ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೊತೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾಗೌಡ ಗಂಗೆಯಲ್ಲಿ ಮಿಂದೆದ್ದಿದ್ದಾರೆ. ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಹೋಗಿದ್ದ ಪವಿತ್ರಾಗೌಡ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಪವಿತ್ರಾಗೌಡ ಹೊರರಾಜ್ಯಗಳಿಗೆ ಹೋಗುವುದಕ್ಕೂ ಕೋರ್ಟ್ ಪರ್ಮಿಷನ್ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರಯಾಗ್ರಾಜ್ಗೆ ಹೋಗಿದ್ದ ಪವಿತ್ರಾ, ಶಾಹಿ ಸ್ನಾನ ಮಾಡಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿಕೊಂಡಿರೋದು ಭಾರೀ ವೈರಲ್ ಆಗ್ತಿದೆ.

‘ಮೌನಿ ಅಮಾವಾಸ್ಯಯಂದು ಶಾಹಿ ಸ್ನಾನದ ಪುಣ ಪುಣ್ಯ ಸಿಕ್ಕ ನಾನೆ ಧನ್ಯಳು.. I believe that I am freed from all the negative energy.. ಹರ ಹರ ಮಹಾದೇವ. ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಗೆದ್ದದ್ದು ಧರ್ಮವೇ. ಮೊದಮೊದಲು ಅಧರ್ಮಕ್ಕೆ ಜಯ ಸಿಕ್ಕಿರಬಹುದು, ಆದರೆ ಕೊನೆಗೆ ಗೆಲುವಾಗುವುದು ಧರ್ಮಕ್ಕೆ.

ಎಲ್ಲಾ ಗೌರವಾನ್ವಿತ ಸುದ್ದಿ ವಾಹಿನಿಗಳಿಗೂ ಹಾಗೂ ಸಾಮಾಜಿಕ ಜಾಲತಾಣಗಳಿಗೂ ನನ್ನ ವಂದನೆಗಳು. ಕೇವಲ ಕೆಲವು ಮಾಧ್ಯಮದವರ ಅಮಾನವೀಯ ಮಾತುಗಳು ಹಾಗೂ ಕೆಲ ವಿಕೃತ ಮನಸ್ಕರ comments ಬೇಸರ ತಂದಿದೆ. ಕಾಲಾಯ ತಸ್ಮೈ ನಮಃ’ ಅಂತಾ ಬರೆದುಕೊಂಡಿದ್ದು, ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

6 ತಿಂಗಳು ಕಾಲ ಜೈಲುವಾಸ ಅನುಭವಿಸಿದ ಬಳಿಕ ದಿಢೀರ್ನೇ ದೇವಸ್ಥಾನಗಳಿಗೆ ಹೋಗುತ್ತಿರುವ ಪವಿತ್ರಾ ಇಷ್ಟು ದಿನಗಳ ನಂತರ ಹೀಗೆ ಪೋಸ್ಟ್ ಹಾಕಿರೋದು ಕೆಲವರಿಗೆ ತಲೆಬಿಸಿ ತಂದಿದೆ. ಆದ್ರೆ, ಪವಿತ್ರಾಗೌಡ ಹಾಕಿರೋ ಈ ಪೋಸ್ಟ್ಗೆ ನೆಟ್ಟಿಗರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲವೂ ಜಗದ ನಿಯಮ ಅಂತಾ ಕೆಲವರು ಹೇಳಿದ್ರೆ, ನೀವು ಮಾಡಿದ ಕರ್ಮ ಅಂತಾನೂ ಟೀಕಿಸಿದ್ದಾರೆ. ಇನ್ನು ಕೆಲವರು ಕಷ್ಟ ಯಾರನ್ನೂ ಬಿಡೋದಿಲ್ಲ.. ಒಳಿತನ್ನು ಮಾಡಲಿ ಅಂತಾನೂ ಹೇಳಿದ್ದಾರೆ.

ಏನೇ ಆದ್ರೂ ತಮ್ಮ ಬ್ಯೂಟಿಯಿಂದಲೇ ಗಮನ ಸೆಳೆದಿರೋ.. ದರ್ಶನ್ ಗೆಳೆತನದಿಂದಲೇ ಭಾರೀ ಸುದ್ದಿಯಾಗಿರುವ ಪವಿತ್ರಾಗೌಡ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಎಲ್ಲಾ ಜಂಜಾಟಗಳಿಂದ ಹೊರಬಂದು ತಮ್ಮ ಮುದ್ದು ಮಗಳ ಜೊತೆ ಕಾಲ ಕಳೆಯುವ ಆಲೋಚನೆಯಲ್ಲಿದ್ದಾರೆ. ಇದರ ಜೊತೆಗೆ ರಾಜರಾಜೇಶ್ವರಿನಗರದಲ್ಲಿರುವ ತಮ್ಮ ಒಡೆತನದ ರೆಡ್ ಕಾರ್ಪೆಟ್ ಶಾಪ್ನ್ನು ಮತ್ತೆ ಓಪನ್ ಮಾಡುವ ಆಲೋಚನೆಯಲ್ಲಿದ್ದಾರೆ.




 
  
         
    




 
                
                
                
                
                
                
               