ಕಿಚ್ಚ ಸುದೀಪ್ ಪ್ರಿಯಾ ಅವರು ಮುದ್ದಿನ ಮಗಳಾದ ಸಾನ್ವಿ  ಅಪ್ಪನಷ್ಟೇ ಎತ್ತರ ನಿಲುವು ಸ್ಟಾರ್ ಮಗಳು ಅಂತ ನಾಲ್ಕು ಗೋಡೆ ನಡುವೆ ಬೆಳೆದವಳಲ್ಲ, ಸುದೀಪ್ ತನ್ನ ಮಗಳನ್ನು ಫ್ರೆಂಡ್ ತರ ಕಾಣುತ್ತಾರೆ ,ಇಬ್ಬರೂ ಕೂತು ಹರಟುತ್ತಾರೆ, ಚರ್ಚಿಸುತ್ತಾರೆ, ಮಗಳ ಗಾಯನವನ್ನು ಮೆಚ್ಚುತ್ತಾರೆ, ಮ್ಯಾಕ್ಸ್ ಸಿನಿಮಾಗಾಗಿ ಹಾಡಿನ ಮೂಲಕ ಅಪ್ಪನಿಗೆ ಸರ್ಪ್ರೈಸ್ ನೀಡಿದ್ದಳು. ಸಾನ್ವಿ ಈಗ ಪ್ರೊಡಕ್ಷನ್ ಹೌಸ್ ಶುರುಮಾಡಿದ್ದಾಳೆ. ಇತ್ತೀಚೆಗೆ ಅತ್ತೆಯ ಮಗ ಅಂದ್ರೆ ಸುದೀಪ್ ಅಕ್ಕನ ಮಗ ಸಂಚಿ ಸಿನಿಮಾ ಮುಹೂರ್ತಕ್ಕೆ ಸೀರೆಯುಟ್ಟು ಬಂದಾಗ ಮುದ್ದಾಗಿ ಕಾಣುತ್ತಿದ್ದಳು. ‘ನನ್ನ ಅಮ್ಮಮ್ಮನಿಗೆ ನನ್ನನ್ನು ಸೀರೆಯಲ್ಲಿ ಕಾಣುವ ಆಸೆ ತುಂಬಾ ಇತ್ತು, ಅವರಿದ್ದಾಗ  ಆಗಿರಲಿಲ್ಲ, ಇಂದು ಅವರಿಗಾಗಿ ಅವರ ನೆನಪಿಗಾಗಿ ಅವರದೇ ಸೀರೆ ಉಟ್ಟಿದ್ದೀನಿ..ಎಂದು ಫೋಟೋ ಸಮೇತ ಪೋಸ್ಟ್ ಮಾಡಿದ್ದಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ