ಇಂದು ಮಾರುಕಟ್ಟೆಯಲ್ಲಿ ರಾಶಿ ರಾಶಿ ಬಗೆಯ ಲಿಪ್ ಸ್ಟಿಕ್ಸ್ ನಿಮಗೆ ಲಭ್ಯ. ನಿಮ್ಮ ಆಯ್ಕೆ, ಬಜೆಟ್ ಗೆ ತಕ್ಕಂತೆ ಅವನ್ನು ಆರಿಸಬಹುದು. ಇಲ್ಲಿ ಭಾರತದ ಕಾಸ್ಮೆಟಿಕ್ಸ್ ಮಾರುಕಟ್ಟೆಯಲ್ಲಿ ಟಾಪ್ 5 ಎನಿಸುವ ಲಿಪ್ ಸ್ಟಿಕ್ ಬ್ರಾಂಡ್ಸ್ ಬಗ್ಗೆ ತಿಳಿಯೋಣವೇ…..?
ಇದರಿಂದ ನಿಮ್ಮ ತುಟಿಗೆ ಗ್ಲಾಮರ್ ಲುಕ್ ಮಾತ್ರವಲ್ಲದೆ ಉತ್ತಮ ಆರೋಗ್ಯ ರಕ್ಷಣೆಯೂ ದೊರಕುತ್ತದೆ.
ಲ್ಯಾಕ್ಮೆ : ಇದಂತೂ ಒಂದು ಲಗ್ಝುರಿ ಬ್ರಾಂಡ್. ಇದು ಸುಲಭವಾಗಿ ನಿಮ್ಮ ಬಜೆಟ್ ಗೆ ಹೊಂದುವುದಲ್ಲದೆ, ಸ್ಕಿನ್ ಫ್ರೆಂಡ್ಲಿಯೂ ಹೌದು. ಜೊತೆಗೆ ದೀರ್ಘ ಕಾಲ ಬಾಳಿಕೆ ಬರುತ್ತದೆ, ನಿಮ್ಮ ತುಟಿಗಳಿಗೆ ಎಂದೂ ಯಾವ ಹಾನಿಯನ್ನೂ ಮಾಡುವುದಿಲ್ಲ. ಇದರಲ್ಲಿ ಲ್ಯಾಕ್ಮೆ ಎನ್ ರಿಚ್, ಲ್ಯಾಕ್ಮೆ ಆ್ಯಬ್ ಸಲ್ಯೂಟ್, 95, ಲ್ಯಾಕ್ಮೆ ಲಿಪ್ ಪೌಟ್..... ಇತ್ಯಾದಿ ರೇಂಜ್ ಗಳಿವೆ. ಇವು ಕ್ರೀಮೀ, ಗ್ಲಾಸಿ, ಶಿಮರಿ, ಮ್ಯಾಟ್ ಎಲ್ಲ ರೂಪಗಳಲ್ಲೂ ಲಭ್ಯ. ವಿಶೇಷ ಅಂದ್ರೆ ಇದರಲ್ಲಿ ಕೆಲವು ಬಗೆ ಪ್ರೈಮರ್ ಬೇಸ್ಡ್ ಕೂಡ ಇವೆ. ಇವು ತುಟಿಗೆ ರಂಗು ತುಂಬುವುದರ ಜೊತೆಗೆ ರಕ್ಷಣೆಯನ್ನೂ ಒದಗಿಸುತ್ತವೆ.
ಇವು ನಿಮಗೆ ಮಾರುಕಟ್ಟೆಯಲ್ಲಿ 300-1500 ರೂ.ಗಳ ಒಳಗೆ ದೊರಕುತ್ತವೆ. ಇದರಲ್ಲಿ ನಿಮಗೆ ಎಲ್ಲಾ ಬಗೆಯ ಶೇಡ್ಸ್ ಲಭ್ಯ. ನೀವು ಇನ್ನು ಲ್ಯಾಕ್ಮೆ ಸ್ಟೋರ್ಸ್ ಅಥವಾ ಆನ್ ಲೈನ್ ನಲ್ಲಿ ಕೊಳ್ಳಬಹುದು.
ಲೋರಿಯಲ್ ಪ್ಯಾರಿಸ್ : ಭಾರತದಲ್ಲಿ ಇದರ ಬ್ಯೂಟಿ ಪ್ರಾಡಕ್ಟ್ಸ್ ಗೆ ಒಳ್ಳೆಯ ಹೆಸರಿದೆ. ಅದರಲ್ಲೂ ವಿಶೇಷವಾಗಿ ಲಿಪ್ ಸ್ಟಿಕ್ಸ್ ನಲ್ಲಿ. ಏಕೆಂದರೆ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡೇ ಇದು ಪ್ರಾಡಕ್ಟ್ಸ್ ಬಿಡುಗಡೆ ಈ ಬ್ರಾಂಡ್ ನಲ್ಲಿ ನಿಮಗೆ ಲಿಪ್ ಸ್ಟಿಕ್ ನ ಅತ್ಯಧಿಕ ಶೇಡ್ಸ್ ಸಿಗುತ್ತವೆ. ಈ ಬ್ರಾಂಡ್ ಹೆಚ್ಚೂಕಡಿಮೆ ಪ್ರತಿಯೊಂದು ಫ್ಯಾರ್ಮ್ಯಾಟ್ ನಲ್ಲೂ ಲಿಪ್ ಸ್ಟಿಕ್‌ಒದಗಿಸುತ್ತದೆ. ಉದಾ: ಲಿಕ್ವಿಡ್, ಗ್ಲಾಸಿ, ಮ್ಯಾಟ್, ಬುಲೆಟ್ಸ್, ಮೆಲ್ಟಿ ಬಾಮ್..... ಇತ್ಯಾದಿ. ನಿಮ್ಮ ಆಯ್ಕೆಗೆ ತಕ್ಕಂತೆ ಲಿಪ್ ಸ್ಟಿಕ್ ನ ಟೈಪ್‌ಕಲರ್ ಶೇಡ್ ಆರಿಸಿ. ಇವು ನಿಮಗೆ 400-2000 ರೂ.ಗಳ ಒಳಗೆ ಸಿಗುತ್ತವೆ.
ನೈಕಾ : ಈ ಬ್ರಾಂಡ್ ಬಹಳ ಹಳೆಯದಲ್ಲ, ಆದರೆ ಇದು ಅತಿ ಕಡಿಮೆ ಕಾಲದಲ್ಲೇ ತನ್ನ ಗ್ರಾಹಕರ ಮನಸ್ಸು ಸೆಳೆದಿದೆ. ಕಾಲೇಜು ಕಿಶೋರಿಯರಿಗಂತೂ ಇದು ಅತಿ ಅಚ್ಚು ಮೆಚ್ಚಿನ ಬ್ರಾಂಡ್ ಆಗಿದೆ. ಈ ಲಿಪ್ ಸ್ಟಿಕ್ಸ್ ನಿಮಗೆ ಮ್ಯಾಟ್, ಕ್ರೀಮೀ ಮ್ಯಾಟ್, ಅಲ್ಟ್ರಾ ಮ್ಯಾಟ್, ಲಿಪ್ ಕ್ರೆಯಾನ್, ಲಿಪ್ ಪ್ಲೇಟ್, ಲಿಕ್ವಿಡ್, ಮಿನಿ ಲಿಪ್ ಸ್ಟಿಕ್...... ಇತ್ಯಾದಿ ಬಗೆಗಳಲ್ಲಿ ಲಭ್ಯ.
ಈ ಬ್ರಾಂಡ್ ನ ವೈಶಿಷ್ಟ್ಯ ಎಂದರೆ 100% ಕ್ರುಯೆಲ್ಟಿ ಪ್ಯಾರಾಬೀನ್ ಫ್ರೀ. ಜೊತೆಗೆ ಇದು ಎಸೆನ್ಶಿಯಲ್ ಆಯಿಲ್‌ಆ್ಯಂಟಿ ಆಕ್ಸಿಡೆಂಟ್ಸ್ ನಿಂದ ಸಮೃದ್ಧ. ಹೀಗಾಗಿ ಇವು ತುಟಿಗಳನ್ನು ಸಾಫ್ಟ್ ಹೈಡ್ರೇಟ್ ಸ್ಮೂತ್ ಆಗಿರಿಸಿ ಅದರ ಡ್ರೈನೆಸ್ ನ್ನು ಓಡಿಸುತ್ತವೆ. ಈ ಲಿಪ್ ಸ್ಟಿಕ್ಸ್ ಎಷ್ಟು ಲೈಟ್ ವೆಲ್ವೆಟ್ ಎಂದರೆ, ಇದನ್ನು ತೀಡಿದ ನಂತರ ತುಟಿಯ ಮೇಲೆ ಏನೋ ಕೂತಿದೆ ಎಂದು ನಿಮಗೆ ಅನಿಸುವುದೇ ಇಲ್ಲ. ಈ ಲಿಪ್ ಸ್ಟಿಕ್‌ನಿಮಗಗೆ 200-1000 ರೂ. ಒಳಗೆ ಲಭ್ಯ.