ರಾಧೆ…. ರಾಧೆ…. ರಾಧೆ…. ಜಯ ಶ್ರೀರಾಮ…. ಜಯ ಶ್ರೀರಾಮ….. ಜಯ ಶ್ರೀರಾಮ, ರಮಾಕಾಂತ ಅವರು ಪರಿಪೂರ್ಣ ಶ್ರದ್ಧೆಯಿಂದ ಲೀನರಾಗಿದ್ದರು. ಅವರ ಸುತ್ತ ಹಲವರು ಗಂಟೆ ಬಾರಿಸುವುದರಲ್ಲಿ ಮಗ್ನರಾಗಿದ್ದರು. ಈ ಜೋರು ಧ್ವನಿಯಿಂದ ಮಕ್ಕಳಿಗೆ ಬಲು ತೊಂದರೆಯಾಗುತ್ತಿತ್ತು. ಮಗುವೊಂದು ಮೇಲಿಂದ ಮೇಲೆ ತನ್ನ ಅಮ್ಮನ ಹತ್ತಿರ ಹೋಗಿ ಹೇಳುತ್ತಿತ್ತು, “ಅಮ್ಮ ಪ್ಲೀಸ್‌, ಅಪ್ಪನಿಗೆ ಹೇಳು ಎಲ್ಲರಿಗೂ ಕಡಿಮೆ ಸದ್ದಿನಲ್ಲಿ ಪೂಜೆ ಮಾಡಲು ತಿಳಿಸಮ್ಮ. ನಾಳೆ ನನಗೆ ಪರೀಕ್ಷೆಯಿದೆ, ಓದಲು ಆಗುತ್ತಿಲ್ಲ,” ಎಂದ.

ಮಗು ತನ್ನ ತಾಯಿಯ ಮುಂದೆ ಕೋಪ ಪ್ರದರ್ಶಿಸುತ್ತಿರುವುದನ್ನು ಕಂಡು ರಮಾಕಾಂತ್‌ ಕೋಪದಿಂದಲೇ ಹೇಳಿದರು, “ಇದೇನು ಓದು ಸಮಯವೇ? ನಾಳೆ ಪರೀಕ್ಷೆಯಿದ್ದರೆ, ಇಂದು ನೀನು ದೇವರ ಮುಂದೆ ಮಂಡಿ ಊರಿ ಕುಳಿತುಕೊಳ್ಳಬೇಕು.”

“ಎಲ್ಲರೂ,  ಹೇಳಿ ಜೈ ಸೀತಾರಾಮ, ಜೈ ಸೀತಾರಾಮ.” ರಮಾಕಾಂತ ತಮ್ಮ ಮಗುವಿನ ತೊಂದರೆಯನ್ನು ಕಿವಿಗೆ ಹಾಕಿಕೊಳ್ಳದೆ, ಅದಕ್ಕೆ ತದ್ವಿರುದ್ಧ ಎಂಬಂತೆ ಪತ್ನಿಯನ್ನು ಸಿಡುಕುತ್ತಾ, “ನಿನಗೆ ಬುದ್ಧಿ ಇಲ್ವಾ? ಇಲ್ಲಿ ಎಂತೆಂಥ ಪೂಜ್ಯರು ಕುಳಿತಿದ್ದಾರೆ, ಪೂಜೆ ಮಾಡುತ್ತಿದ್ದಾರೆ. ನಿನಗೆ ಮಾತ್ರ ಮಗುವಿನದೇ ಚಿಂತೆಯಾಗಿದೆ. ಮೂರ್ಖ ಹೆಂಗಸೇ, ಹೋಗುವ ಎಲ್ಲರಿಗೂ ಬಿಸಿ ಬಿಸಿ ಬಾದಾಮಿ ಹಾಲು ಮಾಡಿಕೊಂಡು ಬಾ,”  ಪಾಪ ಅವಳು ಏನು ತಾನೇ ಮಾಡುತ್ತಾಳೆ. ಹೆದರುತ್ತಲೇ “ಆಯ್ತು ಆಯ್ತು,” ಎಂದು ಹೇಳುತ್ತಾ ಅವರ ಸೇವೆಯಲ್ಲಿ ತೊಡಗಿದಳು.

ನಡುನಡುವೆ ಅವಳ ಅತ್ತೆಯ ಧ್ವನಿಯೂ ಕೇಳುತ್ತಲಿತ್ತು. ಪ್ರಸಾದ ಸಿದ್ಧವಾಯ್ತಲ್ವಾ? ಮಲಗುವ ಕೋಣೆಯಲ್ಲಿ ಎಲ್ಲ ಸ್ವಚ್ಛಾಗಿದೆಯಲ್ವೇ? ಪೂಜ್ಯರ ಸೇವೆಯಲ್ಲಿ ಯಾವುದೇ ಕೊರತೆ ಅನಿಸಬಾರದು. ನೀನು ಮನಸ್ಸಿನಿಂದ ಎಷ್ಟು ಸೇವೆ ಮಾಡುತ್ತೇವೋ, ನಿನಗೆ ಅಷ್ಟೇ ಪುಣ್ಯ ಪ್ರಾಪ್ತಿ ಆಗುತ್ತೆ. ಪೂಜ್ಯರು ನಮ್ಮ ಮನೆಗೆ ಬಂದದ್ದು ನಿಜಕ್ಕೂ ನಮ್ಮ ಪುಣ್ಯ ಎಂದೇ ಹೇಳಬೇಕು. ಇಂದು ನಾವು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅದಕ್ಕೆ ಕಾರಣ ಈ ಮಹಾತ್ಮರು.ಇಡೀ ದಿನ ಹಾಗೂ ಅರ್ಧ ರಾತ್ರಿ ಅವರ ಸೇವೆಯಲ್ಲಿಯೇ ಕಳೆದುಹೋಗುತ್ತದೆ. ರಾತ್ರಿ 3-4 ಗಂಟೆ ಅಷ್ಟೇ ನಿದ್ರೆ ಬೆಳಗ್ಗೆ 4 ಗಂಟೆ ಆಗುತ್ತಿದ್ದಂತೆ ಪೂಜ್ಯರ ಸ್ನಾನದ ಸಮಯ ಆಗಿಬಿಡುತ್ತದೆ. ಆ ಬಳಿಕ 6 ಗಂಟೆಗೆ ಬೆಳಗ್ಗೆ ಸುತ್ತಾಟ ಇರುತ್ತದೆ. ಎದ್ದ ಬಳಿಕ ಎಲ್ಲಕ್ಕೂ ಮೊದಲು ಸ್ನಾನ ಮಾಡಬೇಕು ಎಂಬ ಒತ್ತಡ ಬೇರೆ.

ಹೀಗೆ ಪ್ರತಿ ವರ್ಷ ಆಗುತ್ತದೆ. ಅವಳು ಯಾವಾಗ ಈ ಮನೆಗೆ ಬಂದಿದ್ದಾಳೊ ಆಗಿನಿಂದ ಇದನ್ನು ನೋಡುತ್ತಾ ಬಂದಿದ್ದಾಳೆ. ಬಡವರು ಯಾರಾದರೂ ಇವರ ಮುಂದೆ ಬಂದು ಕೇಳಿದರೂ ಅವರಿಗೆ ಕೈಯೆತ್ತಿ 10 ರೂ. ಸಹ ಕೊಡುವುದಿಲ್ಲ. ಆದರೆ ಮನೆಗೆ ಪೂಜ್ಯರು ಬಂದಿದ್ದಾರೆಂದು ಸಾವಿರಾರು ರೂ.ಗಳನ್ನು ನೀರಿನಂತೆ ಸುರಿಯುತ್ತಾರೆ. ಆರಂಭದಲ್ಲಿ ಮನೆಗೆ ಒಬ್ಬರೇ ಸ್ವಾಮೀಜಿ ಬರುತ್ತಿದ್ದರು. ಅದೂ ಕೂಡ 2 ಅಥವಾ 3 ಗಂಟೆಗಳಿಗಾಗಿ ಮಾತ್ರ. ಆದರೆ ಪೂಜ್ಯ ಸ್ವಾಮೀಜಿಗಳ ಮೇಲೆ ಇವರ ನಂಬಿಕೆ ಮತ್ತು ಅಷ್ಟೇ ವೇಗವಾಗಿ ವ್ಯಕ್ತಿಯೊಬ್ಬನ ಆದಾಯ ಹೆಚ್ಚಿದಾಗ, ಆ ಸ್ವಾಮೀಜಿಯ ಜೊತೆಗೆ ಮತ್ತಿಬ್ಬರು ಆಗಮಿಸಿದರು. ಈಗಂತೂ ಆ ಸ್ವಾಮೀಜಿ ತನ್ನ ಪತ್ನಿ ಹಾಗೂ ತನ್ನ ಸಂಪೂರ್ಣ 11 ಜನರ ತಂಡದೊಂದಿಗೆ ಬರುತ್ತಿದ್ದಾರೆ.

ಒಬ್ಬ ವ್ಯಕ್ತಿಯ ಸೇವೆ ಅಷ್ಟಿಷ್ಟು ಸುಲಭ ಎನಿಸುತ್ತಿತ್ತು. ಆದರೆ ಸಂಪೂರ್ಣ ತಂಡದ ಸೇವೆ, ಅಕ್ಕಪಕ್ಕದವರು, ಚಿರಪರಿಚಿತರು  ಪೂಜ್ಯ ಸ್ವಾಮೀಜಿಗಳ ಭೇಟಿಗೆ ಬರುತ್ತಾರೆ. ಅವರಿಗೂ ಏನಾದರೂ ಕೊಡುತ್ತಿರಬೇಕಾಗುತ್ತದೆ. ಇಷ್ಟೆಲ್ಲ ಜವಾಬ್ದಾರಿಗಳನ್ನು ಅವಳು ಒಬ್ಬಳೇ ಹೊರಬೇಕಾಗುತ್ತದೆ.

ಇತ್ತೀಚೆಗಿನ ವಿಷಯ. ಆ ಊರಿಗೆ ಸ್ವಾಮೀಜಿಯೊಬ್ಬರ ಆಗಮನವಾಗಿತ್ತು. ಅದೆಷ್ಟೋ ದಿನಗಳ ಕಾಲ ಬೆಳಗ್ಗೆ ಸಂಜೆ ಅದರ ಪ್ರವಚನ ಹಾಗೂ ಬೆಳಗ್ಗೆ ಸಂಜೆ ಊರಲ್ಲಿ ಅವರ ಸಂಚಾರ ಇರುತ್ತಿತ್ತು. ಹೀಗಾಗಿ ಹಲವು ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅವರ ಹಿಂದೆ ಹಿಂದೆಯೇ ಇರುತ್ತಿದ್ದರು. ಜನರ ಇಚ್ಛೆ ಏನಾಗಿತ್ತೆಂದರೆ, ತಮ್ಮ ವ್ಯಾಪಾರ ವಹಿವಾಟು ಹೆಚ್ಚಿಸಿಕೊಳ್ಳುವುದು ಹಾಗೂ ಸ್ವಾಮೀಜಿಯರ ಸೇವೆಯನ್ನು ಮನಸಾರೆ ಮಾಡುವುದಾಗಿತ್ತು.

ಇದೆಂಥ ಮೂಢನಂಬಿಕೆ?

ನಂಬಿಕೆ ಅಥವಾ ಆಲ್ದೆ ಅದರ ಪಾಡಿಗೆ ಅದಿದೆ. ಆದರೆ ಮೂಢನಂಬಿಕೆ ನನ್ನ ತಿಳಿವಳಿಕೆಗೂ ಮೀರಿದ್ದಾಗಿದೆ. ಕುಟುಂಬದವರ ದುಃಖ ಅಥವಾ ಕಷ್ಟ ಅರಿಯಲಾರದಷ್ಟು ಮೂಢನಂಬಿಕೆಯೇ ಎಂದು ಆಶ್ಚರ್ಯವಾಗುತ್ತದೆ. ಚಿಕ್ಕಪುಟ್ಟ ಸಂಗತಿಗಳಿಗೆ ಪುರೋಹಿತರು ಸ್ವಾಮೀಜಿಗಳ ಹಿಂದೆ ಸುತ್ತಾಡುವುದನ್ನು ನೋಡಿ ಖೇದವಾಗುತ್ತದೆ.

ನಾವು ಜಾಗತೀಕರಣದತ್ತ ಹೇಗೆ ಮುಂದೆ ಸಾಗುತ್ತಿದ್ದೇವೆ, ಅದೇ ರೀತಿ ಮೂಢನಂಬಿಕೆಯತ್ತ ಮಾಲು ಪ್ರಮಾಣ ಹೆಚ್ಚಾಗುತ್ತಿದೆ.

ಮೂಢನಂಬಿಕೆಗಳಿಗೆ ಸಂಬಂಧಪಟ್ಟ ಅಂಕಿಅಂಶಗಳ ಪ್ರಕಾರ, ಇಡೀ ಜಗತ್ತಿನಲ್ಲಿ ಭಾರತ ಮುಂದಿದೆ. ಯಾವ ದೇಶ ಉಪಗ್ರಹಗಳ ಉಡಾವಣೆಯಲ್ಲಿ ಸ್ವಾವಲಂಬನೆಯಾಗುತ್ತದೋ, ಅದೇ ದೇಶ ಈಗ ಮೂಢನಂಬಿಕೆಯ ಬಾಬತ್ತಿನಲ್ಲಿ ಮುಂಚೂಣಿಯಲ್ಲಿರುವುದು ಖೇದದ ಸಂಗತಿ.

ದಾನ ಏಕೆ?

ಸಾಮಾನ್ಯವಾಗಿ ಹಾನಿಯಾಗುವ ಭಯ ಅಥವಾ ಪುಣ್ಯ ಪ್ರಾಪ್ತಿ ಅಥವಾ ಮನದಿಚ್ಛೆ ಈಡೇರಿದಾಗ ದಾನ ನೀಡಲಾಗುತ್ತದೆ. ಕೆಲವು ಸಮಸ್ಯೆಗಳನ್ನು ದೂರಗೊಳಿಸಲು ಎಂತೆಂಥದೊ ಉಪಾಯಗಳನ್ನು ಹೇಳಲಾಗುತ್ತದೆ. ಬಗೆ ಬಗೆಯ ಧಾನ್ಯಗಳ ಬಗ್ಗೆ ತಿಳಿಸಲಾಗುತ್ತದೆ. ಧರ್ಮ ಗುರುಗಳು, ಧಾರ್ಮಿಕ ಸಂಸ್ಥೆಗಳು ಈ ರೀತಿಯ ದಾನಗಳನ್ನು ಕ್ರೋಢೀಕರಿಸುವಲ್ಲಿ ಮಗ್ನವಾಗಿವೆ. ಇದು ರಾಜಕೀಯ ಪಕ್ಷಗಳು ತಮ್ಮ ಪಾರ್ಟಿ ಫಂಡ್‌ ಸಂಗ್ರಹಿಸುವ ರೀತಿಯಲ್ಲಿದೆ.

ವಾಸ್ತದಲ್ಲಿ ಭಕ್ತರು ಎಷ್ಟೇ ಬಡವರಾಗಿ ಇರಬಹುದು ಅಥವಾ ತೊಂದರೆಯಲ್ಲಿರಬಹುದು, ಆದರೆ ಹುಟ್ಟಿನಿಂದ ಸಾಯುವ ತನಕ ಅವರಿಂದ ಹಣ ವಸೂಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಪ್ರಾಯಶ್ಚಿತ್ತ ಮಾಡಿಕೊಳ್ಳಲು, ಗ್ರಹಗತಿ ಸರಿಪಡಿಸಿಕೊಳ್ಳಲು ದುರ್ಭಾಗ್ಯವನ್ನು ಸೌಭಾಗ್ಯದಲ್ಲಿ ಪರಿವರ್ತಿಸಿಕೊಳ್ಳಲು, ಹೀಗೆ ಬಹಳಷ್ಟು ಸಮಸ್ಯೆಗಳನ್ನು ಪರಿವರ್ತಿಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ದಾನ ದಕ್ಷಿಣೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಯೋಚಿಸಬೇಕಾದ ಒಂದು ಸಂಗತಿಯೆಂದರೆ, ಯಾವ ರೀತಿ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಜನರನ್ನು ಹೆದರಿಸಲಾಗುತ್ತದೋ, ಅದೇ ನಿಟ್ಟಿನಲ್ಲಿ ನಡೆಯುವ, ಮೋಸಕ್ಕೆ ಪಂಡಿತ ಪುರೋಹಿತರೇಕೆ ಹೆದರುವುದಿಲ್ಲ?

ತೋರಿಕೆಯಿಂದ ಯಾರಿಗೆ ಹಿತ?

ಉದಾಹರಣೆ : ಒಬ್ಬ ಎಕ್ಸ್ ಪೋರ್ಟರ್‌ ಚೆನ್ನಾಗಿ ವಹಿವಾಟು ನಡೆಸುತ್ತಾರೆ. ಪ್ರತಿವರ್ಷ ಅವರು ಒಂದು ನಿರ್ದಿಷ್ಟ ದೇನಸ್ಥಾನಕ್ಕೆ ಹೋಗಿ ಅಲ್ಲಿ ಅನ್ನದಾನ ಮಾಡಿ ಬರುತ್ತಾರೆ. ಪಂಡಿತ ಪುರೋಹಿತರನ್ನು ಖುಷಿಪಡಿಸುತ್ತಾರೆ. ನಾನು ಎಷ್ಟು ಹಣ ಗಳಿಸುತ್ತಿದ್ದೇನೋ, ಅದರಲ್ಲಿ ಒಂದು ಪಾಲನ್ನು ದೇವರಿಗೆ ಕೊಡುತ್ತಿದ್ದೇನೆ. ಹಾಗಾಗಿ ನನಗೆ ಯಾವುದೇ ತೊಂದರೆ ಬರುವುದಿಲ್ಲ, ನನ್ನ ಹೆಸರು ಉಳಿಯುತ್ತದೆ ಎಂದು ಅವರು ಭಾವಿಸಿದ್ದಾರೆ.

ದೇವಾಲಯಂತೂ ದೇವಾಲಯವೇ!

ಜನರು ಮನೆಯಲ್ಲೂ ಸಹ ಸಾಕಷ್ಟು ಮೂರ್ತಿಗಳನ್ನು ಇಟ್ಟುಕೊಂಡು ಬೆಳಗ್ಗೆ ಸಂಜೆ ಅವುಗಳ ಪೂಜೆ ಮಾಡುತ್ತಾರೆ. ಮನೆಗಳಲ್ಲಿಯೇ ಸ್ವಾಮೀಜಿಗಳನ್ನು ಕರೆಸಿ ಅವರಿಂದ ಪ್ರವಚನ ಕೊಡಿಸುವುದು ಈಗ ಪ್ರತಿಷ್ಠೆಯ ವಿಷಯವೆಂದು ಪರಿಗಣಿಸಲಾಗುತ್ತದೆ.

ಬಡವರಿಗೆ ಹಣದ ಅಪೇಕ್ಷೆ ಮತ್ತು ಶ್ರೀಮಂತರಿಗೆ ಯಶಸ್ಸಿನ ಅಭಿಲಾಷೆ ಇರುತ್ತದೆ. ಹೀಗಾಗಿ ದೇವಾಲಯಗಳಲ್ಲಿ ದಾನ ಮಾಡಿದ ಫಲಕಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗುತ್ತದೆ. ಇಲ್ಲವೇ ಸ್ವಾಮೀಜಿಗಳನ್ನು ಮನೆಗೆ ಕರೆಸಿ ಅವರ ಪ್ರವಚನಸತ್ಕಾರ ಮಾಡಲಾಗುತ್ತದೆ.

ಜನರು ತಮ್ಮ ಬಗ್ಗೆ ಹೊಗಳಬೇಕೆಂದು ಶ್ರೀಮಂತರು ದಾನ ನೀಡುತ್ತಾರೆ ಅಥವಾ ಸ್ವಾಮೀಜಿಗಳನ್ನು ಮನೆಗೆ ಕರೆಸುತ್ತಾರೆ. ಎಂತಹ ಕೆಲವು ಜನರಿದ್ದಾರೆಂದರೆ, ಅವರು ಯಥೇಚ್ಛವಾಗಿ ಹಣವನ್ನೇನೊ ಗಳಿಸುತ್ತಾರೆ. ಆದರೆ ಪಾಪಗಳಿಗೆ ಹೆದರುತ್ತಾರೆ. ಹೀಗಾಗಿ ಅವರು ಈ ರೀತಿಯ ದಾನಗಳನ್ನು ಮಾಡುತ್ತಾರೆ. ಏಕೆಂದರೆ ತಮಗೆ ಸಾಕಷ್ಟು ಪುಣ್ಯ ದೊರೆಯಲಿ ಎನ್ನುವುದು ಅವರ ಅಪೇಕ್ಷೆಯಾಗಿರುತ್ತದೆ. ಸುಳ್ಳು ಪ್ರತಿಷ್ಠೆ ಮತ್ತು ತೋರಿಕೆ ಹೇಗೆಯೇ ಇರಲಿ ಅದೊಂದು ಕೆಟ್ಟ ಅಭ್ಯಾಸ.

ವಾಸ್ತವದಲ್ಲಿ ಏನು ಅಗತ್ಯ?

ಒಬ್ಬ ಅನಕ್ಷರಸ್ಥ ಹೀಗೆ ಮಾಡಿದರೆ ಏನೊ ಅಂದುಕೊಳ್ಳಬಹುದು, ಅದೇ ಒಬ್ಬ ಸಾಕ್ಷರ ವ್ಯಕ್ತಿ ಹಣವನ್ನು ನೀರಿನಂತೆ ಖರ್ಚು ಮಾಡಿದರೆ ಅದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಹಣ ಗಳಿಸುವುದಷ್ಟೇ ಅಲ್ಲ, ಅದನ್ನು ಉಳಿಸುವುದು ಕೂಡ ಒಂದು ಕಲೆ. ಎಷ್ಟು ಉಳಿಸುತ್ತೇವೋ, ಅದೇ ಮುಂದೆ ಉಪಯೋಗಕ್ಕೆ ಬರುತ್ತದೆ. ದುಂದು ವೆಚ್ಚ ಮಾಡಿ ದಾನ ನೀಡುವುದು ಅಥವಾ ದೇವರಿಗೆ ಅರ್ಪಣೆ ಮಾಡುವ ಬದಲು ಉಳಿತಾಯ ಮಾಡುವುದು ಒಳ್ಳೆಯದು. ಅದೇ ಹಣದಿಂದ ಬೇರೆ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಬಹುದು. ದಾನ ನೀಡುವುದು ಹಾಗೂ ದೇವರಿಗೆ ಅರ್ಪಣೆ ಮಾಡುವುದು ನಿಂತರೆ ಲಂಚಕೋರತನದ ಸಮಸ್ಯೆ ಕೂಡ ತಂತಾನೇ ಕಡಿಮೆಯಾಗುತ್ತದೆ. ಆದರೆ ಇದು ಕಷ್ಟ ಅಷ್ಟೇ ಅಲ್ಲ, ಅಸಾಧ್ಯ ಕೂಡ.

ನಾವು ಈಗಲೂ ಕೂಡ ಮೂಢನಂಬಿಕೆಗಳ ಸಂಕೋಲೆಯಲ್ಲಿ ಬಂಧಿಸಲ್ಪಟ್ಟಿದ್ದೇವೆ. ಬಡತನ ಅನೈರ್ಮಲ್ಯ ಮತ್ತು ಅನಕ್ಷರತೆ ಬೆಳವಣಿಗೆಯ ದಾರಿಯಲ್ಲಿ ಅಡ್ಡಿಯಾಗಿವೆ. ಇಂತಹದರಲ್ಲಿ ದಾನ ಮತ್ತು ಕಾಣಿಕೆ ಅರ್ಪಣೆ ಸರಿದಾರಿಯ ಗುಂಡಿಗಳಾಗಿವೆ. ಹಳೆಯ ಕಂದಾಚಾರದ ಸಂಕೋಲೆಗಳಿಂದ ಮುಕ್ತರಾಗಬೇಕಿದೆ. ಅದಕ್ಕಾಗಿ ತೋರಿಕೆ ಹಾಗೂ ತಪ್ಪು ತಿಳಿವಳಿಕೆಯನ್ನು ಬಿಡಬೇಕು.

ಸಾಕ್ಷರರು ಹೊಣೆಗಾರರು

ಕಪಟಿ ಪೂಜಾರಿ ಪುರೋಹಿತರು ಅಂಗಡಿಗಳು ನಡೆಯುತ್ತಿವೆಯೆಂದರೆ, ಅದಕ್ಕೆ ಮುಖ್ಯ ಹೊಣೆಗಾರರು ಓದುಬರಹ ಬಲ್ಲರು. ಅವರು ಈ ಜಾಲಕ್ಕೆ ಸಿಲುಕಿ, ತಮ್ಮಲ್ಲಿರುವ ಬಹಳಷ್ಟನ್ನು ಕಳೆದುಕೊಳ್ಳುತ್ತಾರೆ. ಬಾಲಿವುಡ್‌ ಹಾಗೂ ಸ್ಯಾಂಡಲ್ ವುಡ್‌ ನವರು ಇದಕ್ಕೆ ಹೊರತಾಗಿಲ್ಲ. ಯಾವುದೇ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಮಾತ್ರ ಒಬ್ಬರ ಅಂಗಡಿ ಚೆನ್ನಾಗಿ ನಡೆಯುತ್ತದೆ. ಇದರಲ್ಲಿ ಎಷ್ಟು ಪಾಲು ಬಡವರದ್ದಿರುತ್ತದೋ ಅಷ್ಟೇ ಪಾಲು ಶ್ರೀಮಂತರದ್ದು ಕೂಡ ಇರುತ್ತದೆ.

ಯೋಚಿಸಬೇಕಾದ ವಿಷಯವೆಂದರೆ, ಯಾವ ಧರ್ಮ ಅಥವಾ ದೇವರ ಹೆಸರಿನಲ್ಲಿ ಜನರು ಪಂಡಿತ ಪುರೋಹಿತರ ಬಳಿ ಹೋಗುತ್ತಾರೋ ಅದೇ ದೇವರ ಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮನಸ್ಸಿನಲ್ಲಿ ತಪ್ಪು ಕೆಲಸ ಮಾಡುವ ಮನಸ್ಸಾದರೂ ಹೇಗೆ ಆಗುತ್ತಿರಬಹುದು?

ಅನಪೇಕ್ಷಿತ ಬೇಡಿಕೆ

ಉದಾಹರಣೆ : ಒಬ್ಬ ದಂಪತಿಗಳಿಗೆ ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಅವರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಾಮೀಜಿಯೊಬ್ಬರ ಬಳಿ ಪ್ರಸ್ತಾಪಿಸಿದ್ದರು. ಆ ಸ್ವಾಮೀಜಿ ಇದರ ದುರ್ಲಾಭ ಪಡೆದು, ನಿನ್ನ ಹೆಂಡತಿಯನ್ನು ಇಲ್ಲಿಯೇ ಬಿಟ್ಟು ಹೋಗು ಎಂದು ಹೇಳಿದ. ಗಂಡ ಎಂತಹ ಮೂಢಭಕ್ತಿ ಪ್ರದರ್ಶಿಸಿದನೆಂದರೆ, ಅವನು ಒಂದು ರಾತ್ರಿಯ ಮಟ್ಟಿಗೆ ಹೆಂಡತಿಯನ್ನು ಸ್ವಾಮೀಜಿಯ ವಶಕ್ಕೆ ಒಪ್ಪಿಸಿ ಬಂದ. ಆ ಸ್ವಾಮೀಜಿ ಇಡೀ ರಾತ್ರಿ ಪೂಜೆಯ ನೆಪ ಹೇಳಿ ಅವಳ ಸಂಗ ಮಾಡಿದ.

ಓದುಬರಹ ಬಲ್ಲರು ಹಾಗೂ ಮುಖಂಡರ ಎದುರು ಧರ್ಮದ ಗುಣಗಾನ ಮಾಡುವ ಈ ಬಾಬಾಗಳು, ತಾಂತ್ರಿಕರು ಆಕ್ಷೇಪಾರ್ಹ ಬೇಡಿಕೆ ಇಟ್ಟಾಗ, ಅವರಿಗೆ ಕಪಾಳಮೋಕ್ಷ ಮಾಡುವ ಬದಲು, ಅವರ ಅನಪೇಕ್ಷಿತ ಬೇಡಿಕೆಗಳನ್ನು ಈಡೇರಿಸುತ್ತಾರೆ ಹಾಗೂ ಮೂಢಭಕ್ತಿ ಪ್ರದರ್ಶಿಸುತ್ತಾರೆ.

ಉದಾಹರಣೆ : ಉತ್ತರ ಪ್ರದೇಶದ ಒಬ್ಬ ಬಾಬಾ ತಾನು ಸಂಧಿವಾತನ್ನು ಗುಣಪಡಿಸುವುದಾಗಿ ಹೇಳಿಕೊಂಡಿದ್ದ. ಆ ಬಾಬಾ ರೋಗಿಯ ರಕ್ತ ತೆಗೆಸಿ, ಅದನ್ನು ತಾಮ್ರದ ಪಾತ್ರೆಯೊಂದರಲ್ಲಿ ಇಡಿಸುತ್ತಿದ್ದ. ಬಳಿಕ ಅದನ್ನೇ ರೋಗಿಗೆ ಕುಡಿಯಲು ಹೇಳುತ್ತಿದ್ದ. ಆಶ್ಚರ್ಯದ ಸಂಗತಿಯೇನೆಂದರೆ, ಡಾಕ್ಟರ್‌ ಒಬ್ಬರ ಸೋದರಿ ಎಚ್ಚರಿಕೆ ಕೊಟ್ಟಿರುವುದರ ಹೊರತಾಗಿಯೂ ಆ ಬಾಬಾನ ಅನಿಷ್ಟ ಸುಳಿಗೆ ಸಿಲುಕಿ ಬಳಿಕ ತೀವ್ರ ಅನಾರೋಗ್ಯ ಪೀಡಿತರಾದರು. ಅವರ ಹಿಮೊಗ್ಲೊಬಿನ್‌  ಆಗಿತ್ತು. (ನಾರ್ಮಲ್ 12 ಅಥವಾ 15), ಇಂತಹ ಉದಾಹರಣೆಗಳು ನಮಗೆ ದಿನನಿತ್ಯ ನೋಡಲು ಸಿಗುತ್ತವೆ. ಆ ಹುಡುಗಿ ಅನೇಕ ದಿನಗಳ ಕಾಲ ಐಸಿಯುನಲ್ಲಿ ಇರಬೇಕಾಗಿ ಬಂತು.

ಹಲವು ಡಾಕ್ಟರ್‌ ಗಳು ಹಾಗೂ ನರ್ಸ್‌ ಗಳು ಆ ಹುಡುಗಿಯ ಜೀವ ಉಳಿಸಲು ಪರದಾಡಿದರು. ಅವಳನ್ನು ಉಳಿಸಲು 5 ಲಕ್ಷ ರೂ. ಖರ್ಚು ಮಾಡಬೇಕಾಗಿ ಬಂತು. ಸಂಧಿವಾತವನ್ನು ಸೂಕ್ತ ರೀತಿಯಲ್ಲಿ ಚಿಕಿತ್ಸೆ ಮಾಡಿದರೆ ತಿಂಗಳಿಗೆ ಕೇವಲ 1 ಸಾವಿರ ಅಷ್ಟೇ ಖರ್ಚಾಗುತ್ತದೆ.

ಸಾಕ್ಷರರು ಮುಖಂಡರೂ ಭಾಗಿ

ಇದು ಭೂಪೇಂದ್ರ ಸಿಂಹ ಚೂಡಾ ಆತ್ಮಾರಾಮ್ ಪರಮಾರ್‌ ಅವರಿಗೆ ಸಂಬಂಧಪಟ್ಟ ಘಟನೆ. ಅವರು ಗುಜರಾತಿನ ಮಂತ್ರಿಗಳಾಗಿದ್ದರು. ಇಬ್ಬರೂ ಆಕಸ್ಮಿಕವಾಗಿ ಸುದ್ದಿಗೆ ತುತ್ತಾದರು. ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ತಾಂತ್ರಿಕ ತನ್ನ ಕರಾಮತ್ತು ತೋರಿಸುತ್ತಿದ್ದ. ಈ ಇಬ್ಬರು ಮಂತ್ರಿಗಳು ಅದನ್ನು ವೀಕ್ಷಿಸುವುದರಲ್ಲಿ ಮಗ್ನರಾಗಿದ್ದರು.

ಭಕ್ತಿ ಹಾಗೂ ಪೂಜೆಯ ಬಗ್ಗೆ ಜನರಲ್ಲಿ ಅದೆಷ್ಟು ಮೂಢನಂಬಿಕೆ ಪಸರಿಸಿದೆಯೆಂದರೆ, ಅದಕ್ಕೆ ಯಾವುದೇ ಮೇರೆಯೇ ಇಲ್ಲ.

ವಿಜ್ಞಾನದ ಯುಗದಲ್ಲೂ ಮೂಢನಂಬಿಕೆ ಜನರ ಮೇಲೆ ಎಷ್ಟೊಂದು ಪ್ರಭಾವ ಬೀರಿದೆಯೆಂದರೆ, ಸತ್ಯಾಂಶ ತಿಳಿದೂ ಕೂಡ ಜನರು ಮೂಢ ಕಪಟಿ ಸ್ವಾಮೀಜಿ ಬಾಬಾಗಳ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ. ಕಿಡ್ನಿ ಕಲ್ಲು ನಿವಾರಣೆ ಆಗಿರಬಹುದು, ಹೊಟ್ಟೆಯ ಹುಣ್ಣು ನಿವಾರಿಸುವುದು ಆಗಿರಬಹುದು ಅಂಥವರು ಚಿಕಿತ್ಸೆಗಾಗಿ ತಾಂತ್ರಿಕರ ಬಳಿ ಹೋಗುತ್ತಾರೆ. ಒಂದು ವೇಳೆ ದೇವರ ಹೆಸರು ಪ್ರಸ್ತಾಪಿಸುವುದರಿಂದ, ಪುರೋಹಿತರ ಬಳಿ ಹೋಗಿ ಪೂಜೆ ಮಾಡಿಸುವುದರಿಂದ ಎಲ್ಲ ಕಷ್ಟಗಳು ದೂರ ಆಗುತ್ತವೆ, ಸುಖಸಮೃದ್ಧಿ ಬರುತ್ತದೆ ಎಂದಾಗಿದ್ದರೆ, ಜಗತ್ತಿನಲ್ಲಿ ಇಷ್ಟೊಂದು ಕಷ್ಟ ದುಃಖಗಳು ಏಕಿರುತ್ತಿತ್ತು?

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ