ಅಶ್ಲೀಲ ಎಂದರೆ ನೋಡಬೇಡಿ :
ಪೋಲ್ ಡ್ಯಾನ್ಸಿಂಗ್ ಸಾಮಾನ್ಯವಾಗಿ ನೈಟ್ ಕ್ಲಬ್ ಗಳಲ್ಲಿ ಜರುಗುತ್ತಿರುತ್ತದೆ. ಇದನ್ನು ಅಶ್ಲೀಲ ಎಂದು ಖಂಡಿಸುವುದಕ್ಕಾಗಿ ಇನ್ ಸ್ಟಾಗ್ರಾಂ ತನ್ನ ಸಾಫ್ಟ್ ವೇರ್ ಪ್ರೋಗ್ರಾಂನಿಂದಲೇ ಇದನ್ನು ಬ್ಯಾನ್ ಮಾಡಿಬಿಟ್ಟಿದೆ. ಆಗ ವಿಶ್ವವಿಡೀ ಡ್ಯಾನ್ಸರ್ಸ್ ಇದರ ವಿರುದ್ಧ ಪಿಟೀಶನ್ ಕಳಿಸಲು ಆರಂಭಿಸಿದರು. ಇದೊಂದು ಕಲೆ, ನೈಟ್ ಕ್ಲಬ್ ಗಳಲ್ಲೇ ಹೆಚ್ಚು ಪ್ರದರ್ಶನ ಕಾಣುತ್ತಿವೆ. ಉದಾರ ಹೃದಯದ ಇನ್ ಸ್ಟಾಗ್ರಾಂ, ಇದನ್ನು ಒಪ್ಪಿ ತನ್ನ ಸಾಫ್ಟ್ ವೇರ್ ಸರಿಪಡಿಸಿತು. ಕಷ್ಟ ಎದುರಾದದ್ದು ವಿಶ್ವದೆಲ್ಲೆಡೆಯ ಧರ್ಮಜನಿತ ನೈತಿಕತೆಯ ಪ್ರತಿನಿಧಿಗಳು ಹೆಂಗಸರ ವಸ್ತ್ರದ ಕುರಿತಾಗಿ ಪ್ರತಿಬಂಧನ ಹೇರುವುದರಿಂದ. ಗಂಡಸರ ವಸ್ತ್ರಗಳ ಬಗ್ಗೆ ಅವರಿಗೆ ಚಿಂತೆ ಇಲ್ಲ. ಅಶ್ಲೀಲ ಎನಿಸಿದರೆ ನೋಡಬೇಡಿ ಬಿಡಿ, ಯಾರೂ ತೋರಿಸುವುದೂ ಇಲ್ಲ. ಹೆಂಗಸರಿಗೆ ಕೆಟ್ಟ ಹೆಸರು ತಂದುಕೊಡುವುದಷ್ಟೇ ಇವರ ಕೆಲಸ.
ಕಷ್ಟ ಸಹಿಸುವ ಹೆಂಗಸರು :
ಯಾವುದೇ ಹೋರಾಟದ ವಿಷಯವಿರಲಿ, ಅದರಲ್ಲಿ ಹೆಂಗಸರೇ ಹೆಚ್ಚು ಕಷ್ಟಪಡಬೇಕಾಗುತ್ತದೆ, ಸೈನಿಕರಲ್ಲ ಅವರ ಮನೆಗಳು ಧ್ವಂಸವಾಗುತ್ತವೆ, ಸಂಪತ್ತು ಲೂಟಿಯಾಗುತ್ತದೆ, ರೇಪ್ ಮಾಮೂಲಿ ಆಗುತ್ತದೆ, ತಮ್ಮ ಸುಖೀ ಮನೆ ತೊರೆದು ಕಂಡವರ ಆಶ್ರಯದಲ್ಲಿ ರೆಫ್ಯೂಜಿಗಳಾಗುತ್ತಾರೆ. ಯೂಕ್ರೇನಿನಿಂದ ಲಕ್ಷಾಂತರ ಹೆಂಗಸರು ಮಕ್ಕಳು, ಮುದುಕರ ಜೊತೆ ಇದೀಗ ಯೂರೋಪಿನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಸದ್ಯಕ್ಕಂತೂ ಎಲ್ಲರೂ ತೆರೆದ ಮನದಿಂದಲೇ ಇರುಗಳನ್ನು ಸ್ವಾಗತಿಸುತ್ತಿದ್ದಾರೆ, ಏಕೆಂದರೆ ಯೂಕ್ರೇನ್ ರಷ್ಯಾ ಮುಂದೆ ಇನ್ನೂ ಶರಣಾಗಿಲ್ಲ. ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಅವರು ಆ ಹೆಂಗಸರಿಂದ ಸಾವಿರಾರು ಬಲಿದಾನ ಬಯಸುತ್ತಾರೆ. ಆದರೆ ಈ ಯೂಕ್ರೇನಿ ರೆಫ್ಯೂಜಿ ಮಹಿಳೆಯರನ್ನು ಇತರ ದೇಶದ ಸರ್ಕಾರಗಳು ಮುಂದೆ ಹೇಗೆ ನಡೆಸಿಕೊಳ್ಳುತ್ತಲೇ ಗೊತ್ತಿಲ್ಲ. ಆಸರೆ ಕೋರಿ, ಡಾಕ್ಯುಮೆಂಟೇಶನ್ ಇಲ್ಲದೆ ಬರುತ್ತಿರುವ ಯೂಕ್ರೇನಿ ಪರಿವಾರಗಳಿಗೆ ಸ್ವಾಗತ ಕೋರುತ್ತಿರುವವರಲ್ಲಿ ಬಲ್ಗೇರಿಯಾ ಸಹ ಒಂದು.
ಕ್ಲಾಸಿಕ್ ಗಿಂತ ಮಾಡರ್ನ್ :
ಸ್ನೋ ಲೈಟ್ ಬ್ಯಾಲೆ ಎಷ್ಟು ಜನಪ್ರಿಯ ಎಂದರೆ, ವಿಶ್ವಾದ್ಯಂತ ಪ್ರತಿ ಮಹಾನಗರದಲ್ಲೂ ಪ್ರತಿ ಥಿಯೇಟರ್ ಗ್ರೂಪ್ ಇದನ್ನು ಪ್ರಸ್ತುತಪಡಿಸುತ್ತಿದೆ. ಈ ಕೆಳಗಿನ ದೃಶ್ಯ ವರ್ಜೀನಿಯಾದ ನ್ಯಾಷನಲ್ ಬ್ಯಾಲೆಯ ಪ್ರಸ್ತುತಿ ಆಗಿದೆ. ಈ ಸ್ನೋಲೈಟ್ ನಲ್ಲಿ ಬಹಳಷ್ಟು ಹೊಸ ಪ್ರಯತ್ನಗಳು ಆಗುತ್ತಿವೆ ಹಾಗೂ ಪ್ರೆಸೆಂಟೇಶನ್ ಕ್ಲಾಸಿಕ್ ಗಿಂತ ಮಾಡರ್ನ್ ಆಗುತ್ತಿವೆ. ಮುಂದೆ ಲೆಸ್ಬಿಯನ್ ಯಾ ಹೋಮೋ ಕುರಿತಾಗಿ ಸ್ನೋ ಲೈಟ್ ಮೂಡಿಬಂದರೂ ಆಶ್ಚರ್ಯವೇನಿಲ್ಲ.
ಬನ್ನಿ ಪ್ರೇಮಿಸುವಾ :
ಇಂಥ ಪ್ರೇಮ ನಮ್ಮ ಅಸಲಿ ಜೀವನದಲ್ಲಿ ಕಂಡುಬರುವಂತಿದ್ದರೆ…..? ಇದಂತೂ ಈಗ ಪರದೆ, ವೇದಿಕೆಗಳಿಗಷ್ಟೇ ಸೀಮಿತ. ಕೆನಡಾದ ಬ್ಯಾಂಕೋರ್ ನಲ್ಲಿ ಪ್ರಸ್ತುಪಡಿಸಲಾದ ಒಂದು ನಾಟಕದಲ್ಲಿ ಇಂಥ ದೃಶ್ಯವಿತ್ತು. ಪರಸ್ಪರರ ಸ್ಪರ್ಶದಿಂದಾಗಿ ನೋವು ಎಷ್ಟೋ ನಿವಾರಣೆಯಾಗುತ್ತದೆ ಹಾಗೂ ಪ್ರೀತಿಪ್ರೇಮ ಹೆಚ್ಚುತ್ತದೆ ಎಂದು ಹೇಳಲಾಯಿತು!
ನಾವು ಯಾರಿಗೇನೂ ಕಡಿಮೆಯಲ್ಲ :
ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕಾದಲ್ಲಿ ಈಗಲೂ ಸಹ ಹೆಂಗಸರನ್ನು ಆಯುಧ ಬಳಸುವ ವಿಭಾಗದಲ್ಲಿ ನೇಮಕ ಮಾಡಲ್ಲ. ಕಾರಣ ಇಷ್ಟೆ…… ಅವರಿಗಾಗಿ ಬೇರೆ ಮಲಗುವ ಕೋಣೆ, ಬಾತ್ ರೂಂ ಬೇಕಾಗುತ್ತೆ ಅಂತ. ಇದಂತೂ ಕ್ಷುಲ್ಲಕ ನೆಪ, ಅಂಥ ಭಾರಿ ಆಯುಧ ಹೊರಬಲ್ಲಳು ಮನೆಯಲ್ಲೂ ಹಾಗೇ ಮಾಡಿಬಿಟ್ಟರೆ ಅಂತ ಭಯ! ಆಯುಧಕ್ಕೆ ಬದಲಾಗಿ ಅವಳಿಂದ ಬೇರೆಲ್ಲ ತರಹದ ಕೆಲಸ ಮಾಡಿಸಿಕೊಳ್ಳುತ್ತಾರೆ. ಆಗ ಮಾತ್ರ ಅವರಿಗೆ ಬೆಡ್ ರೂಂ, ಬಾತ್ ರೂಂಗಳ, ರೇಪ್ ಗಳ ನೆಪವಿಲ್ಲ. ಆಯುಧ ಬಳಸದ ಗೃಹಿಣಿಯರು ಆಕ್ರಾಮಕ ಸೇನೆಯವರ ಮೊದಲ ಆಯ್ಕೆ. ಹೀಗಾಗಿ ಶತ್ರು ಸೈನಿಕರು ಇಂಥ ಅಬಲೆಯರನ್ನು ಸುಲಭವಾಗಿ ರೇಪ್ ಮಾಡುತ್ತಾರೆ. ಯೂಕ್ರೇನಿನಲ್ಲಿ ಸದ್ಯ ಆಗುತ್ತಿರುವುದೂ ಇದೇ. ಹೀಗಾಗಿ ಯೂಕ್ರೇನ್ಹೆಂಗಸರಿಗೂ ಹೋರಾಡುವ ಅವಕಾಶ ನೀಡುತ್ತಿದೆ.
ಬಗೆಬಗೆಯ ಪ್ರಯೋಗಗಳು :
ಇಂಥ ಬಗೆಯ ಡ್ರೆಸೆಸ್ ಧರಿಸಲು, ಇರಲಿ ಬಿಡಲಿ, ಒಂದು ವಿಧದ ಆರ್ಟ್ ಫಾರ್ಮ್ ರೆಡಿ ಆಗುತ್ತದೆ. ಇಟಲಿಯ ಡಿಸೈನರುಗಳ ಹಲ ಕ್ಲೈಂಟ್ಸ್ ಡಿಸೈನರುಗಳ ಅಭಿಮಾನದಿಂದಾಗಿ ಖುದ್ದು ತಮ್ಮ ಮೇಲೆ ಬಗೆಬಗೆಯ ಪ್ರಯೋಗಗಳಿಗೆ ಸಿದ್ಧರಾಗುತ್ತಾರೆ. ವಾಸ್ತವದಲ್ಲಿ ಆಫ್ ಬೀಟ್ ಡ್ರೆಸ್ಮೇಕಪ್ ಮಾಡಿಸಿಕೊಂಡು ಪಾರ್ಟಿಗಳಲ್ಲಿ ನರ್ತಿಸುತ್ತಾರೆ. ಇವರನ್ನು ಬಣ್ಣದ ಬೀಸಣಿಗೆ ಎಂದು ಬೈದರೂ ಡೋಂಟ್ ಕೇರ್ ಅಂತಾರೆ. ಆದರೆ ಇಂಥವರೇ ಸಮಾಜಕ್ಕೆ ಏನಾದರೂ ಹೊಸ ಸಲಹೆ, ಪ್ರೇರಣೆ ನೀಡುವವರು.
ಆಳವಾದ ಮಸಲತ್ತು :
ಹೆಂಗಸರಿಲ್ಲದ ಜಗತ್ತನ್ನು ನೆನೆಯಲು ಸಾಧ್ಯವೇ? ಇದಂತೂ ತಿಳಿದ ವಿಚಾರ. ಆದರೆ ಎಲ್ಲರಿಗೂ ಗುಲಾಮಗಿರಿ ಮಾಡಲು ಸಿದ್ಧಳಾದ ಹೆಣ್ಣೇ ಬೇಕು. ಅವರ ಜೊತೆಗೆ ಮಲಗಿ, ಮಗು ನೀಡಿ, ಮನೆಗೆಲಸ ಮಾಡಿಕೊಂಡು ಬಿದ್ದಿರಲಿ, ಜಾಸ್ತಿ ಹ್ಞಾಂ ಹ್ಞೂಂ ಎಂದು ಎಗರಾಡಿದರೆ ವುಮನ್ಸ್ ಡೇ ಲಾಲಿಪಪ್ ನೀಡಿದರಾಯಿತು. ಇದರಲ್ಲಿನ ವಿಡಂಬನೆ ಎಂದರೆ ಗಂಡಸಿನ ಈ ಮಸಲತ್ತಿಗೆ ಬಹುತೇಕ ಪ್ರತಿ ಹೆಣ್ಣೂ ಶರಣಾಗುತ್ತಾಳೆ, ಅದರಲ್ಲೂ ಸುಂದರಿಯಲ್ಲ ಅಥವಾ ಸೌಂದರ್ಯ ಕುಗ್ಗಿದವಳು ಮುಂದಾಗುತ್ತಾಳೆ. ಸಾಮಾನ್ಯ ಹೆಂಗಸರನ್ನು ಇಂಥವರಿಂದಲೇ ಗೋಳಾಡಿಸಲಾಗುತ್ತದೆ!