ಕೂದಲಿನ ಕುರಿತಾದ ಮಾಹಿತಿ, ಕಾಸ್ಮೆಟಿಕ್ಸ್, ಈಗಿರುವಂತೆ 90ರ ದಶಕದಲ್ಲಿ ಖಂಡಿತಾ ಇರಲಿಲ್ಲ. ಏನೋ ಒಂದಿಷ್ಟು ಎಣ್ಣೆ ಹಚ್ಚಿ, ಸೀಗೇಕಾಯಿ ಸ್ನಾನ, ಯಾವಾಗಲೋ ಶ್ಯಾಂಪು ಇಷ್ಟವಾದರೆ ಬೇಕಾದಷ್ಟಾಯಿತು. ಮುಖ್ಯವಾಗಿ ಒತ್ತಾದ, ದಟ್ಟ, ಕಪ್ಪು ಕೂದಲಿನ ಹುಡುಗಿಯನ್ನು ಕಂಡರೆ ಇತರರು ನಮಗೂ ಹಾಗೇ ಬೇಕೆಂದು ಬಯಸುತ್ತಿದ್ದರು. ಕೂದಲಿನಲ್ಲಿ ವಾಲ್ಯೂಂ ಇದ್ದು, ಹೆಚ್ಚು ವೇವಿ ಆಗಿದ್ದರೆ ಅಂಥದ್ದಕ್ಕೆ ಡಿಮ್ಯಾಂಡ್‌ ಹೆಚ್ಚು.

ವೇವಿ ಕೂದಲೂ ಇದ್ದಾಗ ಬಾಯ್‌ ಕಟ್‌ ಆಯ್ಕೆ ಉತ್ತಮ. ಆದರೆ ಇದರಿಂದ ಸುಮಾರಾದ ಮುಖಚಹರೆ ಇನ್ನಷ್ಟು ಸಾಧಾರಣ ಎನಿಸಬಹುದು. ಆಗೆಲ್ಲ ಕಂಡೀಶನರ್‌, ಸ್ಪಾ ಇತ್ಯಾದಿ ಇರಲಿಲ್ಲ. ವಾರದಲ್ಲಿ ಒಮ್ಮೆ ಶ್ಯಾಂಪೂ ಬಳಸಿದರೆ ಹೆಚ್ಚು. ಮಧ್ಯದಲ್ಲಿ ಇನ್ನೊಮ್ಮೆ ತಲೆ ಸ್ನಾನ ಅಂದ್ರೆ  ಮೈ ಸೋಪನ್ನೇ  ಬಳಸಬೇಕಾಗುತ್ತಿತ್ತು. ಎಣ್ಣೆ, ಸೀಗೇಕಾಯಿ ಮುಂತಾದವನ್ನು ಬಳಸಲು ಬಯಸದ ಹುಡುಗಿಯರ ತಲೆಗೂದಲು ಇನ್ನಷ್ಟು ಡ್ರೈ, ಒರಟು ಆಗುತ್ತದೆ.

ಆದರೂ ಆ ಕಾಲದವರ ಕೂದಲು ಹೆಚ್ಚು ಉದುರುತ್ತಿರಲಿಲ್ಲ, ಮುರಿಯುತ್ತಿರಲಿಲ್ಲ, ಸೀಳು ಕೂದಲಿನ ಸಮಸ್ಯೆಯೂ ಇರಲಿಲ್ಲ. ಕ್ರಮೇಣ 90ರ ದಶಕದಲ್ಲಿ ಸ್ಟೆಪ್‌ ಕಟ್‌ ಹೆಚ್ಚು ಜನಪ್ರಿಯವಾಯಿತು. ವೇವಿ ಕೂದಲಿನವರಿಗೆ ಇದು ಚೆನ್ನಾಗಿ ಒಪ್ಪುತ್ತದೆ. ಕ್ರಮೇಣ ಅಲ್ಲೊಂದು ಇಲ್ಲೊಂದು ಬೆಳ್ಳಿ ಕೂದಲು ಇಣುಕಿದರೆ ಮೆಹಂದಿ ಹಚ್ಚುವುದೇ ಪ್ರಧಾನವಾಗುತ್ತಿತ್ತು. ತಿಂಗಳಿಗೆ 2 ಸಲ ಕೂದಲಿಗೆ ಮೆಹಂದಿ ಮಾಮೂಲಿ ಆಗಿತ್ತು. ಇದರಿಂದ ಕೂದಲು ಹೊಳೆ ಹೊಳೆಯುವುದು ಮಾತ್ರವಲ್ಲ, ಸಶಕ್ತಗೊಳ್ಳುತ್ತದೆ.

ಶ್ಯಾಂಪೂ ಕಂಡೀಶನರ್ಆಯ್ಕೆ

ಮೆಹಂದಿ ನಂತರ ಕೂದಲು ಕಟ್‌ ಮಾಡಿಸುವಾಗ ಎಚ್ಚರ ಅಗತ್ಯ. ಒಂದು ಪದರ ಮೆಹಂದಿ ಕೂದಲಿಗೆ ಅಂಟಿಕೊಳ್ಳುವ ಸಾಧ್ಯತೆ ಇದೆ. ಅಧಿಕ ಮೆಹಂದಿ ಕೂದಲಿಗೆ ಒಳ್ಳೆಯದಲ್ಲ,  ಹಾನಿಕರ. ಇದಕ್ಕೆ ಸಲಹೆ, ಸೂಕ್ತ ಕಂಡೀಶನರ್‌ ಆಯ್ಕೆ. ವಾರದಲ್ಲಿ 3 ಸಲ ಹರ್ಬಲ್ ಶ್ಯಾಂಪೂನಿಂದ ಕೂದಲು ತೊಳೆದು, ಕಂಡೀಶನರ್‌ ಹಚ್ಚುವುದು ಉತ್ತಮ. ಆದರೆ ಇವೆರಡರ ಆಯ್ಕೆ ನಿಮ್ಮ ಕೂದಲಿಗೆ ತಕ್ಕಂತಿರಬೇಕೇ ಹೊರತು, ಕಡಿಮೆ ಬೆಲೆಗೆ ಮಾರುಹೋಗದಿರಿ.

ಸಾಮಾನ್ಯವಾಗಿ ಹೆರಿಗೆಯ ನಂತರ ತಾಯ್ತನದ ಸುಖ ಅನುಭವಿಸುವಾಗ, ಕೂದಲು ಮೊದಲಿಗಿಂತ ಹೆಚ್ಚು ಉದುರ ತೊಡಗುತ್ತದೆ. ಇದು ಮಾಮೂಲಿಯೇ ಆದರೂ ಟೆನ್ಶನ್‌ ಹೆಚ್ಚುತ್ತದೆ. ಹೆರಿಗೆ ನಂತರ ಎಷ್ಟೋ ಹೆಂಗಸರಿಗೆ ಹೈಪೊಥೈರಾಯಿಡಿಸಂ ಆಗಬಹುದು. ಆಗಲೂ ಅವರು ಕೂದಲಿನ ಆರೈಕೆಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ. ಮೆಹಂದಿಯ ಹೆಚ್ಚಿನ ಬಳಕೆಯಿಂದ ಕೂದಲು ಕೆಂಪಗಾದರೂ ಆಶ್ಚರ್ಯವಿಲ್ಲ. ಆಗ ಅವರಿವರ ಸಲಹೆಯಂತೆ ಕೂದಲ ಕಲರಿಂಗ್‌ ಮಾಡಿಸುತ್ತಾರೆ. ಒಮ್ಮೆ ಮನೆಯಲ್ಲಿ, ಒಮ್ಮೆ ಪಾರ್ಲರ್‌ ನಲ್ಲಿ ನಡೆಯುತ್ತಿರುತ್ತದೆ. ಈ ಸಂದರ್ಭದಲ್ಲಿ ಸ್ಪಾ ಅನಿವಾರ್ಯ.

ಆದರೆ ಸ್ಪಾಗೆ ಬಹಳ ಖರ್ಚಾಗುತ್ತದಲ್ಲ ಎಂದು ಹಿಂಜರಿಯುವವರೇ ಹೆಚ್ಚು. ಸಾಮಾನ್ಯವಾಗಿ 30+  ಹೆಂಗಸರು 40+ರವರೆಗೂ ಹೇರ್‌ ಕಲರ್‌ ಕಡೆ ಗಮನಕೊಡುತ್ತಾರೆ. ಸಹಜವಾಗಿ ಆಗ ಕೂದಲು ಡ್ರೈ ಆಗುತ್ತದೆ. ಆದರೆ ಹೇರ್‌ ಕೆರಾಟಿನ್‌ ಕಡೆ ಹೆಚ್ಚಾಗಿ ಹೆಂಗಸರು ತಲೆ ಕೆಡಿಸಿಕೊಳ್ಳುವುದಿಲ್ಲ. ಸ್ಪಾಗೆ ಹೋಗುವುದೋ ಬೇಡವೋ ಎಂಬುದರತ್ತಲೇ ಕಾಲ ತಳ್ಳುತ್ತಾರೆ.

ಸರಿಯಾದ ಆರೈಕೆ

ಕೆರಾಟಿನ್‌,  ಸ್ಮೂದನಿಂಗ್‌, ಸ್ಟ್ರೇಟ್‌ನಿಂಗ್‌ ಎಲ್ಲದರಲ್ಲೂ ಕೆಮಿಕಲ್ಸ್ ಇದ್ದೇ ಇರುತ್ತದೆ. ಕೆರಾಟಿನ್‌ ಪ್ರಕ್ರಿಯೆಯಲ್ಲಿ ಕೆಮಿಕಲ್ಸ್ ಇಲ್ಲ ಎಂದು ಭಾವಿಸಬೇಡಿ. ಹೇರ್‌ ಕಲರಿಂಗ್‌ ಅಥವಾ ಯಾವುದೋ ಬಗೆಯ ಹೇರ್‌ ಟ್ರೀಟ್‌ ಮೆಂಟ್‌ ಇರಲಿ, ಎಲ್ಲದರಲ್ಲೂ ಕೆಮಿಕಲ್ಸ್ ಇದ್ದೇ ಇರುತ್ತದೆ.

ಪ್ರೌಢ ಹಂತ ತಲುಪುತ್ತಿದ್ದಂತೆ ಹೆಂಗಸರು, ತಮ್ಮ ಕೂದಲನ್ನು ತಮಗಿಂತ ಬೇರೆಯವರು ಆಳವಾಗಿ ಅರ್ಥ ಮಾಡಿಕೊಳ್ಳಲಾರರು ಎಂದು ಗಮನಿಸಿಕೊಳ್ಳುತ್ತಾರೆ. ಯಾರೋ ಅವರಿವರು ಹೇಳಿದರೆಂದು ನಿಮ್ಮ ಕೂದಲಿನ ಮೇಲೆ ಪ್ರಯೋಗ ಮಾಡಬೇಡಿ. ಕೂದಲು ನವಿರಾದ ಸೂಕ್ಷ್ಮ ಭಾಗ, ಅದರೊಂದಿಗೆ ಆಟ ಬೇಡ. 40+ ನಂತರ ಹೆಂಗಸರ ಕೂದಲು ಕಡುಕಪ್ಪು, ದಟ್ಟ, ಒತ್ತಾಗಿ, ರೇಷ್ಮೆಯಂತೆ ಇರಲಾರದು ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಈ ಹಂತದ ನಂತರ ಕೂದಲಿನ ಗುಣ ಅರಿತು ಅದರಂತೆ ಆರೈಕೆ ಮಾಡಿ. ಈ ಸಲಹೆಗಳನ್ನು ಅನುಸರಿಸಿ ನೋಡಿ, ಮೇಲಿನ ಗುಣಗಳು ಖಂಡಿತಾ ನಿಮ್ಮ ಕೂದಲಿಗೆ ಬರುತ್ತವೆ.

ಆಯಿಲ್ ಮಸಾಜ್ಅತ್ಯಗತ್ಯ : ಆಯಿಲ್ ‌ಮಸಾಜ್‌ ಗೆ ಮತ್ತೊಂದು ಪರ್ಯಾಯವಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಸೆಂಟೆಡ್‌ ಹೇರ್ ಆಯಿಲ್ ಬದಲು, ಶುದ್ಧ ಕೊಬ್ಬರಿ ಎಣ್ಣೆ ಬಳಸಿರಿ. ತಲೆ ಸ್ನಾನಕ್ಕೆ ಮೊದಲು ಅಗತ್ಯ ಮಸಾಜ್‌ ಮಾಡಿ. ಎಣ್ಣೆ ಹಚ್ಚಿ ಇಡೀ ರಾತ್ರಿ ಬಿಡಲು ಆಗದಿದ್ದರೆ, ತಲೆ ಸ್ನಾಕ್ಕೆ ಮೊದಲು ಕನಿಷ್ಠ 2 ಗಂಟೆಯಾದರೂ ನೆತ್ತಿಯಲ್ಲಿ ಎಣ್ಣೆ ಊರಲಿ.

ನಿಮ್ಮ ಕೂದಲಿಗೆ ತಕ್ಕಂತೆ ಹೇರ್ಮಾಸ್ಕ್ : ನೀವು ಕೂದಲು ತೊಳೆಯುವ ಮೊದಲು, ಅದರ ಮೇಲೆ 2-3 ಚಮಚ ಈರುಳ್ಳಿ ರಸ ಹಚ್ಚಿ ತಿಕ್ಕಿದರೆ (ಈಗ ಇಂಥ ಶ್ಯಾಂಪೂ ಸಹ ಲಭ್ಯ), ಅದು ನಿಮ್ಮ ಕೂದಲನ್ನು ಮೃದುಗೊಳಿಸುವ ಜೊತೆಗೆ ಸಶಕ್ತವಾಗಿಯೂ ಮಾಡುತ್ತದೆ. ಮೊಸರಿನಲ್ಲಿ ಇಡೀ ರಾತ್ರಿ ನೆನೆಸಿದ ಮೆಂತ್ಯವನ್ನು ಒಟ್ಟಾಗಿ ರುಬ್ಬಿ, ಪೇಸ್ಟ್ ಮಾಡಿ ತಲೆಗೆ ಮಾಸ್ಕ್ ಹಾಕಿಕೊಂಡರೆ, ಡ್ರೈ ಕೂದಲಿಗೆ ಎಷ್ಟೋ ಉಪಶಮನ ಸಿಗುತ್ತದೆ. ಮುಲ್ತಾನಿ ಮಿಟ್ಟಿ ಪ್ಯಾಕ್‌ ಆಯ್ಲಿ ಹೇರ್‌ ಗೆ ಉತ್ತಮ. ನಿಮ್ಮ ಅಡುಗೆಮನೆಯಲ್ಲೇ ಲಭ್ಯವಿರುವ ಇಂಥ ಪದಾರ್ಥ ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ. ಬೇರೆಯವರನ್ನು ನೋಡಿ ಅಂಥ ಹೇರ್‌ ಮಾಸ್ಕ್ ಬಳಸದಿರಿ, ನಿಮ್ಮ ಕೂದಲಿಗೆ ತಕ್ಕಂತೆ ಆರಿಸಿ.

ಹೇರ್ಕಲರ್ಸ್ಪಾ ಜೊತೆ ಜೊತೆಗೆ : ನೀವು ರೆಗ್ಯುಲರ್‌ ಆಗಿ ಹೇರ್‌ ಕಲರಿಂಗ್‌ ಮಾಡುತ್ತಿದ್ದರೆ, ತಿಂಗಳಲ್ಲಿ ಒಮ್ಮೆ ಹೇರ್‌ ಸ್ಪಾ ಅತ್ಯಗತ್ಯ. 3 ತಿಂಗಳಿಗೊಮ್ಮೆ ಪಾರ್ಲರ್‌ ನಲ್ಲೇ ಹೇರ್‌ ಕಲರ್‌ ಮಾಡಿಸಿ. ನಂತರ 15 ದಿನಕ್ಕೊಮ್ಮೆ ಮನೆಯಲ್ಲೇ ಟಚ್‌ ಅಪ್‌ ಕೊಡಿ. ಹೇರ್‌ ಸ್ಪಾ ಸಹ ತಿಂಗಳಿಗೊಮ್ಮೆ ಮನೆಯಲ್ಲಿ, ಮುಂದಿನ ತಿಂಗಳು ಪಾರ್ಲರ್‌ ನಲ್ಲಿ ಮಾಡಿಸುತ್ತಿದ್ದರೆ ಸಾಕು.

ನೈಸರ್ಗಿಕ ಕೂದಲಿನಿಂದ ಹೆಚ್ಚು ಸೌಂದರ್ಯ : ಸಾಧ್ಯವಾದಷ್ಟೂ ನೀವು ಕೂದಲಿಗೆ ರೀಬೌಂಡಿಂಗ್‌, ಕೆರಾಟಿನ್‌, ಕರ್ಲಿಂಗ್‌ ಇತ್ಯಾದಿ ಮಾಡಿಸಬೇಡಿ. ಇವೆಲ್ಲ ಕೆಮಿಕಲ್ಸ್ ಮಯ ಆಗಿದ್ದು ಅದಕ್ಕಿಂತ ಹಾನಿ ಜಾಸ್ತಿ. ನಿಮ್ಮದು ಸ್ಟ್ರೇಟ್‌, ಗುಂಗುರು, ವೇವಿ….. ಯಾವುದೇ ಬಗೆಯ ಕೂದಲಾಗಿರಲಿ, ಇದನ್ನು ನ್ಯಾಚುರಲ್ ಆಗಿ ಹಾಗೇ ಇರಲು ಬಿಡಿ. ಕೆಮಿಕಲಿ ಟ್ರೀಟೆಡ್‌ ಕೂದಲಿಗಿಂತ ಇವೆಷ್ಟೋ ಬೆಟರ್‌!

ಟ್ರಿಮಿಂಗ್ಸಹ ಅಗತ್ಯ : ಪ್ರತಿ 2-3 ತಿಂಗಳಿಗೊಮ್ಮೆ ಅಗತ್ಯ ಟ್ರಿಮಿಂಗ್‌ ಮಾಡಿಸಿ. ಹೀಗೆ ಮಾಡುವುದರಿಂದ ಕೂದಲು ನಿಮ್ಮ ಕಂಟ್ರೋಲ್ ನಲ್ಲಿದ್ದು, ಬೆಟರ್‌ ಲುಕ್ಸ್ ನೀಡುತ್ತದೆ.

ವಿಟಮಿನ್ಮಿನರಲ್ಸ್ : ಇವೆಲ್ಲ ನಿಮಗೆ ತಾಜಾ ಹಸಿ ತರಕಾರಿ, ಋತುಮಾನದ ಹಣ್ಣುಗಳು, ಮೊಳಕೆಕಾಳು, ಸೊಪ್ಪು, ಝಿಂಕ್‌, ವಿಟಮಿನ್‌, ಇತ್ಯಾದಿ ಕೂದಲಿಗೆ ಬಲು ಪೂರಕ.

ಹಾರ್ಮೋನ್ಆರೈಕೆ : ನಿಮ್ಮ ವೈದ್ಯರನ್ನು ಭೇಟಿ ಮಾಡಿ, ಏನಾದರೂ ಹಾರ್ಮೋನ್‌ ಇಂಬ್ಯಾಲೆನ್ಸ್ ಇದ್ದರೆ, ಅಗತ್ಯ ಅದಕ್ಕೆ ಬೇಕಾದ ಚಿಕಿತ್ಸೆ ಪಡೆಯಿರಿ.

ವಯಸ್ಸಿಗೆ ತಕ್ಕಂತೆ ಆರೈಕೆ : ಯಾವ ಹೇರ್‌ ಮಾಸ್ಕ್ 20ರ ತರುಣಿಗೆ ಒಪ್ಪುತ್ತದೋ, ಅದು 40+ ಹೆಂಗಸಿಗೂ ಓಕೆ ಅಂತೇನಿಲ್ಲ. ನಿಮ್ಮ ವಯಸ್ಸು, ಜೀವನ ಶೈಲಿಗೆ ತಕ್ಕಂತೆ ನಿಮ್ಮ ಕೂದಲಿನ ಆರೈಕೆ ಮಾಡಿ.

ನಿಮ್ಮ ಕೂದಲಿನ ಟೆಕ್ಸ್ ಚರ್

ನಿಮ್ಮ ಜೀನ್ಸ್, ಲೈಫ್‌ ಸ್ಟೈಲ್ ‌ಗೆ ತಕ್ಕಂತೆ ಇರುತ್ತದೆ. ಹೀಗಿದ್ದರೂ ಸಹ, ತುಸು ಶ್ರಮಹಿಸಿ ನಿಮ್ಮ ಕೂದಲಿನ ದೈನಂದಿನ ಆರೈಕೆಯತ್ತ ಗಮನಹರಿಸಿದರೆ, ಕೂದಲನ್ನು ಸೊಂಪಾಗಿ ಕಾಪಾಡಿಕೊಳ್ಳಬಹುದು.

ರುಕ್ಮಿಣಿ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ