-ರಾಘವೇಂದ್ರ ಅಡಿಗ ಎಚ್ಚೆನ್.

ರೋಹಿತ್ ಕೀರ್ತಿ ನಿರ್ದೇಶನದ, “ಬಿಗ್ ಬಾಸ್” ಖ್ಯಾತಿಯ ದೀಪಿಕಾ ದಾಸ್ ನಟಿಸಿರುವ “#ಪಾರುಪಾರ್ವತಿ”‌ ಚಿತ್ರ ಜ.31ಕ್ಕೆ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಮುಖ ಪಾತ್ರವೊಂದರ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಆದರೆ ಈ ಪಾತ್ರಧಾರಿ ಅದಾವ ಬೇರೆ ನಟರಲ್ಲ ಬದಲಾಗಿ ಚಿತ್ರದಲ್ಲಿ ಎಂಟು ರಾಜ್ಯಗಳನ್ನು ಸುತ್ತಿರೊ ಕಾರು!

IMG-20250114-WA0013

ಹೌದು “#ಪಾರುಪಾರ್ವತಿ” ಚಿತ್ರದ ಪ್ರಮುಖ ಪಾತ್ರದಲ್ಲಿ ಕಾರೊಂದು ಕಾಣಿಸಿಕೊಂಡಿದೆ. ಇದೊಂದು ಟ್ರಾವೆಲ್ ಅಡ್ವೆಂಚರ್ ಡ್ರಾಮ ಜಾನರ್​​ನ ಚಿತ್ರ ಚಿತ್ರ ಮೂರು ಪ್ರಮುಖ ಪಾತ್ರಗಳ ಜೊತೆಗೆ ಸಾಗುತ್ತದೆ.‌ ದೀಪಿಕಾ ದಾಸ್, ಪೂನಂ ಸಿರ್‌‌ ನಾಯಕ್‌ ಹಾಗೂ ಫವಾಜ್ ಆಶ್ರಫ್ ಮೂರು ಪ್ರಮುಖ ಪಾತ್ರಧಾರಿಗಳು. ಇವರೊಟ್ಟಿಗೆ ಮತ್ತೊಂದು ‌ಪ್ರಮುಖಪಾತ್ರಧಾರಿ ಎಂದರೆ ಅದು ಕಾರು.

ಟ್ರಾವೆಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಕಾರು ಸಹ ಚಿತ್ರದಲ್ಲಿ ಪ್ರಮುಖಪಾತ್ರ ವಹಿಸುತ್ತದೆ.‌ ಎಂದು ನಿರ್ದೇಶಕ ರೋಹಿತ್ ಕೀರ್ತಿಮಾಹಿತಿ ಹಂಚಿಕೊಂಡಿದ್ದಾರೆ.

IMG-20250114-WA0014

ಈ ಚಿತ್ರ .‌ ಜನವರಿ 31ರಂದು ತೆರೆಗೆ ಬರಲಿದ್ದು ಅದಕ್ಕೂ ಮುನ್ನ ಸಂಕ್ರಾಂತಿ ದಿನ ಟ್ರೈಲರ್ ಬಿಡುಗಡೆ ಆಗಲಿದೆ. ಹಾಗೆಯೇ ಸಿನಿಮಾದ್ಫ಼ಲ್ಲಿ ಕಾಣಿಸಿಕೊಂಡಿರುವ ಈ ಕಾರು ಪ್ರಚಾರದ ಸಲುವಾಗಿ ಕರ್ನಾಟಕದಾದ್ಯಂತ ಚಲಿಸಲಿದೆ. ಯೂಟ್ಯೂಬರ್ ಶ್ರೀಕಾಂತ್ ಅವರು ಕಾರನ್ನು ಚಲಿಸಿಕೊಂಡು ಪಯಣಿಸಲಿದ್ದಾರೆ.

IMG-20250114-WA0015

ಕಾರಿನ ಜೊತೆಗೆ ಕರ್ನಾಟಕದಿಂದ ಉತ್ತರ ಖಂಡದವರೆಗೂ ಎಂಟು ರಾಜ್ಯಗಳನ್ನು ಸಂಚರಿಸಿದ ಅನುಭವ ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಂದಿರುವ ದೀಪಿಕಾ ದಾಸ್ ಈ ಚಿತ್ರದಲ್ಲಿ ಬರೀ ಪ್ರವಾಸ ಮಾತ್ರ ಇಲ್ಲ. ಪ್ರೇಕ್ಷಕರು ಕುಟುಂಬ ಸಮೇತ ನೋಡಬಹುದಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ.ಎಂದು ಹೇಳಿದ್ದಾರೆ. ಚಿತ್ರದಲ್ಲಿ ಅವ್ರು ಪಾಯಲ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ಮಾಪಕ ಪಿ.ಬಿ.ಪ್ರೇಂನಾಥ್ ಮಾತನಾಡಿ ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು. ಛಾಯಾಗ್ರಾಹಕ ಅಬಿನ್ ರಾಜೇಶ್ ಚಿತ್ರೀಕರಣ ಸಮಯದ ಅನುಭವ ಹಂಚಿಕೊಂಡರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ