ಈ ಮಳೆಗಾಲದಲ್ಲಿ ನೀವು ನಿಮ್ಮ ಚರ್ಮ, ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಿರೋ, ಅದೇ ರೀತಿ ನಿಮ್ಮ ತುಟಿಗಳಿಗೂ ಮಾನ್ ಸೂನ್ ನಲ್ಲಿ ಎಕ್ಸ್ ಟ್ರಾ ಕೇರ್ ಬೇಕು. ನಿಮ್ಮ ಸುಂದರ ಮುಗುಳ್ನಗುವಿಗೆ ಬೆಳದಿಂಗಳ ಟಚ್‌ನೀಡುವ ಈ ತುಟಿಗಳು, ಮಳೆಗಾಲದಲ್ಲಿ ತುಸು ಅಂದಗೆಡುತ್ತವೆ. ಯಾವ ರೀತಿ ನಿಮ್ಮ ತುಟಿಗಳನ್ನು ಎಲ್ಲಾ ಋತುವಿನಲ್ಲೂ ಸಾಫ್ಟ್ ಟ್ಯಾನ್ ಫ್ರೀ ಆಗಿರಿಸಬಹುದು? ಈ ವಿಶೇಷ ಸಲಹೆಗಳನ್ನು ಅನುಸರಿಸಿ ನಿಮ್ಮ ತುಟಿಗಳ ಡ್ರೈನೆಸ್‌ಪಿಗ್ಮೆಂಟೇಶನ್ ನಿಂದ ಸುಲಭವಾಗಿ ಮುಕ್ತಿ ಪಡೆಯಿರಿ.
ಸ್ಕ್ರಬಿಂಗ್ ನಿಂದ ಶುರು ಮಾಡಿ : ತುಟಿಗಳ ಸ್ಕ್ರಬಿಂಗ್ ಮಾಡುವಾಗ ನೆನಪಿಡತಕ್ಕ ಮುಖ್ಯ ಅಂಶವೆಂದರೆ, ನೀವು ಓವರ್ ಎಕ್ಸ್ ಫಾಲಿಯೇಟ್ ಯಾ ಹಾರ್ಶ್ ಸ್ಕ್ರಬಿಂಗ್ ಎಂದೂ ಮಾಡಬಾರದು. ಅದರಿಂದ ನಿಮ್ಮ ತುಟಿಯ ಚರ್ಮಕ್ಕೆ ಹಾನಿ ಆಗುತ್ತದೆ. ನಿಮ್ಮ ಮೆಚ್ಚಿನ ಲಿಪ್ ಬಾಮ್ ತೆಗೆದುಕೊಂಡು ನೀಟಾಗಿ ತುಟಿಗಳಿಗೆ ಹಚ್ಚಿರಿ. ತುಸು ಲಿಪ್ ಬಾಮ್ ನ್ನು ತುಟಿಗೆ ತೀಡಿದ ನಂತರ, ಅದನ್ನು ಟೂತ್ ಬ್ರಶ್ ನಿಂದ ವೃತ್ತಾಕಾರವಾಗಿ ಸ್ವಲ್ಪ ಹೊತ್ತು ಜೆಂಟ್ಲಿ ಮಸಾಜ್ ಮಾಡಿ. ಈ ವಿಧಾನದಿಂದ ನಿಮ್ಮ ತುಟಿಗಳ ಡೆಡ್ ಸ್ಕಿನ್ ನ್ನು ಸುಲಭವಾಗಿ ತೊಲಗಿಸಬಹುದು.
ಮಾಯಿಶ್ಚರೈಸ್ ಮಾಡುವುದನ್ನು ಮರೆಯದಿರಿ : ಎಕ್ಸ್ ಫಾಲಿಯೇಟ್/ ಸ್ಕ್ರಬಿಂಗ್ ಮಾಡಿದ ತಕ್ಷಣ ಮಾಯಿಶ್ಚರೈಸ್ ಮಾಡುವುದನ್ನು ಎಂದೂ ಮರೆಯಬೇಡಿ. ಒಡೆದ ತುಟಿಗಳಿಂದ ರಕ್ತದ ಹನಿ ಜಿನುಗಬಹುದು. ಇದಂತೂ ತುಂಬಾ ಹಿಂಸೆ ಎನಿಸುತ್ತದೆ. ನೋಡಲಿಕ್ಕೂ ಕೆಟ್ಟದಾಗಿರುತ್ತದೆ. ಆದ್ದರಿಂದ ನಿಮ್ಮ ಬ್ಯಾಗಿನಲ್ಲಿ ಯಾವಾಗಲೂ ಒಂದು ಲಿಪ್ ಬಾಮ್ ಇರಿಸಿಕೊಳ್ಳಿ, ಅದು ನಿಮಗೆ ಬಹಳ ಸಹಕಾರಿ. ನಿಮ್ಮ ತುಟಿಗಳನ್ನು ಸದಾ ಮೃದುವಾಗಿರಿಸಲು, 10-15 ನಿಮಿಷಗಳಿಗೊಮ್ಮೆ ಲಿಪ್ ಬಾಮ್ ತೀಡುತ್ತಿರಿ, ಆಗ ಅದು ಡ್ರೈ ಆಗದು. ಆದಷ್ಟೂ ನ್ಯಾಚುರಲ್ ಫ್ರೂಟ್ ನಂಥ ಹರ್ಬ್ ಲಿಪ್ ಬಾಮ್ ಗಳನ್ನೇ ಬಳಸಿರಿ. ಇದು ನಿಮ್ಮ ತುಟಿಗಳಿಗೆ ಎಕ್ಸ್ ಟ್ರಾ ಕೇರ್ ಮತ್ತು ಪೋಷಣೆ ಒದಗಿಸುತ್ತದೆ. ಜೊತೆಗೆ ನಿಮ್ಮ ಮೆಚ್ಚಿನ ಫ್ಲೇರ್ಸ್ ನಲ್ಲೂ ಲಭ್ಯ.
ಮೇಕಪ್ ನಿಂದ ಹಾನಿ : ನಿಮ್ಮ ಮುಖದಿಂದ ಮೇಕಪ್ ರಿಮೂವ್ ಮಾಡದೆ ಹಾಗೇ ಎಂದೂ ಮಲಗಬೇಡಿ. ನಿಮ್ಮ ತುಟಿಗೆ ಬಳಿಯಾದ ಲಿಪ್ ಸ್ಟಿಕ್, ಬಹಳ ಹೊತ್ತಿನಿಂದ ಅಲ್ಲೇ ಉಳಿದಿರುವುದರಿಂದ, ಅದರಲ್ಲಿನ ಕೆಮಿಕಲ್ಸ್ ತುಟಿಯನ್ನು ಡಲ್ ಮಾಡುತ್ತದೆ. ಸ್ಮೋಕಿಂಗ್ ಸಹ ತುಟಿಗಳು ಕಪ್ಪಾಗಲು ಪಿಗ್ಮೆಂಟೇಶನ್ ಗೆ ಒಂದು ಮುಖ್ಯ ಕಾರಣ.
ನೀರು ಬಲು ಅಗತ್ಯ : ಯಾರು ನೋಡಿದರೂ ನಿಮಗೆ ಆಗಾಗ ನೀರು ಕುಡಿಯಿರಿ ಎಂದು ನೀಡುವ ಸಲಹೆಯಿಂದ ಬೇಸರಪಡಬೇಡಿ. ಆದರೆ ಯಾವುದನ್ನೇ ಸರಿಪಡಿಸಬೇಕು ಎಂದರೂ ದೇಹಕ್ಕೆ ಧಾರಾಳ ನೀರು ಬೇಕೇಬೇಕು. ನಿಮ್ಮ ತುಟಿಗಳನ್ನು ಸದಾ ಸಾಫ್ಟ್ ಸಾಫ್ಟ್ ಬ್ಯೂಟಿಫುಲ್ ಆಗಿರಿಸಲು, ನಿಯಮಿತವಾಗಿ ಆಗಾಗ ನೀರು ಕುಡಿಯುತ್ತಿರಿ. ಇದು ನಿಮ್ಮನ್ನು ಆಂತರಿಕ ಬಾಹ್ಯ ಎರಡೂ ರೂಪದಲ್ಲಿ ಹೈಡ್ರೇಟೆಡ್‌ಹೆಲ್ದಿ ಆಗಿರಿಸುತ್ತದೆ.
ತುಟಿಗಳ ಮೇಕಪ್ : ನಿಮ್ಮ ತುಟಿಗಳನ್ನು ರೆಗ್ಯುಲರ್ ಆಗಿ ಮಸಾಜ್ ಮಾಡುವುದರಿಂದ ಅವು ಡಲ್ ನೆಸ್ ನಿಂದ ದೂರವಾಗುತ್ತವೆ. ಒಮ್ಮೆ ಗುಲಾಬಿ ಜಲ, ಮತ್ತೊಮ್ಮೆ ಕೊಬ್ಬರಿ ಎಣ್ಣೆ ಬಳಸಿ ತುಟಿಗಳ ಮಸಾಜ್ ಮಾಡಿ. ಒಂದೇ ಬದಿಯಿಂದ ಸರ್ಕ್ಯುಲರ್ ಆಗಿ ಮಾಡಬೇಕು, ಉಲ್ಟಾ ಮಾಡಬಾರದು. ಇದರಿಂದ ನಿಮ್ಮ ತುಟಿಗಳ ರಕ್ತ ಸಂಚಾರ ಹೆಚ್ಚುತ್ತದೆ. ಆಗ ಮೃದು, ಕೋಮಲ, ಕೆಂಪಾದ ಹೊಳೆಯು ತುಟಿಗಳು ನಿಮ್ಮದಾಗಲಿವೆ.
– ಪ್ರತಿನಿಧಿ