ಬೇಸಿಗೆ ಕಾಲದಲ್ಲಿ ಮಹಿಳೆಯರಿಗೆ ಕೂಲ್ ‌ಕಲರ್ಸ್‌ ಜೊತೆಗೆ ಕೂಲ್ ‌ಫ್ಯಾಬ್ರಿಕ್‌ ಬಹಳ ಇಷ್ಟವಾಗುತ್ತದೆ. ಅವರಿಗೆ ಈ ಸೀಸನ್ ತಮ್ಮನ್ನು ತಾವು ಸೂಪರ್‌ ಸೆಕ್ಸಿಯಾಗಿ ತೋರಿಸಿಕೊಳ್ಳಬೇಕಿರುತ್ತದೆ. ಇಂತಹ ಸ್ಥಿತಿಯಲ್ಲಿ ನಿಮ್ಮ ಔಟರ್‌ ಔಟ್‌ ಫಿಟ್ಸ್ ಜೊತೆಗೆ ನಿಮ್ಮ ಇನ್ನರ್‌ ವೇರ್‌ ಕೂಡ ಅಷ್ಟೇ ಸೆಕ್ಸಿ ಆಗಿರಬೇಕೆಂದು ಅನಿಸುತ್ತಲ್ಲವೇ? ನೀವು ಯಾವುದಾದರೂ ಹಾಟ್‌ ಡ್ರೆಸ್‌ ಧರಿಸಿದ್ದರೆ ನಿಮ್ಮ ಸೂಪರ್‌ ಸೆಕ್ಸಿ ಲುಕ್ಸ್ ಗೆ ಒಳ ಉಡುಪುಗಳು ಕೂಡ ಅಷ್ಟೇ ಕಾರಣವಾಗುತ್ತವೆ.

ಆದರೆ ಬೇಸಿಗೆ ಕಾಲದಲ್ಲಿ ಸ್ಟೈಲ್ ‌ನ ಜೊತೆಗೆ ಕಂಫರ್ಟ್‌ ಬಗ್ಗೆಯೂ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಈ ಫ್ಯಾಷನ್‌ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಒಳಉಡುಪುಗಳು ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಕಾಟನ್ಫ್ಯಾಬ್ರಿಕ್ಉತ್ತಮ

ನಿಮಗೆ ಮಾರುಕಟ್ಟೆಯಲ್ಲಿ ವಿವಿಧ ಡಿಸೈನ್‌ ಹಾಗೂ ಬಗೆ ಬಗೆಯ ಫ್ಯಾಬ್ರಿಕ್ಸ್ ನ ಒಳ ಉಡುಪುಗಳು ಲಭಿಸುತ್ತವೆ. ಅವನ್ನು ನೋಡಿ ನೀವು ಅದರ ಬಗ್ಗೆ ಆಕರ್ಷಿತರಾಗಬಹುದು. ಆದರೆ ನೀವು ಆಯ್ಕೆ ಮಾಡುವ ಒಳಉಡುಪಿನ ಫ್ಯಾಬ್ರಿಕ್‌ ಕಾಟನ್‌ ದ್ದೇ ಆಗಿರುವಂತೆ ನೋಡಿಕೊಳ್ಳಿ. ಏಕೆಂದರೆ ಈ ಫ್ಯಾಬ್ರಿಕ್‌ ನ ವಿಶೇಷತೆ ಎಂದರೆ, ಇದರಲ್ಲಿ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ.

ಅದರಿಂದ ಕಂಫರ್ಟ್‌ ನ ಜೊತೆ ಜೊತೆಗೆ ಇಡೀ ದಿನ ಕೂಲ್ ಕೂಲ್ ನ ಅನುಭವ ಪಡೆದುಕೊಳ್ಳುವಿರಿ. ಇದರಲ್ಲಿರುವ ತಂಪಾದ ಅನುಭವ ನೀಡುವ ಪ್ರಾಪರ್ಟಿ ನಿಮ್ಮ ದೇಹಕ್ಕೆ ಯಾವುದೇ ತೆರನಾದ ಅಲರ್ಜಿ ಉಂಟು ಮಾಡದು. ಹಾಗಾಗಿ ಕಾಟನ್‌ ಒಳ ಉಡುಪುಗಳಿಂದ ನಿಮ್ಮನ್ನು ಸೂಪರ್‌ ಕೂಲ್ ಆಗಿಟ್ಟುಕೊಳ್ಳಿ.

ಸೈಜ್ ಬಗ್ಗೆ ವಿಶೇಷ ಗಮನ

ಯಾವ ರೀತಿ ಬೇರೆ ಬೇರೆ ವ್ಯಕ್ತಿಗಳ ದೈಹಿಕ ಸ್ಥಿತಿ ಬೇರೆ ಬೇರೆ ಇರುತ್ತದೋ, ಒಳ ಉಡುಪುಗಳ ಗಾತ್ರ ಕೂಡ ಬೇರೆ ಬೇರೆ ಸೈಜ್ ಫಿಟ್‌ ಎನಿಸುತ್ತವೆ. ಹೀಗಾಗಿ ನಿಮ್ಮ ಕಪ್ಸ್ ಸೈಜ್‌ ಹಾಗೂ ಪ್ಯಾಂಟಿ ಸೈಜ್‌ ನ ಪ್ರಕಾರ ಒಳ ಉಡುಪುಗಳನ್ನು ಆಯ್ಕೆ ಮಾಡಿ ಶೇ.70ರಷ್ಟು ಮಹಿಳೆಯರು ತಪ್ಪು ಸೈಜ್‌ ನ ಬ್ರಾ ಆಯ್ಕೆ ಮಾಡುತ್ತಾರೆ.

ಹೆಚ್ಚು ಫಿಟ್‌ ಆಗಿರುವ ಬ್ರಾ ಧರಿಸುವುದರಿಂದ ತ್ವಚೆಯ ಮೇಲೆ ಕೆಂಪು ಗುರುತು ಕಂಡುಬರುವುದರ ಜೊತೆಗೆ ಅಲರ್ಜಿ ಕೂಡ ಆಗುತ್ತದೆ. ಇದರಿಂದ ರಕ್ತ ಪರಿಚಲನೆಯ ಮೇಲೆ ಪ್ರಭಾವ ಬೀರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ರೀತಿ ಸಡಿಲವಾದ ಬ್ರಾಗಳನ್ನು ಧರಿಸುವುದರಿಂದ ಕಪ್ಸ್ ಗಳಿಗೆ ಸರಿಯಾದ ಆಕಾರ ದೊರೆಯುವುದಿಲ್ಲ. ಅದರಿಂದ ಕ್ರಮೇಣ ಬ್ರೆಸ್ಟ್ ಜೋತು ಬೀಳುತ್ತವೆ. ಅದು ನಿಮ್ಮ ಫಿಗರ್‌ ನ್ನು ಹದಗೆಡಿಸುವ ಕೆಲಸ ಮಾಡುತ್ತದೆ. ಹಾಗಾಗಿ ಒಳಉಡುಪನ್ನು ಖರೀದಿಸುವಾಗ ಸರಿಯಾದ ಸೈಜ್‌ ನ ಬಗ್ಗೆ ಗಮನಹರಿಸಿ.

ನ್ಯೂಡ್ಶೇಡ್ ಆಯ್ಕೆ

ನೀವು ಬೇಸಿಗೆಯಲ್ಲಿ ನ್ಯೂಡ್‌ ಶೇಡ್‌ ಬ್ರಾದ ಆಯ್ಕೆ ಮಾಡಿದಲ್ಲಿ ನಿಮಗೆ ಸಾಕಷ್ಟು ಕಂಫರ್ಟ್‌ ಫೀಲ್ ‌ಆಗುತ್ತದೆ. ಏಕೆಂದರೆ ಈ ಬಣ್ಣಗಳು, ಕೂಲ್ ‌ಎಫೆಕ್ಟ್ ನೀಡುವುದರಿಂದ ನಿಮ್ಮನ್ನು ಟ್ಯಾನಿಂಗ್‌ ನಿಂದ ದೂರ ಇಡುತ್ತವೆ. ನೀವು ಹೆಚ್ಚು ಡಾರ್ಕ್‌ ಕಲರ್ ಇರುವುದನ್ನು ಆಯ್ಕೆ ಮಾಡಿದರೆ ನಿಮಗೆ ಹೆಚ್ಚು ಬಿಸಿ ಉಂಟಾಗುವುದರ ಜೊತೆಗೆ ಸ್ಕಿನ್‌ ಟ್ಯಾನ್‌ ಆಗುವ ಸಾಧ್ಯತೆ ಕೂಡ ಇರುತ್ತದೆ. ನಿಮ್ಮ ಬ್ಲ್ಯಾಕ್‌ ಬ್ರಾ ಮತ್ತು ಪ್ಯಾಂಟಿ ಹೆಚ್ಚು ಸೆಕ್ಸಿಯಾಗಿ ಕಂಡುಬರಬಹುದು. ಆದರೆ ಕೂಲ್ ‌ಕೂಲ್ ‌ಫೀಲ್ ‌ಕೊಡಲು ಈ ಬೇಸಿಗೆಗೆ ನ್ಯೂಡ್‌ ಶೇಡ್‌ ನ ಆಯ್ಕೆ ಮಾಡಿ.

ಲವ್ ಲೇಸ್ಬ್ರಾ

ಈ ಬೇಸಿಗೆಗೆ ಸೆಕ್ಸಿಯಾಗಿ ಕಂಡುಬರಲು ನೀವು ಲೇಸ್‌ ಸೈಜ್‌ ನ ಬ್ರಾ ಆಯ್ಕೆ ಮಾಡಿ, ಏಕೆಂದರೆ ಇದರಿಂದ ನೀವು ಇದನ್ನು ಲೋ ಕಟ್‌ ಟಾಪ್ಸ್, ಟ್ಯಾಂಕ್‌ ಟಾಪ್ಸ್ ಮುಂತಾದವುಗಳ ಜೊತೆ ಧರಿಸಬಹುದು. ಇದು ನಿಮ್ಮ ಸ್ಟೈಲ್ ನ್ನು ಎನ್‌ ಹ್ಯಾನ್ಸ್ ಮಾಡುವುದರ ಜೊತೆಗೆ, ಇದರ ರಚನೆ ಹೇಗಿರುತ್ತದೆಂದರೆ, ಇದು ನಿಮ್ಮ ಬ್ರೆಸ್ಟ್ ಗೆ ಹಗುರವಾದ ಅನುಭವ ನೀಡುವುದರ ಜೊತೆಗೆ, ಈ  ಬೆವರು ಭರಿತ ವಾತಾವರಣದಲ್ಲಿ ನಿಮ್ಮ ತ್ವಚೆಗೆ ಸೂಕ್ತ ಗಾಳಿ ಒದಗಿಸುವ ಕೆಲಸ ಮಾಡುತ್ತದೆ. ಈ ಬ್ರಾ ನಿಮಗೆ ಸೆಕ್ಸಿ ಸ್ಟೈಲಿಶ್‌ ಹಾಗೂ ಕಂಫರ್ಟ್‌ ಲುಕ್‌ ನೀಡುತ್ತದೆ.

ಸ್ಟ್ರಾಪ್ಲೆಸ್ಬ್ರಾ ಆಯ್ಕೆ ಮಾಡಿ

ಸ್ಟ್ರಾಪ್‌ ಲೆಸ್‌ ಬ್ರಾ ಎಲ್ಲ ಬಗೆಯ ಹಾಟ್‌ ಡ್ರೆಸ್‌ ಗಳಿಗೆ ಹೊಂದುತ್ತದೆ. ಜೊತೆಗೆ ಇದು ಭುಜಗಳಿಗೂ ಮುಕ್ತ ಹಾಗೂ ರಿಲ್ಯಾಕ್ಸ್ ಫೀಲ್ ‌ನೀಡುತ್ತದೆ. ಇದರಿಂದ ಭುಜಗಳ ಮೇಲೆ ರೆಡ್‌ ನೆಸ್‌ ಹಾಗೂ ಇರಿಟೇಶನ್‌ ಉಂಟಾಗುವುದಿಲ್ಲ. ಏಕೆಂದರೆ ದೀರ್ಘ ಕಾಲದ ತನಕ ಬ್ರಾ ಧರಿಸಿದರೆ ಕಪ್ಸ್ ಗಳು ಚೆನ್ನಾಗಿ ಹೋಲ್ಡ್ ಮಾಡಲು ಸ್ಟ್ರೈಪ್ಸ್ ನ ಆಸರೆ ಪಡೆಯಲಾಗುತ್ತದೆ. ಅದರಿಂದಾಗಿ ಭುಜಗಳ ಮೇಲೆ ಅಷ್ಟಿಷ್ಟು ಎಳೆದಾಟದ ಅನುಭವ ಉಂಟಾಗುತ್ತದೆ.

ಕೆಲವು ಮಹಿಳೆಯರಿಗೆ ಸ್ಟ್ರಾಪ್‌ ಲೆಸ್‌ ಬ್ರಾ ಧರಿಸುವುದೆಂದರೆ ಅಸುರಕ್ಷತೆಯ ಭಾವನೆ ಉಂಟಾಗುತ್ತದೆ. ಇಂತಹದರಲ್ಲಿ ಅವರು ಮೊದಲು ರಿಮೂವೆಬಲ್ ಸ್ಟ್ರಾಪ್‌ ಇರುವ ಬ್ರಾ ಟ್ರೈ ಮಾಡಬೇಕು. ಅದರಲ್ಲಿ ಸ್ಟ್ರಾಪ್ಸ್ ರಿಮೂವ್ ‌ಮಾಡಿಯೂ ಧರಿಸಬಹುದು ಹಾಗೂ ಸ್ಟ್ರಾಪ್ಸ್ ನ ಜೊತೆಗೂ ಕೂಡ. ಹೀಗೆ ಮಾಡುವುದರಿಂದ ಅವರಿಗೆ ಸ್ಟ್ರಾಪ್‌ ಲೆಸ್‌ ಬ್ರಾ ಅಭ್ಯಾಸವಾಗುತ್ತದೆ. ಒಂದು ಸಲ ನಿಮಗೆ ಇದರ ಅಭ್ಯಾಸವಾಗಿಬಿಟ್ಟರೆ ನೀವು ಅದನ್ನೇ ಧರಿಸಬೇಕೆನ್ನುವಿರಿ.

ಟೀಶರ್ಟ್ಬ್ರಾ ಉತ್ತಮ

ಬೇಸಿಗೆಯ ದಿನಗಳಲ್ಲಿ ಟೀಶರ್ಟ್‌ ಬ್ರಾ ಉತ್ತಮ ಎನಿಸಬಹುದು. ಏಕೆಂದರೆ ಇದು ಸಾಕಷ್ಟು ತೆಳ್ಳಗಿನ ಬಟ್ಟೆಯಿಂದ ತಯಾರಾಗಿರುತ್ತದೆ ಹಾಗೂ ವೈರ್‌ ಫ್ರೀ ಆಗಿರುತ್ತದೆ. ಈ ಕಾರಣದಿಂದ ನೀವು ಇದನ್ನು ದಿನವಿಡೀ ಯಾವುದೇ ನೋವಿಲ್ಲದೆ ಕಿರಿಕಿರಿಯಿಲ್ಲದೆ ಧರಿಸಬಹುದು. ಯಾವ ಮಹಿಳೆಯರಿಗೆ ಬೇಸಿಗೆಯಲ್ಲಿ ಬೆವರಿನ ಕಿರಿಕಿರಿ ಅನಿಸುತ್ತದೋ ಅಂತಹವರು ಟೀಶರ್ಟ್ ಬ್ರಾ ಧರಿಸುವುದು ಸೂಕ್ತ.

ಪ್ಯಾಂಟೀಸ್ಹೆಚ್ಚು ಕಂಫರ್ಟಬಲ್

ಬೇಸಿಗೆಯಲ್ಲಿ ಪ್ಯಾಂಟಿ ಖರೀದಿಸುತ್ತಿದ್ದರೆ, ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ. ಏಕೆಂದರೆ ದೇಹದ ಆ ಭಾಗ ಅತ್ಯಂತ ಸೂಕ್ಷ್ಮ, ಸಂವೇದನಾಶೀಲ. ಜೊತೆಗೆ ಆ ಜಾಗದಲ್ಲಿ ಹೆಚ್ಚು ಬೆವರು ಬರುತ್ತದೆ. ಆ ಕಾರಣದಿಂದ ತ್ವಚೆಗೆ ತರಚು ಕೆಂಪು ಗುರುತು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ಯಾಂಟಿ ಖರೀದಿಸುವ ಮುನ್ನ ಅದರ ಫ್ಯಾಬ್ರಿಕ್‌ ನ್ಯಾಚುರಲ್ ಫ್ಯಾಬ್ರಿಕ್‌ ಅಂದರೆ ಕಾಟನ್‌ ದ್ದೇ ಆಗಿರಲಿ. ಅದರ ಮೇಲೆ ಹೆವಿ ಎಂಬ್ರಾಯಡರಿ ಇರಬಾರದು. ಏಕೆಂದರೆ ಇದರಿಂದ ತ್ವಚೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಸಂಧ್ಯಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ