ಬಟ್ಟೆ ತರಹ ದೇಹ ತೂಕ ಬದಲಾಗುತ್ತಿರುತ್ತದೆ!
ಇತ್ತೀಚೆಗಷ್ಟೆ ನಟಿ ಕಂಗನಾ ತನ್ನ ತಮಿಳು `ತೈವಿ’ (ಜಯಲಲಿತಾ ಬಯೋಪಿಕ್) ಚಿತ್ರಕ್ಕಾಗಿ 20 ಕಿಲೋ ದೇಹ ತೂಕ ಹೆಚ್ಚಿಸಿಕೊಂಡಿದ್ದಳಂತೆ, ನಂತರ ತಗ್ಗಿಸಿದ್ದೂ ಆಯ್ತಂತೆ! ಕಂಗನಾ ಮಾತ್ರವಲ್ಲ ಎಷ್ಟೋ ಕಲಾವಿದರು ಹೀಗೆ ಮಾಡಿದ್ದಾರೆ. ಮತ್ತೆ ನಮ್ಮಂಥ ಸಾಮಾನ್ಯ ಜನ ಹೊರಗೆ ಇಣುಕುವ ಬೊಜ್ಜನ್ನು ಒಳಗೆ ಎಳೆದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಈ ಸಿನಿ ಕಲಾವಿದರು ಬಟ್ಟೆ ತರಹ ದೇಹ ತೂಕವನ್ನೂ ಬದಲಾಯಿಸಿ ಕೊಳ್ಳುತ್ತಿರುತ್ತಾರೆ, ಅವರಿಗೆ ಅಷ್ಟು ಆತ್ಮವಿಶ್ವಾಸವಿರುತ್ತದೆ. ನಮ್ಮನ್ನು ನಾವು ಫಿಟ್ ಆಗಿರಿಸಿಕೊಳ್ಳಲು ಇಂಥ ಕಲಾವಿದರಿಂದ ನಾವು ಕಲಿಯುವುದು ಬಹಳಷ್ಟಿದೆ.
ದಿಶಾಳಿಗೆ ಸಮ್ಮರ್ ಬಂದೇಬಿಡ್ತು!
ಕೆಲವು ನಾಯಕಿಯರಿಗೆ ತಾವು ಸಿನಿಮಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲಿ, ಜನ ಕೇವಲ ತಮ್ಮನ್ನೇ ನೋಡುತ್ತಿರಲಿ ಎಂಬಾಸೆ. ದಿಶಾ ಸಹ ಇದಕ್ಕೆ ಹೊರತಲ್ಲ. ಈಕೆಯ ಫ್ಯಾನ್ಸಂತೂ ಸಿನಿಮಾಗಿಂತ ಹೆಚ್ಚಾಗಿ ಇವಳ ಪೋಸ್ಟ್ ನ ನಿರೀಕ್ಷೆಯಲ್ಲೇ ಇರುತ್ತಾರೆ, ಇಲ್ಲಿ ಅಷ್ಟು ಗ್ಲಾಮರಸ್ ಪೋಸ್ ಗಳಿರುತ್ತವೆ. ಬೇಸಿಗೆ ಇನ್ನೇನು ಬಂದೇಬಿಟ್ಟಿತು ಎಂದು ದಿಶಾ ಇಲ್ಲಿ ತೋರಿರುವ ಪೋಸ್ ನೋಡಿ! ಇವಳ ಫ್ಯಾನ್ಸ್ ಅಂತೂ ಫುಲ್ ಫಿದಾ! ಈ ಫ್ಯಾನ್ಸ್ ಒಮ್ಮೆ ಸೋಶಿಯಲ್ ಮೀಡಿಯಾದ ಬೋಲ್ಡ್ ನೆಸ್ ಗೆ ಮರುಳಾದರೆ ಮತ್ತೊಮ್ಮೆ ತಮ್ಮ ಮನಸ್ಸಿನ ಕೊಳಕನ್ನು ಕಾರಲು ಅನಗತ್ಯ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಸಿನಿ ತಾರೆಯರಿಗೆ ಬೇಕಿರುವುದೂ ಇದೇ ಅಲ್ಲವೇ?
ದಕ್ಷಿಣದ ಮತ್ತೊಂದು ಮಹಾನ್
ಚಿತ್ರವಿಕ್ರಂ ಮತ್ತು ಧ್ರುವ ನಟಿಸಿರುವ ತಮಿಳಿನ `ಮಹಾನ್’ ಚಿತ್ರ ಮತ್ತೊಂದು ಸೂಪರ್ ಡೂಪರ್ ಬ್ಲಾಕ್ ಬಸ್ಟರ್ ಆಗಲಿದೆ. ಉತ್ತರದ ಮಂದಿ ಈಗಾಗಲೇ ಇದರ ಹಿಂದಿ ಡಬ್ಬಿಂಗ್ ವರ್ಷನ್ ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಚಿತ್ರದ ಕಥೆ ಮತ್ತು ಅದನ್ನು ಪ್ರಸ್ತುತಪಡಿಸಿರುವ ರೀತಿ ಎರಡೂ ಅನನ್ಯ! ಚಿತ್ರದ ನಾಯಕ ವಿಕ್ರಂ ಪಾತ್ರ ಬಲು ರೋಚಕ. ಈತನ ತಾತಾ ಮುತ್ತಾತಾ ಗಾಂಧಿವಾದಿಗಳು. ಹಾಗಾಗಿ ಈತನಿಗೆ ಗಾಂಧಿ ಮಹಾನ್ ಎಂದು ಹೆಸರಿಟ್ಟರು. ಈತನೇನೋ ಸಾಮಾನ್ಯ ಜೀವನ ನಡೆಸುತ್ತಾನೆ, ಆದರೆ ಈತನ ಮನದಲ್ಲಿ ರೋಮಾಂಚಕಾರಿ ಭಾವನೆಗಳು ಉಕ್ಕುತ್ತಿರುತ್ತವೆ. ಇದು ಹಿಂದಿ ವೀಕ್ಷಕರಿಗೆ ಮಜಾ ನೀಡಿದರೆ, ಬಾಲಿವುಡ್ ಮಂದಿಗೆ ಟೆನ್ಶನ್ ಹೆಚ್ಚಿಸಲಿದೆ. ದಕ್ಷಿಣದವರು ಇಂಥ ರೋಚಕ ಕಥೆಗಳನ್ನು ಎಲ್ಲಿಂದ ಆವರಿಸುತ್ತಾರೋ ಎಂದು ಅವರು ತಲೆ ಮೇಲೆ ಕೈ ಹೊತ್ತಿದ್ದಾರೆ.
ಕೆಲವೇ ಕ್ಷಣಗಳ ವೈರಲ್
ಇತ್ತೀಚೆಗೆ `ಕಚ್ಚಾ ಬಾದಾಮ್’ ಹಾಡಿನ ಕ್ರೇಜ್ ನಿಂದ ಕಡಲೆಕಾಯಿ ಮಾರುತ್ತಿದ್ದ ಭುಬನ್ ವೈರಲ್ ಆಗಿಹೋದ. ತಡವೇಕೆ ಎಂಬಂತೆ ಮ್ಯೂಸಿಕ್ ವಿಡಿಯೋ ತಯಾರಿಸುವ ಕೆಲವು ಮಂದಿ ಅವನನ್ನು ತಮ್ಮ ಜೊತೆ ಸೇರಿಸಿಕೊಂಡು ರಾತ್ರೋರಾತ್ರಿ ಸ್ಟಾರ್‌ಸಿಂಗರ್ ಆಗಿಸಿಬಿಟ್ಟರು! ಕೆಲವು ದಿನಗಳ ಹಿಂದೆ ರಾನೋ ಮಂಡಲ್ ಹಾಗೂ ಡ್ಯಾನ್ಸಿಂಗ್ ಅಂಕಲ್ ಸಂಜೀವ್ ಶ್ರೀವಾಸ್ತವ್ ಜೊತೆಗೂ ಹೀಗೇ ಆಗಿತ್ತು. ಈ ದಿಢೀರ್ ಸ್ಟಾರ್ ಗಳು ಸುರುಸುರುಬತ್ತಿ ತರಹ ಎಷ್ಟು ಬೇಗ ಶೈನ್ ಆಗುತ್ತಾರೋ ಕೆಲವೇ ದಿನಗಳಲ್ಲಿ ಕೇಳುವವರಿಲ್ಲ ಎಂದಾಗುತ್ತಾರೆ. ರಾನೋ ಮಂಡಲ್ ತಾನೇ ಮುಂದಿನ ಲತಾಜೀ ಎಂದೆಲ್ಲ ಕನಸು ಕಂಡಿದ್ದಳು. ಆದರೆ ಇನ್ ಸ್ಟೆಂಟ್ ರೆಸಿಪಿ ಸದಾ ಸರ್ದಾ ವರ್ಕ್ ಆಗಲ್ಲ ಎಂಬುದು ನೆನಪಿರಲಿ. ಇಂಥವರು ಬೇಗ ಬೇಗ ಸ್ಟಾರ್ ಗಿರಿ ಗಿಟ್ಟಿಸುತ್ತಾರೆ, ಅದೇ ತರಹ ನೆಲ ಕಚ್ಚುತ್ತಾರೆ, ಎಚ್ಚರ ತಂಗಿ ಎಚ್ಚರ!
ಬಾಕಿ ಎಲ್ಲಾ ಫಸ್ಟ್ ಕ್ಲಾಸ್
ಬಹಳ ದಿನಗಳಿಂದ ೈವೈ್‌ಟ್‌ನಿಂದ ದೂರವಿರುವ ವರುಣ್ ವಧನ್ ಗೆ ಬಹಳ ಬೋರಾಗಿದೆಯಂತೆ. ಬೋರಿಂಗ್ ದೂರಗೊಳಿಸಲು ಈತ ಇನ್ನಿಲ್ಲದ ತವರಿಗೆ ತೊಡಗಿದ್ದಾನೆ. ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಆಗಿ ಪತ್ನಿಯ ಬಗ್ಗೆ ಹೊಗಳುತ್ತಾನೆ, ವಾಕ್ ಡೌನ್ ನಲ್ಲಿ ಅವಳು ಹೇಗೆ ತನ್ನನ್ನು ಚೆನ್ನಾಗಿ ನೋಡಿಕೊಂಡಳು ಅಂತ, ಮತ್ತೊಮ್ಮೆ ತನ್ನ ಶರ್ಟ್ ಲೆಸ್ ಫೋಟೋಗಳನ್ನು ಹಾಕುತ್ತಾನೆ. ಯಾರ ಬಳಿ ಕೆಲಸ ಇಲ್ಲವೇ ಅಂಥವರು ಹೀಗಾಡುವುದು ಸಹಜ ತಾನೇ? ಇಡೀ ಪ್ರಪಂಚ ಕೋವಿಡ್ ಜೊತೆ ಬದುಕುವುದನ್ನು ಕಲಿತಿರುವಾಗ, ನೀನು ಮಾತ್ರ ಮನೆಯಲ್ಲೇ ಯಾಕಿರ್ತೀಯಾ? ಹೊರಗೆ ಬಂದು ಕೆಲಸ ಹುಡುಕು, ಇಲ್ಲದಿದ್ದರೆ ಬಾಕಿ ಎಲ್ಲಾ ಫಸ್ಟ್ ಕ್ಲಾಸ್ ಅಂತ ಹೇಳಿಕೊಂಡು ಸುತ್ತುತ್ತೀಯಾ ಎಂದು ಬೈಯ್ಯುತ್ತಾರೆ ಹಿತೈಷಿಗಳು.
ಸೆಕ್ಷುಯಲ್ ಕನ್ ಸರ್ನ್ ಬಗ್ಗೆ ಹಾಹಾಕಾರವೇಕೆ?
ರಾಜ್ ಕುಮಾರ್ ರಾವ್ ಭೂಮೀ ಪೆಡ್ನೇಕರ್ ಚಿತ್ರ `ಬಧಾಯಿ ದೋ’ ಬಹಳ ಚರ್ಚಿತ ಚಿತ್ರ. ಅದಕ್ಕೆ ಮುಖ್ಯ ಕಾರಣ ಈ ಚಿತ್ರದ ಕಾನ್ಸೆಪ್ಟ್. ಭೂಮೀರಾಜ್ ಇಬ್ಬರೂ ಇಲ್ಲಿ ಹೋಮೋ ರೋಲ್ಸ್ ನಿಭಾಯಿಸಿದ್ದಾರೆ. ಸಮಾಜಕ್ಕೆ ಎಲ್ಲ ಮಾಮೂಲೇ ಎಂದು ತೋರಿಸಲು ಮದುವೆ ಸಹ ಆಗುತ್ತಾರೆ. ಈ ಕಾನ್ಸೆಸ್ಟ್ ಜೀರ್ಣಿಸಿಕೊಳ್ಳುವುದರಲ್ಲಿ ಭಗವಾಧಾರಿಗಳಿಗೆ ಮಲಬದ್ಧತೆ ಆಗಿಹೋದೀತು. ಎಲ್ಲರೂ ಮನ ಬಂದಂತೆ ವರ್ತಿಸಿದರೆ ಭಗವಾಧಾರಿಗಳನ್ನು ಕೇಳುವರಾರು? ರಾಜ್ ಅಂತೂ ಈ ಚಿತ್ರದಲ್ಲಿ ಬಲು ಬಿಂದಾಸ್ ಆಗಿ, ಸೆಕ್ಷುಯಾಲಿಟಿ ಎಂಬುದು ಅವರವರ ಪರ್ಸನಲ್ ಚಾಯ್ಸ್, ಬೇರೆಯವರು ಇದರಲ್ಲಿ ಮೂಗು ತೂರಿಸುವ ಹಾಗೇ ಇಲ್ಲ ಎಂದಿದ್ದಾನೆ!
ರಣವೀರ್ನ ಕೆರಿಯರ್ಗೆ ಇತಿಶ್ರೀ ಹಾಡಿದವರು ಯಾರು?
ರಣವೀರ್ ಶೌರಿ ಮತ್ತು ಪೂಜಾ ಭಟ್ ಬಹಳ ವರ್ಷಗಳಿಂದ ಲಿವ್ ಇನ್ ರಿವೇಶನ್ ಶಿಪ್ ನಲ್ಲಿ ಇದ್ದರು, ಅಚಾನಕ್ ಆಗಿ ಬೇರ್ಪಟ್ಟರು. ಇತ್ತೀಚೆಗೆ ರಣವೀರ್, ಭಟ್ ಪರಿವಾರದ ಕುರಿತು ತನ್ನನ್ನು ಅಪಮಾನಗೊಳಿಸಿದ್ದರ ಆರೋಪ ಹೊರಿಸುತ್ತಾ, ಪೂಜಾ ನಶೆ ಏರಿಸಿಕೊಳ್ಳದೆಯೇ ಮಹಾ ಹಿಂಸಕಿ ಆಗಿಬಿಡುತ್ತಾಳೆ, ಆ ಕಾರಣದಿಂದಲೇ ತಾನು ಅವಳಿಂದ ದೂರ ಸರಿಯಬೇಕಾಯಿತು ಎಂದು ಹೇಳಿಕೊಳ್ಳುತ್ತಿದ್ದಾನೆ. ಇಲ್ಲವೇ ಒಂದಂತೂ ವಿಚಿತ್ರವಾಗಿ ಕಂಡು ಬರುತ್ತಿದೆ, ರಣವೀರ್ ಪೂಜಾ ಬೇರ್ಪಟ್ಟಾಗಿನಿಂದ, ಆತನಿಗೆ ಬಾಲಿವುಡ್ ನಲ್ಲಿ ಕೆಲಸ ಸಿಗುದೇ ದುಸ್ತರವಾಗಿದೆ! ಇದಕ್ಕೆ ಮೂಲಕಾರಣ ಇವನು ಭಟ್ ಪರಿವಾರದ ವಿರುದ್ಧ ದನಿ ಎತ್ತಿದ್ದು ಎನ್ನುತ್ತಾರೆ ಸುದ್ದಿಗಾರರು. ಕಾರಣ ಏನೇ ಇರಲಿ, ಅಂತೂ ಈತನ ಸಿನಿಮಾ ಕೆರಿಯರ್ ಗೆ ಇತಿಶ್ರೀ ಹಾಡಿದ್ದಾಯಿತು.
ಟೈಪ್ ಕಾಸ್ಟ್ ಆಗುತ್ತಿರುವ ಟೈಗರ್
ಟೈಗರ್ ಅಕ್ಷಯ್ ಕುಮಾರ್ ನಟಿಸಲಿರುವ `ಬಡೇ ಮಿಯಾ ಛೋಟೆ ಮಿಯಾ’ ಸೆಟ್ಟೇರಲಿದೆ. ಅಕ್ಕಿ ಟೈಗರ್ ಇಬ್ಬರೂ ಮಾರಾಮಾರಿ ನಡೆಸಲಿದ್ದಾರೆ. ಚಿತ್ರದ ಟೈಟ್ ನೋಡಿ, ಟೈಗರ್ ಗೆ ಬಹುಶಃ ವಿಭಿನ್ನ ಪಾತ್ರ ಇರಬಹುದೇನೋ ಎಂದುಕೊಂಡರೆ ಹಾಗೇನಿಲ್ಲ, ಈ ಸಲ ಆತ ಫೈಟಿಂಗ್ ಆಡುವುದೇ ಆಯ್ತು. ತಾನು ಯಾವಾಗ ಇಂಥದೇ ಪಾತ್ರಕ್ಕೆ ಟೈಪ್ ಕಾಸ್ಟ್ ಆಗಿಬಿಟ್ಟೆ ಎಂದು ಟೈಗರ್ ಗೆ ಗೊತ್ತೂ ಆಗಲಿಲ್ಲ. ಕೆರಿಯರ್ ನ ಆರಂಭದಿಂದ ಇಲ್ಲಿಯವರೆಗೂ ಟೈಗರ್ ಬರೀ ಮಾರಾಮಾರಿ ಆಡಿದ್ದೇ ಬಂತು. ಈತನ ಒಂದೇ ತರಹದ ಪಾತ್ರ ನೋಡಿ ನೋಡಿ ಜನ ಬೇಸತ್ತು ಹೋಗಿದ್ದಾರೆ. ಈಗಲಾದರೂ ಸುಧಾರಿಸಿಕೊಳ್ಳಪ್ಪ, ಇಲ್ಲದಿದ್ದರೆ ಫ್ಲಾಪ್ ಹೀರೋ ಆದೀಯ, ಎನ್ನುತ್ತಿದ್ದಾರೆ ಹಿತೈಷಿಗಳು.
ಐಡೆಂಟಿಟಿ ಪಡೆದುಕೊಂಡ ರಶ್ಮಿಕಾ ಮಂದಣ್ಣ
ಕನ್ನಡ, ತೆಲುಗು ಚಿತ್ರಗಳಿಂದ ಸ್ಟಾರ್ ಆಗಿ ಬೆಳೆದ ರಶ್ಮಿಕಾ ಈಗ ಬಾಲಿವುಡ್ ಗೆ ಹಾರಬಹುದೇ…..? ದಕ್ಷಿಣದಲ್ಲಿ ನಾಯಕ ನಟರು ಎಂಥ ದಿಗ್ಗಜರಾಗಿರುತ್ತಾರೆ ಎಂದರೆ ಇವರ ಮುಂದೆ ನಾಯಕಿಯರು ತುಸು ಪೇಲವ ಆಗಿಬಿಡುತ್ತಾರೆ. ಆದರೆ ರಶ್ಮಿಕಾ ವಿಷಯದಲ್ಲಿ ಹೀಗಾಗಲಿಲ್ಲ. `ಪುಷ್ಪಾ’ ಚಿತ್ರದಲ್ಲಿ ಅಲ್ಲು ಅರ್ಜುನ್ ನಂಥ ಸ್ಟಾರ್ ನಟನಿದ್ದೂ, ರಶ್ಮಿಕಾ ಪ್ರೇಕ್ಷಕರ ಮನದಲ್ಲಿ ತನ್ನದೇ ಸ್ಥಾನ ಭದ್ರಪಡಿಸಿಕೊಂಡಿದ್ದಾಳೆ! ಇಡೀ ಚಿತ್ರದಲ್ಲಿ ರಶ್ಮಿಕಾ ಡೀ ಗ್ಲಾಮರೈಸ್ ಆಗಿದ್ದರೂ, ತನ್ನ ನಟನೆಯ ಬಲದಿಂದ ಮಾತ್ರ ಆಕೆ ಗೆದ್ದು ಬರಬೇಕಾಯಿತು. ಹೀಗಾಗಿ ಅಂದ ಕಾಲತ್ತಿಲೆ, ಶ್ರೀದೇವಿ ಹೈಜಂಪ್ ಹೊಡೆದಂತೆ ಹಿಂದಿಗೆ ಲಗ್ಗೆ ಇಟ್ಟಿರುವ ರಶ್ಮಿಕಾ, `ಮಿಶನ್‌ಮಜನೂ’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಾಯಕಿ ಆಗಿದ್ದಾಳೆ! ಬಾಲಿವುಡ್ ನಲ್ಲಿ ದಕ್ಷಿಣದ ನಟಿಯರು ಗೆಲ್ಲುವುದೇನೂ ಹೊಸದಲ್ಲ, ಇತಿಹಾಸ ಮರಳಬಹುದೇ? ಆಲ್ ದಿ ಬೆಸ್ಟ್ ರಶ್ಮಿಕಾ!
ಅದು ನನ್ನ ಬಾಲ್ಯದ ಕನಸು!
ಬಾಲಿವುಡ್ ನ ಭಾರಿ ಸ್ಟಾರ್ ಹೃತಿಕ್ ರೋಶನ್ ಪತ್ನಿ ಸುಸೇನ್ ಳನ್ನು ಬಿಟ್ಟ ನಂತರ ಯಾರ ಜೊತೆಯೇ ಡೇಟಿಂಗ್ ನಡೆಸುತ್ತಿರಲಿ, ಗಾಯತ್ರಿ ಭಾರದ್ವಾಜ್ ಗೆ ಅದರಿಂದೇನೂ ಕೆಡುಕಿಲ್ಲವಂತೆ, ಅವಳಿಗೆ ಗೊತ್ತಿರುವುದೆಲ್ಲ ಹೃತಿಕ್ ನನ್ನು ಮದುವೆ ಆಗಬೇಕೆನ್ನುವುದು ಮಾತ್ರ! ಅದು ಅವಳ ಬಾಲ್ಯದ ಕನಸಂತೆ. ಗತಕಾಲದ ಮಿಸ್ ಇಂಡಿಯಾ ಆಗಿದ್ದ ಗಾಯತ್ರಿಗೆ ಬಾಲಿವುಡ್ ನ ಚಳಿಗಾಳಿ ಮಳೆಗಳ ಅರಿವಿಲ್ಲ. ಆದರೆ ದೊಡ್ಡ ದೊಡ್ಡ ಕನಸುಗಳಿಗೆ ಕೊರತೆ ಇಲ್ಲ. ಬಾಲಿವುಡ್ ನಲ್ಲಿ ಎಂಟ್ರಿಯೇ ಪಡೆಯದ ಗಾಯತ್ರಿ, ಕೆಲವು ವಿಡಿಯೋ ಸಾಂಗ್ಸ್ ರಿಲೀಸ್ ಮಾಡಿದ್ದುಂಟು. ಆದರೆ ಅದಕ್ಕೇನೂ ಭಾರಿ ಡಿಮ್ಯಾಂಡ್ ಬರಲಿಲ್ಲ. ಗಾಯತ್ರಿ ಮರಿ, ಇದೀಗ ತಾನೇ ಮೊಟ್ಟೆಯಿಂದ ಹೊರ ಬಂದಿರುವ ನೀನು ರೆಕ್ಕೆ ಪುಕ್ಕ ಬಲಿಸಿಕೊಂಡು ಹಾರುವುದನ್ನು ಕಲಿ, ಅದಿಲ್ಲದೇ ಹಾರಿದರೆ ಧೊಪ್ಪೆಂದು ಬಿದ್ದೀಯ, ಎಂದು ಕಿವಿಮಾತು ಹೇಳುತ್ತಿದ್ದಾರೆ ಹಿತೈಷಿಗಳು, ಇವಳ ಕನಸು ನನಸಾದೀತೇ?
ಬಿಗ್ ಬಿ ಹೊಸ ಚಿತ್ರ ಅಮಿತಾರ ಹೊಸ ಚಿತ್ರದ ಹೆಸರು `ಝುಂಡ್’ ಅಂದ್ರೆ ಗುಂಪುಗಾರಿಕೆ. ಇದೇನಪ್ಪ, ಈ ವಯಸ್ಸಿನಲ್ಲಿ ಇವರು ಗುಂಪುಗಾರಿಕೆ ನಡೆಸಬೇಕೇ ಅಂದುಕೊಳ್ಳಬೇಡಿ. ಇದು ಅವರ ಪ್ರತಿಭೆಗೆ ಮತ್ತೊಂದು ಗರಿಯಷ್ಟೆ. ಈ ಚಿತ್ರದ ಮೊದಲ ಝಲಕ್ ನಲ್ಲಿ ಅಂಥ ಧಮ್ ಏನೂ ಇರಲಿಲ್ಲ. ಹೀಗಾಗಿ ಅದರ ಆಧಾರದಿಂದ ಚಿತ್ರದ ಕುರಿತು ಹೇಳುವುದು ಕಷ್ಟವಾದೀತು. ಬಚ್ಚನ್ ರ ಇತ್ತೀಚಿನ `102 ನಾಟ್ ಔಟ್’ ಇವರ ವಯಸ್ಸಿಗೆ ಹೊಂದುವ ಪಾತ್ರದಿಂದಾಗಿ ಗಮನ ಸೆಳೆಯುವಂತಿತ್ತು. ಇದನ್ನು ಒಪ್ಪಲು ಸಿದ್ಧರಿಲ್ಲದ ಈ ಮಹಾಶಯ, ನವ ಯುವಕರಂತೆ ಚಿತ್ರದ ಮೇಲೆ ಚಿತ್ರ ಮಾಡುತ್ತಲೇ ಇದ್ದಾರೆ. ನೀವು ಅಗತ್ಯ ಚಿತ್ರ ಮುಂದುವರಿಸಿ, ಆದರೆ ಅದು ನಿಮ್ಮ ಲೆವೆಲ್ ಗೆ ಇರಲಿ, ನಿಮ್ಮ ಘನತೆ ಗಾಂಭೀರ್ಯಕ್ಕೆ ತಕ್ಕಂತಿರಲಿ. ಸಲೀಂ ಸಾಹೇಬರು ಹೇಳಿದಂತೆ ನೀವು ರಿಟೈರ್ ಆಗುವುದು ಬೆಟರ್ ಎಂಬುದರ ಬಗ್ಗೆಯೂ ಗಮನಹರಿಸಿ ಎನ್ನುತ್ತಿದ್ದಾರೆ, ಹಿತೈಷಿಗಳು!