ಸಾಮಾನ್ಯವಾಗಿ ಒಬ್ಬ ಮಹಿಳೆಯ ಜೀವನದ ಆರಂಭ ಆದೇಶ ಪಾಲನೆ, ಸಂಸ್ಕಾರ ಹಾಗೂ ಪ್ರೀತಿಪಾತ್ರ ಮಗಳ ರೂಪದಲ್ಲಿ ಇರುತ್ತದೆ. ಅವಳ ಹೆಗಲ ಮೇಲೆ ಒಂದೆಡೆ ಕುಟುಂಬದ ಗೌರವ ಕಾಪಾಡುವ ಹೊಣೆ ಇರುತ್ತದಾದರೆ, ಇನ್ನೊಂದೆಡೆ ಮನೆಯವರ ಅಪೇಕ್ಷೆಯನ್ನು ವಾಸ್ತವಕ್ಕೆ ಇಳಿಸುವ ಜವಾಬ್ದಾರಿ ಇರುತ್ತದೆ. ಅವಳು ಅಮ್ಮ ಅಪ್ಪ ಹೇಳಿದ್ದನ್ನು ಕೇಳಬೇಕು, ಅನಾಹುತವೇನೂ ಆಗಬಾರದು ಎಂಬ ಅಪೇಕ್ಷೆ ಇಟ್ಟುಕೊಳ್ಳಲಾಗುತ್ತದೆ.
ಕೆಲವು ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಮುಂದುವರಿಯುವ ಅವಕಾಶ ದೊರಕುತ್ತದಾದರೆ, ಇನ್ನು ಕೆಲವು ಹೆಣ್ಣುಮಕ್ಕಳಿಗೆ ಆ ಅವಕಾಶ ಸಿಗುವುದಿಲ್ಲ. ಯಾವ ಕುಟುಂಬಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೋ, ಅವರು ಕೆರಿಯರ್ ನ ಉತ್ತುಂಗ ತಲುಪುತ್ತಾರೆ. ಮದುವೆಯ ಬಳಿಕ ಆಕೆ ಅತ್ತೆ ಮನೆಗೆ ಹೋದಾಗ, ಅಲ್ಲಿನ ವಾತಾವರಣ ಅವಳಿಗೆ ಅಪರಿಚತವಾಗಿರುತ್ತದೆ. ಹೊಸ ಸ್ಥಳ, ಹೊಸ ಜನರು, ಹೊಸ ಅಪೇಕ್ಷೆಗಳ ನಡುವೆ ಆಕೆ ತನ್ನ ಅಸ್ತಿತ್ವವನ್ನೇ ಮರೆತುಬಿಡುತ್ತಾಳೆ. ಒಂದು ವೇಳೆ ಗಂಡ ಉದಾರ ಸ್ವಭಾವದವನಾಗಿದ್ದರೆ, ಅವಳಿಗೆ ಮುಂದುವರಿಯುವ ಅವಕಾಶ ಸಿಗುತ್ತದೆ.
ಅಂದಹಾಗೆ ಮಹಿಳೆಯೊಬ್ಬಳಿಗೆ ಮೊದಲ ಆದ್ಯತೆ ಕುಟುಂಬವೇ ಆಗಿರುತ್ತದೆ. ಅದರಲ್ಲೂ ವಿಶೇಷವಾಗಿ ತಾಯಿಯಾದ ಬಳಿಕ ಅವಳ ಜೀವನ ಪರಿಪೂರ್ಣವಾಗಿ ಮಗುವಿನ ಆಸುಪಾಸು ಸೀಮಿತವಾಗಿ ಬಿಡುತ್ತದೆ. ಮಗಳು ಹಾಗೂ ಹೆಂಡತಿಯಾಗಿ ಆರಂಭವಾದ ಅವಳ ಜೀವನ ಪಯಣ ತಾಯಿಯಾದ ಬಳಿಕ ಅಲ್ಲಿಯೇ ಅಂತ್ಯಗೊಳ್ಳುತ್ತದೆ. ಅವಳು ತನ್ನನ್ನು ತಾನು ಏನೇನೋ ಆಗಿರಬೇಕೆಂದು ಕಂಡ ಕನಸು ನನಸಾಗದೆ ಒಳಗೊಳಗೆ ಬೇಯುತ್ತಾಳೆ ಒಂದು ಕಡೆ ಅವಳಿಗೆ ಸಮಾಜ ಮುಂದುವರಿಯಲು ಅವಕಾಶ ಕೊಡುವುದಿಲ್ಲ, ಇನ್ನೊಂದೆಡೆ ಅವಳು ತಾನೇ ಧೈರ್ಯ ಒಗ್ಗೂಡಿಸಿ ಮುಂದೆ ಸಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ
ತಾಯಿಯಾದ ಬಳಿಕ ಮಹಿಳೆಯೊಬ್ಬಳ ಜೀವನ ಕೊನೆಗೊಳ್ಳುವುದಿಲ್ಲ ಎಂಬ ಮಾತನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ತಾಯಿಯಾದ ಬಳಿಕ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಬಹುದು. ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು.
ನಮಗಿಂದು ಅದೆಷ್ಟೋ ಮಹಿಳೆಯರ ಉದಾಹರಣೆಗಳು ನೋಡಲು ಸಿಗುತ್ತವೆ, ಅವರು ತಾಯಿಯಾದ ಬಳಿಕ ತಮ್ಮ ಕೆರಿಯರ್ ಗೆ ಹೊಸ ಹೊಸ ರೂಪ ಕೊಟ್ಟರು. ಮನೆಯನ್ನು ನಿರ್ವಹಿಸುವುದರ ಜೊತೆ ಜೊತೆಗೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡರು.
ಇಬ್ಬರು ಪುಟ್ಟ ಮಕ್ಕಳ ತಾಯಿಯಾದ ದೀಕ್ಷಾ ಇದಕ್ಕೊಂದು ಒಳ್ಳೆಯ ಉದಾಹರಣೆ. ಅವರು ಎಂಟರ್ ಪ್ರೈಸಸ್ ಹಾಗೂ ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಆಗಿ ಹೆಸರುವಾಸಿ.
ಆಕರ್ಷಕ ವ್ಯಕ್ತಿತ್ವ ಮತ್ತು ಸ್ಲಿಮ್ ಫಿಗರ್ ಹೊಂದಿರುವ ದೀಕ್ಷಾರನ್ನು ನೋಡಿ ಯಾರೊಬ್ಬರೂ ಇವರು ಇಬ್ಬರು ಮಕ್ಕಳ ತಾಯಿ ಎಂದು ಹೇಳಲು ಸಾಧ್ಯವಿಲ್ಲ. ದೀಕ್ಷಾ ತಮ್ಮ ಕೆರಿಯರ್ ನ ಆರಂಭವನ್ನು ಮೀಡಿಯಾ ಪಿಆರ್ ಪ್ರೊಫೆಶನ್ ಆಗುವುದರ ಮೂಲಕ ಆರಂಭಿಸಿದರು. ಅವರು ಮಾರ್ಕೆಟಿಂಗ್ ಹಾಗೂ ಕಾರ್ಪೋರೇಟ್ ಕಮ್ಯುನಿಕೇಶನ್ ಹೆಡ್ ರೂಪದಲ್ಲಿ ಹಲವು ವರ್ಷಗಳ ಕಾಲ ದೊಡ್ಡ ದೊಡ್ಡ ಲೈಫ್ ಸ್ಟೈಲ್ ಹಾಗೂ ಹಾಸ್ಪಿಟಾಲಿಟಿ ಬ್ರಾಂಡ್ ಗಳ ಜೊತೆ ಕೆಲಸ ಮಾಡಿದ್ದಾರೆ.
ಮದುವೆಯಾದ ಬಳಿಕ ಕೆಲವು ವರ್ಷಗಳ ಕಾಲ ಅವರು ಕೆಲಸ ಮಾಡಿದರು. ಆ ನಂತರ ಇಬ್ಬರು ಮಕ್ಕಳು ಹುಟ್ಟಿದ ಬಳಿಕ ಅವರು ಕೆಲಸಕ್ಕೆ ಹೊಸ ರೂಪ ಕೊಡುವುದು ಮತ್ತು ಒಬ್ಬ ಎಂಟರ್ ಪ್ರಿನ್ಯೂರ್ ಮತ್ತು ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಆಗಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುವ ನಿರ್ಧಾರ ಮಾಡಿದರು.
ಈ ಬಗ್ಗೆ ದೀಕ್ಷಾ ಹೀಗೆ ಹೇಳುತ್ತಾರೆ, “ನನಗೆ 1 ವರ್ಷ ಹಾಗೂ 3 ವರ್ಷದ ಇಬ್ಬರು ಮಕ್ಕಳಿದ್ದಾರೆ. ಇಂತಹದರಲ್ಲಿ 99 ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಫ್ರೀಲಾನ್ಸಿಂಗ್ ಆಗಿ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಲು ನನ್ನನ್ನು ನಾನು ಸನ್ನದ್ಧುಗೊಳಿಸಿದೆ.
“ನನ್ನ ಹಳೆಯ ಕಾಂಟ್ಯಾಕ್ಟ್ ಗಳು ನನ್ನ ಉಪಯೋಗಕ್ಕೆ ಬಂದವು. ನನಗೆ ಮುಂದುವರಿಯಲು ಅವಕಾಶ ದೊರಕಿತು. ಈ ರೀತಿಯಲ್ಲಿ ಕೆಲಸ ಮಾಡಲು ಸಮಯದ ಲೆಕ್ಕಾಚಾರದಲ್ಲಿ ಸಾಕಷ್ಟು ಫ್ಲೆಕ್ಸಿಬಿಲಿಟಿ ಇರುತ್ತದೆ ಮತ್ತು ಮಕ್ಕಳ ಜೊತೆ ಕೆಲಸ ಮಾಡುವುದು ಕಠಿಣ ಆಗಿರುವುದಿಲ್ಲ. ನನ್ನ ಗಂಡ ಹಾಗೂ ಅತ್ತೆ ನನಗೆ ಸಂಪೂರ್ಣ ಬೆಂಬಲ ಕೊಟ್ಟರು.
“ಕಳೆದ 1 ವರ್ಷದ ಅವಧಿಯಲ್ಲಿ ನಾನು 100ಕ್ಕೂ ಹೆಚ್ಚು ಬ್ಯಾಂಕ್ ಗಳ ಜೊತೆ ಕೆಲಸ ಮಾಡಿದೆ. ಈ ರೀತಿಯಾಗಿ ನಾನು ನನ್ನ ಪ್ರೊಫೆಷನಲ್ ಲೈಫ್ ನ ಜೊತೆಗೆ ತಾಯ್ತನದ ಸುಖವನ್ನು ಕೂಡ ಎಂಜಾಯ್ ಮಾಡಿದೆ. ಮದುವೆಯ ಬಳಿಕ ನಿಮ್ಮ ಕೆರಿಯರ್ನಿಂತಲ್ಲೇ ನಿಲ್ಲಬಾರದು. ಮನಸ್ಸಿನಲ್ಲಿ ದೃಢ ನಿರ್ಧಾರವಿದ್ದರೆ ನೀವು ಖಂಡಿತವಾಗಿಯೂ ಮುಂದೆ ಸಾಗುತ್ತೀರಿ.”
ತಾಯಿಯಾಗಿಯೂ ಖ್ಯಾತರಾದವರು
ಮೇರಿ ಕಾಮ್ ಬಾಕ್ಸಿಂಗ್
ಜಗತ್ತಿನಲ್ಲಿ ಮೇರಿ ಕಾಮ್ ಹೆಸರು ಒಂದು ಅದ್ಭುತ ಉದಾಹರಣೆಯಾಗಿದೆ. 3 ಮಕ್ಕಳಿಗೆ ಜನ್ಮ ನೀಡಿದ ಬಳಿಕ ಅವರು ರಿಂಗ್ ನಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸಿದರು. ಅವರು ಈವರೆಗೆ 6 ಸಲ ವಿಶ್ವ ಚಾಂಪಿಯನ್ ಆಗಿದ್ದಾರೆ. ಎಂ.ಸಿ. ಮೇರಿ ಕಾಮ್ ಭಾರತಕ್ಕಾಗಿ ಒಲಿಂಪಿಕ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸಿಂಗ್ ಪಟು. 2003ರಲ್ಲಿ ಮೇರಿ ಕಾಮ್ ರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 3 ವರ್ಷಗಳ ಬಳಿಕ 2006ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 2009ರಲ್ಲಿ ರಾಜೀಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟೈಕ್ವಾಂಡೊ ಚಾಂಪಿಯನ್
ನೇಹಾ ಉ.ಪ್ರದೇಶದ ಮಥುರಾದ ಟೈಕ್ವಾಂಡೊ ಚಾಂಪಿಯನ್ ನೇಹಾರ ಕಥೆ ಎಂಥವರಿಗೂ ಒಂದು ಪ್ರೇರಣೆಯಾಗಿದೆ. ಅದರಲ್ಲೂ ಮದುವೆಯಾದ ಬಳಿಕ ತಮ್ಮ ಭವಿಷ್ಯ ಮುಗಿದೇ ಹೋಯಿತು ಎಂದು ಭಾವಿಸುವವರಿಗೆ. ನೇಹಾ ಮದುವೆಯಾದ ಬಳಿಕ ಕೇವಲ ಓದನ್ನಷ್ಟೇ ಮುಂದುವರಿಸಲಿಲ್ಲ. ತಮ್ಮ ಕಠಿಣ ಪರಿಶ್ರಮದ ಬಲದಿಂದ ನ್ಯಾಷನಸ್ ಟೈಕ್ವಾಂಡಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಕೂಡ ಪಡೆದರು.
ಇತರೆ ಹುಡುಗಿಯರ ಹಾಗೆ ನೇಹಾರಿಗೂ ಕೂಡ ಮದುವೆಯ ಬಳಿಕ ತಾನು ಈ ಕ್ರೀಡೆಯಲ್ಲಿ ಮುಂದುವರಿಯಲು ಆಗುವುದಿಲ್ಲ ಎಂದು ಅನಿಸುತ್ತಿತ್ತು. ಆದರೆ ಮಕ್ಕಳು ಬೆಳೆದು ದೊಡ್ಡವರಾಗಿ ಶಾಲೆಗೆ ಹೋಗತೊಡಗಿದಾಗ ಅವರು ಈ ಕ್ರೀಡೆಯ ಪ್ರಾಕ್ಟೀಸ್ ಆರಂಭಿಸಿದರು. ಅವರ ಉತ್ಸಾಹ ಗಮನಿಸಿ ಕುಟುಂಬದವರೂ ಅವರಿಗೆ ಬೆಂಬಲ ಕೊಟ್ಟರು.
ಓಟದ ರಾಣಿ ಪಿ.ಟಿ. ಉಷಾ
ಪಿ.ಟಿ. ಉಷಾ ಕೇವಲ ಕ್ರೀಡಾ ಪಟುಗಳಿಗಷ್ಟೇ ಪ್ರೇರಣೆಯಾಗಲಿಲ್ಲ. ಈಗಲೂ ಯುವ ಅಥ್ಲೀಟ್ ಗಳಿಗೆ ಕೆರಿಯರ್ ರೂಪಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಪಿ.ಟಿ. ಉಷಾ ಓಟದ ಅಭ್ಯಾಸವನ್ನು ನಾಲ್ಕನೇ ತರಗತಿಯಲ್ಲಿರುವಾಗ ಆರಂಭಿಸಿದ್ದರು. 1980ರಲ್ಲಿ ತಮ್ಮ 16ನೇ ವರ್ಷದಲ್ಲಿ ಪಿ.ಟಿ. ಉಷಾ ಮಾಸ್ಕೋದಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದರು. ಸಿಯೋಲ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು 5 ಚಿನ್ನದ ಪದಕ ಗೆದ್ದಿತ್ತು. ಅದರಲ್ಲಿ ಉಷಾರಿಗೆ 4 ಸ್ವರ್ಣ ಪದಕ, 1983ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 1995ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮದುವೆ, ತಾಯ್ತನ, ವಾಪಸಾತಿ
1991ರಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಉಷಾ ಅಥ್ಲೆಟಿಕ್ಸ್ ನಿಂದ ಬ್ರೇಕ್ ಪಡೆದು ಮಗುವಿಗೆ ಜನ್ಮ ನೀಡಿದರು. ಗಂಡ ವಿ. ಶ್ರೀನಿವಾಸನ್ ರ ಪ್ರೇರಣೆ, ಪ್ರೋತ್ಸಾಹದ ಮೇರೆಗೆ ಅವರು ಪುನಃ ಕ್ರೀಡಾರಂಗಕ್ಕೆ ಮರಳಿದರು. 1997ರಲ್ಲಿ ಅವರು ಕ್ರೀಡಾ ಕೆರಿಯರ್ ಗೆ ವಿದಾಯ ಹೇಳಿದಾಗ, 103 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದರು. ಒಲಿಂಪಿಕ್ ಪದಕ ಗೆಲ್ಲುವು ಉತ್ಸಾಹಿ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಒಂದು ಅಕಾಡೆಮಿ ಆರಂಭಿಸಿದ್ದಾರೆ. ಉಷಾ ಈಗಲೂ ಕ್ರಿಯಾಶೀಲರಾಗಿದ್ದಾರೆ.
ಇಳಿ ವಯಸ್ಸಿನಲ್ಲಿ ಅಥ್ಲೆಟಿಕ್ ಕೆರಿಯರ್
`ಮಿರ್ಯಾಕ್ ಫ್ರಮ್ ಚಂಡೀಗಡ್’ ಹೆಸರಿನಿಂದ ಕರೆಯಲ್ಪಡುವ 102 ವರ್ಷದ ಮನ್ ಕೌರ್ ಭಾರತದ ಅತ್ಯಂತ ಹಿರಿಯ ಮಹಿಳಾ ಅಥ್ಲೀಟ್ ಆಗಿದ್ದಾರೆ. ಅವರು 93ನೇ ವಯಸ್ಸಿನಲ್ಲಿ ಅಥ್ಲಿಟಿಕ್ಸ್ ನಲ್ಲಿ ಕೆರಿಯರ್ ಆರಂಭಿಸಿದ್ದರು. ಅವರಿಗೆ ಭಾರತ ಸರ್ಕಾರ `ನಾರಿ ಶಕ್ತಿ’ ಪುರಸ್ಕಾರ ನೀಡಿ ಗೌರವಿಸಿದೆ.
ಅತ್ಯುತ್ಸಾಹ ಅಗತ್ಯ
ಯಾವ ವಯಸ್ಸಿನಲ್ಲಿ ಮನುಷ್ಯ ಒಂದು ಮೂಲೆಯಲ್ಲಿ ಕುಳಿತು ತನ್ನ ಕೊನೆಯ ದಿನಗಳನ್ನು ಎಣಿಸಬೇಕಾಗಿರುತ್ತೋ, ಆ ವಯಸ್ಸಿನಲ್ಲಿ ಯಾವುದೇ ಮಹಿಳೆ ಅಥ್ಲೆಟಿಕ್ಸ್ ಮೈದಾನದಲ್ಲಿ ಕೆರಿಯರ್ ಆರಂಭಿಸಿ, ಯಶಸ್ಸನ್ನು ಕಂಡುಕೊಳ್ಳುತ್ತಾರೆಂದರೆ, ಏನು ಹೇಳಬೇಕು? ಇದು ಅತ್ಯುತ್ಸಾಹವೇ ಅಲ್ಲವೇ, 93ನೇ ವಯಸ್ಸಿನಲ್ಲಿ ಮನ್ ಕೌರ್ ಅಥ್ಲೆಟಿಕ್ಸ್ ನಲ್ಲಿ ಪಾದಾರ್ಪಣೆ ಮಾಡುತ್ತಾರೆ ಮತ್ತು ಅದೇ ವರ್ಷ ದೀರ್ಘ ಓಟದ (3.2 ಕಿ.ಮೀ) ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ 100 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದರು. 2018ರಲ್ಲಿ ಆಕ್ಲೆಂಟ್ ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡೆಯಲ್ಲಿ 100 ಮೀಟರ್ ಸ್ಪ್ರಿಂಟ್ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದರು. ಮನ್ ಕೌರ್ ಗೆ ಪ್ರೇರಣೆ ಹಾಗೂ ಪ್ರೋತ್ಸಾಹ ನೀಡಿದ್ದು ಅವರ 78 ವರ್ಷದ ಮಗ ಗುರುದೇವ್. ಅವರು ಕೂಡ ಅಥ್ಲೀಟ್ ಆಗಿದ್ದಾರೆ. ಮನ್ ಕೌರ್ರಿಗೆ ಅಡ್ವೆಂಚರ್ಸ್ಪೋರ್ಟ್ಸ್ ನಲ್ಲೂ ಆಸಕ್ತಿಯಿದೆ. ಆಕ್ಲೆಂಟ್ ನ ಸ್ಕೈ ಟವರ್ ನ ತುದಿಯಲ್ಲಿ ನಡಿಗೆ ಹೊರಟ ಗೌರವ್ ಅವರಿಗೆ ಪ್ರಾಪ್ತಿಯಾಗಿದೆ. 102 ವರ್ಷದ ಮನ್ ಕೌರ್ ಈವರೆಗೆ 20ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.
ತರಬೇತಿ ಹಾಗೂ ಡಯೆಟ್ ಪ್ಲಾನ್
ಮನ್ ಕೌರ್ ಒಳ್ಳೆಯ ಡಯೆಟ್ ನ ಜೊತೆಗೆ ನಿಯಮಿತವಾಗಿ ಟ್ರೇನಿಂಗ್ ಕೂಡ ಪಡೆಯುತ್ತಾರೆ ಹಾಗೂ ಜಿಮ್ ಗೂ ಹೋಗುತ್ತಾರೆ. ಅವರು ಮೈದಾನಕ್ಕೆ ಇಳಿದಾಗೆಲ್ಲ 5 ಸಲ 50 ಮೀಟರ್ ಓಡುತ್ತಾರೆ. 100 ಮೀ. ಹಾಗೂ 200 ಮೀಟರ್ 2 ಸಲ ಓಡುತ್ತಾರೆ. ಅವರು ದಿನಕ್ಕೆ 2 ಸಲ ಮೊಳಕೆ ತೆಗೆದ ಗೋಧಿಯ ರೋಟಿ ತಿನ್ನುತ್ತಾರೆ. ಹಣ್ಣುಗಳ ರಸ, ವೀಟ್ ಗ್ರಾಸ್, ನಟ್ಸ್ ಮತ್ತು ಚೀಸ್ ನ ಸೇವನೆ ಮಾಡುತ್ತಾರೆ.
ಕೇಲ ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲ, ಇತರೆ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಧನೆ ಮೆರೆದಿದ್ದಾರೆ. ಹೀರೋಯಿನ್ ಗಳಲ್ಲಿ ಕರೀನಾ ಕಪೂರ್, ಶಿಲ್ಪಾ ಶೆಟ್ಟಿ, ಕಾಜೋಲ್, ಐಶ್ವರ್ಯಾ ರೈ, ರಾಣಿ ಮುಖರ್ಜಿ, ವಿದ್ಯಾಬಾಲನ್, ಮಲೈಕಾ ಅರೋರಾರಂತಹ ಬಹಳಷ್ಟು ನಾಯಕಿಯರು ತಮ್ಮ ಕೆರಿಯರ್ ನ್ನು ಮುಂದುವರಿಸಿಕೊಂಡು ಹೋಗಿ ಸದಾ ಸುದ್ದಿಯಲ್ಲಿದ್ದಾರೆ. ಅದೇ ರೀತಿ ಸಾವಿರಾರು ಎಂಟರ್ ಪ್ರೆನ್ಯೂರ್ ಗಳಿದ್ದು ಅವರು ತಾಯಿಯಾದ ಬಳಿಕ ತಮ್ಮನ್ನು ತಾವು ಸಮರ್ಥರು ಎಂದು ಸಾಬೀತುಪಡಿಸಿ ತೋರಿಸುತ್ತಿದ್ದಾರೆ.
ಯಶಸ್ವಿಯಾಗಲು ಮುಖ್ಯ ಸಂಗತಿಗಳು
ಫೋಕಸ್ ಅಗತ್ಯ :
ಒಬ್ಬ ಮಹಿಳೆ ಮದುವೆ ಹಾಗೂ ಮಗುವಿನ ಜನನದ ಬಳಿಕ ತನ್ನ ಕೆರಿಯರ್ ನ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದಾಗಿದೆ. ಆದರೆ ಇದಕ್ಕಾಗಿ ಎಲ್ಲಕ್ಕೂ ಮೊದಲು ನಾನು ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎನ್ನುವುದರ ಬಗ್ಗೆ ಫೋಕಸ್ ಮಾಡಬೇಕು. ಮನಸ್ಸಿನಲ್ಲಿ ಗೊಂದಲವಿದ್ದರೆ, ಮುಂದುವರಿಯಲು ಸಾಧ್ಯವಾಗುವುದಿಲ್ಲ. ಯಾವ ಕ್ಷೇತ್ರದಲ್ಲಿ ಆಸಕ್ತಿ ಅದೆ, ಸಾಮರ್ಥ್ಯ ಇದೆ ಎನ್ನುವುದನ್ನು ತಿಳಿದುಕೊಂಡ ಬಳಿಕವೇ ಅತ್ಯುತ್ತಮ ರೀತಿಯಲ್ಲಿ ಮುಂದುವರಿಯಬಹುದು ಹಾಗೂ ಅದರಲ್ಲಿ ಯಶಸ್ವಿಯಾಗಬಹುದು.
ಫ್ರೀಲಾನ್ಸ್ ಕೂಡ ಒಳ್ಳೆಯ ಆಪ್ಶನ್ :
ಮದುವೆ ಹಾಗೂ ಮಕ್ಕಳಾದ ಬಳಿಕ ನೀವು ಮುಂಜಾನೆಯಿಂದ ಸಂಜೆಯತನಕ ಹೊರಗೆ ಹೋಗಿ ಕೆಲಸ ಮಾಡಬೇಕೆಂದಿಲ್ಲ, ನೀವು ಮನೆಯಲ್ಲಿಯೇ ಕೆಲವೇ ಗಂಟೆಗಳ ಅವಧಿಗಾಗಿಯೂ ಕೆಲಸ ಮಾಡಬಹುದು. ಮನೆಯ ಕೆಲಸ ಕಾರ್ಯಗಳಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಜೊತೆಗೆ ಮಕ್ಕಳೇ ಯೋಗಕ್ಷೇಮ ಸರಿಯಾಗಿ ನೋಡಿಕೊಳ್ಳಬಹುದು.
ಅದಕ್ಕಾಗಿ ನೀವು ಯಾವುದಾದರೂ ಫ್ರೀಲಾನ್ಸಿಂಗ್ ಆಪ್ಶನ್ ನ್ನು ಹುಡುಕಬಹುದು. ಮದುವೆಗೂ ಮುಂಚೆ ನೀವು ಎಲ್ಲಿಯಾದರೂ ಕೆಲಸ ಮಾಡಿದ್ದರೆ, ಹಳೆಯ ಸಂಪರ್ಕಗಳು ನಿಮ್ಮ ನೆರವಿಗೆ ಬರಬಹುದು. ಒಂದು ವೇಳೆ ನೀವು ಯಾವದೇ ಕೆಲಸ ಮಾಡಿರದಿದ್ದರೆ, ನೀವು ಫ್ರೆಶರ್ ಆಗಿದ್ದರೆ, ನಿಮ್ಮ ಕ್ರಿಯೇಟಿವಿಟಿಯಿಂದ ಯಾವುದಾದರೂ ಹೊಸತನ ತೋರಿಸಿ ನಿಮಗಾಗಿ ಕೆಲಸವನ್ನು ಹುಡುಕಬಹುದು.
ನೀವ ಎಂತಹದೊಂದು ಹೊಸ ಕೆಲಸ ಆರಂಭ ಮಾಡಬಹುದೆಂದರೆ, ಅದರಲ್ಲಿ ಹೆಚ್ಚು ಧಾವಂತ ಮಾಡುವಂತಿರಬಾರದು ಮತ್ತು ನೀವು ಅದನ್ನು ಸುಲಭವಾಗಿ ಮ್ಯಾನೇಜ್ ಮಾಡುವಂತಿರಬೇಕು. ಬೇರೆಯವರ ಭರವಸೆಯ ಮೇಲೆ ಏನನ್ನು ಸಾಧಿಸಲು ಆಗದು.
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ :
ಎಲ್ಲಿಯವರೆಗೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರುವುದಿಲ್ಲವೇ ಅಲ್ಲಿಯವರೆಗೆ ನಿಮ್ಮ ಮನೆಯವರು ಕೂಡ ನಿಮಗೆ ಪ್ರೋತ್ಸಾಹ ನೀಡಲು ಯೋಚಿಸುದಿಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ, ನಾನು ಎಲ್ಲವನ್ನೂ ಸರಿಯಾಗಿ ನಿಭಾಯಿಸಬಲ್ಲೆ ಎಂಬ ದೃಢ ನಿರ್ಧಾರ ಇದ್ದರೆ, ಆಗ ದಾರಿ ತಂತಾನೇ ತೆರೆದುಕೊಳ್ಳುತ್ತದೆ. ಮಗು ಜನಿಸಿದ ಬಳಿಕ ಕೆಲಸ ಮಾಡುವುದೆಂದರೆ, ನೀವು ಮಗುವನ್ನು ಏಕಾಂಗಿಯಾಗಿ ಬಿಟ್ಟುಬಿಡಬೇಕು ಎಂದಲ್ಲ. ಮಗುವಿನ ನಿರ್ವಹಣೆಯ ಉಪಾಯಗಳನ್ನು ಅನುಸರಿಸುತ್ತ ನಿಮ್ಮ ವ್ಯಕ್ತಿತ್ವಕ್ಕೊಂದು ಹೊಸ ರೂಪ ಕೊಡಲು ಪ್ರಯತ್ನಿಸಿ. ಮಗು ಚಿಕ್ಕದಾಗಿದ್ದರೆ, ಅದು ನಿಮ್ಮನ್ನು ಬಿಟ್ಟು ಇರಲು ಸಾಧ್ಯವಿಲ್ಲದಿದ್ದಲ್ಲಿ, ನೀವು ಇನ್ನಷ್ಟು ದಿನ ಕಾಯಲು ಪ್ರಯತ್ನಿಸಿ. ಮಗು ದೊಡ್ಡದಾದ ಬಳಿಕ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಬಹುದು.
ನಿಮ್ಮ ದೃಷ್ಟಿಕೋನ ಮುಕ್ತವಾಗಿರಲಿ :
ಮದುವೆಯಾಯಿತು, ಮಗುವಾಯಿತು. ಇದರರ್ಥ ನಿಮ್ಮ ಭವಿಷ್ಯ ಮುಗಿದೇ ಹೋಯಿತು ಎಂದಲ್ಲ. ನಿಮ್ಮ ಕಣ್ಣುಗಳನ್ನು ಯಾವಾಗಲೂ ಮುಕ್ತವಾಗಿರಿಸಿಕೊಳ್ಳಿ. ನೀವು ಯಾವಾಗಲೂ ಅವಕಾಶಕ್ಕಾಗಿ ಕಾಯುತ್ತಾ ಇರಿ.
ಯಾವುದೇ ವಯಸ್ಸಿನಲ್ಲಾದರೂ ಕೆರಿಯರ್ ರೂಪಿಸಿಕೊಳ್ಳಬಹುದು ಎಂಬ ಸಂಗತಿ ನಿಮ್ಮ ನೆನಪಿನಲ್ಲಿರಲಿ. ನಿಮ್ಮ ಪರಿಚಿತರು ಮತ್ತು ಗೆಳತಿಯರ ಸಂಪರ್ಕದಲ್ಲಿರಿ. ಅದರಲ್ಲೂ ಎಂತಹ ಮಹಿಳೆಯರ ಸಂರ್ಪಕದಲ್ಲಿರುವುದು ಉತ್ತಮವೆಂದರೆ, ಅವರು ಮದುವೆ ಹಾಗೂ ಮಗುವಾದ ಬಳಿಕ ಏನನ್ನಾದರೂ ಸಾಧಿಸಿ ತೋರಿಸಿರಬೇಕು. ಅಂಥವರನ್ನು ನೋಡಿ ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಉಪಾಯ ಅವಶ್ಯವಾಗಿ ಹೊಳೆಯಬಹುದು.
ಸಮಯ ಪಾಲನೆ ಕೂಡ ಮುಖ್ಯ :
ಮದುವೆ ಹಾಗೂ ಮಗುವಾದ ಬಳಿಕ ನೀವು ಯಾವುದಾದರೂ ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದರೆ ಅಥವಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ನೀವು ಎಲ್ಲಕ್ಕೂ ಮೊದಲು ಟೈಮ್ ಮ್ಯಾನೇಜ್ ಮೆಂಟ್ ಮಾಡುವುದನ್ನು ಕಲಿಯಿರಿ. ಎಲ್ಲಕ್ಕೂ ಮೊದಲು ನೀವು ಮನೆಯ ಕೆಲಸಗಳನ್ನು ನಿರ್ದಿಷ್ಟ ಸಮಯಕ್ಕೆ ಮುಗಿಸಬೇಕು ಹಾಗೂ ಆ ಬಳಿಕ ಆಫೀಸ್ ಕೆಲಸ ಶುರು ಮಾಡಬೇಕು ಎನ್ನುವುದನ್ನು ನಿರ್ಧರಿಸಬೇಕು. ಅದಕ್ಕಾಗಿ ನೀವು ಗೊಂದಲಕ್ಕೆ ಒಳಗಾಗುವುದು ಮತ್ತು ಆತುರಾತುರದಲ್ಲಿ ಕೆಲಸ ಮಾಡುವಂತಾಗಬಾರದು ಮತ್ತು ಮನೆಯವರಿಂದಲೂ ಮಾತು ಕೇಳಿಸಿಕೊಳ್ಳುವಂತಾಗಬಾರದು. – ಗಿರಿಜಾ
ಮದುವೆಯ ಬಳಿಕ ನನ್ನ ಕೆರಿಯರ್ ಮುಗಿದುಹೋಯಿತು ಎಂಬ ವಿಚಾರವನ್ನು ನಿಮ್ಮ ತಲೆಯಿಂದ ತೆಗೆದುಹಾಕಿ. ತಾಯಿಯಾದ ಬಳಿಕ ನಮ್ಮ ನಮ್ಮ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡಬಹುದು ಹಾಗೂ ನಮ್ಮದೇ ಆದ ಪಡಿಯಚ್ಚು ಮೂಡಿಸಬಹುದು.
ನೀವು ಎಂತಹದೊಂದು ಹೊಸ ಕೆಲಸ ಮಾಡಬೇಕೆಂದರೆ, ಅದರಲ್ಲಿ ನಿಮಗೆ ಹೆಚ್ಚು ಧಾವಂತ ಇರಬಾರದು. ಅದನ್ನು ನೀವು ಸಹಜವಾಗಿ ನಿರ್ವಹಿಸುವಂತೆ ಇರಬೇಕು. ಬೇರೆಯವರ ಭರವಸೆಯ ಮೇಲೆ ನಾವು ಏನನ್ನೂ ಸಾಧಿಸಲು ಆಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.