36 ವರ್ಷದ ಅನುಪಮಾ ಮಹಿಳಾ ಉಪನ್ಯಾಸಕಿ. ಅವರು ಮನೋವಿಜ್ಞಾನದಲ್ಲಿ ಪಿ.ಎಚ್.ಡಿ ಮಾಡಿ ತಮಗಾಗಿ ಈ ಕ್ಷೇತ್ರ ಆಯ್ಕೆ ಮಾಡಿಕೊಂಡರು. ಅವರ ಪತಿ ಪದವೀಧರರಾಗಿ ಪ್ರಾಪರ್ಟಿ ಡೀಲಿಂಗ್ ನ ವ್ಯವಹಾರ ನಡೆಸುತ್ತಾರೆ. ಮನೆಯಲ್ಲಿ ಅತ್ತೆ ಮಾವನ ಹೊರತಾಗಿ, ವಿಚ್ಛೇದಿತ ಮೈದುನು ಇದ್ದಾನೆ.
ಅನುಪಮಾಗೆ ಎಲ್ಲರೂ ನೌಕರಿ ಬಿಟ್ಟು ಮನೆಯಲ್ಲಿಯೇ ಇರಲು ಸಲಹೆ ಕೊಡುತ್ತಾರೆ. ಆದರೆ ಅನುಪಮಾಗೆ ಅದು ಇಷ್ಟವಾಗುವುದಿಲ್ಲ. ನೌಕರಿಯ ನೆಪದಲ್ಲಿ ತಾನೇ ಕೆಲವು ಗಂಟೆಗಳಾದರೂ ನಾಲ್ಕು ಗೋಡೆಗಳಿಂದ ಹೊರಗಿರಬಹುದು ಎಂಬ ಯೋಚನೆ ಅವರದ್ದಾಗಿದೆ.
ಅನುಪಮಾ ಬಹಳ ಕಷ್ಟಪಟ್ಟು ಎಲ್ಲರನ್ನೂ ಒಪ್ಪಿಸಿ ತಮ್ಮ ಉದ್ಯೋಗ ಮುಂದುವರಿಸಿಕೊಂಡು ಹೊರಟಿದ್ದಾರೆ. ಕಾಲೇಜಿಗೆ ಹೋಗುವ ಮುನ್ನ ಅವರು ಮನೆಯ ಎಲ್ಲ ಕೆಲಸಗಳನ್ನು ಮಾಡಬೇಕಾಗಿ ಬರುತ್ತದೆ. ಬೆಳಗ್ಗೆ ತಿಂಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮಧ್ಯಾಹ್ನದ ಅಡುಗೆ ಕೂಡ ಮಾಡಬೇಕಾಗುತ್ತದೆ. ಹೀಗಾಗಿ ಅವರು ಧಾವಂತದಿಂದಲೇ ಕಾಲೇಜಿಗೆ ತೆರಳುತ್ತಾರೆ. ಇಡೀ ದಿನ ಕೆಲಸ ಮಾಡಿ ಸುಸ್ತಾಗಿ ಮನೆಗೆ ಮರಳಿದಾಗ, ಅವರಿಗೆ ಯಾರೊಬ್ಬರೂ ಒಂದು ಕಪ್ ಚಹಾ ಸಹ ಮಾಡಿಕೊಡುವುದಿಲ್ಲ. ಅತ್ತೆ ಯಾವುದಾದರೂ ದೂರು ಹೊತ್ತುಕೊಂಡು ಅವರ ಮುಂದೆ ಪ್ರತ್ಯಕ್ಷರಾಗುತ್ತಾರೆ.
ಮಗಳಿಗೆ ಓದಿಸುವುದೇ ಆಗಿರಬಹುದು ಅಥವಾ ಬೇರೆ ಯಾವುದೇ ಕೆಲಸ ಇರಬಹುದು, ಗಂಡ ಅವರ ಮೇಲೆ ಅಧಿಕಾರ ಚಲಾಯಿಸುತ್ತಿರುತ್ತಾನೆ.
ಅವರು ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟಂತೆ ವಿರೋಧ ವ್ಯಕ್ತಪಡಿಸಿದರೆ ತಮ್ಮದೇ ಅಭಿಪ್ರಾಯಕ್ಕೆ ಕಟ್ಟುಬಿದ್ದರೆ ಆಗ ಗಂಡ ಅವರನ್ನು ಗದರಿಸುತ್ತಾ ಹೀಗೆ ಹೇಳುತ್ತಾನೆ, ``ನೀನು ಓದು ಬಲ್ಲವಳೆಂಬ ಅಹಂನಿಂದ ಮೆರೀತಿದಿಯಾ? ನನಗೇ
ವಾದ ಮಾಡ್ತೀಯಾ? ಹಾಗೇನಾದರೂ ಮಾಡ್ತಾ ಇದ್ದರೆ ನಿನ್ನ ನಾಲಿಗೆ ಕಿತ್ತು ಕೈಗೆ ಕೊಡಬೇಕಾಗುತ್ತೆ.''
ಹಿಂದಿನಿಂದ ಅತ್ತೆ ಕೂಡ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸ ಮಾಡುತ್ತಾ ಹೇಳುತ್ತಾರೆ, ``ನಿನಗೆ ಅದೆಷ್ಟು ಸಲ ಹೇಳಿದ್ದೆ. ಈ ಓದಿದ ಹುಡುಗಿಯರು ಯಾವುದೇ ಕೆಲಸಕ್ಕೆ ಬರುವದಿಲ್ಲವೆಂದು. ತಾನೇ ದುಡಿದು ಮನೆ ನಡೆಸುತ್ತಿದ್ದೇನೆ ಎಂಬ ರೀತಿ ನಡೆದುಕೊಳ್ಳುತ್ತಾಳೆ. ನೀನು ಒಂದು ವಿಷಯ ತಿಳಿದುಕೊ, ದುಡಿದು ತರುವ ಕೆಲವೇ ಸಾವಿರ ರೂ.ಗಳಿಂದ ನಮ್ಮ ಮನೆಯೇನೂ ನಡೆಯುವುದಿಲ್ಲ. ನೀನು ಸೊಸೆಯಾಗಿದ್ದೀಯ. ಸೊಸೆಯ ರೀತಿಯಲ್ಲಿ ಇರುವುದನ್ನು ಕಲಿತುಕೊ. ಇಲ್ಲದಿದ್ದರೆ ನಿಮ್ಮಪ್ಪನ ಮನೆಗೆ ಹೋಗಿ ಅಲ್ಲಿಯೇ ಇದ್ದುಬಿಡು.''
ಭೇದಭಾವಕ್ಕೆ ತುತ್ತಾಗುತ್ತಾರೆ
ಅವರಿಗೆ ಈ ರೀತಿಯ ಬೆದರಿಕೆ ಹಾಗೂ ಗಂಡನಿಂದ ಹೊಡೆತ ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಅವರು ಮಾತ್ರ ಏನೂ ಮಾತಾಡಾದೇ ಮೌನದಿಂದ ಇರುತ್ತಾರೆ. ಏಕಾಂಗಿಯಾಗಿದ್ದಾಗ ಅವರು ಕಣ್ಣೀರು ಹಾಕಿ ತನ್ನ ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ ಮತ್ತು ತಮ್ಮ ಕೆಲಸದಲ್ಲಿ ಮಗ್ನಳಾಗುತ್ತಾರೆ. ತಮ್ಮ ತವರಿನಲ್ಲೂ ಯಾರೊಬ್ಬರೂ ಅವರ ನೋವನ್ನು ಕೇಳುವವರಿಲ್ಲ. ಬಾಲ್ಯದಲ್ಲೂ ತಾಯಿ ತಂದೆ ಹಾಗೂ ಅಣ್ಣ ಕೂಡ ಇದೇ ರೀತಿಯ ಭೇದಭಾವ ತೋರುತ್ತಿದ್ದರು. ಅವರು ಎಷ್ಟೊಂದು ಗಳಿಸುತ್ತಾರೆಂದರೆ, ತನ್ನ ಮಗಳ ಜವಾಬ್ದಾರಿಯನ್ನು ಅವರು ಅಪಾರವಾಗಿ ನೋಡಿಕೊಳ್ಳಬಹುದು. ಆದರೆ ಏಕಾಂಗಿಯಾಗಿರುವ ಮಹಿಳೆಯರ ಬಗೆಗಿನ ಸಮಾಜದ ದೃಷ್ಟಿಕೋನ ಹೇಗಿರುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.