ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವರ್ಸಟೈಲ್ ನಟಿ ಅಂದ್ರೆ ಅದು ಕೀರ್ತಿ ಸುರೇಶ್​ ಮಾತ್ರ ಅಂತಾನೇ ಹೇಳಬಹುದು. ಯಾಕಂದ್ರೆ, ಕೀರ್ತಿ ಸುರೇಶ್ ನಿರ್ವಹಿಸೋ ಪ್ರತಿ ಪಾತ್ರಕ್ಕೂ ಒಂದು ವಿಶೇಷವಾದ ಜೀವ ತುಂಬುತ್ತಾರೆ. ಯಾವುದೇ ರೀತಿಯ ಎಕ್ಸ್​ಪೋಸ್ ಇಲ್ಲದೇ ಪ್ರತಿ ವರ್ಗದ ಸಿನಿರಸಿಕರಿಗೂ ಇಷ್ಟವಾಗುವ ರೀತಿ ನಟನೆಯಿಂದಲೇ ಎಲ್ಲರನ್ನೂ ಆಕರ್ಷಿಸುತ್ತಾರೆ. 2024ರ ಡಿಸೆಂಬರ್​ನಲ್ಲಿ ತಮ್ಮ ಬಾಲ್ಯದ ಸ್ನೇಹಿತ ಆಂಟನಿ ಜೊತೆ ವಿವಾಹದ ಬಳಿಕವೂ ನಟಿ ಕೀರ್ತಿ ಸುರೇಶ್ ಅವರ ಖ್ಯಾತಿ ಕುಗ್ಗಿಲ್ಲ.

KEERTHI SURESH (4)

ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿರುವಂತೆಯೇ ವೈಯಕ್ತಿಕ ಜೀವನಕ್ಕೂ ಮಹತ್ವ ನೀಡಿ ತಮ್ಮ ಬಾಲ್ಯದ ಗೆಳೆಯ ಆಂಟನಿ ತಟ್ಟಿಲ್ ಅವರೊಂದಿಗೆ ವೈವಾಹಿಕ ಜೀವನವನ್ನೂ ಆರಂಭಿಸಿದ್ದಾರೆ. ಡಿಸೆಂಬರ್ 12, 2024 ರಂದು ವಿವಾಹ ಜೀವನಕ್ಕೆ ಅಡಿ ಇಟ್ಟ ಜೋಡಿ ದಕ್ಷಿಣ ಭಾರತ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಗೋವಾದಲ್ಲಿ ಡೆಸ್ಟಿನೇಶನ್ ವಿವಾಹ ಮಾಡಿಕೊಂಡರು.

KEERTHI SURESH (6)

ಇದೀಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡ್ರೆಸ್​​ನಿಂದಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬಿಚ್ಚಮ್ಮನ ರೀತಿ ಎಕ್ಸ್​ಪೋಸ್ ಮಾಡದೆ ಗ್ರ್ಯಾಂಡ್​ ಡ್ರೆಸ್ ಹಾಕಿಕೊಂಡು ಗ್ರ್ಯಾಂಡ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಫ್ಯಾಶನ್​ಗೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ.

KEERTHI SURESH (11)

ಕ್ರೀಂ ಕಲರ್ ಸೀರೆಯನ್ನು ಉಟ್ಟಿರುವ ಕೀರ್ತಿ ಸುರೇಶ್​ ಮಿರಮಿರ ಮಿಂಚುತ್ತಿದ್ದಾರೆ. ಸದ್ಯ ‘ಅಕ್ಕ’ ಅನ್ನೋ ವೆಬ್​ಸಿರೀಸ್​​ನಲ್ಲಿ ನಟಿಸಿದ್ದು, ವೆಬ್​​ಸಿರೀಸ್​​​ನ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅದರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನೆಟ್​​ಫ್ಲಿಕ್ಸ್​​ನಲ್ಲಿ ‘ಅಕ್ಕ’ ವೆಬ್​ ಸಿರೀಸ್​ ರಿಲೀಸ್ ಆಗಲಿದೆ. ಮದುವೆ ನಂತರವೂ ಕೀರ್ತಿ ಸುರೇಶ್ ಸಖತ್ ಆಕ್ಟೀವ್ ಆಗಿದ್ದು, ಇವರ ಫೋಟೋಗಳು ಸಖತ್ ವೈರಲ್ ಆಗ್ತಿವೆ.

KEERTHI SURESH (9)

ಕೀರ್ತಿ ಸುರೇಶ್ 2016 ರ ‘ನೇನು ಶೈಲಜಾ’ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು. ಮೊದಲ ಸಿನಿಮಾದಿಂದಲೇ ಕೀರ್ತಿ ಸುರೇಶ್‌ಗೆ ಇನ್ನಿಲ್ಲದ ಕ್ರೇಜ್‌ ಸಿಕ್ಕಿತು. ಕೀರ್ತಿ ಸುರೇಶ್‌ಗೆ ಈ ಸಿನಿಮಾ ತಂದಿರುವ ಕ್ರೇಜ್‌ ಇಷ್ಟೇ ಅಲ್ಲ. ಆ ನಂತರ ನಾನಿ ಜೊತೆಗಿನ ‘ನೇನು ಲೋಕಲ್’ ಕೂಡ ಬಂಪರ್ ಹಿಟ್ ಆಗಿತ್ತು. ಈ ಚಿತ್ರದ ನಂತರ ಪವನ್ ಕಲ್ಯಾಣ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶವೂ ಸಿಕ್ಕಿತು. ತ್ರಿವಿಕ್ರಮ್ ನಿರ್ದೇಶನದ, ಪವನ್ ಕಲ್ಯಾಣ್ ಅಭಿನಯದ ‘ಅಜ್ಞಾತವಾಸಿ’ ಚಿತ್ರದಲ್ಲಿ ಕೀರ್ತಿ ನಾಯಕಿಯಾಗಿ ನಟಿಸಿದ್ದರು. ಆದರೆ, ಈ ಚಿತ್ರ ಅನಿರೀಕ್ಷಿತವಾಗಿ ಸೋತಿತ್ತು.

KEERTHI SURESH (8)

ಬಳಿಕ ಬಂದ ‘ಮಹಾನಟಿ’ ಸಿನಿಮಾ ಕೀರ್ತಿ ಸುರೇಶ್‌ಗೆ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ.  ಈ ಸಿನಿಮಾದ ಕಥೆ ಅವಳಿಗಾಗಿಯೇ ಹುಟ್ಟಿತ್ತು ಅನ್ನಿಸಿತು. ಪ್ರತಿಭಾವಂತ ನಟಿ ಕೀರ್ತಿ ಸುರೇಶ್ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ಕೀರ್ತಿ ಸುರೇಶ್‌ಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಇತ್ತೀಚೆಗಷ್ಟೇ ಹಿಂದಿಯ ‘ಬೇಬಿ ಜಾನ್’ ಚಿತ್ರದಲ್ಲೂ ನಟಿಸುವ ಮೂಲಕ ಬಹುಭಾಷಾ ತಾರೆಯಾಗಿ ಮಿಂಚುತ್ತಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ