಬಗ್ಗೆ ಕೇಳಿದಾಗ, ಮನೆಯವರು ಎರಡು ರೀತಿಯ ಏಟು ತಿಂದವರಂತೆ ವರ್ತಿಸಿದರು. ಸೀಮಾ ತಮ್ಮ ರಾಜ್ಯದವಳಲ್ಲ (ಭಾಷೆ) ಎನ್ನುವುದು ಮೊದಲನೇ ಕಾರಣವಾಗಿದ್ದರೆ, ಅವಳು ತಮ್ಮ ಜಾತಿಗೆ ಸೇರಿದವಳಲ್ಲ ಎನ್ನುವುದು ಎರಡನೇ ಕಾರಣವಾಗಿತ್ತು.

ಅಂದಹಾಗೆ ಪ್ರತೀಕ್‌ ಮತ್ತು ಸೀಮಾ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಜೊತೆ ಜೊತೆಗೆ ಸಮಯ ಕಳೆಯುತ್ತಿದ್ದುದರಿಂದ ಅವರಲ್ಲಿ ಒಳ್ಳೆಯ ಹೊಂದಾಣಿಕೆ ಉಂಟಾಗಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಅವರ ಪ್ರೀತಿ ಮತ್ತು ಮದುವೆ ಸಂಬಂಧದ ನಡುವೆ ಅವರ ಜಾತಿ ಅಡ್ಡ ಬರುತ್ತಿದೆ. ಪ್ರತೀಕ್‌ ಮೇಲ್ಜಾತಿಗೆ ಸೇರಿದ್ದರೆ, ಸೀಮಾ ಹಿಂದುಳಿದ ವರ್ಗಕ್ಕೆ ಸೇರಿದವಳಾಗಿದ್ದಳು.

ಈ ಬಗ್ಗೆ ಪ್ರತೀಕ್‌ ನ ಮನೆಯಲ್ಲಿ ಸಾಕಷ್ಟು ಗಲಾಟೆಯಾಗಿತ್ತು. ನಗರದ ಜೀವನಶೈಲಿಯಲ್ಲಿ ಬೆಳೆದವರಾಗಿಯೂ ಜಾತಿಯ ಸಮಸ್ಯೆ ಅವರ ಕೆಲಸ ಕಾರ್ಯಗಳಲ್ಲಿ ಅಡ್ಡಿಯನ್ನುಂಟು ಮಾಡುತ್ತಿತ್ತು. ನಮ್ಮ ಜಾತಿ ಶ್ರೇಷ್ಠ, ನಿಮ್ಮದು ಕೀಳುಜಾತಿ ಎನ್ನುವ ಭೇದಭಾವ ಶತಶತಮಾನಗಳಿಂದ ನಮ್ಮ ಸಮಾಜದಲ್ಲಿ ನಡೆದುಕೊಂಡು ಬಂದಿದೆ. ಪ್ರತೀಕನ ಮನೆಯವರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿಬಿಟ್ಟರು. ಸಂಬಂಧಿಕರು ಕೂಡ ಈ ಮದುವೆಯೇನಾದರೂ ನಡೆದರೆ ನಾವು ನಿಮ್ಮ ಮನೆಗೆ ಬರುವುದನ್ನೇ ನಿಲ್ಲಿಸಿಬಿಡುತ್ತೇವೆ ಎಂದು ಬೆದರಿಕೆ ಹಾಕಿದರು.

ಕೊನೆಗೊಮ್ಮೆ ಈ ಮದುವೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು. ಪ್ರತೀಕ್‌ ಅದೆಷ್ಟೊ ಸಲ ತನ್ನ ಮನೆಯವರನ್ನು ವಿನಂತಿಸಿಕೊಂಡ. ಆದರೆ ಅವರು ಹಿಂದೆ ಸರಿಯದಿದ್ದಾಗ, ಪ್ರತೀಕ್‌ ಮತ್ತು ಸೀಮಾ ಇಬ್ಬರೂ ರಿಜಿಸ್ಟ್ರಾರ್ ಕಛೇರಿಗೆ ಹೋಗಿ ಮದುವೆ ಮಾಡಿಕೊಂಡರು.

ಸಧ್ಯ ಅವರಿಬ್ಬರೂ ತಮ್ಮ ಕುಟುಂಬಗಳಿಂದ ದೂರವಿದ್ದು, ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪ್ರತೀಕ್‌ ಮಾತ್ರ ಒಂದಿಲ್ಲೊಂದು ದಿನ ಸೀಮಾಳನ್ನು ಮನೆಯವರು ಸೊಸೆಯಾಗಿ ಒಪ್ಪಿಕೊಳ್ಳುತ್ತಾರೆಂದು ನಂಬಿಕೆ ಇಟ್ಟುಕೊಂಡಿದ್ದಾನೆ.

ಸಂಬಂಧ ಮತ್ತು ಜಾತಿ

ಪ್ರತೀಕ್‌ ಮತ್ತು ಸೀಮಾರದ್ದು ನಗರದ ಪ್ರಕರಣ. ಅವರು ಕಾನೂನಿನ್ವಯ ಆಸರೆ ಪಡೆದುಕೊಂಡು ತಮ್ಮ ಮದುವೆ ನಡೆಸಿಕೊಂಡರು. ಆದರೆ ಭಾರತದ ಪ್ರತಿಯೊಂದು ಕಡೆ ಹೀಗಾಗುವುದೇ ಇಲ್ಲ. ಹಳ್ಳಿಗಳಲ್ಲಿ ಹೀಗೆ ಮಾಡುವುದಿಲ್ಲ. ಆ ಬಗ್ಗೆ ಯೋಚಿಸುವುದು ಕೂಡ ತಪ್ಪು ಎನಿಸಲ್ಪಡುತ್ತದೆ. ಇತ್ತೀಚೆಗಂತೂ ಭಾರತದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಮರ್ಯದಾ ಹತ್ಯೆಯಂತಹ ಸುದ್ದಿಗಳು ಬರುತ್ತಿರುತ್ತವೆ. ಅವನ್ನು ನೋಡಿ ನಿಜಕ್ಕೂ ಆತಂಕವಾಗುತ್ತದೆ.

ಭಾರತದಲ್ಲಿ ಜಾತಿ ವ್ಯವಸ್ಥೆ ಶತ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಅದು ಕೇವಲ ಸಮಾಜದಲ್ಲಷ್ಟೇ ದ್ವೇಷ  ಹರಡುವುದಿಲ್ಲ, ಅದು ಹಲವರ ಸಾವಿಗೂ ಕಾರಣವಾಗುತ್ತದೆ. ಇಂತಹದರಲ್ಲಿ ಜಾತಿ ಶುದ್ಧತೆಯ ಹೆಸರಿನಲ್ಲಿ ಪ್ರೇಮಿಗಳನ್ನು ಹಾಗೂ ವಿವಾಹಿತರನ್ನು ಟಾರ್ಗೆಟ್‌ ಮಾಡಲಾಗುತ್ತದೆ.

ಕೆಲವು ಭಯಾನಕ ಘಟನೆಗಳು

ಅಕ್ಟೋಬರ್‌ 2020ರಲ್ಲಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಮರ್ಯಾದಾ ಹತ್ಯೆಯಂತಹ ಘಟನೆಯೊಂದು ನಡೆಯಿತು. ತಂದೆಯೊಬ್ಬ ತನ್ನ ಮಗಳನ್ನೇ ಕೊಂದು ಹಾಕಿದ. ಅವಳು ಮಾಡಿದ ತಪ್ಪು ಇಷ್ಟೇ ಅವಳು ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಅವನನ್ನು ಮದುವೆಯಾಗಲು ಹೊರಟಿದ್ದಳು. ಅದು ಆಶ್ಚರ್ಯಕರ ಸಂಗತಿಯೆಂದರೆ, ಈ ಘಟನೆಯ ಬಗ್ಗೆ ಮಾಹಿತಿ ಇದ್ದೂ ಕೂಡ ಗ್ರಾಮದ ಯಾರೊಬ್ಬರೂ ಪೊಲೀಸರ ಮುಂದೆ ಬಾಯಿ ಬಿಡಲಿಲ್ಲ, ಮೂಕ ಪ್ರೇಕ್ಷಕರಂತೆ ನಿಂತಿದ್ದರು. ಇದರರ್ಥ ಇಷ್ಟೇ, ಆ ಘಟನೆಗೆ ಸಾಮಾಜಿಕ ಮಾನ್ಯತೆ ಸಿಕ್ಕಿರುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ