ಧರ್ಮದ ರಕ್ಷಣೆಯಲ್ಲಿ ತಮ್ಮವರ ಬಲಿ

ತಂದೆ ತನ್ನ ಮಗನಿಗಾಗಿ ಪ್ರಾಣ ಕೊಡುತ್ತಾನೆ. ಇಲ್ಲಿ ಮಗನ ಪ್ರಾಣ ತೆಗೆಯುತ್ತಾನೆ. ಏಕೆಂದರೆ ತಂದೆಯ ಪ್ರಾಣ ಉಳಿಯಲೆಂದು. ಇತ್ತೀಚೆಗಷ್ಟೇ ಪೊಲೀಸರು ಒಬ್ಬನನ್ನು ಬಂಧಿಸಿದರು. ಆತ ಮಾಡಿದ್ದೇನು ಗೊತ್ತಾ? ನಿಧಿಯ ಆಸೆಗೆ ಮಾಂತ್ರಿಕನ ಹೇಳಿಕೆಯ ಮೇರೆಗೆ ತನ್ನ 16 ವರ್ಷದ ಮಗನನ್ನು ಬಲಿಕೊಟ್ಟಿದ್ದ. ಇದು ತಮಿಳುನಾಡಿನ ಉರೈಯರ್‌ ಎಂಬಲ್ಲಿ 2014ರಲ್ಲಿ ನಡೆದ ಘಟನೆ. ಈ ಪ್ರಕರಣದಲ್ಲಿ ಅಮ್ಮ ಮಲತಾಯಿಯಾಗಿದ್ದರು.

ಪೌರಾಣಿಕ ಕಥೆಗಳಲ್ಲೂ ಕೂಡ ಪುತ್ರರನ್ನು ಕೊಲ್ಲುವ, ಬಲಿ ಕೊಡುವ ಪ್ರಸಂಗಗಳು ಬರುತ್ತವೆ. ಭೀಮನಿಗೆ ಹಿಡಿಂಬೆಯಿಂದ ಜನಿಸಿದ ಪುತ್ರ ಘಟೋತ್ಕಚನನ್ನು ಕರ್ಣನ ಮುಖಾಂತರ ಒಂದು ಸ್ಯಾಟರ್ಜಿಗೆ ಅನುಗುಣವಾಗಿ ವಿಶೇಷ ಅಸ್ತ್ರದ ಮುಖಾಂತರ ಕೊಲ್ಲಿಸಲಾಯಿತು. ಇಲ್ಲದಿದ್ದರೆ ಅದೇ ಅಸ್ತ್ರ ಅರ್ಜುನನ ವಿರುದ್ಧ ಬಳಕೆಯಾಗುತ್ತಿತ್ತು.

ಅನುಜಾ ರಾಮಚಂದ್ರನ್‌ ಅವರು ಆಂಗ್ಲ ಭಾಷೆಯಲ್ಲಿ ಬರೆದ `ಅರ್ಜುನ'ದಲ್ಲಿ ಈ ಕಥೆಯ ಸಂಪೂರ್ಣ ವರ್ಣನೆ ಸಿಗುತ್ತದೆ. ಇಂದ್ರ ಕರ್ಣನಿಗೆ ಆ ಅಸ್ತ್ರವನ್ನು ಅಜೇಯ `ಶಕ್ತಿ' ಕೊಟ್ಟಿದ್ದ ಹಾಗೂ ಕರ್ಣ ಆ ಅಸ್ತ್ರವನ್ನು ಅರ್ಜುನನ ವಿರುದ್ಧ ಪ್ರಯೋಗ ಮಾಡಲು ನಿರ್ಧರಿಸಿದ್ದ. ಆದರೆ ಆ ಅಸ್ತ್ರವನ್ನು ಘಟೋತ್ಕಚನ ಮೇಲೆ ಉದ್ದೇಶ ಪೂರ್ಕವಾಗಿ ಅಂದರೆ ಯುದ್ಧ ಕೌಶಲದ ನೆಪದಲ್ಲಿ ಪ್ರಯೋಗ ಮಾಡಲಾಯಿತು.

ಭೀಮನ ಮಗನ ಸಾವು ಎಷ್ಟೇ ಅವಶ್ಯಕವಾಗಿದ್ದರೂ, ಅದು ಕೊಡು ಸಂದೇಶ ಮಾತ್ರ ಗಾಬರಿ ಮೂಡಿಸುವಂಥದ್ದು. ಯುದ್ಧ ಗೆಲ್ಲಲು ಈ ನೀತಿ ಯಾವುದೇ ರೀತಿಯಲ್ಲೂ ಸೂಕ್ತಲ್ಲ. ಯುದ್ಧದಲ್ಲಿ ಸಾವುಗಳಾಗುತ್ತವೆ, ಆದರೆ ದೊಡ್ಡವರು ಚಿಕ್ಕವರನ್ನು ರಕ್ಷಿಸುತ್ತಾರೆ.

ಮಹಾಭಾರತದ ಈ ಕಥೆಗಳು ಪುರಾಣ ಕಥೆಗಳಲ್ಲ. ಅನ್ನು ಕಾಮಿಕ್ಸ್, ಪ್ರವಚನ, ಟಿ.ವಿ. ಧಾರಾವಾಹಿಗಳ ಮುಖಾಂತರ ಜನರ ತನಕ ತಲುಪಿಸಲಾಗುತ್ತದೆ. ತಮ್ಮ ಸ್ವಾರ್ಥಕ್ಕಾಗಿ ಸಂಬಂಧಿಕರನ್ನು ಬಲಿಕೊಡುವುದು ತಪ್ಪಲ್ಲ ಎಂದು ಬಿಂಬಿಸಲಾಗುತ್ತದೆ. ತಮಿಳುನಾಡಿನ ಆ ತಂದೆಯ ಮನಸ್ಸಿನಲ್ಲೂ ಹಾಗೆಯೇ ಆಗಿರಬಹುದು.

ಹಿಂದೂ ಧರ್ಮದಲ್ಲಷ್ಟೇ ಅಲ್ಲ, ಪ್ರತಿಯೊಂದು ಧರ್ಮಗ್ರಂಥದ ಕಥೆಗಳಲ್ಲಿ ಅನೈತಿಕ ಪ್ರಸಂಗಗಳು ತುಂಬಿಹೋಗಿವೆ. ಜನರು ಅನ್ನುವ ತಮ್ಮ ತಪ್ಪು ಕೆಲಸಗಳಿಗಾಗಿ ಧರ್ಮ ಸಮೇತ ಎಂದು ಸಿದ್ಧ ಮಾಡಲು ಬಳಸಿಕೊಳ್ಳುತ್ತಾರೆ. ಯಾವುದಾದರೂ ಪ್ರಭಾವಿ ವ್ಯಕ್ತಿ, ರಾಜ, ಶ್ರೀಮಂತ ವ್ಯಕ್ತಿ ಯಾವುದಾದರೂ ತಪ್ಪು ಕಾರ್ಯಕ್ಕೆ ಧರ್ಮದ ಗುತ್ತಿಗೆದಾರನಿಗೆ ಪ್ರಶ್ನೆ ಮಾಡಿದಾಗ, ಈ ರೀತಿಯ ಯಾವುದಾದರೂ ಕಥೆ ಹೇಳಿ ಅದನ್ನು ಧರ್ಮ ಸಮ್ಮತ ಎಂದು ಬಣ್ಣಿಸಲಾಗುತ್ತದೆ.

ಅನೈತಿಕ ಕೆಲಸಗಳಿಗೆ ಕುಮ್ಮಕ್ಕು ಕೊಡುವಲ್ಲಿ ಧರ್ಮದ ಪಾತ್ರ ಕಡಿಮೆ ಏನಿಲ್ಲ ಮತ್ತು ಮನುಷ್ಯನ ಹಸಿವನ್ನು ಧರ್ಮವೇ ತಮ್ಮ ರೀತಿಯಲ್ಲಿ ಉದ್ದೇಶಿಸಿದೆ. ಆ ಕಾರಣದಿಂದ ಮಂಗೋಲ ರಾಜ ಚಂಗೇಜ್‌ ಖಾನ್‌ ತೈಮೂರ್‌ ಲಂಗ್‌ ಮತ್ತು ಅಡಾಲ್ಫ್ ಹಿಟ್ಲರ್‌ ನಂಥ ಆಕ್ರಮಣಕಾರರು ಹುಟ್ಟಿಕೊಂಡರು. ಈಗ ವ್ಲಾದಿಮಿರ್‌ ಪುಟಿನ್‌ ಯಾ ರೀತಿಯಲ್ಲಿ ಉಕ್ರೇನ್‌ ನಲ್ಲಿ ತನ್ನ ಆರ್ಥೋಡಾಕ್ಸ್ ಚರ್ಚ್‌ ನ ಸಲಹೆಯ ಮೇರೆಗೆ ಅನ್ಯಾಯ ಅತ್ಯಾಚಾರ ಆಗಲು ಅವಕಾಶ ಕೊಡುತ್ತಿದ್ದಾರೊ, ಅದೇ ರೀತಿಯಲ್ಲಿ ಭಾರತದಲ್ಲಿ ಎಲ್ಲೆಲ್ಲಿ ಏನೇನೂ ನಡೆಯುತ್ತದೊ, ಮಹಿಳೆಯರು ಹಾಗೂ ಕೆಳ ವರ್ಗದವರನ್ನು ಪಾಪದಲ್ಲಿ ಭಾಗಿ ಎಂದು ಭಾವಿಸಿ ಅವರೊಂದಿಗೆ ಭೇದಭಾವ ಮಾಡಲಾಗುತ್ತದೆ. ಘಟೋತ್ಕಚನಂತಹ ಕಥೆಗಳನ್ನು ಕೇಳಿಸಿ ಆಕ್ಷೇಪ ಎತ್ತುವವರ ಬಾಯಿ ಬಂದ್‌ ಮಾಡಿಸಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ