ನಿಮ್ಮ ತನುಮನಗಳ ಸೌಂದರ್ಯದಲ್ಲಿ ಯಾವಾಗಲೂ ಚಿರಯೌವನ ಉಳಿಯುವಂತೆ ಮಾಡಿಕೊಳ್ಳಿ.

ಇಂದಿನ ನಾಗಾಲೋಟದ ಜೀವನದಲ್ಲಿ ಮಹಿಳೆಯರಿಗೆ ತಮ್ಮ ಮೇಲೆ ಗಮನ ಕೊಡುವುದಕ್ಕೂ ಸಮಯ ಇರುವುದಿಲ್ಲ. ನೀವು ನಿಮ್ಮ ಬಗ್ಗೆ ಗಮನ ಕೊಡದಿದ್ದರೆ ನೀವು ಎಷ್ಟೇ ಸೌಂದರ್ಯವತಿಯಾಗಿದ್ದರೂ ಆಕರ್ಷಕವಾಗಿ ಕಾಣಲು ಸಾಧ್ಯವಿಲ್ಲ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಮಹಿಳೆ ಮೊದಲು ತನ್ನನ್ನು ಪ್ರೀತಿಸುವುದರ ಅಗತ್ಯವಿದೆ. ದಿನದಲ್ಲಿ ನೀವು ನಿಮಗಾಗಿ 10 ನಿಮಿಷ ಬಿಡುವು ಮಾಡಿಕೊಂಡು, ನಿಮ್ಮನ್ನು ಶಾಂತವಾಗಿಟ್ಟುಕೊಂಡರೆ ನಿಮ್ಮ ಚರ್ಮ ಮತ್ತು ಮುಖ ಯಾವಾಗಲೂ ಅರಳಿರುತ್ತದೆ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಬಹಳ ಅಗತ್ಯ. ಇದು ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದರೆ ಸಾಧ್ಯವಾಗುತ್ತದೆ. ನೀವು ಇದ್ದಕ್ಕಿದ್ದ ಹಾಗೆ ರೂಪತಿಯಾಗುತ್ತೀರ ಅಥವಾ ಮೇಕಪ್‌ ಮಾಡಿ ಯಾರಾದರೂ ನಿಮ್ಮನ್ನು ಸುಂದರಿಯಾಗಿ ಕಾಣಿಸುವಂತೆ ಮಾಡುತ್ತಾರೆ ಅಂತ ಅಂದುಕೊಂಡಿದ್ದೀರಾ? ಈ ತರಹ ಏನೂ ಆಗುವುದಿಲ್ಲ. ನೀವು ನಿರಂತರಾಗಿ ಪ್ರತಿದಿನ ನಿಮ್ಮ ಮನಸ್ಸಿಗೆ ಬಂದಹಾಗೆ ನಿಮಗಿಷ್ಟವಾದ ರೀತಿಯಲ್ಲಿ ಹಾಯಾಗಿ ಜೀವಿಸುವ ಸಲುವಾಗಿ ನಿಮಗಾಗಿ ಸಮಯವನ್ನು ಮಾಡಿಕೊಳ್ಳಬೇಕು. ಈ ಸಮಯ ಕೇವಲ ನಿಮ್ಮದಾಗಿರಬೇಕು. ಸಂತೋಷವಾಗಿರುವುದು ಒಂದು ಅಭ್ಯಾಸವಾಗಿದೆ. ನೀವು ಇದನ್ನು ಬೆಳೆಸಿಕೊಳ್ಳಬೇಕು. ಒಳಗಿನ ಸಂತೋಷವೇ ಮುಖದ ಮೇಲೆ ಹೊಳೆಯುತ್ತದೆ.

ಸ್ವಲ್ಪ ಸಮಯ ನಿಮಗಾಗಿ

ನೀವು ಬಹಳ ವ್ಯಸ್ತರಾಗಿದ್ದು ನಿಮಗೆ ಯಾವುದಾದರೂ ಪಾರ್ಟಿ ಅಥವಾ ಸಮಾರಂಭಕ್ಕೆ ಹೋಗಬೇಕಾಗಿದೆ. ಆಗ ನೀವು ಕೆಲವು ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಾಗುತ್ತದೆ.

ಮೊದಲು ಫ್ರೆಶ್‌ ಆಗಲು ಸ್ನಾನ ಮಾಡಿ. ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ನಂತರ ತಣ್ಣೀರಿನಿಂದ ಮಾಡಿ. ಸ್ನಾನ ಮಾಡುವ ನೀರಿನಲ್ಲಿ ಯೂಡಿಕೊಲೋನ್‌ ನ ಕೆಲವು ಹನಿಗಳನ್ನು ಹಾಕಿ. ಇದರಿಂದ ನೀವು ಬಹಳ ತಾಜಾತನ ಅನುಭವಿಸುವಿರಿ.

ಸ್ನಾನ ಮಾಡುವುದು ಸಾಧ್ಯವಾಗದಿದ್ದರೆ ಟವೆಲ್ ‌ಗೆ ಕೆಲವು ಯೂಡಿಕೊಲೋನ್‌ ಹನಿಗಳನ್ನು ಹಾಕಿ, ಕಣ್ಣುಗಳನ್ನು ಮುಚ್ಚಿಕೊಂಡು ಅವುಗಳ ಮೇಲೆ ಟವೆಲ್ ‌ನ್ನು 5 ನಿಮಿಷಗಳ ಕಾಲ ಇಟ್ಟುಕೊಳ್ಳಿ. ಹೀಗೆ ಮಾಡುವಾಗ ಆಳವಾಗಿ ಉಸಿರೆಳೆದುಕೊಳ್ಳಿ. 6 ಸಲ ಉಸಿರುಬಿಟ್ಟು ಮತ್ತು 6 ಸಲ ಉಸಿರನ್ನು ಎಳೆದುಕೊಂಡು ಉಸಿರಾಟವನ್ನು ವ್ಯವಸ್ಥಿತಗೊಳಿಸಿ.

ಟಬ್‌ ನಲ್ಲಿ ನಸು ಬೆಚ್ಚಗಿನ ನೀರು ತುಂಬಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಕಾಲುಗಳನ್ನು ಆ ನೀರಿನಲ್ಲಿ ಇಳಿಬಿಟ್ಟು ಸ್ವಲ್ಪ ಹೊತ್ತು ಕುಳಿತಿರಿ. ಇದರಿಂದ ಆಯಾಸ ಪೂರ್ಣವಾಗಿ ದೂರವಾಗುತ್ತದೆ.

ನಂತರ ತಣ್ಣೀರು ಅಥವಾ ಮಂಜುಗಡ್ಡೆ ತುಂಡಿನಿಂದ ಮುಖವನ್ನು ಮಸಾಜ್‌ ಮಾಡಿಕೊಳ್ಳಿ ಅಥವಾ ಕಣ್ಣುಗಳನ್ನು ಮುಚ್ಚಿಕೊಂಡು ಮುಖದ ಮೇಲೆ ನೀರನ್ನು ಚಿಮುಕಿಸಿಕೊಳ್ಳಿ.

ಉಡುಪಿನ ಆಯ್ಕೆ

ಹಾಕಿಕೊಂಡಾಗ ನಿಮಗೆ ಆರಾಮ ಎನಿಸುವಂತಹ ಉಡುಪನ್ನೇ ಆಯ್ದುಕೊಳ್ಳಿ. ನೀವು ಯಾವ ಬಣ್ಣದ ಬಟ್ಟೆ ಹಾಕಿಕೊಳ್ಳಲು ಇಷ್ಟಪಡುತ್ತೀರೋ ಅದೇ ಬಣ್ಣದ ಉಡುಪನ್ನು ಧರಿಸಿ. ಜೊತೆಗೆ ಆರಾಮ ಎನಿಸುವ ಚಪ್ಪಲಿಗಳು ಅಥವಾ ಹಿಮ್ಮಡಿ ಇವರು ಸ್ಯಾಂಡಲ್ ಗಳನ್ನು ಆಯ್ದುಕೊಳ್ಳಿ. ಅನುಕೂಲದ ಜೊತೆ ಗ್ಲಾಮರ್‌ ಯಾವಾಗಲೂ ಯಶಸ್ಸು ಪಡೆಯುತ್ತದೆ. ನೀವು ಬಹಳ ಚೆನ್ನಾಗಿರುವ ಉಡುಗೆ ಧರಿಸಿದ್ದೀರಿ. ಆದರೆ ಅದು ನಿಮಗೆ ಆರಾಮ ಎನಿಸುತ್ತಿಲ್ಲವೆಂದರೆ ನೀವು ಕೂಡ ಗ್ಲಾಮರಸ್‌ ಆಗಿ ಕಾಣುವುದಿಲ್ಲ.

ಮೇಕಪ್ ಪಾಡು

ಮೇಕಪ್‌ ಮಾಡಿಕೊಳ್ಳುವ ಮೊದಲು ಮುಖಕ್ಕೆ ಕ್ಲೆನ್ಸರ್‌ ಹಚ್ಚಿಕೊಳ್ಳಿ. ಇದನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. 1 ಚಮಚ ಟೀ ಎಲೆಗಳನ್ನು ಸ್ವಲ್ಪ ಹಾಲು ಅಥವಾ ಮೊಸರು ಯಾವುದು ನಿಮಗೆ ಇಷ್ಟವೋ ಅದನ್ನು ಕಡಲೆಹಿಟ್ಟಿನ ಜೊತೆ ಸೇರಿಸಿ ಅದನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. 2-3 ನಿಮಿಷಗಳು ಮೃದುವಾಗಿ ಕ್ಲಾಕ್‌ ವೈಸ್‌ ಮತ್ತು ಆ್ಯಂಟಿ ಕ್ಲಾಕ್‌ ವೈಸ್‌ ಆಗಿ ಮಸಾಜ್ ಮಾಡಿ. ನಂತರ ಮುಖವನ್ನು ತೊಳೆಯಿರಿ.

ನಂತರ ಟೋನರ್‌ ನ ಸರದಿ. ಇದರಲ್ಲಿ ಒಂದು ಐಸ್‌ ಕ್ಯೂಬ್‌ ನಿಂದ ಮೊದಲು ಹೇಳಿದ ಹಾಗೆ ಮುಖದ ಮಸಾಜ್‌ ಮಾಡಿ.

ಪ್ರತಿಯೊಬ್ಬರಿಗೂ ಬೇರೆ ಬೇರೆ ಮೇಕಪ್‌ ಇರುತ್ತದೆ. ಬೇರೆ ಬೇರೆ ಉಡುಪುಗಳು ಮತ್ತು ಸಂದರ್ಭಗಳಿಗೆ ಕೂಡ ಮೇಕಪ್‌ ಬೇರೆ ಬೇರೆ ಇರುತ್ತದೆ. ಅನೇಕ ಸಲ ಒಳ್ಳೆ ಬ್ರ್ಯಾಂಡ್‌ ನ ಉತ್ಪಾದನೆಗಳು ಕೂಡ ವ್ಯಕ್ತಿ, ಸಂದರ್ಭ ಅಥವಾ ಉಡುಪಿಗೆ ಹೊಂದಿಕೆಯಾಗುವುದಿಲ್ಲ.

ನಿಮಗೆ ಒಪ್ಪು ಮೇಕಪ್‌ ಮಾಡಿಕೊಳ್ಳಿ. ಬಹಳ ಹೊಳೆಯುವ ಮೇಕಪ್‌ ನಿಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಸಾಫ್ಟ್ ಮೇಕಪ್‌ ಮಾಡಿಕೊಳ್ಳಿ. ಕಣ್ಣುಗಳಿಗೆ ಅತಿ ಮೇಕಪ್‌ ಮಾಡಿಕೊಳ್ಳಬೇಡಿ. ನ್ಯಾಚುರಲ್ ಮತ್ತು ಮ್ಯಾಟ್‌ ಕಲರ್‌ ನ ಲಿಪ್‌ ಸ್ಟಿಕ್‌ ಬಳಸಿ. ಟಿ.ವಿ ಮತ್ತು ಸಿನಿಮಾ ತಾರೆಯರ ಮೇಕಪ್‌ ಯಾವಾಗಲೂ ಹೆವಿಯಾಗಿರುತ್ತದೆ. ಇದು ಸಾಧಾರಣ ಪಾರ್ಟಿಗೆ ಒಪ್ಪುವುದಿಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಿ. ಒಡವೆಗಳನ್ನು ನಿಮ್ಮ ಉಡುಗೆಗೆ ಅನುರೂಪವಾಗಿ ಹಾಕಿಕೊಳ್ಳಿ. ಹಾಕಿಕೊಂಡಾಗ ಆರಾಮ ಎನಿಸಬೇಕು. ಕೃತಕ ಅಥವಾ ಕಿವಿಯ ಅಸಲಿ ಆಭರಣಗಳನ್ನು ಹಾಕಿಕೊಳ್ಳುವಾಗ ಕಿವಿಗಳ ತೂತುಗಳಿಗೆ ಕೋಲ್ಡ್ ಕ್ರೀಮನ್ನು ಹಚ್ಚಿಕೊಂಡು ನಂತರ ಹಾಕಿಕೊಳ್ಳಿ.

ಕೋಮಲವಾದ ಕೂದಲು

ಯಾವಾಗಲೂ ಪಾರ್ಲರಿಗೆ ಹೋಗಿಯೇ ಕೂದಲನ್ನು ಸೆಟ್‌ ಮಾಡಿಸಿಕೊಳ್ಳಬೇಕು ಅಂತೇನಿಲ್ಲ. ಇದಕ್ಕೆ ಸಮಯದ ಅಗತ್ಯ ಇದೆ ಅಷ್ಟೆ. ಎಷ್ಟೋ ಸಲ ಯಾವುದಾದರೂ ಸಮಾರಂಭಕ್ಕೆ ಹೋಗಿ ಸ್ವಲ್ಪ ಸಮಯ ಕಳೆಯಬೇಕಾಗಿರುತ್ತದೆ. ಆದರೆ ಅಲ್ಲಿಗೆ ಹೋಗಲು ಸಿದ್ಧವಾಗುವ ಸಲುವಾಗಿ ಪಾರ್ಲರ್‌ ಗೆ ಹೋದಾಗ, ಅಲ್ಲಿ ಸಮಾರಂಭದ ಸಮಯಕ್ಕಿಂತ ಹೆಚ್ಚು ಸಮಯ ಕಳೆಯಬೇಕಾಗಿ ಬರುತ್ತದೆ. ಇದು ಸಹಜವಾಗಿ ನಿಮಗೆ ತೊಂದರೆ ಅನಿಸುತ್ತದೆ. ಆದ್ದರಿಂದ ಕೂದಲು ಉದ್ದವಾಗಿದ್ದರೆ ನೀವೇ ಸೊಗಸಾದ ಜಡೆ ಹಾಕಿಕೊಳ್ಳಬಹುದು. ಇದು ನಿಮಗೆ ಗ್ಲಾಮರಸ್‌ ಲುಕ್‌ ಕೊಡುತ್ತದೆ. ಇದಲ್ಲದೆ ಕೂದಲನ್ನು ಸ್ವಲ್ಪ ಒದ್ದೆ ಮಾಡಿ ಬ್ರಶ್ ಮಾಡಿಕೊಳ್ಳಬಹುದು. ನಂತರ ಸೀರಮ್ ಹಾಕಿ ಎಲಿಗೆಂಟ್‌ ಲುಕ್‌ ಕೊಡಬಹುದು. ಕೂದಲು ಒರಟಾಗಿದ್ದರೆ ಕೊಬ್ಬರಿ ಎಣ್ಣೆಯ ಒಂದು ತೊಟ್ಟಿಗೆ ನೀರನ್ನು ಬೆರೆಸಿ ಕೂದಲಿನ ಮೇಲೆ ಹಚ್ಚಿಕೊಳ್ಳಿ.

ಸ್ತ್ರೀ ಪ್ರಾಕೃತಿಕ ರೂಪದಲ್ಲಿ ತನ್ನ ಸೌಂದರ್ಯ ಎದ್ದು ಕಾಣಿಸುವಂತೆ ಮಾಡಿಕೊಳ್ಳಬೇಕು. ಇಲ್ಲಿ ಹೇಳಿರುವ ಎಲ್ಲಾ ಫೇಸ್‌ ಪ್ಯಾಕ್‌ಗಳು ನ್ಯಾಚುರಲ್ ಆಗಿರುವಂಥದ್ದು. ನಗು ಮತ್ತು ಸಂತೋಷ ಮನುಷ್ಯನಿಗೆ ಬಹಳ ಮುಖ್ಯ. ನೀವು ದಿನಾ ಸ್ವಲ್ಪ ಹೊತ್ತಾದರೂ ನಕ್ಕರೆ ಅದರಿಂದ ನಿಮ್ಮ ಮುಖದ ಎಲ್ಲಾ ಮಾಂಸಖಂಡಗಳು ಕ್ರಿಯಾಶೀಲವಾಗುತ್ತವೆ. ಇದರಿಂದ ನೀವು ಚಿಕ್ಕವರಂತೆ ಕಾಣುತ್ತೀರಿ. ಮುಖದ ನೆರಿಗೆಗಳೂ ದೂರವಾಗುತ್ತವೆ.

ರೂಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ