ಬಟ್ಟೆ ತರಹ ದೇಹ ತೂಕ ಬದಲಾಗುತ್ತಿರುತ್ತದೆ!
ಇತ್ತೀಚೆಗಷ್ಟೆ ನಟಿ ಕಂಗನಾ ತನ್ನ ತಮಿಳು `ತೈವಿ' (ಜಯಲಲಿತಾ ಬಯೋಪಿಕ್) ಚಿತ್ರಕ್ಕಾಗಿ 20 ಕಿಲೋ ದೇಹ ತೂಕ ಹೆಚ್ಚಿಸಿಕೊಂಡಿದ್ದಳಂತೆ, ನಂತರ ತಗ್ಗಿಸಿದ್ದೂ ಆಯ್ತಂತೆ! ಕಂಗನಾ ಮಾತ್ರವಲ್ಲ ಎಷ್ಟೋ ಕಲಾವಿದರು ಹೀಗೆ ಮಾಡಿದ್ದಾರೆ. ಮತ್ತೆ ನಮ್ಮಂಥ ಸಾಮಾನ್ಯ ಜನ ಹೊರಗೆ ಇಣುಕುವ ಬೊಜ್ಜನ್ನು ಒಳಗೆ ಎಳೆದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಈ ಸಿನಿ ಕಲಾವಿದರು ಬಟ್ಟೆ ತರಹ ದೇಹ ತೂಕವನ್ನೂ ಬದಲಾಯಿಸಿ ಕೊಳ್ಳುತ್ತಿರುತ್ತಾರೆ, ಅವರಿಗೆ ಅಷ್ಟು ಆತ್ಮವಿಶ್ವಾಸವಿರುತ್ತದೆ. ನಮ್ಮನ್ನು ನಾವು ಫಿಟ್ ಆಗಿರಿಸಿಕೊಳ್ಳಲು ಇಂಥ ಕಲಾವಿದರಿಂದ ನಾವು ಕಲಿಯುವುದು ಬಹಳಷ್ಟಿದೆ.
ದಿಶಾಳಿಗೆ ಸಮ್ಮರ್ ಬಂದೇಬಿಡ್ತು!
ಕೆಲವು ನಾಯಕಿಯರಿಗೆ ತಾವು ಸಿನಿಮಾದಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳಲಿ, ಜನ ಕೇವಲ ತಮ್ಮನ್ನೇ ನೋಡುತ್ತಿರಲಿ ಎಂಬಾಸೆ. ದಿಶಾ ಸಹ ಇದಕ್ಕೆ ಹೊರತಲ್ಲ. ಈಕೆಯ ಫ್ಯಾನ್ಸಂತೂ ಸಿನಿಮಾಗಿಂತ ಹೆಚ್ಚಾಗಿ ಇವಳ ಪೋಸ್ಟ್ ನ ನಿರೀಕ್ಷೆಯಲ್ಲೇ ಇರುತ್ತಾರೆ, ಇಲ್ಲಿ ಅಷ್ಟು ಗ್ಲಾಮರಸ್ ಪೋಸ್ ಗಳಿರುತ್ತವೆ. ಬೇಸಿಗೆ ಇನ್ನೇನು ಬಂದೇಬಿಟ್ಟಿತು ಎಂದು ದಿಶಾ ಇಲ್ಲಿ ತೋರಿರುವ ಪೋಸ್ ನೋಡಿ! ಇವಳ ಫ್ಯಾನ್ಸ್ ಅಂತೂ ಫುಲ್ ಫಿದಾ! ಈ ಫ್ಯಾನ್ಸ್ ಒಮ್ಮೆ ಸೋಶಿಯಲ್ ಮೀಡಿಯಾದ ಬೋಲ್ಡ್ ನೆಸ್ ಗೆ ಮರುಳಾದರೆ ಮತ್ತೊಮ್ಮೆ ತಮ್ಮ ಮನಸ್ಸಿನ ಕೊಳಕನ್ನು ಕಾರಲು ಅನಗತ್ಯ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಸಿನಿ ತಾರೆಯರಿಗೆ ಬೇಕಿರುವುದೂ ಇದೇ ಅಲ್ಲವೇ?
ದಕ್ಷಿಣದ ಮತ್ತೊಂದು ಮಹಾನ್
ಚಿತ್ರವಿಕ್ರಂ ಮತ್ತು ಧ್ರುವ ನಟಿಸಿರುವ ತಮಿಳಿನ `ಮಹಾನ್' ಚಿತ್ರ ಮತ್ತೊಂದು ಸೂಪರ್ ಡೂಪರ್ ಬ್ಲಾಕ್ ಬಸ್ಟರ್ ಆಗಲಿದೆ. ಉತ್ತರದ ಮಂದಿ ಈಗಾಗಲೇ ಇದರ ಹಿಂದಿ ಡಬ್ಬಿಂಗ್ ವರ್ಷನ್ ಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಚಿತ್ರದ ಕಥೆ ಮತ್ತು ಅದನ್ನು ಪ್ರಸ್ತುತಪಡಿಸಿರುವ ರೀತಿ ಎರಡೂ ಅನನ್ಯ! ಚಿತ್ರದ ನಾಯಕ ವಿಕ್ರಂ ಪಾತ್ರ ಬಲು ರೋಚಕ. ಈತನ ತಾತಾ ಮುತ್ತಾತಾ ಗಾಂಧಿವಾದಿಗಳು. ಹಾಗಾಗಿ ಈತನಿಗೆ ಗಾಂಧಿ ಮಹಾನ್ ಎಂದು ಹೆಸರಿಟ್ಟರು. ಈತನೇನೋ ಸಾಮಾನ್ಯ ಜೀವನ ನಡೆಸುತ್ತಾನೆ, ಆದರೆ ಈತನ ಮನದಲ್ಲಿ ರೋಮಾಂಚಕಾರಿ ಭಾವನೆಗಳು ಉಕ್ಕುತ್ತಿರುತ್ತವೆ. ಇದು ಹಿಂದಿ ವೀಕ್ಷಕರಿಗೆ ಮಜಾ ನೀಡಿದರೆ, ಬಾಲಿವುಡ್ ಮಂದಿಗೆ ಟೆನ್ಶನ್ ಹೆಚ್ಚಿಸಲಿದೆ. ದಕ್ಷಿಣದವರು ಇಂಥ ರೋಚಕ ಕಥೆಗಳನ್ನು ಎಲ್ಲಿಂದ ಆವರಿಸುತ್ತಾರೋ ಎಂದು ಅವರು ತಲೆ ಮೇಲೆ ಕೈ ಹೊತ್ತಿದ್ದಾರೆ.
ಕೆಲವೇ ಕ್ಷಣಗಳ ವೈರಲ್
ಇತ್ತೀಚೆಗೆ `ಕಚ್ಚಾ ಬಾದಾಮ್' ಹಾಡಿನ ಕ್ರೇಜ್ ನಿಂದ ಕಡಲೆಕಾಯಿ ಮಾರುತ್ತಿದ್ದ ಭುಬನ್ ವೈರಲ್ ಆಗಿಹೋದ. ತಡವೇಕೆ ಎಂಬಂತೆ ಮ್ಯೂಸಿಕ್ ವಿಡಿಯೋ ತಯಾರಿಸುವ ಕೆಲವು ಮಂದಿ ಅವನನ್ನು ತಮ್ಮ ಜೊತೆ ಸೇರಿಸಿಕೊಂಡು ರಾತ್ರೋರಾತ್ರಿ ಸ್ಟಾರ್‌ಸಿಂಗರ್ ಆಗಿಸಿಬಿಟ್ಟರು! ಕೆಲವು ದಿನಗಳ ಹಿಂದೆ ರಾನೋ ಮಂಡಲ್ ಹಾಗೂ ಡ್ಯಾನ್ಸಿಂಗ್ ಅಂಕಲ್ ಸಂಜೀವ್ ಶ್ರೀವಾಸ್ತವ್ ಜೊತೆಗೂ ಹೀಗೇ ಆಗಿತ್ತು. ಈ ದಿಢೀರ್ ಸ್ಟಾರ್ ಗಳು ಸುರುಸುರುಬತ್ತಿ ತರಹ ಎಷ್ಟು ಬೇಗ ಶೈನ್ ಆಗುತ್ತಾರೋ ಕೆಲವೇ ದಿನಗಳಲ್ಲಿ ಕೇಳುವವರಿಲ್ಲ ಎಂದಾಗುತ್ತಾರೆ. ರಾನೋ ಮಂಡಲ್ ತಾನೇ ಮುಂದಿನ ಲತಾಜೀ ಎಂದೆಲ್ಲ ಕನಸು ಕಂಡಿದ್ದಳು. ಆದರೆ ಇನ್ ಸ್ಟೆಂಟ್ ರೆಸಿಪಿ ಸದಾ ಸರ್ದಾ ವರ್ಕ್ ಆಗಲ್ಲ ಎಂಬುದು ನೆನಪಿರಲಿ. ಇಂಥವರು ಬೇಗ ಬೇಗ ಸ್ಟಾರ್ ಗಿರಿ ಗಿಟ್ಟಿಸುತ್ತಾರೆ, ಅದೇ ತರಹ ನೆಲ ಕಚ್ಚುತ್ತಾರೆ, ಎಚ್ಚರ ತಂಗಿ ಎಚ್ಚರ!