ಸರಸ್ವತಿ ಜಾಗೀರ್ದಾರ್
ಕನ್ನಡ ಚಿತ್ರರಂಗದ ಪ್ರತಿಭಾವಂತ, ಜನಪ್ರಿಯ ನಟಿ,ರಾಜಕಾರಣಿ ತಾರಾ ಅನುರಾಧಾ ಕೊಡುಗೆ ಚಿತ್ರರಂಗಕ್ಕೆ ಅಪಾರ, ಸಿನಿಮಾ ನಿರ್ಮಾಣ, ಸಿನಿಮಾ ರಂಗದಲ್ಲಿ ಭಾಗವಹಿಸುವಿಕೆ, ಜೊತೆಗೆ ರಾಷ್ಟ್ರ ಪ್ರಶಸ್ತಿ,,ರಾಜ್ಯ ಪ್ರಶಸ್ತಿ ವಿಜೇತೆ ಎನ್ನುವ ಹೆಗ್ಗಳಿಕೆ.
ಇವರ ಈ ಸಾಧನೆ ಗುರುತಿಸಿ ವಿಜಯಪುರದ ಅಕ್ಕಮಹಾದೇವಿ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ಈ ಸಂದರ್ಭದಲ್ಲಿ ತನ್ನ ಸಹಪಾಠಿಗಳೊಂದಿಗೆ ಸಂತೋಷ ಹಂಚಿಕೊಂಡರು. ಕನ್ನಡದ ಹಿರಿಯ ಕಿರಿಯ ನಟಿಯರನ್ನು ಆಹ್ವಾನಿಸಿ ಮನೆಯಲ್ಲಿ ಹೋಮ ಹವನ, ಬಳೆ ಶಾಸ್ತ್ರ ಮಾಡಿ ಹೆಣ್ ಮಕ್ಳು ಸ್ಟ್ರಾಂಗ್ ಗುರು ಎಂದು ಪ್ರೂವ್ ಮಾಡಿದ್ದಾರೆ.
ಹಿರಿಯ ತಾರೆ ಜಯಮಾಲಾ, ಹೇಮಾ ಚೌಧರಿ, ಭಾರತಿ ವಿಷ್ಣುವರ್ಧನ್ , ಮಾಳವಿಕಾ ಅವಿನಾಶ್,ಸುಧಾ ನರಸಿಂಹರಾಜು, ಅಂಜಲಿ ,ಭಾವನಾ ರಾವ್, ಸುಧಾರಾಣಿ ಹೀಗೆ ನಟಿಯರ ದಂಡೇ ಅಲ್ಲಿ ನೆರೆದಿತ್ತು. ತಾರಾಗೆ ನಮ್ಮ ಕಡೆಯಿಂದಲೂ ಅಭಿನಂದನೆಗಳು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ