ಸಾಮಾನ್ಯವಾಗಿ ಒಬ್ಬ ಮಹಿಳೆಯ ಜೀವನದ ಆರಂಭ ಆದೇಶ ಪಾಲನೆ, ಸಂಸ್ಕಾರ ಹಾಗೂ ಪ್ರೀತಿಪಾತ್ರ ಮಗಳ ರೂಪದಲ್ಲಿ ಇರುತ್ತದೆ. ಅವಳ ಹೆಗಲ ಮೇಲೆ ಒಂದೆಡೆ ಕುಟುಂಬದ ಗೌರವ ಕಾಪಾಡುವ ಹೊಣೆ ಇರುತ್ತದಾದರೆ, ಇನ್ನೊಂದೆಡೆ ಮನೆಯವರ ಅಪೇಕ್ಷೆಯನ್ನು ವಾಸ್ತವಕ್ಕೆ ಇಳಿಸುವ ಜವಾಬ್ದಾರಿ ಇರುತ್ತದೆ. ಅವಳು ಅಮ್ಮ ಅಪ್ಪ ಹೇಳಿದ್ದನ್ನು ಕೇಳಬೇಕು, ಅನಾಹುತವೇನೂ ಆಗಬಾರದು ಎಂಬ ಅಪೇಕ್ಷೆ ಇಟ್ಟುಕೊಳ್ಳಲಾಗುತ್ತದೆ.
ಕೆಲವು ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಮುಂದುವರಿಯುವ ಅವಕಾಶ ದೊರಕುತ್ತದಾದರೆ, ಇನ್ನು ಕೆಲವು ಹೆಣ್ಣುಮಕ್ಕಳಿಗೆ ಆ ಅವಕಾಶ ಸಿಗುವುದಿಲ್ಲ. ಯಾವ ಕುಟುಂಬಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೋ, ಅವರು ಕೆರಿಯರ್ ನ ಉತ್ತುಂಗ ತಲುಪುತ್ತಾರೆ. ಮದುವೆಯ ಬಳಿಕ ಆಕೆ ಅತ್ತೆ ಮನೆಗೆ ಹೋದಾಗ, ಅಲ್ಲಿನ ವಾತಾವರಣ ಅವಳಿಗೆ ಅಪರಿಚತವಾಗಿರುತ್ತದೆ. ಹೊಸ ಸ್ಥಳ, ಹೊಸ ಜನರು, ಹೊಸ ಅಪೇಕ್ಷೆಗಳ ನಡುವೆ ಆಕೆ ತನ್ನ ಅಸ್ತಿತ್ವವನ್ನೇ ಮರೆತುಬಿಡುತ್ತಾಳೆ. ಒಂದು ವೇಳೆ ಗಂಡ ಉದಾರ ಸ್ವಭಾವದವನಾಗಿದ್ದರೆ, ಅವಳಿಗೆ ಮುಂದುವರಿಯುವ ಅವಕಾಶ ಸಿಗುತ್ತದೆ.
ಅಂದಹಾಗೆ ಮಹಿಳೆಯೊಬ್ಬಳಿಗೆ ಮೊದಲ ಆದ್ಯತೆ ಕುಟುಂಬವೇ ಆಗಿರುತ್ತದೆ. ಅದರಲ್ಲೂ ವಿಶೇಷವಾಗಿ ತಾಯಿಯಾದ ಬಳಿಕ ಅವಳ ಜೀವನ ಪರಿಪೂರ್ಣವಾಗಿ ಮಗುವಿನ ಆಸುಪಾಸು ಸೀಮಿತವಾಗಿ ಬಿಡುತ್ತದೆ. ಮಗಳು ಹಾಗೂ ಹೆಂಡತಿಯಾಗಿ ಆರಂಭವಾದ ಅವಳ ಜೀವನ ಪಯಣ ತಾಯಿಯಾದ ಬಳಿಕ ಅಲ್ಲಿಯೇ ಅಂತ್ಯಗೊಳ್ಳುತ್ತದೆ. ಅವಳು ತನ್ನನ್ನು ತಾನು ಏನೇನೋ ಆಗಿರಬೇಕೆಂದು ಕಂಡ ಕನಸು ನನಸಾಗದೆ ಒಳಗೊಳಗೆ ಬೇಯುತ್ತಾಳೆ ಒಂದು ಕಡೆ ಅವಳಿಗೆ ಸಮಾಜ ಮುಂದುವರಿಯಲು ಅವಕಾಶ ಕೊಡುವುದಿಲ್ಲ, ಇನ್ನೊಂದೆಡೆ ಅವಳು ತಾನೇ ಧೈರ್ಯ ಒಗ್ಗೂಡಿಸಿ ಮುಂದೆ ಸಾಗುವುದಿಲ್ಲ.
ನಿಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ
ತಾಯಿಯಾದ ಬಳಿಕ ಮಹಿಳೆಯೊಬ್ಬಳ ಜೀವನ ಕೊನೆಗೊಳ್ಳುವುದಿಲ್ಲ ಎಂಬ ಮಾತನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ತಾಯಿಯಾದ ಬಳಿಕ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಬಹುದು. ತಮ್ಮದೇ ಆದ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು.
ನಮಗಿಂದು ಅದೆಷ್ಟೋ ಮಹಿಳೆಯರ ಉದಾಹರಣೆಗಳು ನೋಡಲು ಸಿಗುತ್ತವೆ, ಅವರು ತಾಯಿಯಾದ ಬಳಿಕ ತಮ್ಮ ಕೆರಿಯರ್ ಗೆ ಹೊಸ ಹೊಸ ರೂಪ ಕೊಟ್ಟರು. ಮನೆಯನ್ನು ನಿರ್ವಹಿಸುವುದರ ಜೊತೆ ಜೊತೆಗೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡರು.
ಇಬ್ಬರು ಪುಟ್ಟ ಮಕ್ಕಳ ತಾಯಿಯಾದ ದೀಕ್ಷಾ ಇದಕ್ಕೊಂದು ಒಳ್ಳೆಯ ಉದಾಹರಣೆ. ಅವರು ಎಂಟರ್ ಪ್ರೈಸಸ್ ಹಾಗೂ ಸೋಶಿಯಲ್ ಮೀಡಿಯಾ ಇನ್ ಫ್ಲೂಯೆನ್ಸರ್ ಆಗಿ ಹೆಸರುವಾಸಿ.
ಆಕರ್ಷಕ ವ್ಯಕ್ತಿತ್ವ ಮತ್ತು ಸ್ಲಿಮ್ ಫಿಗರ್ ಹೊಂದಿರುವ ದೀಕ್ಷಾರನ್ನು ನೋಡಿ ಯಾರೊಬ್ಬರೂ ಇವರು ಇಬ್ಬರು ಮಕ್ಕಳ ತಾಯಿ ಎಂದು ಹೇಳಲು ಸಾಧ್ಯವಿಲ್ಲ. ದೀಕ್ಷಾ ತಮ್ಮ ಕೆರಿಯರ್ ನ ಆರಂಭವನ್ನು ಮೀಡಿಯಾ ಪಿಆರ್ ಪ್ರೊಫೆಶನ್ ಆಗುವುದರ ಮೂಲಕ ಆರಂಭಿಸಿದರು. ಅವರು ಮಾರ್ಕೆಟಿಂಗ್ ಹಾಗೂ ಕಾರ್ಪೋರೇಟ್ ಕಮ್ಯುನಿಕೇಶನ್ ಹೆಡ್ ರೂಪದಲ್ಲಿ ಹಲವು ವರ್ಷಗಳ ಕಾಲ ದೊಡ್ಡ ದೊಡ್ಡ ಲೈಫ್ ಸ್ಟೈಲ್ ಹಾಗೂ ಹಾಸ್ಪಿಟಾಲಿಟಿ ಬ್ರಾಂಡ್ ಗಳ ಜೊತೆ ಕೆಲಸ ಮಾಡಿದ್ದಾರೆ.