ದಶರಥ ಮಹಾರಾಜರು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ – ಸಪರಿವಾರ ಸಮೇತ,ಅದ್ದೂರಿಯ ಮದುವೆಯ ದಿಬ್ಬಣದದೊಂದಿಗೆ  ಜನಕ ಮಹಾರಾಜರ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾರೆ.

ಆಗ ಜನಕ ಮಹಾರಾಜರು ತನ್ನ ಪರಿವಾರದ ಜೊತೆ ಎದುರಿಗೆ ಬಂದು ರಘುರಾಮನ ಮದುವೆ ಮೆರವಣಿಗೆಗೆ ಸ್ವಾಗತಕೋರುತ್ತಾರೆ.

ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜರ ಹತ್ತಿರ ಹೋಗಿ ಅವರ ಪಾದಗಳಿಗೆ ನಮಸ್ಕಾರ ಮಾಡುತ್ತಾರೆ.

ಗಲಿಬಿಲಿಗೊಂಡ ಜನಕನು ದಶರಥ ಮಹಾರಾಜರನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ *”ಮಹಾರಾಜ ನೀವು ದೊಡ್ಡವರು,ಮೇಲಾಗಿ ವರನ ಕಡೆಯವರು,ಹೀಗೆ ನನಗೆ ಪಾದಾಭಿವಂದನೆ ಮಾಡುವದು ಸರಿಯಲ್ಲ.*

ಗಂಗೆಯು ಹಿಂದಕ್ಕೆ ಹರಿಯುತ್ತಿರುವವಳೇ? ಎಂಬ ಸಂಶಯ ಮೂಡುತ್ತಿದೆ!”ಎಂದರು.

ಅದಕ್ಕೆ ಮಹಾರಾಜ ದಶರಥ ಮಹಾರಾಜರು ಅದ್ಭುತವಾದ ಉತ್ತರವನ್ನು ಕೊಡುತ್ತಾರೆ.

*”ಜನಕ ರಾಜರೇ ನೀವು ದಾನ ನೀಡುವವವರು.ಇನ್ನೂ ಸ್ವಲ್ಪ ಹೊತ್ತಿಗೆ ಕನ್ಯಾದಾನ ಮಾಡುತ್ತಿರುವವರು.

ನಾನು ಯಾಚಕ.

ನಿಮ್ಮಿಂದ ಮಗನಿಗಾಗಿ ಕನ್ಯೆಯನ್ನು ಬೇಡಲು ಬಂದಿರುವವನು.

ಈಗ ನೀವೇ ಹೇಳಿರಿ, ದಾನ ಮಾಡುವವನು  ದೊಡ್ಡವರೋ?

ಇಲ್ಲಾ ದಾನ ಬೇಡುವವರು ದೊಡ್ಡವರೋ!

ನಮ್ಮಿಬ್ಬರಲ್ಲಿ ಶ್ರೇಷ್ಠನಾರೆಂದು  ನಿಮಗೆ ಗೊತ್ತು”ಎಂದರು.

 

ದಶರಥ ಮಹಾರಾಜರ ಮಾತು ಕೇಳಿದ ಜನಕನಿಗೆ ಕಣ್ಣೀರು & ಆನಂದಭಾಷ್ಪಗಳು ಒಮ್ಮೆಲೆ ಉಂಟಾದವು.

ಉದ್ವೇಗದಿಂದ ತನ್ನಲ್ಲಿಯೇ ಅಂದುಕೊಳ್ಳುತ್ತಾನೆ

*”ಹೌದು ಯಾರ ಮನೆಯಲ್ಲಿ ಮಗಳಿರುತ್ತಾಳೋ ಅವರೇ ಭಾಗ್ಯವಂತರು!”*

 

ಪ್ರತಿ ಮಗಳ ಭಾಗ್ಯದಲ್ಲಿ ಅಥವಾ  ಅದೃಷ್ಟದಲ್ಲಿ ತಂದೆ ಇದ್ದೇ ಇರುತ್ತಾನೆ!

ಆದರೆ

ಪ್ರತಿ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!!

ಇದು ಭಾರತೀಯರ ಮನಸ್ಸಿನಲ್ಲಿ ಮಗಳಿಗಿರುವ ಮಹತ್ವ!!!

*ಸನಾತನ ಹಿಂದೂ ಧರ್ಮದಲ್ಲಿ ಹೆಣ್ಣಿನ‌ ಸ್ಥಾನಮಾನ;*

ರಾಮನಿಗೆ.  ಸೀತೆ

ಕೃಷ್ಣನಿಗೆರುಕ್ಮಿಣಿ

ಶಿವನಿಗೆಪಾರ್ವತಿ

ನಾರಾಯಣನಿಗೆಲಕ್ಷ್ಮೀ

ಮಂತ್ರ ಪಠಣದಲ್ಲಿಗಾಯತ್ರೀ

ಗ್ರಂಥ ಪಠಣದಲ್ಲಿಗೀತಾ

ದೇವರೆದುರಿಗೆ. ವಂದನಾ, ಅರ್ಚನಾ, ಪೂಜಾ, ಆರತಿ, ಆರಾಧನಾ..

ನಮ್ಮ ದಿನಚರಿಯಲ್ಲಿ

ಉದಯಕ್ಕೆಉಷಾ..

ಸಂಜೆಗೆ  ಸಂಧ್ಯಾ

ರಾತ್ರಿಗೆನಿಶಾ,

ಬೆಳಕಿಗೆಜ್ಯೋತಿ,  ದೀಪಾ,

ಬೆಳದಿಂಗಳಿಗೆ. ರಜನೀ,

ಸೂರ್ಯಕಿರಣಕ್ಕೆರಶ್ಮಿ,

ಚಂದಿರನಿಗೆಶಶಿ, ಶಶಿಕಲಾ,

ಹೆಸರಾಗುವುದಕ್ಕೆಕೀರ್ತಿ

ಕನಸಿಗೆಸ್ವಪ್ನಾ

ನೋಟಕ್ಕೆನಯನಾ,

ಕೇಳುವುದಕ್ಕೆಶ್ರಾವ್ಯ,

ಮಾತನಾಡುವುದಕ್ಕೆವಾಣಿ, ವಾಣಿಶ್ರೀ, ಸುಭಾಷಿಣೀ,

ಭೂಮಿಗೆವಸುಧಾ, ವಸುಂಧರಾ, ಭುವಿ, ಭುವನೇಶ್ವರೀ,

ಹಸು, ಆಕಳಿಗೆನಂದಿನೀ,

ಜಗತ್ತಿಗೆಜಗದೀಶ್ವರೀ, ಜಗದಂಬಾ,

ದೇಶಕ್ಕೆಭಾರತೀ,

ಕನ್ನಡ ನಾಡಿಗೆಭುವನೇಶ್ವರೀ,

ಋತುಗಳಿಗೆಚೈತ್ರ, ವಸಂತ, ಗ್ರೀಷ್ಮ,

ಸಮರ್ಪಣೆಗೆಅರ್ಪಣಾ

ಆಹಾರಕ್ಕೆಅನ್ನಪೂರ್ಣಾ,

ನಡೆಯುವುದಕ್ಕೆಹಂಸಗಮನಾ,

ನಗುವಿಗೆಸುಹಾಸಿನೀ.

ಚೆಲುವಿಕೆಗೆಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ,

ಸುವಾಸನೆಗೆಚಂದನ, ಪರಿಮಳಾ,

ಒಳ್ಳೆಯ ನುಡಿಗೆಸುಭಾಷಿಣೀ,

ತೇಜಸ್ಸಿಗೆತೇಜಸ್ವಿನೀ,

ಚುಕ್ಕಿಗೆಬಿಂದು, ನಕ್ಷತ್ರ,

ಗೆರೆಗೆರೇಖಾ, ಶಶಿರೇಖಾ,

ಮುತ್ತಿಗೆಸ್ವಾತಿ,

ಹರಳಿಗೆರತ್ನ,

ಮಾದರಿಗೆಸ್ಫೂರ್ತಿ, ಪ್ರೇರಣಾ,

ಪ್ರತಿಕ್ರಿಯಿಸುವುದಕ್ಕೆಸ್ಪದಂನಾ,

ಕೆಲಸಕ್ಕೆಕೃತಿ, ಕೃತಿಕಾ,

ಇಷ್ಟಕ್ಕೆಪ್ರೀತಿ,

ನೀರಿಗೆಗಂಗಾ,

ಬಂಗಾರಕ್ಕೆಸುವರ್ಣ, ಕನಕ, ಹೇಮಾ,

ಬೆಳ್ಳಿಗೆರಜತ, ರಂಜಿತ,

ಚಿತ್ತಾರಕ್ಕೆಚಿತ್ರ,

ಊಹೆಗೆಕಲ್ಪನಾ,

ನಿಜ ಸಂಗತಿಗೆಸತ್ಯವತೀ,

ಶುದ್ಧತೆಗೆನಿರ್ಮಲಾ, ಪವಿತ್ರಾ,

ಆಲೋಚನೆಗೆಭಾವನಾ,

ಕಣ್ಗಳಿಗೆನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ

ಶಿಕ್ಷಣಕ್ಕೆವಿದ್ಯಾ,

ಬುದ್ಧಿಗೆ, ಚತುರತೆಗೆಪ್ರತಿಭಾ,

ಸಂತೋಷಕ್ಕೆಖುಷಿ, ಆನಂದಿನಿ, ಹರ್ಷಲಾ,

ಕೋಪಕ್ಕೆಭೈರವಿ, ಕಾಳಿ,

ಧೈರ್ಯಕ್ಕೆದುರ್ಗೆ,

ಗೆಲುವಿಗೆಜಯಲಕ್ಷ್ಮಿ.. ವಿಜಯಲಕ್ಷ್ಮಿ,

ಹೆಸರಾಗುವುದಕ್ಕೆಕೀರ್ತಿ,

ಹಾಡಿಗೆಸಂಗೀತ,

ಗಾಯನಕ್ಕೆಶೃತಿ, ಪಲ್ಲವಿ, ಕೋಕಿಲ,

ನಾಟ್ಯಮಯೂರಿ,

ಸಾಹಿತ್ಯಕವಿತಾ, ಕಾವ್ಯ, ಕವನ, ಪಲ್ಲವಿ.

ನಿಸರ್ಗಕ್ಕೆಪ್ರಕೃತಿ,

ರಕ್ಷಣೆಗೆರಕ್ಷಾ, ಸುರಕ್ಷಾ,

ವಿದ್ಯಾಭ್ಯಾಸಕ್ಕೆವಿದ್ಯಾ,

ಸಂಪಾದನೆಗೆಲಕ್ಷ್ಮೀ,

ಸ್ಫೂರ್ತಿಗೆಪ್ರೇರಣಾ,

ಮೌನಕ್ಕೆಶಾಂತಿ,

ಮಧುರತೆಗೆಮಾಧುರಿ, ಮಂಜುಳ,

ಕನಿಕರಕ್ಕೆಕರುಣಾ,

ಆಕ್ರೋಶಕ್ಕೆಕಾಳಿ ,

ವಾತ್ಸಲ್ಯಕ್ಕೆಮಮತಾ,

ಆಯುಷ್ಯಕ್ಕೆಜೀವಿತಾ,

ಮೋಡಗಳಿಗೆಮೇಘ, ಮೇಘನಾ,

ಚಿಮುಕಿಸುವಿಕೆಗೆಸಿಂಚನಾ,

ಬಿಳುಪಿಗೆಶ್ವೇತಾ, ಗೌರೀ,

ಕಪ್ಪಿಗೆಕೃಷ್ಣೆ,

ವಾಸನೆಗೆಪರಿಮಳಾ,

ಹೂವಿಗೆಪುಷ್ಪ, ಸುಮ,, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..

ಬಳ್ಳಿಗೆಲತಾ,

ಹಾರಕ್ಕೆಮಾಲಾ, ಮಾಲಿನಿ,

ಶುಭಕರಮಂಗಳ,  ಸುಮಂಗಳ, ಶುಭಾಂಗಿ

ಒಳ್ಳೆಯ ಮನಸ್ಸಿಗೆಸುಮನ

ಶ್ರೀಮಂತಿಕೆಗೆಐಶ್ವರ್ಯ, ಸಿರಿ,

ವಿಸ್ತಾರಕ್ಕೆವಿಶಾಲ, ವೈಶಾಲಿ,

ಜೇನಿಗೆಮಧು,

ಬಯಕೆಗೆಆಶಾ, ಅಪೇಕ್ಷಾ,

ತೀರ್ಮಾನಕ್ಕೆನಿಶ್ಚಿತ,

ಬರಹಕ್ಕೆಲಿಖಿತ,

ನೆರಳಿಗೆಛಾಯಾ,

ನಿಧಾನಕ್ಕೆಮಂದಾಕಿನಿ,

ಹೂ ಗೊಂಚಲಿಗೆಮಂಜರಿ,

ಕಲೆಗೆಕಲಾ,

ಗೌರವಕ್ಕೆಮಾನ್ಯ, ಮಾನ್ಯತಾ,

 

ನದಿಗಳಿಗೆಗಂಗಾ, ಯಮುನಾ, ಸರಸ್ವತೀ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ,

 

ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ  ಹೆಣ್ಣು ಇರುವಳು

ತಾಯಿಯಾಗಿ

ಪ್ರೇಯಸಿಯಾಗಿ

ಮಗಳಾಗಿ

ಸೊಸೆಯಾಗಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ