ಬೇಸಿಗೆ ಕಾಲದಲ್ಲಿ ಮಹಿಳೆಯರಿಗೆ ಕೂಲ್ ಕಲರ್ಸ್ ಜೊತೆಗೆ ಕೂಲ್ ಫ್ಯಾಬ್ರಿಕ್ ಬಹಳ ಇಷ್ಟವಾಗುತ್ತದೆ. ಅವರಿಗೆ ಈ ಸೀಸನ್ ತಮ್ಮನ್ನು ತಾವು ಸೂಪರ್ ಸೆಕ್ಸಿಯಾಗಿ ತೋರಿಸಿಕೊಳ್ಳಬೇಕಿರುತ್ತದೆ. ಇಂತಹ ಸ್ಥಿತಿಯಲ್ಲಿ ನಿಮ್ಮ ಔಟರ್ ಔಟ್ ಫಿಟ್ಸ್ ಜೊತೆಗೆ ನಿಮ್ಮ ಇನ್ನರ್ ವೇರ್ ಕೂಡ ಅಷ್ಟೇ ಸೆಕ್ಸಿ ಆಗಿರಬೇಕೆಂದು ಅನಿಸುತ್ತಲ್ಲವೇ? ನೀವು ಯಾವುದಾದರೂ ಹಾಟ್ ಡ್ರೆಸ್ ಧರಿಸಿದ್ದರೆ ನಿಮ್ಮ ಸೂಪರ್ ಸೆಕ್ಸಿ ಲುಕ್ಸ್ ಗೆ ಒಳ ಉಡುಪುಗಳು ಕೂಡ ಅಷ್ಟೇ ಕಾರಣವಾಗುತ್ತವೆ.
ಆದರೆ ಬೇಸಿಗೆ ಕಾಲದಲ್ಲಿ ಸ್ಟೈಲ್ ನ ಜೊತೆಗೆ ಕಂಫರ್ಟ್ ಬಗ್ಗೆಯೂ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ನಿಮ್ಮ ಈ ಫ್ಯಾಷನ್ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಿಮ್ಮ ಒಳಉಡುಪುಗಳು ಹೇಗಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ಕಾಟನ್ ಫ್ಯಾಬ್ರಿಕ್ ಉತ್ತಮ
ನಿಮಗೆ ಮಾರುಕಟ್ಟೆಯಲ್ಲಿ ವಿವಿಧ ಡಿಸೈನ್ ಹಾಗೂ ಬಗೆ ಬಗೆಯ ಫ್ಯಾಬ್ರಿಕ್ಸ್ ನ ಒಳ ಉಡುಪುಗಳು ಲಭಿಸುತ್ತವೆ. ಅವನ್ನು ನೋಡಿ ನೀವು ಅದರ ಬಗ್ಗೆ ಆಕರ್ಷಿತರಾಗಬಹುದು. ಆದರೆ ನೀವು ಆಯ್ಕೆ ಮಾಡುವ ಒಳಉಡುಪಿನ ಫ್ಯಾಬ್ರಿಕ್ ಕಾಟನ್ ದ್ದೇ ಆಗಿರುವಂತೆ ನೋಡಿಕೊಳ್ಳಿ. ಏಕೆಂದರೆ ಈ ಫ್ಯಾಬ್ರಿಕ್ ನ ವಿಶೇಷತೆ ಎಂದರೆ, ಇದರಲ್ಲಿ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವಿರುತ್ತದೆ.
ಅದರಿಂದ ಕಂಫರ್ಟ್ ನ ಜೊತೆ ಜೊತೆಗೆ ಇಡೀ ದಿನ ಕೂಲ್ ಕೂಲ್ ನ ಅನುಭವ ಪಡೆದುಕೊಳ್ಳುವಿರಿ. ಇದರಲ್ಲಿರುವ ತಂಪಾದ ಅನುಭವ ನೀಡುವ ಪ್ರಾಪರ್ಟಿ ನಿಮ್ಮ ದೇಹಕ್ಕೆ ಯಾವುದೇ ತೆರನಾದ ಅಲರ್ಜಿ ಉಂಟು ಮಾಡದು. ಹಾಗಾಗಿ ಕಾಟನ್ ಒಳ ಉಡುಪುಗಳಿಂದ ನಿಮ್ಮನ್ನು ಸೂಪರ್ ಕೂಲ್ ಆಗಿಟ್ಟುಕೊಳ್ಳಿ.
ಸೈಜ್ ನ ಬಗ್ಗೆ ವಿಶೇಷ ಗಮನ
ಯಾವ ರೀತಿ ಬೇರೆ ಬೇರೆ ವ್ಯಕ್ತಿಗಳ ದೈಹಿಕ ಸ್ಥಿತಿ ಬೇರೆ ಬೇರೆ ಇರುತ್ತದೋ, ಒಳ ಉಡುಪುಗಳ ಗಾತ್ರ ಕೂಡ ಬೇರೆ ಬೇರೆ ಸೈಜ್ ಫಿಟ್ ಎನಿಸುತ್ತವೆ. ಹೀಗಾಗಿ ನಿಮ್ಮ ಕಪ್ಸ್ ಸೈಜ್ ಹಾಗೂ ಪ್ಯಾಂಟಿ ಸೈಜ್ ನ ಪ್ರಕಾರ ಒಳ ಉಡುಪುಗಳನ್ನು ಆಯ್ಕೆ ಮಾಡಿ ಶೇ.70ರಷ್ಟು ಮಹಿಳೆಯರು ತಪ್ಪು ಸೈಜ್ ನ ಬ್ರಾ ಆಯ್ಕೆ ಮಾಡುತ್ತಾರೆ.
ಹೆಚ್ಚು ಫಿಟ್ ಆಗಿರುವ ಬ್ರಾ ಧರಿಸುವುದರಿಂದ ತ್ವಚೆಯ ಮೇಲೆ ಕೆಂಪು ಗುರುತು ಕಂಡುಬರುವುದರ ಜೊತೆಗೆ ಅಲರ್ಜಿ ಕೂಡ ಆಗುತ್ತದೆ. ಇದರಿಂದ ರಕ್ತ ಪರಿಚಲನೆಯ ಮೇಲೆ ಪ್ರಭಾವ ಬೀರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ರೀತಿ ಸಡಿಲವಾದ ಬ್ರಾಗಳನ್ನು ಧರಿಸುವುದರಿಂದ ಕಪ್ಸ್ ಗಳಿಗೆ ಸರಿಯಾದ ಆಕಾರ ದೊರೆಯುವುದಿಲ್ಲ. ಅದರಿಂದ ಕ್ರಮೇಣ ಬ್ರೆಸ್ಟ್ ಜೋತು ಬೀಳುತ್ತವೆ. ಅದು ನಿಮ್ಮ ಫಿಗರ್ ನ್ನು ಹದಗೆಡಿಸುವ ಕೆಲಸ ಮಾಡುತ್ತದೆ. ಹಾಗಾಗಿ ಒಳಉಡುಪನ್ನು ಖರೀದಿಸುವಾಗ ಸರಿಯಾದ ಸೈಜ್ ನ ಬಗ್ಗೆ ಗಮನಹರಿಸಿ.
ನ್ಯೂಡ್ ಶೇಡ್ ನ ಆಯ್ಕೆ
ನೀವು ಬೇಸಿಗೆಯಲ್ಲಿ ನ್ಯೂಡ್ ಶೇಡ್ ಬ್ರಾದ ಆಯ್ಕೆ ಮಾಡಿದಲ್ಲಿ ನಿಮಗೆ ಸಾಕಷ್ಟು ಕಂಫರ್ಟ್ ಫೀಲ್ ಆಗುತ್ತದೆ. ಏಕೆಂದರೆ ಈ ಬಣ್ಣಗಳು, ಕೂಲ್ ಎಫೆಕ್ಟ್ ನೀಡುವುದರಿಂದ ನಿಮ್ಮನ್ನು ಟ್ಯಾನಿಂಗ್ ನಿಂದ ದೂರ ಇಡುತ್ತವೆ. ನೀವು ಹೆಚ್ಚು ಡಾರ್ಕ್ ಕಲರ್ ಇರುವುದನ್ನು ಆಯ್ಕೆ ಮಾಡಿದರೆ ನಿಮಗೆ ಹೆಚ್ಚು ಬಿಸಿ ಉಂಟಾಗುವುದರ ಜೊತೆಗೆ ಸ್ಕಿನ್ ಟ್ಯಾನ್ ಆಗುವ ಸಾಧ್ಯತೆ ಕೂಡ ಇರುತ್ತದೆ. ನಿಮ್ಮ ಬ್ಲ್ಯಾಕ್ ಬ್ರಾ ಮತ್ತು ಪ್ಯಾಂಟಿ ಹೆಚ್ಚು ಸೆಕ್ಸಿಯಾಗಿ ಕಂಡುಬರಬಹುದು. ಆದರೆ ಕೂಲ್ ಕೂಲ್ ಫೀಲ್ ಕೊಡಲು ಈ ಬೇಸಿಗೆಗೆ ನ್ಯೂಡ್ ಶೇಡ್ ನ ಆಯ್ಕೆ ಮಾಡಿ.