ಬಾಲಿವುಡ್ನಲ್ಲಿ ಸಖತ್ ಡಿಮ್ಯಾಂಡ್ನಲ್ಲಿರೋ.. ಸಿಕ್ಕಾಪಟ್ಟೆ ರೇಟ್ ಜಾಸ್ತಿ ಇರೋ ನಟಿ ಯಾರು ಅಂತಾ ಕೇಳಿದ್ರೆ ಎಲ್ರೂ ಈಗ ನಟಿ ಪ್ರಿಯಾಂಕಾ ಚೋಪ್ರಾ ಅಂತಾನೇ ಹೇಳ್ತಾರೆ. ಯಾಕಂದ್ರೆ, ದೇಸಿ ಗರ್ಲ್ ಅಂತಾನೇ ಫೇಮಸ್ ಆಗಿ ಬಿಚ್ಚಮ್ಮ ಅಂತಾನೂ ಖ್ಯಾತಿ ಗಳಿಸಿ ಎಲ್ಲಾ ರೀತಿಯ ನಟನೆಗೂ ಸೈ ಎನಿಸಿಕೊಂಡು.. ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅಮೆರಿಕನ್ ಸಿಂಗರ್ ನಿಕ್ ಜೋನ್ಸ್ ಜೊತೆ ಮದ್ವೆ ಆದ ಬಳಿಕವೂ ಭಯಾನಕ ಬೇಡಿಕೆವುಳ್ಳ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಬಾಲಿವುಡ್ ಅಷ್ಟೇ ಅಲ್ಲ.. ಹಾಲಿವುಡ್ನಲ್ಲೂ ಪ್ರಿಯಾಂಕಾ ಚೋಪ್ರಾ ನಟಿಸಿ ಬೇಷ್ ಎನಿಸಿಕೊಂಡಿದ್ದಾರೆ.
ಪ್ರಿಯಾಂಕಾ ಈಗ ಕೇವಲ ನ್ಯಾಷನಲ್ ಸ್ಟಾರ್ ಆಗಿಲ್ಲ. ಇಂಟರ್ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹಾಗಾಗಿಯೇ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ ಈ ಮೋಹಕ ನಟಿಯ ಸಂಭಾವನೆ ಈಗ ಜಾಸ್ತಿ ಆಗಿದೆ. ಹಾಗಾದ್ರೆ ಇವರ ಸಂಭಾವನೆ ಎಷ್ಟು..? 42ನೇ ವಯಸ್ಸಿನಲ್ಲೂ ಇನ್ನೂ 16 ವರ್ಷದ ಹುಡುಗಿ ಥರಾ ಕಾಣೋ ಪಿಗ್ಗಿ ಒಂದು ಸಿನಿಮಾಗೆ ಎಷ್ಟು ಡಿಮ್ಯಾಂಡ್ ಮಾಡಬಹುದು..? ಅಂತಾ ಕೇಳಿದ್ರೆ ಇತ್ತೀಚಿನ ವರದಿಗಳ ಪ್ರಕಾರ ಪ್ರಿಯಾಂಕಾ ಒಂದು ಸಿನಿಮಾಗೆ ಬರೋಬ್ಬರಿ 30 ಕೋಟಿ ಕೇಳಿದ್ದಾರಂತೆ.
ಹೌದು.. RRR ಸಿನಿಮಾ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿರುವ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ ಯಾವುದು ಅಂತಾ ಎಲ್ಲರೂ ಕೇಳ್ತಿದ್ದಾರೆ. ಸದ್ಯ ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ಬಾಬು ಜೊತೆ ರಾಜಮೌಳಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಬೇಕು.. ಸ್ಟೋರಿ ಏನು..? ಯಾರು ನಾಯಕಿ ಅನ್ನೋದು ಇನ್ನೂ ನಿರ್ಧಾರ ಆಗಿಲ್ಲ.
ಮೂಲಗಳ ಪ್ರಕಾರ ಮಹೇಶ್ಬಾಬುಗೆ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ಅವರನ್ನೇ ಕರೆತರುವ ಪ್ಲಾನ್ ನಡೆದಿದೆ. ‘SSMB 29’ ಅಂತಾನೇ ಸದ್ಯಕ್ಕೆ ಕರೆಯಲ್ಪಡುವ ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾಗೆ ಆಫರ್ ಇಡಲಾಗಿತ್ತಂತೆ. ಆದ್ರೆ, ಅವರು ಕೇಳಿದ ಸಂಭಾವನೆಗೆ ಎಲ್ರೂ ಶಾಕ್ ಆಗಿದ್ದಾರೆ. ತಾವು ಇಂಟರ್ನ್ಯಾಷನಲ್ ಲೆವೆಲ್ ಸ್ಟಾರ್ ಆಗಿರೋದ್ರಿಂದ ಸಿನಿಮಾ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಸೌಂಡ್ ಮಾಡುತ್ತೆ.. ಹಾಗಾಗಿ ಈ ಚಿತ್ರಕ್ಕೆ 30 ಕೋಟಿ ರೂಪಾಯಿ ಕೊಡಿ ಅಂತಾ ಪ್ರಿಯಾಂಕಾ ಕೇಳಿದ್ದಾರಂತೆ.
ನಮ್ ದೇಸಿ ಹುಡುಗಿ ಬೇರೆ.. ಜೊತೆಗೆ ಇಂಟರ್ನ್ಯಾಷನಲ್ ಲವೆಲ್ ಬೇರೆ.. ಹೀಗಾಗಿ ಪ್ರಿಯಾಂಕಾ ಇದ್ರೆ ಬೆಟರ್ ಅಂದ್ಕೊಂಡಿರೋ ಸಿನಿಮಾ ತಂಡ ಕೂಡ ಒಕೆ ಅಂದುಬಿಟ್ಟಿದ್ಯಂತೆ. ಅದಕ್ಕೋಸ್ಕರನೇ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದಿಂದ ಹೈದ್ರಾಬಾದ್ಗೂ ಬಂದಿದ್ದಾರೆ. ಸದ್ಯ ಅಮೆರಿಕದಲ್ಲೇ ಪತಿ, ಮಕ್ಕಳು ಜೊತೆ ಸೆಟ್ಲ್ ಆಗಿರೋ ಪ್ರಿಯಾಂಕಾ ಇತ್ತೀಚೆಗೆ ಯಾವುದೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಕಂಬ್ಯಾಕ್ ಮಾಡೋಕೆ ದೊಡ್ಡ ಬ್ಯಾನರ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.
‘SSMB 29’ ಸಿನಿಮಾಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ದು, ಎಂ.ಎಂ. ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ದೊಡ್ಡ ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ರಾಜಮೌಳಿ ಹಾಗೂ ತಮ್ಮ ನಟನೆಯಿಂದಲೇ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡೋ ಪ್ರಿನ್ಸ್ ಮಹೇಶ್ಬಾಬು ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಈ ಸಿನಿಮಾ ಮೇಲೆ ಸಿನಿರಸಿಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.