ನೀಲಿಕಣ್ಣುಗಳಿಂದಲೇ.. ಮುಗ್ದ ನಗುವಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಶ್ ಆಗಿರೋ ಮಹಾಕುಂಭಮೇಳದ ‘ಮೊನಾಲಿಸಾ’ ಕೊನೆಗೂ ಬಾಲಿವುಡ್​​ಗೆ ಎಂಟ್ರಿ ಆಗಿದ್ದಾರೆ. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ 16 ವರ್ಷದ ಈ ಬಾಲೆ ಯೂಟ್ಯೂಬರ್​ಗಳಿಂದಲೇ ಹೊಸ ಕ್ರೇಜ್ ಕ್ರಿಯೇಟ್ ಮಾಡಿದ್ದರು. ಈಕೆಯ ನೋಟ.. ನಗು.. ಮುಗ್ದ ಮಾತಿನಿಂದಲೇ ಮಿಲಿಯನ್​ಗಟ್ಟಲೇ ಜನ ಈಕೆಯ ವಿಡಿಯೋಗಳನ್ನ ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗೆ ಕ್ರೇಜ್​​ನ ಉತ್ತುಂಗದಲ್ಲಿದ್ದಾಗ ಈಕೆ ಇನ್ನೇನು ಬಾಲಿವುಡ್​​ಗೆ ಎಂಟ್ರಿ ಕೊಡ್ತಾಳೆ ಅಂತಾನೇ ಎಲ್ರೂ ಅಂದ್ಕೊಂಡಿದ್ದರು. ಅದರಂತೆ ಈಗ ಬಾಲಿವುಡ್​​​ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ.

MONALISA CINEMA (1)

ಉತ್ತರಪ್ರದೇಶದ ಪ್ರಯಾಗ್​​ರಾಜ್​​ನಲ್ಲಿ ನಡೀತಿರೋ ಮಹಾಕುಂಭಮೇಳದಲ್ಲಿ ವೈರಲ್​ ಆಗಿದ್ದ ಹುಡುಗಿ ಮೊನಾಲಿಸಾ ಈಗ ಸಿನಿಮಾವೊಂದರ ನಾಯಕಿ ಆಗ್ತಿದ್ದಾಳೆ. ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಮತ್ತವರ ತಂಡ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಮೊನಾಲಿಸಾ ಅಲಿಯಾಸ್ ಮೋನಿ ಭೋಂಸ್ಲೆ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಮುಂಬರುವ ತಮ್ಮ ನಿರ್ದೇಶನದ ‘ದಿ ಡೈರಿ ಆಫ್ ಮಣಿಪುರ’ ಚಿತ್ರಕ್ಕಾಗಿ ಮೊನಾಲಿಸಾ ಅವರನ್ನ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.

MONALISA CINEMA (2)

‘ದಿ ಡೈರಿ ಆಫ್​ ವೆಸ್ಟ್ ಬೆಂಗಾಲ್’​ ಸಿನಿಮಾ ಖ್ಯಾತಿಯ ನಿರ್ದೇಶಕ ಸನೋಜ್​ ಮಿಶ್ರಾ ಮಾತನಾಡಿ, ‘ಮೊನಾಲಿಸಾ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್​​ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ. ಇನ್ನು ಬೆಳ್ಳಿಪರದೆ ಮೇಲೆ ಮಿಂಚಬೇಕಾದರೆ ಸ್ವಲ್ಪ ನಟನೆಯ ಅಗತ್ಯವಿದೆ. ಅದಕ್ಕಾಗಿ ಕೆಲವೇ ವಾರಗಳಲ್ಲಿ ಒಂದು ಶಿಬಿರ ಆಯೋಜಿಸಿ ಮೊನಾಲಿಸಾಗೆ ತರಬೇತಿ ನೀಡುವ ಜವಾಬ್ದಾರಿ ಇದೆ. ಆ ತರಬೇತಿಯು ತಮ್ಮ ಚಿತ್ರದ ಪಾತ್ರವನ್ನ ಮಾತ್ರ ಅವಲಂಬಿಸಿರುತ್ತದೆ’ ಅಂತಾ ಹೇಳಿದ್ದಾರೆ.

MONALISA CINEMA (3)

ಇನ್ನು ತನಗೆ ಸಿನಿಮಾ ಆಫರ್ ಬಂದಿರೋದಕ್ಕೆ ತುಂಬಾ ಖುಷಿಪಡ್ತಿರುವ ಮೊನಾಲಿಸಾ, ಅವರು ನನಗೆ ಮೊದಲು ಫೋನ್ ಮಾಡಿದ್ದರು. ಸಿನಿಮಾದಲ್ಲಿ ಆಕ್ಟ್ಮಾಡೋಕೆ ಚಾನ್ಸ್ ಕೊಡ್ತೀನಿ ಅಂದ್ರು. ಬಳಿಕ ನಮ್ಮ ಮನೆಗೆ ಬಂದು ನಮ್ಮ ಫ್ಯಾಮಿಲಿ ಜೊತೆ ಮಾತನಾಡಿದ್ದಾರೆ. ಇದೀಗ ನಮ್ಮ ಫ್ಯಾಮಿಲಿ ಕೂಡ ಒಪ್ಪಿಗೆ ಕೊಟ್ಟಿದೆ. ಇದರಿಂದ ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ ಅಂತಾ ಮಾಧ್ಯಮಗಳಿಗೆ ತಿಳಿಸಿದ್ದಾಳೆ.

MONALISA CINEMA (1)

ಸದ್ಯಕ್ಕೀಗ ಸಿನಿಮಾದ ಸೆಟ್ಟೇರುವ ಪ್ರಕ್ರಿಯೆ ಶುರುವಾಗಿದೆ. ಅದರ ಜೊತೆಗೆ ನಟನೆಯಲ್ಲಿ ಮೊನಾಲಿಸಾ ಪಕ್ವತೆ ಪಡೆಯಬೇಕಾಗಿದೆ. ಹಾಗಾಗಿ ಎಲ್ಲವೂ ಮುಗಿದ ಬಳಿಕ ಮುಂದಿನ ತಿಂಗಳಿಂದ ಶೂಟಿಂಗ್ ಶುರುವಾಗಲಿದ್ದು, ಇದೇ ವರ್ಷ ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್​ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ ಎನ್ನಲಾಗ್ತಿದೆ. ಏನೇ ಆದ್ರೂ ವೈರಲ್​ ಹುಡುಗಿ ಮೊನಾಲಿಸಾ, ನೆಟ್ಟಿಗರು ಮಾತನಾಡಿಕೊಂಡ ರೀತಿಯಲ್ಲೇ ಬಾಲಿವುಡ್​ ಎಂಟ್ರಿ ಆಗ್ತಿರೋದು ಖುಷಿಯ ವಿಚಾರವೇ ಸರಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ