ಪ್ರಸವದ ನಂತರ ಪ್ರತಿ ಹೆಂಗಸಿನಲ್ಲಾಗುವ ದೈಹಿಕ ಬದಲಾವಣೆಗಳು ಸಹಜ, ಸಾಮಾನ್ಯವಾದುದು. ಇದರಿಂದ ಚಿಂತೆಗೆ ಒಳಗಾಗುವ ಬದಲು ಏಸ್ಥೆಟಿಕ್ ಸೆಂಟರ್ ಅನುಕೂಲಗಳುಳ್ಳ ಆಸ್ಪೆತ್ರೆಗೆ ಹೋಗಿ `ಮಮ್ಮಿ ಮೇಕ್ ಓವರ್’ ಚಿಕಿತ್ಸೆಗೆ ಒಳಪಡುವುದು ಲೇಸು. ಇದರಲ್ಲಿ ಅನೇಕ ಹಂತಗಳಿದ್ದು, ಅದು ನಿಮ್ಮ ದೇಹವನ್ನು ಪ್ರವಸ ಪೂರ್ವದಂತೆಯೇ ಮಾರ್ಪಡಿಸುತ್ತದೆ. ಇದರಿಂದ ನಿಮ್ಮ ಆರೋಗ್ಯ, ಸೌಂದರ್ಯ ಇಮ್ಮಡಿಸುತ್ತದೆ!
ಪ್ರತಿ ತಾಯಿಯ ಕಥೆ : ಮಗುವಿನ ಪಾಲನೆಯಿಂದ ತಾಯ್ತನದ ಸುಖ ಅನುಪಮ. ಪ್ರತಿ ಹೆಣ್ಣು ಹೀಗೆ ತಾಯಿ ಆಗಬಯಸಿ ತನ್ನ ಮಕ್ಕಳ ಜವಾಬ್ದಾರಿ ವಹಿಸುತ್ತಾಳೆ. ಆದರೆ ಬಾಣಂತಿ ಕೆಲವು ತಿಂಗಳ ಬಳಿಕ ತನ್ನನ್ನು ತಾನು ಗಮನಿಸಿಕೊಂಡಾಗ, ಅವಳಿಗೆ ತನ್ನ ಗುರುತೇ ಸಿಗುವುದಿಲ್ಲ! ಪ್ರಸವಕ್ಕೆ ಮುನ್ನ ಅವಳು ಖಂಡಿತಾ ಹೀಗಿರಲಿಲ್ಲ. ಗರ್ಭಾವಸ್ಥೆ, ತಾಯ್ತನ ಅವಳಲ್ಲಿ ಅನೇಕ ದೈಹಿಕ ಬದಲಾವಣೆಗಳನ್ನು ತಂದಿವೆ. ಇದನ್ನು ಸರಿಪಡಿಸಿ ಹಿಂದಿನ ಆ ಬಳುಕು ಬಳ್ಳಿ ದೇಹ ಪಡೆಯಲು ಸಾಧ್ಯವೇ? ಖಂಡಿತಾ ಸಾಧ್ಯ!
ಮಮ್ಮಿ ಮೇಕ್ ಓವರ್ : ಪ್ರಸವದ ನಂತರ ವಕ್ರವಕ್ರವಾಗಿರುವ ಹೆಣ್ಣಿನ ದೇಹವನ್ನು ಮತ್ತೆ ಪ್ರಸವ ಪೂರ್ವದಂತೆ ಶಿಲ್ಪಿ ಕಡೆದ ದೇಹವಾಗಿಸಲು, ಇದು ಪರ್ಸನೈಸ್ಡ್ ಕಾಸ್ಮೆಟಿಕ್ ಪ್ರೊಸೀಜರ್ ಗಳ ವಿಧಾನವಾಗಿದ್ದು, ಸುಂದರ ದೇಹ ರಚನೆ ಬಯಸುವ ಪ್ರತಿ ತಾಯಿಗೂ ಇದು ಅನಿವಾರ್ಯ. ಇದು ತಾಯ್ತನವನ್ನು ಅನುಭವಿಸಿಯೂ, ನಿಮ್ಮ ದೇಹ ರೀಶೇಪ್ ಪಡೆಯಲು ನೆರವಾಗುವ ಆಧುನಿಕ ಚಿಕಿತ್ಸೆ.
ವಿವಿಧ ಹಂತಗಳು : ಇದರಲ್ಲಿ ನಿಮಗೆ ಕಾಸ್ಮೆಟಿಕ್ ಸರ್ಜರಿ, ನಾನ್ ಸರ್ಜಿಕಲ್ ಚಿಕಿತ್ಸೆ ಅಥವಾ ಎರಡರ ಕಾಂಬಿನೇಶ್ ಇರಬಹುದು. ಬ್ರೆಸ್ಟ್ ಆಗ್ಮೆಂಟೇಶನ್, ಬ್ರೆಸ್ಟ್ ಲಿಫ್ಟ್, ಟಮ್ಮಿ ಟಕ್, ಲೈಪೋಸಕ್ಷನ್, ಸರ್ಜಿಕಲ್ ಜೆನಿಟಲ್ ರಿಜುವಿನೇಶನ್…… ಇತ್ಯಾದಿ ಕಾಮನ್ ಸರ್ಜಿಕಲ್ ಪ್ರೊಸೀಜರ್ ಗಳನ್ನು ಇದು ಒಳಗೊಂಡಿದೆ.
ನಾನ್ ಸರ್ಜಿಕಲ್ ಚಿಕಿತ್ಸೆಗಳಲ್ಲಿ ಫ್ಯಾಟ್ ಸೆಲ್ಯುಲೈಟ್ ರಿಡಕ್ಷನ್, ಚರ್ಮದ ಟೈಟ್ ನಿಂಗ್ ಅಥಾ ರೀಸರ್ಫೇಸಿಂಗ್, ನಾನ್ ಸರ್ಜಿಕಲ್ ಜೆನಿಟಲ್ ರಿಜುವಿನೇಶನ್, ಇಂಜೆಕ್ಟಿಂಗ್ ಬೊಟಾಕ್ಸ್ ಅಥವಾ ಫಿಲ್ಲರ್ಸ್ ನಿಮ್ಮ ಫೇಶಿಯಲ್ ರಿಜುವಿನೇಶನ್ ಗೆ ಪೂರಕ.
ಟಮ್ಮಿ ಟಕ್ : ಇದು ಅಬ್ಡಾಮಿನೋಪ್ಲಾಸ್ಟಿ ಎಂಬ ಹೆಸರಲ್ಲೂ ಕರೆಯಲ್ಪಡುತ್ತದೆ. ಗರ್ಭಾವಸ್ಥೆ ಕಾರಣ ದೇಹ ತೂಕ ಗಳಿಸುತ್ತದೆ, ಇದರಿಂದ ಹೊಟ್ಟೆಯ ಗಾತ್ರ ಹಿಗ್ಗುತ್ತದೆ, ಅದರ ಸುತ್ತಲಿನ ಚರ್ಮ ಜೋತುಬಿದ್ದು ಸಡಿಲಗೊಳ್ಳುತ್ತದೆ. ಹಿಂದೆ ಇದ್ದ ವಿಯಲ್ ಸ್ಟೈನ್‌ಮಾಯವಾಗುತ್ತದೆ. ಟಮ್ಮಿ ಟಕ್ ಈ ಅಧಿಕ ಕೊಬ್ಬನ್ನು ತೆಗೆದು, ನಿಮ್ಮ ಸೊಂಟದ ಸುತ್ತಲ ಚರ್ಮವನ್ನು ಟೈಟ್ ಗೊಳಿಸುತ್ತದೆ. ಲೈಪೊಸಕ್ಷನ್ ಮೂಲಕ ಒಳಗಿನ ಹೆಚ್ಚುವರಿ ಕೊಬ್ಬನ್ನು ತೊಲಗಿಸಲಾಗುತ್ತದೆ. ಇದರಿಂದ ನಿಮ್ಮ ಸೊಂಟ ಫ್ಲಾಟ್‌ಟೋನ್ಡ್ ಆಗಿ, ನಿಮ್ಮ ಹಿಂದಿನ ಚೆಲುವು ಮರಳುತ್ತದೆ.
ಬ್ರೆಸ್ಟ್ ಆಗ್ಮೆಂಟೇಶನ್ : ಗರ್ಭಾವಸ್ಥೆ ಮತ್ತು ಸ್ತನ್ಯಪಾನ ಹೆಣ್ಣಿನ ಸ್ತನಗಳ ಗಾತ್ರವನ್ನು ಬದಲಾಯಿಸುತ್ತದೆ. ನಿಪ್ಪಲ್ ಹಿಂದಿಗಿಂತ ದೊಡ್ಡದಾಗಿ, ಸ್ತನ ಕೆಳಭಾಗಕ್ಕೆ ಜಗ್ಗುತ್ತದೆ. ಇದನ್ನು ಹಿಂದಿನಂತೆ ಮಾಡಲು, ಬ್ರೆಸ್ಟ್ ಕಾಸ್ಮೆಟಿಕ್ ಪ್ರೊಸೀಜರ್ ಅನುಸರಿಸುತ್ತಾರೆ. ಅಂದ್ರೆ ಬ್ರೆಸ್ಟ್ ರಿಡಕ್ಷನ್, ಬ್ರೆಸ್ಟ್ ಲಿಫ್ಟ್, ಇಂಪ್ಲಾಂಟ್ಸ್ ಬಳಸಿ ಆಗ್ಮೆಂಟೇಶನ್ ಪ್ರಕ್ರಿಯೆ ಮಾಡುತ್ತಾರೆ.
ಜೆನಿಟಲ್ ರಿಜುವಿನೇಶನ್: ಹೆಣ್ಣು 2ನೇ, 3ನೇ ಸಲ ತಾಯಿ ಆದರೆ ಅವಳ ದೈಹಿಕ ವ್ಯಕ್ತಿತ್ವ ಸಂಪೂರ್ಣ ಬದಲಾಗುತ್ತದೆ. ಹೀಗಾಗಿ ಯೋನಿ ದ್ವಾರ ಹಿಗ್ಗಿ ಮುಂದೆ ಸಮಸ್ಯೆಗೆ ಕಾರಣವಾಗುತ್ತದೆ. ಕಾಸ್ಮೆಟಿಕ್ ಸರ್ಜರಿ ಮೂಲಕ ಈ ಸ್ಥಿತಿ ಬದಲಾಯಿಸಿ ಚಿರಯೌವನ ಪಡೆಯಬಹುದು, ಇದು ಹೆಣ್ಣಿನ ಸಹಜ ಸೌಂದರ್ಯಕ್ಕೆ ಪೂರಕ.
ಬಾಡಿ ಕಾಂಟೂರಿಂಗ್ : ಪ್ರಸವದ ನಂತರ ತೋಳು, ತೊಡೆ, ನಿತಂಬ, ಸೊಂಟ, ಮುಖ, ಕುತ್ತಿಗೆ ಬಳಿ ಹೆಚ್ಚು ಕೊಬ್ಬು ಸೇರುವುದರಿಂದ ಲೈಪೊಸಕ್ಷನ್ ಮೂಲಕ ಇವನ್ನು ತಗ್ಗಿಸಬಹುದು. ಆಧುನಿಕ ಟೆಕ್ನಾಲಜಿ ಮೂಲಕ ಲೈಪೊಸಕ್ಷನ್, ರೇಡಿಯೊ, ಫ್ರೀಕ್ವೆನ್ಸಿಯಿಂದ ಈ ಭಾಗಗಳಲ್ಲಿ ಸ್ಕಿನ್ ಟೈಟ್ ನಿಂಗ್ ಸುಸೂತ್ರ. ಇದರಲ್ಲಿ ಯಾವುದೇ ಕಾಂಪ್ಲಿಕೇಶನ್ಸ್ ಇಲ್ಲ.
ಮುಖದ ಸೊಬಗು : ಗರ್ಭಾವಸ್ಥೆಯ ನಾನಾ ಟೆನ್ಶನ್ ಗಳಿಂದಾಗಿ ಮುಖ ಅನೇಕ ಬದಲಾವಣೆಗಳಿಗೆ ಈಡಾಗುತ್ತದೆ. ಐ ಬ್ಲಾಗ್ಸ್, ಡಾರ್ಕ್ ಸರ್ಕಲ್ಸ್, ಸ್ಯಾಗಿ ಸ್ಕಿನ್, ಸುಕ್ಕುನಿರಿಗೆ, ಡಬಲ್ ಚಿನ್ ಇತ್ಯಾದಿ ಕಾಡುತ್ತದೆ. ಅನೇಕ ಸರ್ಜಿಕಲ್ ಪ್ರೊಸೀಜರ್ ಗಳ ಮೂಲಕ ಅಂದ್ರೆ ಲೈಪೊಸಕ್ಷನ್, ಮುಖದ ಸ್ಕಿನ್ ಟೈಟನಿಂಗ್ ಮಾಡಿದ ನಂತರ ನಾನ್ ಸರ್ಜಿಕಲ್ ಪ್ರೊಸೀಜರ್ ಗಳಾದ ಬೊಟಾಕ್ಸ್, ಫಿಲ್ಲರ್ಸ್ ಮೂಲಕ ಇದನ್ನು ಸರಿಪಡಿಸಬಹುದು.
ಅಂದರೆ ಈ ಎಲ್ಲಾ ಪ್ರೊಸೀಜರ್ ಗಳೂ ಎಲ್ಲರಿಗೂ ಅನಿವಾರ್ಯವಲ್ಲ. ಅದು ನಿಮ್ಮ ದೇಹಕ್ಕೆ ತಕ್ಕಂತೆ ಕಸ್ಟಮೈಸ್ಡ್ ಆಗಿರುತ್ತದೆ. ಮುಖ್ಯ ಉದ್ದೇಶ ಗರ್ಭಾವಸ್ಥೆ, ಪ್ರವಸಗಳಿಂದ ಕಳೆದುಕೊಂಡ ದೈಹಿಕ ಸೌಂದರ್ಯವನ್ನು ಮರಳಿ ಪಡೆಯುವುದಾಗಿದೆ.
ಐಡಿಯಲ್ ಮಮ್ಮಿ ಮೇಕ್ ಓವರ್ : ಇದಕ್ಕೆ ಎಷ್ಟು ಕಾಲಾವಕಾಶ ಬೇಕೆಂದು ನೀವು ನಿಮ್ಮ ಸರ್ಜನ್ ಬಳಿ ಕೇಳಿ ನಿರ್ಧರಿಸಿ, ದೇಹರಚನೆಗೆ ತಕ್ಕಂತೆ ಇದು ಬೇರೆ ಬೇರೆ ಆಗಿರುತ್ತದೆ.
ಈ ಕೆಳಗಿನ ಸಲಹೆ ಅನುಸರಿಸಿ ಮಮ್ಮಿ ಮೇಕ್ ಓವರ್ ಯಶಸ್ವಿಯಾಗುವಂತೆ ನೋಡಿಕೊಳ್ಳಿ.
ನೀವೇನೊ ಆರೋಗ್ಯವಾಗೇ ಇದ್ದೀರಿ, ಆದರೆ ಸರ್ಜನ್ ರ ಪ್ರಕಾರ ಕೆಲವು ಔಷಧಿ, ಪೌಷ್ಟಿಕ ಆಹಾರ ಸೇವನೆಗಳತ್ತ ಗಮನಹರಿಸಬೇಕು.
ಪ್ರಸವದ ನಂತರ ನೀವು ಪೂರ್ತಿ ರಿಕವರ್ ಆಗಿದ್ದೀರಿ. ಇದು ನಿಮ್ಮ ದೇಹ ಸ್ಟೆಬಿಲೈಸ್ ಆಗಲು ಪೂರಕ.
ನೀವು ಬಯಸಿದ ದೇಹ ತೂಕ ಪಡೆಯಬಹುದು. ಪಥ್ಯದ ಪೌಷ್ಟಿಕ ಆಹಾರ, ಯೋಗ, ವ್ಯಾಯಾಮ ಅನುಸರಿಸಿ ನೀವು ಬಯಸಿದ ದೇಹದ ತೂಕ ಗಳಿಸಬಹುದು.
ನೀವು ಬಯಸಿದ ಕೌಟುಂಬಿಕ ಜೀವನ ಸಿಕ್ಕಿದೆ. ಮತ್ತಷ್ಟು ಬಸುರು ಬಾಣಂತನ ಎಂದು ಟೆನ್ಶನ್ ಹತ್ತಿಸಿಕೊಳ್ಳಬೇಡಿ. ಮಮ್ಮಿ ಮೇಕ್ ಓವರ್ ನಂತರ ಪ್ರೆಗ್ನೆನ್ಸಿಗಳು ಅದರ ಮುಖ್ಯ ಉದ್ದೇಶವನ್ನು ಕೆಡಿಸುತ್ತವೆ.
ನಿಮಗೆ ದೈಹಿಕ ಸೌಂದರ್ಯ ಸುಧಾರಿಸುವ ಅನೇಕ ಆಸೆ ಆಕಾಂಕ್ಷೆಗಳಿದ್ದರೂ, ನಿಮಗೆ ಅದು ಎಷ್ಟು ಅನ್ವಯಿಸುತ್ತದೆ ಎಂದು ಸರ್ಜನ್ ರಿಂದ ಸಲಹೆ ಪಡೆಯಿರಿ.
ಯಾರನ್ನು ಸಂಪರ್ಕಿಸಬೇಕು? : ನಿಮ್ಮ ಇಡೀ ಮಮ್ಮಿ ಮೇಕ್ ಓವರ್ ಮ್ಯಾಜಿಕ್ ನಿಮ್ಮ ಸರ್ಜನ್ ಕೈಯಲ್ಲೇ ಇದೆ. ಈ ಕೆಳಗಿನ ಅಂಶಗಳನ್ನು ನೆನಪಿರಿಸಿಕೊಂಡು ಅಂಥವರನ್ನೇ ಆರಿಸಿಕೊಳ್ಳಿ.
ಬೋರ್ಡ್ ಸರ್ಟಿಫಿಕೇಶನ್ : ನಿಮ್ಮ ಕಾಸ್ಮೆಟಿಕ್ ಸರ್ಜನ್ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತಿರಬೇಕು. ಆಸ್ಪತ್ರೆಗಳಂಥ ರೆಪ್ಯುಟೆಡ್ ಸಂಸ್ಥೆಗಳನ್ನೇ ಆರಿಸಿ. ಇಲ್ಲಿನ ಸರ್ಜನ್ಸ್ ನುರಿತರು, ಅನುಭವಿಗಳು, ಮಹಾನ್ ನಿಪುಣ, ಕುಶಲ ಕಾರ್ಯಸಾಧಕರು. ಇವರುಗಳು ಅಧಿಕ ಆಧುನಿಕ ಕಠಿಣ ಪರೀಕ್ಷೆಗಳನ್ನು ಎದುರಿಸಿ ಈ ಹಂತ ತಲುಪಿರುತ್ತಾರೆ. ಇವರ ಬಳಿ ನುರಿತ ಅನೆಸ್ಥಾಲಜಿಸ್ಟ್ ಇದ್ದು, ಬೆಸ್ಟ್ ಅನುಕೂಲಗಳು ಲಭ್ಯ.
ಅನುಭವ : ನಿಮಗೆ ಬೇಕಾದ ಪ್ರೊಸೀಜರ್ ನಲ್ಲಿ ನೈಪುಣ್ಯವುಳ್ಳರನ್ನೇ ಆರಿಸಿ. ನಿಮ್ಮ ಮೇಕ್ ಓವರ್ ಗೆ ಒಂದಕ್ಕಿಂತ ಹೆಚ್ಚು ಪ್ರೊಸೀಜರ್ ಬೇಕಿದ್ದರೆ, ನಿಮ್ಮ ಸರ್ಜನ್ ಆ ಎಲ್ಲಾ ಪ್ರೊಸೀಜರ್ ಗಳಲ್ಲೂ ನುರಿತವರಾಗಿರಬೇಕು.
ಸೂಕ್ತ ಆಯ್ಕೆ : ಹಲವು ಆಸ್ಪತ್ರೆಗಳು ಹಲವು ತಜ್ಞರನ್ನು ಭೇಟಿ ಆಗಿ, ಸರಿಯಾಗಿ ನಿರ್ಧರಿಸಿ. ನಿಮ್ಮ ಬಜೆಟ್, ಅನುಕೂಲಕ್ಕೆ ತಕ್ಕಂತೆ ಆರಿಸಿ. ನಿಮ್ಮ ಅಗತ್ಯಗಳನ್ನು ಅರಿತು ಅದಕ್ಕೆ ಸಂವೇದನಾಶೀಲರಾಗಿ ಪ್ರತಿಸ್ಪಂದಿಸುವವರನ್ನೇ ಆರಿಸಿ.
ನಿಮಗೆ ಮತ್ತಷ್ಟು ಸಂದೇಹಗಳಿದ್ದರೆ, ಆಸ್ಪತ್ರೆಯ ಡಾ. ಮಯೂರ್ ಶೆಟ್ಟಿಯವರನ್ನು ಸಂಪರ್ಕಿಸಿ. ಇವರು ನುರಿತ, ಬೋರ್ಡ್ ಸರ್ಟಿಫೈಡ್ ಏಸ್ಥೆಟಿಕ್ ರೀಕನ್ ಸ್ಟ್ರಕ್ಟಿವ್ ಸರ್ಜನ್ ಆಗಿದ್ದು, ಪ್ಲಾಸ್ಟಿಕ್ ಸರ್ಜರಿಯಲ್ಲಿ ಹೆಚ್ಚು ಅನುಭವಿಗಳು. ಇವರ ಅಭಿಪ್ರಾಯದಲ್ಲಿ ನಿಪುಣತೆ, ಅನುಭವ, ರೋಗಿಯ ಮನೋಬಲ ಹೆಚ್ಚಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮಗೆ ಬೇಕಾದ ಚಿಕಿತ್ಸಾ ವಿವರಗಳನ್ನು ಇವರು ಒದಗಿಸುತ್ತಾರೆ. ಇನ್ನೇಕೆ ತಡ? ಪ್ರಸವದ ನಂತರ ನೀವು ಪಡೆಯಬಯಸುವ ಚೆಲುವನ್ನು ಇಂದೇ ನಿಮ್ಮದಾಗಿಸಿಕೊಳ್ಳಲು ತಾಯ್ತನದ ಹಿಗ್ಗನ್ನು ಸಹಜವಾಗಿ ಆಸ್ವಾದಿಸಲು ಇಂದೇ ಮಮ್ಮಿ ಮೇಕ್ ಓವರ್ ಗೆ ಸಿದ್ಧರಾಗಿ.
– ಡಾ. ಮಯೂರ್ ಆರ್. ಶೆಟ್ಟಿ, ಕನ್ಸಲ್ಟೆಂಟ್ ಪ್ಲಾಸ್ಟಿಕ್ ಕಾಸ್ಮೆಟಿಕ್ ಸರ್ಜರಿ, ಏಸ್ಥೆಟಿಕ್ ಸೆಂಟರ್, ಲ್ಯಾಂಗ್ ಫೋರ್ಡ್ ಟೌನ್, ಹೊಸೂರು ರಸ್ತೆ, ಬೆಂಗಳೂರು.