ಪ್ರ : ನಾನು 29 ವರ್ಷದ ಯುವತಿ. ಕೂದಲಿನ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅದರಿಂದಾಗಿ ನನಗೆ ತಲೆಯಲ್ಲಿ ತುರಿಕೆ ಉಂಟಾಗುತ್ತದೆ. ಸಂಜೆಯಾಗುವ ಹೊತ್ತಿಗೆ ಕುತ್ತಿಗೆ, ಭುಜ ಹಾಗೂ ಬ್ಲೌಸ್ಹೊಟ್ಟಿನಿಂದ ತುಂಬಿಹೋಗುತ್ತದೆ. ಕಳೆದ 1 ವರ್ಷದಿಂದ ಸಮಸ್ಯೆ ಇದ್ದು, ಅನೇಕ ಬಗೆಯ ಶ್ಯಾಂಪೂ ಉಪಯೋಗಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಕೆಲವು ದಿನಗಳಿಂದ ಕೂದಲು ಉದುರುವ ಸಮಸ್ಯೆ ಕೂಡ ಶುರುವಾಗಿದೆ. ಇದರಿಂದ ಬಚಾವಾಗುವ ಯಾವುದಾದರೂ ಉಪಾಯ ಸೂಚಿಸಿ.

ಉ : ತಲೆಹೊಟ್ಟಿನ ಸಮಸ್ಯೆ ಯಾವ ಕಾರಣದಿಂದ ಉಂಟಾಗುತ್ತದೆ ಎಂದು ಹೇಳುವುದು ಕಷ್ಟ. ಆದರೆ ಇದು ಜೆನಿಟಿಕ್ ಕಾರಣದಿಂದ ಅಥವಾ ಹವಾಮಾನದ ವೈಪರೀತ್ಯದಿಂದಲೂ ಆಗಬಹುದು. ಕೆಲವು ಕುಟುಂಬಗಳಲ್ಲಿ ಇದು ಎಲ್ಲರಿಗೂ ತೊಂದರೆ ಕೊಡುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚುತ್ತದೆ. ತಲೆಯ ಚರ್ಮದ ತೈಲಗ್ರಂಥಿಗಳಲ್ಲಿ ಉಂಟಾಗುವ ಸೀಬಮ್ ನಲ್ಲಿ ಕೆಲವು ವಿಶಿಷ್ಟ ಬಗೆಯ ಬ್ಯಾಕ್ಟೀರಿಯಾಗಳು ಮತ್ತು ಫಂಗಸ್‌ ಗಳ ಅವಶೇಷಗಳ ಸೇರುವಿಕೆಯಿಂದಾಗಿ ಈ ಸಮಸ್ಯೆ ಜನ್ಮತಳೆಯುತ್ತದೆ. ಕೆಲವರಲ್ಲಂತೂ ಈ ಸಮಸ್ಯೆ ಬಹಳ ಜಟಿಲ ರೂಪ ಕೂಡ ಪಡೆದುಕೊಳ್ಳುತ್ತದೆ. ಆಗ ಅದು ಸೋರಿಯಾಸಿಸ್‌ ನ ರೂಪ ತಾಳುತ್ತದೆ.

ಡ್ಯಾಂಡ್ರಫ್‌ ನ ಸಮಸ್ಯೆಯಿಂದ ದೂರವಿರಲು ನೀವು ವಾರದಲ್ಲಿ ಎರಡು ದಿನ ಪ್ರೋಟಾರ್‌ ನ ಶ್ಯಾಂಪೂವಿನಿಂದ ತಲೆಯನ್ನು ಸ್ವಚ್ಛಗೊಳಿಸಿಕೊಳ್ಳಿ. ಪ್ರತಿದಿನ ಕೂದಲಿನ ಬುಡಕ್ಕೆ ಡೀಪ್ರೊವೆಟ್‌ ಲೋಶನ್‌ ಲೇಪಿಸಿ. ಅದರಿಂದ ಹೊಟ್ಟಿನ ಹಾಗೂ ತುರಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ ಈ ಉಪಾಯಗಳಿಂದಲೂ ಪರಿಹಾರ ಸಿಗದೇ ಇದ್ದರೆ ಚರ್ಮರೋಗ ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.

ಪ್ರ : ನಾನು 24 ವರ್ಷದ ಯುವತಿ. ನನ್ನ ಇಡೀ ದಿನ ಆಫೀಸ್ನಲ್ಲಿ ಕಂಪ್ಯೂಟರ್ಮುಂದೆಯೇ ಕಳೆಯುತ್ತದೆ. ಕಳೆದ ಕೆಲವು ದಿನಗಳಿಂದ ಕಣ್ಣಲ್ಲಿ ಏನೋ ಒಂದು ರೀತಿಯ ಸಮಸ್ಯೆಯಾಗುತ್ತಿದೆ. ಅದರಿಂದಾಗಿ ಕಣ್ಣಲ್ಲಿ ನೋವು ಇರುತ್ತದೆ. ಇದಕ್ಕೆ ಏನಾದರೂ ಪರಿಹಾರ ಸೂಚಿಸಿ.

ಉ : ಗಂಟೆಗಟ್ಟಲೆ ಕಂಪ್ಯೂಟರ್‌ ಮುಂದೆ ಕೆಲಸ ಮಾಡುವವರಿಗೆ ಕಣ್ಣುಗಳ ಶುಷ್ಕತೆ `ಡ್ರೈ ಐ’ ಸಮಸ್ಯೆ ಕಂಡುಬರುತ್ತದೆ. ಇದು ಒಂದೇ ಸಮನೆ ಕಣ್ಣುಗಳನ್ನು ಕಂಪ್ಯೂಟರ್‌ ಸ್ಕ್ರೀನಿನ ಮೇಲೆ ನೆಡುವುದರಿಂದ ಉಂಟಾಗುತ್ತದೆ. ಅದರಿಂದಾಗಿ ಕಣ್ರೆಪ್ಪೆ ಮುಚ್ಚುವ ನೈಸರ್ಗಿಕ ವೇಗ ಕಡಿಮೆಯಾಗುತ್ತದೆ ಹಾಗೂ ಕಣ್ಣುಗಳ ಬಾಹ್ಯ ಪದರಿಗೆ ನೈಸರ್ಗಿಕ ರೂಪದಲ್ಲಿ ತೇವದಿಂದಿರುವ ಕಣ್ಣೀರಿನ ಸೂಕ್ಷ್ಮ ಧಾರೆಗೆ ಪರಿಣಾಮ ಉಂಟಾಗಿ ಕಣ್ಣುಗಳು ಶುಷ್ಕಗೊಳ್ಳುತ್ತವೆ.

ಡ್ರೈ ಐನ ಸಮಸ್ಯೆಯಿಂದ ಹೊರಬರಲು ನೀವು ಆಗಾಗ ಕಣ್ಣುಗಳನ್ನು ಪಿಳುಕಿಸುತ್ತಾ ಇರಿ. ನಡುನಡುವೆ ಕಂಪ್ಯೂಟರ್‌ ನಿಂದ ದೃಷ್ಟಿಯನ್ನು ಬೇರೆ ಕಡೆ ಕೇಂದ್ರೀಕರಿಸಿ ಅಥವಾ ಹೊರಗಿನ ಹಸಿರು ದೃಶ್ಯ ನೋಡಿ. ಫೋನ್‌ ಬಂದಾಗ ಕೆಲವು ಕ್ಷಣಗಳ ಕಾಲ ಕಣ್ಣು ಮುಚ್ಚಿಕೊಳ್ಳಿ. ಇದರಿಂದ ಕಣ್ಣುಗಳಿಗೆ ತೇವಾಂಶ ದೊರಕುತ್ತದೆ. ಕಣ್ಣುಗಳ ತೇವಾಂಶ ಕಾಯ್ದುಕೊಂಡು ಹೋಗಲು ದಿನಕ್ಕೆ 3-4 ಬಾರಿ ಡಿಯರ್‌ ಪ್ಲಸ್‌ ಅಥವಾ ರಿಫ್ರೆಶ್‌ ಜೆಲ್ ‌ಡ್ರಾಪ್ಸ್ ನ್ನು ಉಪಯೋಗಿಸಿ. ಆದಾಗ್ಯೂ ಸಮಸ್ಯೆ ಹಾಗೆಯೇ ಮುಂದುವರಿದರೆ ನೇತ್ರತಜ್ಞರ ಸಲಹೆ ಪಡೆದುಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ