ಹೂವಿನ ಅಂದಚೆಂದ, ಸುವಾಸನೆ, ಪರಿಮಳ ಪ್ರತಿಯೊಬ್ಬರನ್ನೂ ಸದಾ ತಾಜಾ ಆಗಿರುವಂತೆ ಮಾಡುತ್ತದೆ. ನಾವು ಅದನ್ನು ಸ್ಪರ್ಶಿಸಿದಾಗ, ಅದರ ಸುವಾಸನೆ ಗ್ರಹಿಸಿದಾಗ, ನಮಗೆ ಅತ್ಯುತ್ತಮ ಅನುಭವ ಆಗುತ್ತದೆ, ಅದರ ಸ್ಪರ್ಶ ಇನ್ನಷ್ಟು ಬೇಕು ಎನಿಸುತ್ತದೆ. ಹಾಗಾದರೆ ಒಂದಿಷ್ಟು ಯೋಚಿಸಿ ನೋಡಿ, ಈ ಹೂವಿನ ಇಂಥ ಕೋಮಲ, ಅಮೂಲ್ಯ ಗುಣಗಳನ್ನು ನಾವು ನಮ್ಮ ದೈನಂದಿನ ಸ್ಕಿನ್‌ ಕೇರ್‌ ರೊಟೀನ್‌ ನಲ್ಲಿ ಬೆರೆಸಿಕೊಂಡರೆ, ನಿಮ್ಮ ಚರ್ಮ ಹೂವಿನಂತೆ ನಳನಳಿಸ ತೊಡಗುತ್ತದೆ. ಈ ರೀತಿ ಅರಳಿ ನಗುವ ಮೊಗ ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸುವುದಲ್ಲದೆ, ನಿಮ್ಮ ಆಂತರಿಕ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಹಾಗಾದರೆ, ಯಾವ ಪ್ರಾಡಕ್ಟ್ಸ್ ನಲ್ಲಿ ಹೂವಿನ ಈ ಉತ್ತಮ ಅಂಶಗಳು ಅಡಗಿವೆ ಎಂದು ತಿಳಿಯೋಣವೇ ? :

ಚರ್ಮಕ್ಕೆ ಸಿಗಲಿದೆ ಮ್ಯಾಜಿಕ್

ಚರ್ಮದ ಮೃದುತ್ವದ ವಿಷಯ ಬಂದಾಗ ಗುಲಾಬಿ ದಳಗಳ ಬಗ್ಗೆ ಹೇಳದಿದ್ದರೆ ಹೇಗೆ? ದಳಗಳೊಂದಿಗೆ ಇದರ ಆಯಿಲ್ ಸಹ ನಮ್ಮ ಚರ್ಮಕ್ಕೆ ಅಷ್ಟೇ ನಯ, ನಾಜೂಕು ಒದಗಿಸುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ಸ್, ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಅಡಗಿರುತ್ತದೆ. ಗುಲಾಬಿಯ ಆ್ಯಂಟಿ ಆಕ್ಸಿಡೆಂಟ್ಸ್ ನಮ್ಮ ಚರ್ಮದಲ್ಲಿನ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ, ಚರ್ಮಕ್ಕೆ ಹೆಚ್ಚು ಏಜ್‌ ಆಗದಂತೆ ತಡೆಯುತ್ತದೆ. ಜೊತೆಗೆ ಚರ್ಮದ ಕಾಂತಿ ಸದಾ ಉಳಿಯುವಂತೆ ಮಾಡುತ್ತದೆ.

ಇದು ಎಲ್ಲಾ ಬಗೆಯ (ಡ್ರೈ, ನಾರ್ಮಲ್, ಆಯ್ಲಿ) ಚರ್ಮಕ್ಕೂ ಅನ್ವಯಿಸುತ್ತದೆ. ಮುಖ್ಯವಾಗಿ ಡ್ರೈ ಸ್ಕಿನ್‌ ಗೆ ಹೀಲಿಂಗ್‌ ಹೈಡ್ರೇಟರ್‌ ನ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿನ ಮಾಯಿಶ್ಚರೈಸಿಂಗ್‌ ಅಂಶಗಳು, ಚರ್ಮದ ಮಾಯಿಶ್ಚರ್‌ ನ್ನು ಲಾಕ್‌ ಮಾಡಿ ಅದನ್ನು ಸದಾ ಹೈಡ್ರೇಟೆಡ್‌ ಆಗಿಡಲು ನೆರವಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಹೊರಗೆ ಹೋದಾಗ ಚರ್ಮಕ್ಕೆ ಉರಿ ಉರಿ ಎನಿಸುವುದಿಲ್ಲ. ಇದರಲ್ಲಿನ ಆ್ಯಸ್ಟ್ರಿಂಜೆಂಟ್‌ ಅಂಶಗಳಿದ್ದು ಅದು ಚರ್ಮದಲ್ಲಿನ ಆ್ಯಕ್ನೆ, ಮೊಡವೆ, ರೆಡ್‌ ನೆಸ್‌, ಉರಿಗಳಿಂದ ಸಹಜವಾಗಿ ರಕ್ಷಿಸುತ್ತದೆ. ಜೊತೆಗೆ ಗುಲಾಬಿ ಜಲ ಚರ್ಮದ ನ್ಯಾಚುರಲ್ ಲೆವೆಲ್ ‌ನ್ನು ಬ್ಯಾಲೆನ್ಸ್ಡ್ ಆಗಿರಿಸುತ್ತಾ, ಚರ್ಮದ ಮೇಲಾಗಬಹುದಾದ ಹೆಚ್ಚುವರಿ ತೈಲಾಂಶವನ್ನು ಹೀರಿಕೊಳ್ಳುತ್ತದೆ. ಹೀಗಾಗಿಯೇ ಗುಲಾಬಿ ನಮ್ಮ ಚರ್ಮಕ್ಕೆ ಮ್ಯಾಜಿಕ್ ಮಾಡುತ್ತದೆ ಅನ್ನೋದು!

ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಸ್‌ ಸೀರಂ, ರೋಸ್‌ ಟೋನರ್‌, ರೋಸ್‌ ಜೆಲ್‌, ರೋಸ್‌ ಪ್ಯಾಕ್‌, ರೋಸ್ ವಾಟರ್‌ಗಳನ್ನು ಬಳಸಿಕೊಳ್ಳಿ. ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಖರೀದಿಸುವಾಗ ಅದರಲ್ಲಿ ರೋಸ್‌ ಅಂಶ ಹೆಚ್ಚಾಗಿದೆ ತಾನೇ ಎಂದು ಖಚಿತಪಡಿಸಿಕೊಳ್ಳಿ.

ಸನ್ಫ್ಲವರ್ನಿಂದ ನ್ಯಾಚುರಲ್  ಗ್ಲೋ

ಇದರಲ್ಲಿ ಒಂದು ರಾಶಿ ಪೌಷ್ಟಿಕಾಂಶಗಳು ಅಡಗಿವೆ. ಹೀಗಾಗಿ ಇದನ್ನು ಬೇಸಿಗೆಯಲ್ಲಿ ಚರ್ಮಕ್ಕೆ ನೈಸರ್ಗಿಕವಾಗಿ ಕಾಂತಿ ಮತ್ತು ಕಲೆರಹಿತ ನುಣುಪುತನ ಒದಗಿಸಲು, ನ್ಯಾಚುರಲ್ ಸ್ಕಿನ್‌ ಕೇರ್‌ ಪ್ರಾಡಕ್ಟ್ ಆಗಿ ಬಳಸುತ್ತಾರೆ. ಇದು ಚರ್ಮ ಕಳೆದುಕೊಂಡ ಮಾಯಿಶ್ಚರ್‌ ನ್ನು ಪುನಃ ವಾಪಸ್‌ ಮರಳಿಸುತ್ತದೆ. ಆ ರೀತಿ ಚರ್ಮವನ್ನು ಹೈಡ್ರೇಟ್‌ಸ್ಮೂತ್‌ ಆಗಿರಿಸಲು ನೆರವಾಗುತ್ತದೆ. ಜೊತೆಗೆ ಇದರಲ್ಲಿ ಧಾರಾಳವಾಗಿ ವಿಟಮಿನ್‌, D, A, ಅಂಶಗಳು ಅಡಗಿದ್ದು, ಇದು ಚರ್ಮದಲ್ಲಿನ ಫ್ರೀ ರಾಡಿಕಲ್ಸ್ ವಿರುದ್ಧ ರಕ್ಷಣೆ ನೀಡುತ್ತದೆ, ಅದು ಏಜಿಂಗ್‌ ಕಾರಣ ಸಹಜ ಹೆಚ್ಚುತ್ತಿರುತ್ತದೆ.

ಇದು ನಿಮ್ಮ ಚರ್ಮಕ್ಕೆ ರಕ್ಷಣಾತ್ಮಕ ಪದರವಾಗಿ ಕೆಲಸ ನಿರ್ವಹಿಸುತ್ತದೆ. ಅದರಿಂದ ಚರ್ಮ ಧೂಳು ಮಣ್ಣು, ಕೊಳಕು, ಮಾಲಿನ್ಯಕಾರಕ ಘಟಕಗಳಿಂದ ಕಾಪಾಡಲ್ಪಡುವುದು. ಇದು ಚರ್ಮದಲ್ಲಿ ಆಂತರಿಕವಾಗಿ ಇಳಿದು, ಪೋರ್ಸ್‌ ನ್ನು  ಅತಿ ಸಣ್ಣದಾಗಿಸುವುದಲ್ಲದೆ, ಸ್ಕಿನ್ನಿನ ಟೆಕ್ಸ್ ಚರ್‌ಟೋನ್‌ ನ್ನು ಸಹ ಇಂಪ್ರೂವ್ ‌ಮಾಡುತ್ತದೆ. ಇದು ತನ್ನ ಸ್ಮೂತ್‌ ಗುಣಗಳಿಂದಾಗಿ ಎಲ್ಲಾ ಬಗೆಯ ಚರ್ಮಕ್ಕೂ ಉತ್ತಮ ಎನಿಸಿದೆ.

ಹೀಗಾಗಿ ನೀವು ಸನ್‌ ಫ್ಲವರ್‌ ನ್ನು ನಿಮ್ಮ ಸ್ಕಿನ್‌ ಕೇರ್‌ ರೊಟೀನಿನಲ್ಲಿ ಶಾಮೀಲುಗೊಳಿಸಲು ಬಯಸಿದರೆ, ಅದಕ್ಕಾಗಿ ನೀವು ಡೇಲಿ ಸನ್‌ ಫ್ಲವರ್‌ ಆಯಿಲ್‌, ಡೇ  ನೈಟ್‌ ಕ್ರೀಂ, ಸನ್‌ ಫ್ಲವರ್‌ ಹೈಡ್ರೇಟೆಡ್‌ ಲೋಶನ್‌. ಹೇರ್‌ ಕ್ರೀಂ ಇತ್ಯಾದಿ ಬಳಸಿಕೊಳ್ಳಿ. ಇದರ ಬೆಲೆ, ಅದು ಯಾವ ಬ್ರ್ಯಾಂಡ್‌ಮತ್ತು ಪರಿಮಾಣದ ಆಧಾರದಿಂದ ನಿರ್ಧರಿಸಲ್ಪಡುತ್ತದೆ. ಪ್ರತಿ ಸಲ ಬಳಸುವಾಗಲೂ ಇದರ ತುಸು ಪ್ರಮಾಣವನ್ನಷ್ಟೇ ಅಂಗೈ ಮೇಲೆ ಹಾಕಿಕೊಳ್ಳಬೇಕು, ಇದರಿಂದ ಅದ್ಭುತ ಫಲಿತಾಂಶ ದೊರಕುತ್ತದೆ.

ಚಿರಯೌವನಕ್ಕಾಗಿ ಚೆಂಡುಹೂ

ಇದರಲ್ಲಿ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್‌ ಫ್ಲಮೆಟರಿ ಗುಣಗಳಿದ್ದು, ಇದು ಆ್ಯಕ್ನೆ, ಸ್ಕಿನ್‌ ಇರಿಟೇಶನ್‌, ಫಂಗಲ್ ಇನ್‌ ಫೆಕ್ಷನ್‌ ನಿಂದ ತಕ್ಷಣ ಆರಾಮ ನೀಡುತ್ತದೆ. ಮುಖ್ಯವಾಗಿ ವಯಸ್ಸಾಗದಂತೆ ತಡೆದು ಚರ್ಮಕ್ಕೆ ಚಿರಯೌವನ ಉಳಿಸಿಕೊಡಲು ಅದರಲ್ಲಿನ ಫ್ರೀ ರಾಡಿಕಲ್ಸ್ ವಿರುದ್ಧ ಸತತ ಹೋರಾಡುತ್ತದೆ. ಹೀಗಾಗಿ ಅನೇಕ ದಶಕಗಳಿಂದ ಇದನ್ನು ಸ್ಕಿನ್ ಕೇರ್‌ ಗಾಗಿ ಬಳಸಲಾಗುತ್ತಿದೆ.

ನೀವು ಸ್ನಾನಕ್ಕೆ ಮುನ್ನ, ಉಗುರು ಬೆಚ್ಚಗಿನ ಬಕೆಟ್‌ ನೀರಿಗೆ ಇದರ ತಾಜಾ ಹೂಗಳ ದಳಗಳನ್ನು ಬಿಡಿಸಿ ಹಾಕಿ, 15 ನಿಮಿಷ ನೆನೆಯಲು ಬಿಟ್ಟು, ನಂತರ ನೀರಿನಿಂದ ಸ್ನಾನ ಮಾಡಿದರೆ, ಅದು ನಿಮ್ಮ ಚರ್ಮಕ್ಕೆ ಬೆಸ್ಟ್ ಟೋನರ್‌ ನ ಕೆಲಸ ಮಾಡುತ್ತದೆ. ನೀವು ನಿಮ್ಮ ಚರ್ಮದ ಸುಕ್ಕು, ನಿರಿಗೆ ಸರಿಪಡಿಸಿಕೊಳ್ಳಬೇಕೇ? ಹಾಗಾದರೆ ನೀವು ಅಗತ್ಯವಾಗಿ ಚೆಂಡು (ಮೇರಿಗೋಲ್ಡ್) ಹೂವಿನ ಸ್ಕಿನ್‌ ಕೇರ್‌ ಪ್ರಾಡಕ್ಟ್ಸ್ ಬಳಸಬೇಕು.

ಇದಕ್ಕಾಗಿ ನೀವು ಮೇರಿಗೋಲ್ಡ್ ನ ಫೇಸ್‌ ಕ್ರೀಂ, ಬಟರ್‌ ಬಾಡಿ ಲೋಶನ್‌, ಆ್ಯಂಟಿ ಸೆಪ್ಟಿಕ್‌ ಕ್ರೀಂ ಇತ್ಯಾದಿ ಬಳಸಬೇಕು. ಇದು ನಿಮ್ಮ ಚರ್ಮವನ್ನು ಸಾಫ್ಟ್  ಹೈಡ್ರೇಟೆಡ್‌ ಆಗಿಡುತ್ತದೆ. ಇದು ನಿಮಗೆ ಎಲ್ಲಾ ಮೆಡಿಕಲ್ ಸ್ಟೋರ್‌ ಗಳಲ್ಲೂ ಸುಲಭ ಲಭ್ಯ, ಆನ್ ಲೈನ್‌ ನಲ್ಲೂ ತರಿಸಿಕೊಳ್ಳಬಹುದು.

ಲೋಟಸ್ನ್ಯಾಚುರಲ್ ಮಾಯಿಶ್ಚರೈಸರ್

ಬ್ಲೂ ಲೋಟಸ್‌ ಫ್ಲವರ್‌ ಎಕ್ಸ್ ಟ್ರಾಕ್ಟ್, ನ್ಯಾಚುರಲ್ ಮಾಯಿಶ್ಚರೈಸರ್‌ ನ ಕೆಲಸ ನಿರ್ವಹಿಸುತ್ತದೆ. ಇದರಿಂದ ಡ್ರೈ, ರಫ್‌, ಒಡೆದ ಚರ್ಮ ಗುಣ ಕಾಣುತ್ತವೆ. ಜೊತೆಗೆ ಇದು ಚರ್ಮದ ತೈಲಾಂಶವನ್ನು ಬ್ಯಾಲೆನ್ಸ್ ಮಾಡುತ್ತಾ, ಆ್ಯಕ್ನೆ ಆಗದಂತೆ ತಡೆಯಬಲ್ಲದು.

ಇದರಲ್ಲಿ ಹೇರಳ ಆ್ಯಂಟಿ ಆಕ್ಸಿಡೆಂಟ್ಸ್, ಪಾಲಿಫಿನಾಲ್‌, ವಿಟಮಿನ್ಸ್ ಅಡಗಿದ್ದು, ಇದು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತಾ ಏಜಿಂಗ್‌ ಡ್ಯಾಮೇಜ್‌ ಆಗದಂತೆ ತಡೆಯಬಲ್ಲದು.

`ಕೊರಿಯನ್‌ ಜರ್ನಲ್ ಆಫ್‌ ಕೆಮಿಕಲ್ ಎಂಜಿನಿಯರಿಂಗ್‌’ ಪುಸ್ತಕದಲ್ಲಿ ಪ್ರಕಟಿಸಲಾದಂತೆ, ತಾವರೆ ಹೂ, ಎಲೆ, ದಂಟಿನಲ್ಲಿನ ಅಂಶ ಚರ್ಮದ ಎಲಾಸ್ಟಿಸಿಟಿಯನ್ನು ಇಂಪ್ರೂವ್ ‌ಮಾಡುವ ಸಾಮರ್ಥ್ಯ ಹೊಂದಿದ್ದು, ಸದಾ ಸ್ಕಿನ್‌ ಹೆಲ್ದಿ ಆಗಿರುವಂತೆ, ಸುಕ್ಕು ನೆರಿಗೆ ಕೂಡದಂತೆ ಕಾಪಾಡಬಲ್ಲದು. ಇದರಿಂದ ಚರ್ಮ ಸದಾ ನಳನಳಿಸುತ್ತಿರುತ್ತದೆ.

ಇದರ ಮತ್ತೊಂದು ವೈಶಿಷ್ಟ್ಯ ಎಂದರೆ ಇದು ಚರ್ಮದ ನ್ಯಾಚುರಲ್ ಮಾಯಿಶ್ಚರೈಸರ್‌ ಗೆ ಒಂದಿಷ್ಟೂ ಕೊರತೆ ಆಗದಂತೆ, ಸೀಬಂ ಪ್ರೊಡಕ್ಷನ್‌ ಕಂಟ್ರೋಲ್ ಮಾಡುವ ಕೆಲಸವನ್ನೂ ಮಾಡುತ್ತದೆ. ಇದರಿಂದ ಪೋರ್ಸ್‌ ಅತಿ ಸಣ್ಣ ಆಗುವುದರೊಂದಿಗೆ, ಮೊಡವೆಯ ಸಮಸ್ಯೆಯೂ ದೂರವಾಗುತ್ತದೆ. ಇದಕ್ಕಾಗಿ ನೀವು ಲೋಟಸ್‌ ನ ಟೋನರ್‌, ಸನ್‌ ಸ್ಕ್ರೀನ್‌, ಫೇಸ್‌ ವಾಶ್‌, ಕ್ರೀಂ, ಬ್ರೈಟನಿಂಗ್‌ ಜೆಲ್ ‌ಕ್ರೀಂ, SPF ಯುಕ್ತ ಬಾಡಿ ಲೋಶನ್‌, ಮಾಯಿಶ್ಚರೈಸರ್‌ ಅಪ್ಲೈ ಮಾಡಬೇಕು. ಇದು ದುಬಾರಿಯಲ್ಲ, ಜೊತೆಗೆ ಡರ್ಮಟಾಲಜಿಸ್ಟ್ ಟೆಸ್ಟೆಡ್‌ ಸಹ.

ದಾಸವಾಳದಿಂದ ಯಂಗ್ಬ್ಯೂಟಿ

ನೀವು ದೈನಂದಿನ ಕಾಸ್ಮೆಟಿಕ್ಸ್ ನಲ್ಲಿ ದಾಸವಾಳದ ಉತ್ಪನ್ನ ಬಳಸಿದ್ದೇ ಆದರೆ, ನಿಮಗೆ ಅತಿ ಕಡಿಮೆ ಅವಧಿಯಲ್ಲೇ ಯಂಗ್‌ ಬ್ಯೂಟಿ ಸಿಗುತ್ತದೆ. ಇದು ಅಲ್ಫಾಹೈಡ್ರಾಕ್ಸಿ ಆ್ಯಸಿಡ್‌ ನ ಅತ್ಯುತ್ತಮ ಮೂಲ. ಹಾಗಾಗಿ ಚರ್ಮವನ್ನು ಎಕ್ಸ್ ಫಾಲಿಯೇಟ್‌ ಮಾಡಿ ಬ್ರೈಟ್‌ ಲುಕ್ಸ್ ಒದಗಿಸುವಲ್ಲಿ ಪೂರಕ. ಇದು ಹೆಲ್ದಿ ಸ್ಕಿನ್‌ ಸೆಲ್ಸ್ ನ್ನು ಪ್ರಮೋಟ್‌ ಮಾಡುವ ಜೊತೆಯಲ್ಲೇ ಹೈಪರ್‌ ಪಿಗ್ಮೆಂಟೇಶನ್ ನ್ನೂ ಕಡಿಮೆ ಮಾಡುತ್ತದೆ. ಇದರಿಂದ ಚರ್ಮದ ಟೋನ್‌ ಇಂಪ್ರೂವ್ ‌ಆಗುವುದರ ಜೊತೆ ಜೊತೆಯಲ್ಲೇ ಚರ್ಮ ಹೆಚ್ಚಿನ ಕಾಂತಿ ಗಳಿಸುತ್ತದೆ. ಇದು ಚರ್ಮದ ಮೇಲಾಗುವ ಸಣ್ಣಪುಟ್ಟ ಗಾಯದ ಕಲೆ ಗುರುತುಗಳನ್ನೂ  ದೂರ ಮಾಡಬಲ್ಲದು.

ನೀವು ಯಂಗ್‌ ಬ್ಯೂಟಿ ಜೊತೆ ಸ್ಕಿನ್‌ ಪ್ರಾಬ್ಲಂನ್‌ ನಿಂದ ಮುಕ್ತಿ ಬಯಸಿದರೆ, ನೀವು ಇದರ ಫೇಸ್‌ ಪೌಡರ್‌, ಕ್ರೀಂ, ಟೋನರ್ ಗಳನ್ನು ದಿನಾ ಬಳಸಿಕೊಳ್ಳಿ. ಇದನ್ನು ನೀವು ದಾಸವಾಳದ ಹೂ ಬಳಸಿ ಮನೆಯಲ್ಲೇ ತಯಾರಿಸಬಹುದು ಅಥವಾ ಹೊರಗಿನಿಂದ ತರಿಸಬಹುದು. ಇದನ್ನು ಹೈಬಿಸ್ಕಸ್‌ ಟೀ ಆಗಿಯೂ ನೀವು ಸವಿಯಬಹುದು. ಇದರ ಹೂವು ಅಡುಗೆಗೂ ಬಲು ಪ್ರಯೋಜನಕಾರಿ (ಉದಾ. ದೋಸೆ).

ಆಹಾ ಮೈಸೂರು ಮಲ್ಲಿಗೆ

ಮಲ್ಲಿಗೆ ಹೂ ನಮ್ಮ ಚರ್ಮದ ಎಲಾಸ್ಟಿಸಿಟಿ ಇಂಪ್ರೂವ್ ‌ಮಾಡುವ ಸಾಮರ್ಥ್ಯದೊಂದಿಗೆ, ಚರ್ಮದ ಮಾಯಿಶ್ಚರ್‌ ನ್ನು ಕಾಪಾಡುವ ಶಕ್ತಿಯನ್ನೂ ಹೊಂದಿದೆ. ಇದರಿಂದ ನಿಧಾನವಾಗಿ ಸ್ಕಿನ್‌ ಡ್ರೈನೆಸ್‌ ದೂರವಾಗುತ್ತದೆ. ಇದರ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಚರ್ಮಕ್ಕಾದ ಗಾಯಗಳನ್ನು ದೂರ ಮಾಡಿ, ಚರ್ಮದ ಇಮ್ಯೂನಿಟಿ ಬೂಸ್ಟ್ ಮಾಡುವಲ್ಲಿಯೂ ಪೂರಕ. ಮಲ್ಲಿಗೆ ಡಾರ್ಕ್‌ ಸ್ಪಾಟ್ಸ್ ನ್ನು ಕಡಿಮೆಗೊಳಿಸಿ, ಚರ್ಮಕ್ಕೆ ಈವೆನ್‌ ಟೋನ್‌ ನೀಡುವಲ್ಲಿಯೂ ಮುಂದು. ಚರ್ಮವನ್ನು ಸ್ವಲ್ಪ ಇರಿಟೇಟ್‌ ಮಾಡದೆ ಅದರ ಡ್ರೈನೆಸ್ ತೊಲಗಿಸಬಲ್ಲದು. ಜಾಸ್ಮಿನ್‌ ಆಯಿಲ್, ಬಾಡಿ ಕೇರ್‌ ಲೋಶನ್‌, ಬಾಡಿ ಹ್ಯಾಂಡ್‌ ವಾಶ್‌, ಫೇಸ್‌ ಪೌಡರ್‌ ಆಗಿ ಬಳಸಿಕೊಳ್ಳಿ.

ಲ್ಯಾವೆಂಡರ್ನಿಂದ ಅನೇಕ ವಂಡರ್

Marigold-Rakhe-Aging-Door

ಲ್ಯಾವೆಂಡರ್‌ ತನ್ನ ರಿಲ್ಯಾಕ್ಸಿಂಗ್‌ಕೂಲ್ ಗುಣಗಳಿಂದಾಗಿ ಪ್ರಸಿದ್ಧ. ಹಾಗಾಗಿಯೇ ಇದನ್ನು ಸದಾ `ಸ್ಪಾ’ ಟ್ರೀಟ್‌ ಮೆಂಟ್‌ ನಲ್ಲಿ  ಆ್ಯರೋಮಾ ಥೆರಪಿಯಲ್ಲಿ ಬಳಸುತ್ತಾರೆ. ಇಷ್ಟು ಮಾತ್ರವಲ್ಲ, ಇದು ಚರ್ಮದ ಹೊಸ ಜೀವಕೋಶಗಳ ನಿರ್ಮಾಣದಲ್ಲೂ ಸಕ್ರಿಯ ಪಾತ್ರ ವಹಿಸುತ್ತದೆ. ಹೀಗಾಗಿ ಇದರ ಬಳಕೆಯಿಂದ ಕಲೆಗುರುತು, ಸುಕ್ಕು, ನಿರಿಗೆ ಮಾಯವಾಗುತ್ತದೆ. ನಿಮ್ಮದು ಬಲು ಡ್ರೈ ಚರ್ಮವಾಗಿದ್ದರೆ, ನೀವು ಪ್ರತಿದಿನ ಅಗತ್ಯವಾಗಿ ಲ್ಯಾವೆಂಡರ್‌ ಬಾಡಿ ಬಟರ್‌ ನ್ನು ದೇಹಾದ್ಯಂತ ಹಚ್ಚಿಕೊಳ್ಳಿ.

ಇದು ಚರ್ಮದ ಮಾಯಿಶ್ಚರೈಸರ್‌ ನ್ನು ಬ್ಯಾಲೆನ್ಸ್ ಗೊಳಿಸುತ್ತಾ, ಚರ್ಮ ಹೆಚ್ಚು ಆಯ್ಲಿ ಅಥವಾ ಡ್ರೈ ಆಗದಂತೆ ರಕ್ಷಿಸುತ್ತದೆ. ಇದರ ಆ್ಯಂಟಿ ಇನ್‌ ಫ್ಲಮೇಟರಿ ಗುಣಗಳು ಸೂರ್ಯನ UV ಕಿರಣಗಳಿಂದ ಚರ್ಮದ ಮೇಲಾಗುವ ರೆಡ್‌ ನೆಸ್‌ ಅಥವಾ ಬ್ಯಾಕ್ಟೀರಿಯಲ್ ಸೋಂಕಿನಿಂದ ಬೇಗ ಗುಣಮುಖರಾಗುವಂತೆ ಮಾಡಬಲ್ಲದು. ಮಾರ್ಕೆಟ್‌ ನಲ್ಲಿ ಲ್ಯಾವೆಂಡರ್‌ ಸೀ ಥೆರಪಿ ಬಾತ್‌ ಪ್ರಾಡಕ್ಟ್ ಲಭ್ಯವಿದ್ದು, ನೀವು ಇದನ್ನು ನಿಯಮಿತವಾಗಿ ಬಳಸಿದರೆ, ಇದು ಚರ್ಮವನ್ನು ಸುಲಭವಾಗಿ ಡೀಟಾಕ್ಸ್ ಗೊಳಿಸಬಲ್ಲದು!

ಇದಕ್ಕಾಗಿ ನೀವು ಲ್ಯಾವೆಂಡರ್‌ ಬಾಡಿ ಲೋಶನ್‌, ಕ್ರೀಂ, ಎಸೆನ್ಶಿಯಲ್ ಆಯಿಲ್ ‌ನ್ನು ದಿನ ಬಳಸಿಕೊಳ್ಳಿ. ಇವು ತುಸು ದುಬಾರಿ ಎಂಬುದು ನಿಜವಾದರೂ, ಬಳಸುವ ಪ್ರಮಾಣ ಕಡಿಮೆಯಾದ್ದರಿಂದ ದೀರ್ಘಕಾಲ ಬಾಳಿಕೆ ಬರುತ್ತದೆ ಹಾಗೂ ಪರಿಣಾಮ ಬಲು ಅದ್ಭುತ!

ಕೆಮೊಮೈಲ್ ಕರಾಮತ್ತು

ಕೆಮೊಮೈಲ್ ‌ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧ. ಹೀಗಾಗಿ ಇದು ಚರ್ಮವನ್ನು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುವಲ್ಲಿ ಸಕ್ರಿಯವಾಗಿದೆ. ಇದು ಚರ್ಮದ ಬಣ್ಣವನ್ನು ತಿಳಿಯಾಗಿಸುವಲ್ಲಿಯೂ ಮುಂದು. ಆ್ಯಂಟಿ ಇನ್‌ ಫ್ಲಮೆಟರಿ ಆ್ಯಂಟಿ ಸೆಪ್ಟಿಕ್ ಆಗಿರುವುದರಿಂದ ಇದು ಆ್ಯಕ್ನೆ ನಿಯಂತ್ರಿಸಿ, ಅದರ ಕಲೆಗುರುತು ಉಳಿಯದಂತೆಯೂ ಮಾಡಬಲ್ಲದು. ಇದು ಚರ್ಮದ ಜೀವಕೋಶ, ಅಂಗಾಂಶಗಳ ನಿರ್ಮಾಣದಲ್ಲಿಯೂ ಸಹಾಯಕ. ಹಾಗಾಗಿ ಪೋರ್ಸ್‌ ನ್ನು ಟೈಟ್‌ ಮಾಡಿ, ಏಜಿಂಗ್‌ ಪ್ರೋಸೆಸ್ ನಿಧಾನಗೊಳಿಸಿ ನಿಮಗೆ ಚಿರಯೌವನ ಉಳಿಸಿಕೊಡುತ್ತದೆ.

ಇದಕ್ಕಾಗಿ ನೀವು ಕೆಮೊಮೈಲ್ ‌ಫೇಸ್‌ ವಾಶ್‌, ವಿಟಮಿನ್‌, ಮಾಯಿಶ್ಚರೈಸರ್‌, ಎಸೆನ್ಶಿಯಲ್ ಆಯಿಲ್‌, ಡೇ ನೈಟ್‌ ಕ್ರೀಂ ಇತ್ಯಾದಿ ಬಳಸಿಕೊಳ್ಳಿ. ಮಾರ್ಕೆಟ್‌ ನಲ್ಲಿ ಹಲವು ಬ್ರ್ಯಾಂಡ್‌ ಗಳಲ್ಲಿ ಇವು ಲಭ್ಯ.

ಪವಿತ್ರಾ ರಾವ್

ಆನ್‌ ಲೈನ್‌ ಬ್ಯೂಟಿ ಪ್ರಾಡಕ್ಟ್ಸ್ ಖರೀದಿಸಲಿದ್ದೀರಾ?

ಈಗೆಲ್ಲ ಆನ್‌ ಲೈನ್‌ ಝಮಾನಾ. ಇದರಿಂದ ಸಮಯ ಉಳಿಯುತ್ತದೆ, ಒಂದು ಕ್ಲಿಕ್‌ ನಿಂದ ಬೇಕಾದ್ದನ್ನು ಮನೆ ಬಾಗಿಲಿಗೇ ತರಿಸಬಹುದು. ಅದರೆ ಬ್ಯೂಟಿ ಪ್ರಾಡಕ್ಟ್ಸ್ ನ್ನು ಹೀಗೆ ಖರೀದಿಸಬೇಕಾದಲ್ಲಿ, ಪ್ರಸ್ತುತ ಲಭ್ಯವಿರುವ ವಿವಿಧ ಸೈಟ್‌ ಗಳಲ್ಲಿ ನಿಮಗೆ ಅನೇಕ ನಕಲಿ, ಫೇಕ್‌ ಪ್ರಾಡಕ್ಟ್ಸ್ ಸಿಗುತ್ತವೆ. ಆದ್ದರಿಂದ ನೀವು ವಿಶ್ವಾಸಾರ್ಹ ವೆಬ್‌ ಸೈಟ್ಸ್ ನಿಂದಲೇ ಇಂಥ ಪ್ರಾಡಕ್ಟ್ಸ್ ಖರೀದಿಸಬೇಕು. ಅಗ್ಗದ ಮಾಲಿಗೆ ಆಸೆ ಬಿದ್ದು, ಮುಗ್ಗಿದ ಲೋಕಲ್ ಸಾಮಗ್ರಿ ಕೊಳ್ಳಬೇಡಿ. ಹೀಗಾಗಿ ಉತ್ತಮ ಕಂಪನಿಯ ಬ್ರ್ಯಾಂಡೆಡ್‌ ಪ್ರಾಡಕ್ಟ್ಸ್ ನ್ನೇ ಖರೀದಿಸಿ. ಯಾವುದೇ ಪ್ರಾಡಕ್ಟ್ ಇರಲಿ, ಅದರ ಒರಿಜಿನಲ್ ಅಫಿಶಿಯಲ್ ಸೈಟ್‌ ನಿಂದಲೇ ಖರೀದಿಸಿ. ಇದರಿಂದ ನಿಮಗೆ 100% ಗುಣಮಟ್ಟದ ಸಾಮಗ್ರಿ, ಅದೂ ಡಿಸ್‌ ಕೌಂಟ್‌ ಸಹಿತ ಸಿಗುತ್ತದೆ. ಇಂಥ ಅಸಲಿ ಸಾಮಗ್ರಿ ಬಿಟ್ಟು ಅಗ್ಗದ ಆಸೆಗೆ ಬೀದಿ ಬದಿ ವ್ಯಾಪಾರಕ್ಕೆ ಎಂದೂ ಹೋಗಬೇಡಿ. ಕಾಸೂ ಹಾಳು…. ತಲೆಯೂ ಬೋಳು!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ