-ರಾಘವೇಂದ್ರ ಅಡಿಗ ಎಚ್ಚೆನ್.

ನಾನೂ ಕೂಡ ಕಿರುಚಿತ್ರದ ಮುಖೇನವೇ ಸಿನಿಮಾದ ಸರಿ ತಪ್ಪುಗಳನ್ನು ಕಲಿತಿದ್ದು, ನೀವು ನಿಮ್ಮ ಆಲೋಚನೆಯನ್ನು ಸಿನಿಮಾ ಮಾಡಲು ಹೊರಟ ಕ್ಷಣವೇ ನೀವೆಲ್ಲರೂ ಗೆಲುವು ಪಡೆದಿದ್ದೀರಿ ಹಾಗಾಗಿ ಇಲ್ಲಿ ಪ್ರಶಸ್ತಿ ಬರದವರು ಭೇಸರಗೊಳ್ಳುವ ಪ್ರಮೇಯವಿಲ್ಲ.’ ಎಂದು ಪ್ರಸಿದ್ದ ಚಿತ್ರ ನಿರ್ದೇಶಕ ಪವನ್ ಒಡೆಯರ್ ಹೇಳಿದ್ದಾರೆ. ಇತ್ತೀಚೆಗೆ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ವಿ ಕೆ ಸ್ಟುಡಿಯೋಸ್ ಆಯೋಜಸಿದ್ದ ಕನ್ನಡ ಕಿರುಚಿತ್ರೋತ್ಸವ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸಿದ ವಿ ಕೆ ಸ್ಟುಡಿಯೋಸ್ ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ಪ್ರಾಯೋಜಕರನ್ನು ಪವನ್ ಒಡೆಯರ್ ಶ್ಲಾಘಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಖ್ಯಾತ ಸಾಹಿತಿ ಎಸ್ ಶಿಶಿರಂಜನ್(ಶಿಶಿರ), ಸುಪ್ರಸಿದ್ಧ ಚಲನಚಿತ್ರ ನಟ ಧರ್ಮಣ್ಣ ಕಡೂರು ಸೇರಿದಂತೆ ಕನ್ನಡ ನಾಡು ನುಡಿಯ ಕೀರ್ತಿಪತಾಕೆ ಹಾರಿಸಿದ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ರಾಜ್ಯಮಟ್ಟದ ಪ್ರತಿಷ್ಟಿತ ‘ಕನ್ನಡ ಸ್ಟಾರ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು.

ಇದರೊಂದಿಗೆ 30ಕ್ಕೂ ಹೆಚ್ಚು ಕಿರುಚಿತ್ರಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 26 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು.

ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಸಿನಿಮಾ ಕ್ಷೇತ್ರದ ಹಲವು ಕಲಾವಿದರು, ತಂತ್ರಜ್ಞರು ಪಾಲ್ಗೊಂಡಿದ್ದರು.

ಇದೇ ಕಾರ್ಯಕ್ರಮದಲ್ಲಿ ನಮೋ ವೆಂಕಟೇಶ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಧರ್ಮಣ್ಣ ಕಡೂರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಸಮುದ್ರ ಮಂಥನ ಚಲನಚಿತ್ರದ ನಾಯಕ ನಟ ಯಶವಂತ್ ಹಾಗೂ ನಿರ್ದೇಶಕರಾದ ಸಚಿನ್ ಶೆಟ್ಟಿ ಹಾಗೂ ವಿ ಕೆ ಸ್ಟುಡಿಯೋಸ್ ನ ಅಧ್ಯಕ್ಷರಾದ ಜಗನ್ನಾಥ್ ಎಂ ರಾವ್ ಉಪಸ್ಥಿತರಿದ್ದರು. ಅಭಿಜಿತ್ ಅವರ ಲವಲವಿಕೆಯ ನಿರೂಪಣೆ ಹಾಗೂ ಜೂ. ಎಸ್ ಪಿ ಬಿ ಎಂದೇ ಖ್ಯಾತರಾದ ಗುರು ಅವರ ಪ್ರಾರ್ಥನೆ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟುವಂತೆ ಮಾಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ