ಹೊಸ ವರ್ಷ ಆರಂಭವಾಗಿ ಆಗಲೇ ತಿಂಗಳು ಕಳೆದಿದೆ. ಚಳಿಯ ರಂಗು ಹೆಚ್ಚುತ್ತದೆ. ಇಂತಹದರಲ್ಲಿಯೂ ಕೆಲವರು ತಮ್ಮ ಮನೆಗೆ ಹೊಸ ರಂಗು ರೂಪ ಕೊಡಲು ನೋಡುತ್ತಾರೆ. ಸುಂದರವಾದ ಬಣ್ಣಗಳು ಮನೆಯ ಕೋಣೆಗಳ ಅಂದ ಹೆಚ್ಚಿಸಲು ಕಾರಣವಾಗುತ್ತವೆ. ಜೊತೆ ಜೊತೆಗೆ ಮನಸ್ಸಿಗೆ ಖುಷಿ ಮತ್ತು  ಶಾಂತಿಯ ಅನುಭವ ನೀಡುತ್ತದೆ. ಅದ್ಹೇಗೆ ಅಂತಾ ತಿಳಿದುಕೊಳ್ಳಿ.

ಗೋಡೆಗಳಿಗೆ ಬ್ರೈಟ್ಕಲರ್ಸ್

ಚಳಿಗಾಲದ ಸಮಯದಲ್ಲಿ ಮನೆಗೆ ಪೇಂಟ್‌ ಮಾಡಿಸಲು ಯಾವ ಬಣ್ಣ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ನೀವಿದ್ದರೆ, ಮನೆಗೆ ಬ್ರೈಟ್‌ ಲುಕ್‌ ಕೊಡಲು ಇಲ್ಲಿವೆ ಕೆಲವು ಸಲಹೆ ಸೂಚನೆಗಳು :

ಬಿಳಿ : ಈ ಬಣ್ಣವನ್ನು ಚಳಿಗಾಲದಲ್ಲಿ ಬಹಳ ಇಷ್ಟಪಡಲಾಗುತ್ತದೆ. ನೀವು ಇಷ್ಟಪಟ್ಟರೆ ಬಿಳಿ ಬಣ್ಣದ ಜೊತೆಗೆ ಬೇರೆ ಬೇರೆ ಬಣ್ಣಗಳನ್ನು ಮೇಳೈಸಿ ಮನೆಗೆ ಹೊಸ ಲುಕ್‌ ಕೊಡಬಹುದು.

ಕ್ರಿಮ್ ಸನ್‌ : ಲಿವಿಂಗ್‌ ರೂಮ್ ಗೆ ಪೇಂಟ್‌ ಮಾಡಬೇಕಿದ್ದರೆ, ಅದು ನಿಮಗೆ ಸ್ವಲ್ಪ ಚಾಲೆಂಜಿಂಗ್‌ ಅನಿಸಬಹುದು. ಆದರೆ ನೀವು ಕೊಡುವ ಬಣ್ಣ ಹೇಗಿರಬೇಕೆಂದರೆ, ಕೋಣೆಗೆ ಪ್ರವೇಶಿಸಿದ ಯಾರೇ ಆಗಲಿ ಒಂದು ವಿಶಿಷ್ಟ ಅನುಭವ ಪಡೆದುಕೊಳ್ಳುವಂತಾಗಬೇಕು.

ನೀಲಿ : ನೀಲಿ ಬಣ್ಣ ಯಾವುದೇ ಋತುಮಾನದ ವಿಶಿಷ್ಟ ಬಣ್ಣವಾಗಿದೆ. ಈ ಪ್ರೀತಿಯ ಬಣ್ಣ ಗೋಡೆಗಳಿಗೆ ವಿಶಿಷ್ಟ ಹೊಳಪು ಕೊಡುತ್ತದೆ. ಅದು ಬ್ರೈಟ್‌ ಆಗಬಹುದು ಅಥವಾ ತಿಳಿವರ್ಣದ್ದಾಗಿರಬಹುದು. ಅದನ್ನು ಚಳಿಗಾಲದಲ್ಲಿ ಸಾಕಷ್ಟು ಇಷ್ಟಪಡಲಾಗುತ್ತದೆ.

ಕಂದು : ಈ ಬಣ್ಣ ಯಾವುದೇ ಮಹಿಳೆಗೆ ಹೆಚ್ಚು ಪ್ರೀತಿ ಪಾತ್ರ ಎನಿಸುತ್ತದೆ. ಏಕೆಂದರೆ ಈ ಬಣ್ಣದಿಂದ ಗೋಡೆಗೆ ತಗುಲಿದ ಕೊಳೆ ಕಂಡುಬರುವುದೇ ಇಲ್ಲ. ಮತ್ತೊಂದು ವಿಷಯ ಅದನ್ನು ಸ್ವಚ್ಛ ಮಾಡುವುದು ಸುಲಭ.

ಕಿತ್ತಳೆ : ಈ ಬಣ್ಣ ನಿಮ್ಮ ಮನೆಗೆ ಸುಂದರ ಲುಕ್‌ ಕೊಡುತ್ತದೆ. ಇದರಲ್ಲಿ ಬೇರೆ ಬೇರೆ ಶೇಡ್ಸ್ ಲಭ್ಯವಿದ್ದು, ಅವು ಸಾಕಷ್ಟು ಆಕರ್ಷಣೆಗೆ ಕಾರಣವಾಗುತ್ತದೆ.

ಐವರಿ : ಚಳಿಗಾಲದಲ್ಲಿ ಐವರಿ ಬಣ್ಣ ಬಹಳ ಉತ್ತಮವಾದ ಆಯ್ಕೆ. ಅದು ನಿಮ್ಮ ಗೋಡೆಗಳನ್ನು ಹೊಳಪುಳ್ಳದ್ದಾಗಿ ಕಾಣಿಸುವಂತೆ ಮಾಡುತ್ತದೆ. ಈ ಬಣ್ಣವನ್ನು ನೀವು ಲಿವಿಂಗ್‌ ರೂಮ್ ಹಾಗೂ ಬೆಡ್‌ ರೂಮ್ ನಲ್ಲಿ ಉಪಯೋಗಿಸಬಹುದು.

ಹಸಿರು : ಹಸಿರು ಎಂತಹ ಒಂದು ಬಣ್ಣವೆಂದರೆ ಅದು ಕಣ್ಣಿಗೆ ಹಿತವನ್ನುಂಟು ಮಾಡುತ್ತದೆ. ಇದನ್ನು ತಿಳಿಯಾಗಿ ಕಾಣುವ ರೀತಿಯಲ್ಲಿ ಬಳಸಿದರೆ ನಿಮ್ಮ ರೂಮ್ ಎಷ್ಟು ವಿಶಾಲವಾಗಿದೆ ಎಂಬುದರ ಅನುಭವ ಉಂಟಾಗುತ್ತದೆ.

ಗುಲಾಬಿ : ಗುಲಾಬಿ ಬಣ್ಣ ಮನೆ ಹಾಗೂ ಪ್ರಾಂಗಣವನ್ನು ದೊಡ್ಡದೆಂಬಂತೆ ಹಾಗೂ ಅದಕ್ಕೆ ಬ್ರೈಟ್‌ ಲುಕ್‌ ನೀಡುತ್ತದೆ.

ಕೆಂಪು : ಇದು ಮನೆ ಹಾಗೂ ಕೋಣೆಗಳಿಗೆ ಉಜ್ವಲ ಲುಕ್‌ ಕೊಡುತ್ತದೆ. ನೀವು ಇಷ್ಟಪಟ್ಟರೆ ಕೆಂಪು ಬಣ್ಣದ ಜೊತೆಗೆ ಬೇರೆ ಬಣ್ಣವನ್ನು ಮ್ಯಾಚ್‌ ಮಾಡಬಹುದಾಗಿದೆ. ಇದನ್ನು ರೋಮ್ಯಾಂಟಿಕ್‌ ಬಣ್ಣ ಎಂದೂ ಹೇಳಲಾಗುತ್ತದೆ. ಹೀಗಾಗಿ ಇದನ್ನು ಬೆಡ್ ರೂಮಿನಲ್ಲಿ ಹೊಡೆಸಲು ಮರೆಯಬೇಡಿ.

ಗೋಡೆಗೆ ಹೊಂದುವ ಪರದೆಗಳು

Main-Image

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಗೆಬಗೆಯ ಪರದೆಗಳು ಲಭ್ಯವಿವೆ. ಆದರೆ ಅದನ್ನು ಹೇಗೆ, ಯಾವ ಋತುಮಾನದಲ್ಲಿ ಅಳವಡಿಸಬೇಕು, ಅದರ ಫ್ಯಾಬ್ರಿಕ್‌ ಹೇಗಿರಬೇಕು ಎನ್ನುವುದು ನಮ್ಮ ತಿಳಿವಳಿಕೆಯನ್ನು ಅವಲಂಬಿಸಿರುತ್ತದೆ. ಚಳಿಗಾಲದಲ್ಲಿ ಮನೆಯ ಪರದೆಗಳ ಬಣ್ಣ ಹೇಗಿರಬೇಕು?

ನೇರಳೆ : ನಿಮ್ಮ ಕೋಣೆ ದೊಡ್ಡದಾಗಿದ್ದರೆ, ಇದು ನಿಮ್ಮ ಕೋಣೆಯನ್ನು ಇನ್ನಷ್ಟು ಸುಂದರಗೊಳಿಸುತ್ತದೆ. ಒಂದು ವೇಳೆ ಕೋಣೆ ಚಿಕ್ಕದಾಗಿದ್ದರೆ ಅದಕ್ಕೆ ದೊಡ್ಡದರ ಲುಕ್‌ ಕೊಡುತ್ತದೆ. ಸಾಮಾನ್ಯ ಪರದೆಗಳಿಗಿಂತ ಈ ಪರದೆಗಳ ಗುಣಮಟ್ಟ ಉತ್ತಮವಾಗಿರುತ್ತದೆ. ನೀವು ಇಷ್ಟಪಟ್ಟರೆ ಗೋಡೆಯ ಬಣ್ಣಕ್ಕೆ ಹೊಂದುವಂತಹ ಪರದೆಗಳನ್ನು ಅಳವಡಿಸಬಹುದು. ಚಳಿಗಾಲದಲ್ಲಿ  ಈ ಟೆಕ್ಸ್ ಚರ್‌ ನ ಪರದೆಗಳು ಬಹಳ ಸುಂದರವಾಗಿ ಕಂಡುಬರುತ್ತವೆ.

ಅರಳಿದ ಕೆಂಪು : ಇದು ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುವುದರ ಜೊತೆಗೆ ಹವಾಮಾನಕ್ಕೆ ತಕ್ಕಂತೆ ಪರ್ಫೆಕ್ಟ್ ಲುಕ್ ನೀಡುತ್ತದೆ. ಒಂದು ವೇಳೆ ನಿಮಗೆ ಡಾರ್ಕ್‌ ಕಲರ್‌ ಪರದೆಗಳು ಇಷ್ಟವಿರದಿದ್ದರೆ ಲೈಟ್‌ ಕಲರ್‌ ಗಳಲ್ಲಿ ಹಳದಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಅವುಗಳಿಂದ ಹೊರಗಿನ ಬೆಳಕು ಸಾಕಷ್ಟು ಪ್ರಮಾಣದಲ್ಲಿ ಬರುತ್ತದೆ ಮತ್ತು ಲುಕ್‌ ಕೂಡ ಚೆನ್ನಾಗಿರುತ್ತದೆ.

ಆರೆಂಜ್‌ : ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹ ಬಣ್ಣ. ಮನೆಗೆ ಒಂದಷ್ಟು ಟ್ರೆಂಡಿ ಲುಕ್‌ ಕೊಡಬೇಕಿದ್ದರೆ ಆರೆಂಜ್‌ ಕಲರ್‌ ನ ಪರದೆ ಅಳವಡಿಸಿ. ಇದು ಮನೆಗೆ ಫ್ರೆಶ್‌ ಲುಕ್‌ ಕೊಡುತ್ತದೆ.

ಬೋಲ್ಡ್ ಕಲರ್ ಪರದೆಗಳು : ನಿಮ್ಮ ಮನೆ ಅಥವಾ ಕೋಣೆಯಲ್ಲಿ ತಿಳಿ ಬಣ್ಣವಿದ್ದರೆ, ಅದರೆ ಮೇಲೆ ಯಾವುದೇ ಟೆಕ್ಸ್ ಚರ್ ಇಲ್ಲದಿದ್ದರೆ, ಬೋಲ್ಡ್ ಕಲರ್‌ ನ ಪರದೆ ಅಳವಡಿಸಿ.

ಮೆರೂನ್ಮತ್ತು ವಿಂಟರ್ಬ್ಲೂ : ಚಳಿಗಾಲದಲ್ಲಿ ಮೆರೂನ್‌ ಬಣ್ಣದ ಪರದೆಗಳು ಒಳ್ಳೆಯ ಆಯ್ಕೆಯಾಗಿರುತ್ತವೆ. ಇವು ಬೆಳಕನ್ನು ಹಾರಿಕೊಂಡು ಕೋಣೆಗೆ ಬಿಸಿಯನ್ನು ನೀಡುತ್ತವೆ. ವಿಂಟರ್‌ ಬ್ಲೂ ಬಣ್ಣದ ಪರದೆಗಳನ್ನು ಮಕ್ಕಳ ಕೋಣೆ ಅಥವಾ ಹಾಲ್ ನಲ್ಲಿ ಹಾಕಿ. ಈ ಬಣ್ಣಗಳು ಚಳಿಗಾಲಕ್ಕಾಗಿಯೇ ಇವೆ. ನಿಮ್ಮ ತಿಳಿವಳಿಕೆಗೆ ತಕ್ಕಂತೆ ಹಲವು ಕಾಂಬಿನೇಷನ್‌ ಗಳನ್ನು ಮಾಡಿಕೊಳ್ಳಬಹುದು.

ಸಸಿಗಳು ಬಣ್ಣಬಣ್ಣದ್ದಾಗಿರಲಿ

ಚಳಿಗಾಲದಲ್ಲಿ ಕಡಿಮೆ ಬಿಸಿಲು ಹಾಗೂ ಚಳಿಯ ಜೊತೆಗೆ ಹವಾಮಾನ ಸ್ವಲ್ಪ ಕಠೋರವಾಗಿರುತ್ತದೆ. ಕೆಲವು ಹೂವಿನ ಸಸಿಗಳು ಈ ಕಾಲದಲ್ಲಿಯೇ ಮುರುಟುತ್ತವೆ. ಮತ್ತೆ ಕೆಲವು ಈ ಅವಧಿಯಲ್ಲಿಯೇ ಚಿಗುರುತ್ತವೆ. ಋತುಮಾನದ ಹೂಗಳ ಬಣ್ಣ ಹಾಗೂ ಆಕಾರ ಕೂಡ ಭಿನ್ನವಾಗಿರುತ್ತದೆ.

ಕ್ಯಾಂಡುಲಾ : ಇವು ವಿಭಿನ್ನ ಬಣ್ಣಗಳಲ್ಲಿ ಹಳದಿಯಿಂದ ಹಿಡಿದು ಕಿತ್ತಳೆ ಬಣ್ಣದ ತನಕ ಕಂಡುಬರುತ್ತವೆ.

ಚಳಿಗಾಲದ ಮಲ್ಲಿಗೆ : ಹೊಳೆಯುವ ಹಳದಿ ಬಣ್ಣದ ಶೀತ ಋತುವಿನ ಮಲ್ಲಿಗೆ ನಿಮ್ಮ ಕೈ ತೋಟದ ಒಂದು ವಿಶಿಷ್ಟ ಪರ್ಯಾಯವಾಗಿದೆ.

ಪೆಂಟಾನಿಯಾ : ಚಳಿಗಾಲದಲ್ಲಿ ಕೈ ತೋಟವನ್ನು ಸುಂದರಗೊಳಿಸಲು ಬಿಳಿ, ಹಳದಿ, ಗುಲಾಬಿ, ಗಾಢ ಕ್ರಿಮ್ ಸನ್‌ ಮತ್ತು ಕಪ್ಪು ಬದನೆ ಬಣ್ಣದ ಪೆಂಟಾನಿಯಾ ಒಂದು ಉತ್ತಮ ಹೂವಾಗಿದೆ.

ಇಂಗ್ಲಿಷ್ಪ್ರಿಮೋಸ್‌ : ಬಿಳಿ, ಹಳದಿ, ಕಿತ್ತಳೆ ಮತ್ತು ನೀಲಿ ಗುಲಾಬಿ ಮತ್ತು ಬದನೆ ಬಣ್ಣದಲ್ಲಿ ಕಂಡುಬರುವ ಹೂಗಳು ಚಳಿಗಾಲದಲ್ಲಿ ನಿಮ್ಮ ಕೈ ತೋಟಕ್ಕೆ ಉತ್ತಮ ಆಯ್ಕೆಯಾಗಿರುತ್ತದೆ.

ಸುನಂದಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ