ಸದಾ ಸಮಾಜಮುಖಿ ಯೋಚನೆಗಳ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಮಾಜಕ್ಕೆ ತಮ್ಮಿಂದಾದ ಅಳಿಲು ಸೇವೆ ಸಲ್ಲಿಸುತ್ತಿರುವ ಶಶಿಕಲಾ ನಟರಾಜನ್‌ ಅವರ ಸಾಧನೆಗಳ ಬಗ್ಗೆ ತಿಳಿಯೋಣವೇ…..?

ಬೆಂಗಳೂರಿನ ಶಶಿಕಲಾ ನಟರಾಜನ್‌ ಮೂಲತಃ ರಾಯಚೂರಿನವರಾಗಿದ್ದರೂ, ರಾಜಧಾನಿಯನ್ನೇ ತಮ್ಮ ಕರ್ಮಭೂಮಿ ಆಗಿಸಿಕೊಂಡವರು. ತಂದೆ ಡೇವಿಡ್‌, ತಾಯಿ ಕಾಂತಮ್ಮರ ಮಾರ್ಗದರ್ಶನದಲ್ಲಿ  ಚಿಕ್ಕಂದಿನಿಂದಲೇ ಶಿಸ್ತಿನಿಂದ ಬೆಳೆದವರು.

ವಿದ್ಯಾಭ್ಯಾಸ

ಶಾಲಾ ವಿದ್ಯಾಭ್ಯಾಸದ ಬಳಿಕ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಕೇವಲ ಒಂದು ರೂಪಾಯಿ ಖರ್ಚಿನಲ್ಲೇ ತಮ್ಮ ಪದವಿ ಮುಗಿಸಿದರು. ಆ ಬಳಿಕ ಆರ್‌.ವಿ. ಕಾಲೇಜಿನಲ್ಲಿ ಬಿ.ಎಡ್‌ ಶಿಕ್ಷಣ ಪಡೆಯುವ ಅದೃಷ್ಟ ಅವರದ್ದಾಗಿತ್ತು. ನಂತರ ಅವರ ವೃತ್ತಿ ಜೀವನ ವಿಜಯಾ ಕಾಲೇಜಿನಲ್ಲಿ ಶಿಕ್ಷಕಿಯಾಗುವ ಮೂಲಕ ಆರಂಭವಾಯಿತು. ಆದರ್ಶ ಶಿಕ್ಷಕಿ ಸುಮಾರು 28 ವರ್ಷಗಳ ಕಾಲ ಮಕ್ಕಳಿಗೆ ವಿದ್ಯೆ ಹೇಳಿಕೊಡುವುದರ ಜೊತೆಗೆ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲೂ ಮಾರ್ಗದರ್ಶನ ನೀಡಿ ದಾರಿದೀಪವಾದರು. ಸ್ಲಂ ಸ್ಕೂಲ್ ‌ನಲ್ಲಿ ಪ್ರಿನ್ಸಿಪಾಲ್ ‌ಆಗಿ ದುಡಿದ ಹೆಗ್ಗಳಿಕೆಗೆ ಶಶಿಕಲಾ ನಟರಾಜನ್‌ ಪಾತ್ರರಾಗಿದ್ದಾರೆ.

ಮಕ್ಕಳಿಗೆ ವಿವಿಧ ತರಬೇತಿ

ಅಲ್ಲಿನ ಮಕ್ಕಳಿಗೆ ಟೈಲರಿಂಗ್‌, ಕ್ಯಾಂಡಲ್ ಮೇಕಿಂಗ್‌ ಸೇರಿದಂತೆ ಇನ್ನೂ ಅನೇಕ ಸ್ಕಿಲ್ಕ್ ‌ಬೇಸ್ಡ್ ಟೆಕ್ನಿಕ್ಸ್ ಕಲಿಸುತ್ತಾ, ಹಲವಾರು ವರ್ಷಗಳಿಂದ ಸಮಾಜಸೇವೆಯನ್ನೇ ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿರುವ ಇವರು, ತಮ್ಮ ಊರಿನಲ್ಲೂ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿ ಹಲವರಿಗೆ ಜೀವನೋಪಾಯಕ್ಕಾಗಿ ವಿವಿಧ ತರಬೇತಿ ನೀಡಿದ್ದಾರೆ.

1000312194

ವೃದ್ಧಾಶ್ರಮಗಳಿಗೆ ಭೇಟಿ

ಹಲವಾರು ವೃದ್ಧಾಶ್ರಮಗಳಿಗೂ ಭೇಟಿ ಕೊಟ್ಟು ಅಲ್ಲಿರುವವರನ್ನು ಸಂತೈಸಿದ ಹಿರಿಮೆ ಶಶಿಕಲಾ ಅವರದ್ದಾಗಿದೆ. ಹಾಗೆಯೇ ಅಗತ್ಯವಿರುವವರಿಗೆ ಕೌನ್ಸೆಲಿಂಗ್‌ ನೀಡಿ ಅಂಥವರ ಬಾಳಿಗೂ ಬೆಳಕಾಗಿದ್ದಾರೆ. ಅಂಧರ ಶಾಲೆಗೂ ಭೇಟಿ ನೀಡಿ ಅಂಥವರ ಬದುಕಿನಲ್ಲಿ ಉತ್ಸಾಹ ತುಂಬಿದ ಹೆಗ್ಗಳಿಕೆ ಇವರದ್ದಾಗಿದೆ.

ಯುವತಿಯರಿಗೆ ತಿಳಿವಳಿಕೆ

ಈಗಿನ ಕಾಲದ ಮಕ್ಕಳಿಗೆ ಜೀವನದ ಗುರಿಯನ್ನು ತಿಳಿಸಿಕೊಡಬೇಕು, ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ಸ್ತನ ಕ್ಯಾನ್ಸರ್‌ ಬಗ್ಗೆ ತಿಳಿವಳಿಕೆ ನೀಡಬೇಕು, ಹಿರಿಯ ನಾಗರಿಕರಿಗೆ ಸಮಾಜದಲ್ಲಿ ಮನ್ನಣೆ ದೊರೆಯುವ ಕಾರ್ಯ ಮಾಡಬೇಕು ಮುಂತಾದ ಗುರಿ ಸಾಧನೆ ಶಶಿಕಲಾ ನಟರಾಜನ್‌ ಅವರದ್ದಾಗಿದೆ.

ಇದುವರೆಗೂ ಛಲದಿಂದ ಕಾರ್ಯೋನ್ಮುಖರಾಗಿರುವುದರಿಂದ ಇನ್ನೂ ಕೂಡ ಸದಾ ಸಮಾಜಕ್ಕೆ ಸ್ಪಂದಿಸಿ ತನ್ನಿಂದಾಗುವ ನೆರವು ನೀಡಬೇಕೆಂಬ ಮಹದಾಸೆ ಶಶಿಕಲಾ ಅವರ ಯೋಜನೆಯಾಗಿದೆ.

– ಮಂಜುಳಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ