ರಾಧೆ.... ರಾಧೆ.... ರಾಧೆ.... ಜಯ ಶ್ರೀರಾಮ.... ಜಯ ಶ್ರೀರಾಮ..... ಜಯ ಶ್ರೀರಾಮ, ರಮಾಕಾಂತ ಅವರು ಪರಿಪೂರ್ಣ ಶ್ರದ್ಧೆಯಿಂದ ಲೀನರಾಗಿದ್ದರು. ಅವರ ಸುತ್ತ ಹಲವರು ಗಂಟೆ ಬಾರಿಸುವುದರಲ್ಲಿ ಮಗ್ನರಾಗಿದ್ದರು. ಈ ಜೋರು ಧ್ವನಿಯಿಂದ ಮಕ್ಕಳಿಗೆ ಬಲು ತೊಂದರೆಯಾಗುತ್ತಿತ್ತು. ಮಗುವೊಂದು ಮೇಲಿಂದ ಮೇಲೆ ತನ್ನ ಅಮ್ಮನ ಹತ್ತಿರ ಹೋಗಿ ಹೇಳುತ್ತಿತ್ತು, ``ಅಮ್ಮ ಪ್ಲೀಸ್, ಅಪ್ಪನಿಗೆ ಹೇಳು ಎಲ್ಲರಿಗೂ ಕಡಿಮೆ ಸದ್ದಿನಲ್ಲಿ ಪೂಜೆ ಮಾಡಲು ತಿಳಿಸಮ್ಮ. ನಾಳೆ ನನಗೆ ಪರೀಕ್ಷೆಯಿದೆ, ಓದಲು ಆಗುತ್ತಿಲ್ಲ,'' ಎಂದ.
ಮಗು ತನ್ನ ತಾಯಿಯ ಮುಂದೆ ಕೋಪ ಪ್ರದರ್ಶಿಸುತ್ತಿರುವುದನ್ನು ಕಂಡು ರಮಾಕಾಂತ್ ಕೋಪದಿಂದಲೇ ಹೇಳಿದರು, ``ಇದೇನು ಓದು ಸಮಯವೇ? ನಾಳೆ ಪರೀಕ್ಷೆಯಿದ್ದರೆ, ಇಂದು ನೀನು ದೇವರ ಮುಂದೆ ಮಂಡಿ ಊರಿ ಕುಳಿತುಕೊಳ್ಳಬೇಕು.''
``ಎಲ್ಲರೂ, ಹೇಳಿ ಜೈ ಸೀತಾರಾಮ, ಜೈ ಸೀತಾರಾಮ.'' ರಮಾಕಾಂತ ತಮ್ಮ ಮಗುವಿನ ತೊಂದರೆಯನ್ನು ಕಿವಿಗೆ ಹಾಕಿಕೊಳ್ಳದೆ, ಅದಕ್ಕೆ ತದ್ವಿರುದ್ಧ ಎಂಬಂತೆ ಪತ್ನಿಯನ್ನು ಸಿಡುಕುತ್ತಾ, ``ನಿನಗೆ ಬುದ್ಧಿ ಇಲ್ವಾ? ಇಲ್ಲಿ ಎಂತೆಂಥ ಪೂಜ್ಯರು ಕುಳಿತಿದ್ದಾರೆ, ಪೂಜೆ ಮಾಡುತ್ತಿದ್ದಾರೆ. ನಿನಗೆ ಮಾತ್ರ ಮಗುವಿನದೇ ಚಿಂತೆಯಾಗಿದೆ. ಮೂರ್ಖ ಹೆಂಗಸೇ, ಹೋಗುವ ಎಲ್ಲರಿಗೂ ಬಿಸಿ ಬಿಸಿ ಬಾದಾಮಿ ಹಾಲು ಮಾಡಿಕೊಂಡು ಬಾ,'' ಪಾಪ ಅವಳು ಏನು ತಾನೇ ಮಾಡುತ್ತಾಳೆ. ಹೆದರುತ್ತಲೇ ``ಆಯ್ತು ಆಯ್ತು,'' ಎಂದು ಹೇಳುತ್ತಾ ಅವರ ಸೇವೆಯಲ್ಲಿ ತೊಡಗಿದಳು.
ನಡುನಡುವೆ ಅವಳ ಅತ್ತೆಯ ಧ್ವನಿಯೂ ಕೇಳುತ್ತಲಿತ್ತು. ಪ್ರಸಾದ ಸಿದ್ಧವಾಯ್ತಲ್ವಾ? ಮಲಗುವ ಕೋಣೆಯಲ್ಲಿ ಎಲ್ಲ ಸ್ವಚ್ಛಾಗಿದೆಯಲ್ವೇ? ಪೂಜ್ಯರ ಸೇವೆಯಲ್ಲಿ ಯಾವುದೇ ಕೊರತೆ ಅನಿಸಬಾರದು. ನೀನು ಮನಸ್ಸಿನಿಂದ ಎಷ್ಟು ಸೇವೆ ಮಾಡುತ್ತೇವೋ, ನಿನಗೆ ಅಷ್ಟೇ ಪುಣ್ಯ ಪ್ರಾಪ್ತಿ ಆಗುತ್ತೆ. ಪೂಜ್ಯರು ನಮ್ಮ ಮನೆಗೆ ಬಂದದ್ದು ನಿಜಕ್ಕೂ ನಮ್ಮ ಪುಣ್ಯ ಎಂದೇ ಹೇಳಬೇಕು. ಇಂದು ನಾವು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅದಕ್ಕೆ ಕಾರಣ ಈ ಮಹಾತ್ಮರು.ಇಡೀ ದಿನ ಹಾಗೂ ಅರ್ಧ ರಾತ್ರಿ ಅವರ ಸೇವೆಯಲ್ಲಿಯೇ ಕಳೆದುಹೋಗುತ್ತದೆ. ರಾತ್ರಿ 3-4 ಗಂಟೆ ಅಷ್ಟೇ ನಿದ್ರೆ ಬೆಳಗ್ಗೆ 4 ಗಂಟೆ ಆಗುತ್ತಿದ್ದಂತೆ ಪೂಜ್ಯರ ಸ್ನಾನದ ಸಮಯ ಆಗಿಬಿಡುತ್ತದೆ. ಆ ಬಳಿಕ 6 ಗಂಟೆಗೆ ಬೆಳಗ್ಗೆ ಸುತ್ತಾಟ ಇರುತ್ತದೆ. ಎದ್ದ ಬಳಿಕ ಎಲ್ಲಕ್ಕೂ ಮೊದಲು ಸ್ನಾನ ಮಾಡಬೇಕು ಎಂಬ ಒತ್ತಡ ಬೇರೆ.
ಹೀಗೆ ಪ್ರತಿ ವರ್ಷ ಆಗುತ್ತದೆ. ಅವಳು ಯಾವಾಗ ಈ ಮನೆಗೆ ಬಂದಿದ್ದಾಳೊ ಆಗಿನಿಂದ ಇದನ್ನು ನೋಡುತ್ತಾ ಬಂದಿದ್ದಾಳೆ. ಬಡವರು ಯಾರಾದರೂ ಇವರ ಮುಂದೆ ಬಂದು ಕೇಳಿದರೂ ಅವರಿಗೆ ಕೈಯೆತ್ತಿ 10 ರೂ. ಸಹ ಕೊಡುವುದಿಲ್ಲ. ಆದರೆ ಮನೆಗೆ ಪೂಜ್ಯರು ಬಂದಿದ್ದಾರೆಂದು ಸಾವಿರಾರು ರೂ.ಗಳನ್ನು ನೀರಿನಂತೆ ಸುರಿಯುತ್ತಾರೆ. ಆರಂಭದಲ್ಲಿ ಮನೆಗೆ ಒಬ್ಬರೇ ಸ್ವಾಮೀಜಿ ಬರುತ್ತಿದ್ದರು. ಅದೂ ಕೂಡ 2 ಅಥವಾ 3 ಗಂಟೆಗಳಿಗಾಗಿ ಮಾತ್ರ. ಆದರೆ ಪೂಜ್ಯ ಸ್ವಾಮೀಜಿಗಳ ಮೇಲೆ ಇವರ ನಂಬಿಕೆ ಮತ್ತು ಅಷ್ಟೇ ವೇಗವಾಗಿ ವ್ಯಕ್ತಿಯೊಬ್ಬನ ಆದಾಯ ಹೆಚ್ಚಿದಾಗ, ಆ ಸ್ವಾಮೀಜಿಯ ಜೊತೆಗೆ ಮತ್ತಿಬ್ಬರು ಆಗಮಿಸಿದರು. ಈಗಂತೂ ಆ ಸ್ವಾಮೀಜಿ ತನ್ನ ಪತ್ನಿ ಹಾಗೂ ತನ್ನ ಸಂಪೂರ್ಣ 11 ಜನರ ತಂಡದೊಂದಿಗೆ ಬರುತ್ತಿದ್ದಾರೆ.