ಗಮಕವು ಕರ್ನಾಟಕದ ವಿಶಿಷ್ಟವಾದ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿದ್ದು, ಕನ್ನಡದ ಪುರಾತನ ಕಾವ್ಯಗಳು, ಮಹಾಕಾವ್ಯಗಳು ಮತ್ತು ಸಾಹಿತ್ಯ ಕೃತಿಗಳನ್ನು ರಾಗಬದ್ಧವಾಗಿ, ಭಾವಪೂರ್ಣವಾಗಿ ಹಾಡಿ ಓದುವ ಕಲೆಯಾಗಿದೆ. ಇದರಲ್ಲಿ ಗಮಕಿಯು ಕಾವ್ಯದ ಸಾಲುಗಳನ್ನು ನಿರ್ದಿಷ್ಟ ರಾಗ ಮತ್ತು ಲಯದಲ್ಲಿ ಪ್ರಸ್ತುತಪಡಿಸಿದರೆ, ವ್ಯಾಖ್ಯಾನಕಾರರು ಅದರ ಅರ್ಥ, ಒಳಭಾವ, ಹಿನ್ನೆಲೆ ಹಾಗೂ ಸಾಹಿತ್ಯಿಕ ಸೌಂದರ್ಯವನ್ನು ಸರಳವಾಗಿ ವಿವರಿಸುತ್ತಾರೆ.
ಕುಮಾರವ್ಯಾಸ ಭಾರತದಂತಹ ಮಹಾಕಾವ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗಮಕ ಕಲೆ ಮಹತ್ವದ ಪಾತ್ರ ವಹಿಸಿದೆ. ಸಂಗೀತದ ಮಾಧುರ್ಯ, ಕಾವ್ಯದ ಸೌಂದರ್ಯ ಮತ್ತು ಅರ್ಥವಿವರಣೆಯ ಮೂಲಕ ಸಾಹಿತ್ಯವನ್ನು ಆಸಕ್ತಿದಾಯಕವಾಗಿ ಪರಿಚಯಿಸುವುದು ಈ ಕಲೆಯ ವಿಶೇಷತೆ. ಇದು ಕೇವಲ ಮನರಂಜನೆಯ ಕಲೆಯಾಗಿರದೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಮೂಲ್ಯ ಕಲಾಪ್ರಕಾರವೇ ಗಮಕ. ಕನ್ನಡ ನಾಡಿನಲ್ಲಿ ಗಮಕ ಕಲೆಯನ್ನು ಮನೆಮನೆಗೂ ತಲುಪಿಸಿದ ಅಪರೂಪದ ಕಲಾವಿದೆಯರಲ್ಲಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರ ಹೆಸರು ಚಿರಸ್ಥಾಯಿಯಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಸಂಗೀತವೇ ಉಸಿರಾಗಿದ್ದ ಮನೆತನ

ಗಂಗಮ್ಮ ಕೇಶವಮೂರ್ತಿ ಅವರು 1940ರ ಏಪ್ರಿಲ್ 12ರಂದು ಹಾ
ತಂದೆಯೇ ಮೊದಲ ಗುರು

ಗಂಗಮ್ಮನವರು ಸಂಗೀತವನ್ನು ತಮ್ಮ ತಂದೆಯವರಲ್ಲೇ ಅಭ್ಯಾಸ ಮಾಡಿ ಸೀನಿಯರ್ ಗ್ರೇಡ್ ಸಂಗೀತ ಪರೀ
ಆದರೆ ಆ ಕಾಲದಲ್ಲಿ ಗಮಕ ಕಲಿಸಲು ನಿರ್ದಿಷ್ಟ ಗುರುಗಳನ್ನು ಹುಡುಕುವುದು ಸುಲಭದ ಕೆಲಸವಾಗಿರಲಿಲ್ಲ. ಯಾರು ಚೆನ್ನಾಗಿ ಹಾಡುತ್ತಾರೆ ಎಂದು ತಿಳಿಯುತ್ತಿತ್ತೋ ಅವರನ್ನೇ ಹುಡುಕಿಕೊಂಡು ಹೋಗಿ ಕಲಿಯುತ್ತಿದ್ದರು.
ಮಹಾನ್ ಗುರುಗಳ ಸಾನ್ನಿಧ್ಯ
ಗಂಗಮ್ಮ ಕೇಶವಮೂರ್ತಿ ಅವರು ಕನ್ನಡದ ಪ್ರಸಿದ್ಧ ಗಮಕಿಗಳಾದ
- ಎಂ. ರಾಘವೇಂದ್ರರಾವ್
- ನಂ. ಅಶ್ವತ್ಥನಾರಾಯಣ
- ಬಿ.ಎಸ್.ಎಸ್. ಕೌಶಿಕ್
- ಸತ್ಯವತಿ ಕೇಶವಮೂರ್ತಿ
ಅವರ ಬಳಿ ಗಮಕ ಕಲಿತರು. ಹರಿಹರದ ಪೇಟೆ ರಾಮಚಂದ್ರಾಚಾರ್ ಅವರಿಂ
ನಿಮ್ಮ ಧ್ವನಿ ಗಮಕಕ್ಕೆ ಹುಟ್ಟಿದ್ದು
ಶಾಸ್ತ್ರೀಯ ಸಂಗೀತ ಅಭ್ಯಾಸದ ಸಮಯದಲ್ಲಿ ಅನೇಕ ಹಿರಿಯರು ಒಂದು ಮಾತು ಹೇಳುತ್ತಿದ್ದರು. ನಿಮ್ಮ ಧ್ವನಿ ಗಮಕ





