ಸದಾ ಫಿಟ್ಆಗಿರಲು :

ಸ್ಪೋರ್ಟ್ಸ್ ಬ್ರಾ ಅತಿ ಅಗತ್ಯ ಎನಿಸಿದೆ ಹಾಗೂ ಸ್ವಿಸ್‌ ಬ್ರಾಂಡ್‌ ಆನ್‌ ಕಂಪನಿಯು ಅನೇಕ ಹೊಸ ಬಗೆಯ ಇಂತಹವನ್ನು ಕ್ರೀಡಾಭಿಮಾನಿಗಳಿಗೆಂದೇ ರೂಪಿಸಿದೆ. ಇವುಗಳ ಫಿಟಿಂಗ್‌ ಸಮರ್ಪಕ ಆಗಿರಬೇಕು ಮತ್ತು ಸಶಕ್ತ ಸಹ. ಮಾಲ್ ಫಂಕ್ಷನ್‌ ಆದಾಗ ಯಾವುದೇ ಎಡವಟ್ಟಾಗದಿರಲು ಮುನ್ನೆಚ್ಚರಿಕೆಯೂ ಬೇಕು.

ಎವರ್ಗ್ರೀನ್ಸೈಕಲ್ :

Screen-Shot-2022-06-30-at-12.53.04

ಪಾಪದ ಸೈಕಲ್ ಗೆ ಇದೀಗ ಉತ್ತಮ ದಿನಗಳು ಮರಳಿ ಬಂದಿವೆ. ವಿಶ್ವವಿಡೀ ಜನ ಸೈಕಲ್ ನಲ್ಲೇ ಸವಾರಿ ನಡೆಸುತ್ತಿದ್ದಾರೆ. `ವಿಶ್ವ ಸೈಕಲ್ ಡೇ’ ಆಚರಿಸಲು ಉದ್ದೇಶಿಸಿದೆ. ಇದನ್ನು ಬೆಲ್ ‌ಗ್ರೇಡ್‌ ನಲ್ಲಿ ವಿಶೇಷ ಪೆರೇಡ್‌ ಮೂಲಕ ನಡೆಸಿತು. ಮೊದಲು ಹತ್ತಿರದ ಜಾಗಕ್ಕೂ ಗಾಡಿ ಕೊಂಡೊಯ್ಯುತ್ತಿದ್ದರು, ಇದೀಗ ಸೈಕಲ್ ಆ ಕೆಲಸ ಮಾಡುತ್ತಿದೆ. ಸೈಕಲ್ ನ ತಾಂತ್ರಿಕತೆಯೂ ಎಷ್ಟೋ ಸುಧಾರಿಸಿದೆ. ಪಬ್ಲಿಕ್‌ ಗೆ ಸೈಕಲ್ ಸುಲಭವಾಗಿ ಲಭ್ಯವಾಗುವಂತೆ ಜೋರಾಗಿ ಕೆಲಸ ನಡೆಯುತ್ತಿದೆ. ದೆಹಲಿಯಲ್ಲಿ ಆ್ಯಪ್‌ ಬೇಸ್ಡ್ ಸೈಕಲ್ ಸೇವೆ ಒದಗಿಸುವ ಸ್ಟ್ಯಾಂಡ್‌ ಗಳೂ ಲಭ್ಯವಿವೆ, ಜನ ಬಳಸಿಕೊಳ್ಳಬೇಕಷ್ಟೆ.

ಭಯ ಅಲ್ಲ ಮಂದಹಾಸ ಬೇಕು :

Large-JPEG-FW22_Apparel_Editorial_WomensBra_Active_01-1280x640

ರೋಗಿಗಳಿಗೆ ಇದೀಗ ಸದಾ ಸಿಡುಕುವ ಹೆಲ್ತ್ ಕೇರ್‌ ಸೆಂಟರ್ಸ್‌ ಬೇಕಾಗಿಲ್ಲ. ಅವರಿಗೆ ಈಗ ಸದಾ ನಸುಗುತ್ತಿರುವ, ತಮ್ಮವರೇ ಅನಿಸುವ ಡಾಕ್ಟರ್‌, ನರ್ಸ್‌ ಬೇಕಾಗಿದ್ದಾರೆ. ಏಕೆಂದರೆ ತಮ್ಮವರೆನ್ನುವವರು ಕಡಿಮೆ ಆಗುತ್ತಿದ್ದಾರೆ ಹಾಗೂ ಇರುವವರು ಬಿಝಿಯಾಗಿದ್ದು ಫೋನ್‌ ನಲ್ಲಿ ಎರಡು ಸಾಂತ್ವನದ ಮಾತಾಡಿದರೆ ಮುಗಿಯಿತು. ಅಮೆರಿಕಾದಲ್ಲಿ ಈ ವಿಷಯದಲ್ಲಿ ಗಂಭೀರವಾಗಿ ವ್ಯವಹರಿಸುತ್ತಿದೆ. ವಿಶೇಷವಾಗಿ ಮೆಡಿಕಲ್ ಸ್ಟಾಫ್‌ ಟ್ರೆಂಡ್‌ ನಡೆಸುತ್ತಿದೆ. ಮುಂದಿನ ಸಲ ನೀವು ಖುದ್ದಾಗಿ ದುಬಾರಿ ಆಸ್ಪತ್ರೆಯಲ್ಲಿ ದಾಖಲಾದಾಗ ಈ ಕ್ಯಾಂಪೇನಿನ ಪರಿಣಾಮ ಗಮನಿಸಬಹುದು.

ಬದುಕಂತೂ ನಡೆಸಬೇಕಿದೆ :

IMG_E2329

ಸಿಂಪಲ್ ಎಲಿಗೆಂಟ್‌ ಫ್ಯಾಷನ್‌ ಯೂಕ್ರೇನಿಯನ್‌ ಡಿಸೈನರ್ಸ್‌ ರೂಪಿಸಿರುವಂಥದ್ದು. ಬಹುಶಃ ಇದು ಯೂಕ್ರೇನಿನ ಯುದ್ಧವನ್ನು ದರ್ಶಿಸುತ್ತದೆ, ಇದರಲ್ಲಿ ಹೇಗೋ ಹೋರಾಡಿ ಬದುಕುಳಿಯುವುದು ಅತ್ಯಗತ್ಯ. ಬದಲಿಗೆ ಸ್ಕಿನ್ ತೋರ್ಪಡಿಸುವುದಲ್ಲ. ವರ್ಲ್ಡ್ ಫ್ಯಾಷನ್‌ ಯುನೈಟೆಡ್‌ ರಷ್ಯಾದ ಆಕ್ರಮಣದಿಂದಾಗಿ ಕುಂದಿದ್ದರೂ, ಅಲ್ಲಿನವರು ಜೀವನ ನಡೆಸುವುದು ಈಗೀಗ ಸಹಜವಾಗುತ್ತಿದೆ. ಏನೇ ಇರಲಿ ಆಕ್ರಮಣ ಒಂದು ಸಣ್ಣ ದೇಶದ ಮೇಲಾಗಿರುವುದರಿಂದ ಅದರ ಚಿಂತೆ ಬಿಟ್ಟು ಬದುಕುವುದನ್ನು ಕಲಿಯಬೇಕಾಗಿದೆ.

ತಮಾಶಾದಲ್ಲಿ ಸಾಕಷ್ಟು ದಮ್ ಇದೆ :

blackpink

ಮಿಸ್‌ ಕಾಂಟೆಸ್ಟ್ ನಡೆಸುವವರು ಹಿಂದಿನ ವಿನ್ನರ್ಸ್‌ ನ್ನು ಮರೆಯುವುದಿಲ್ಲ, ಆಗ ಮಾತ್ರ ಹೊಸಬರಿಗೆ ಈ ತಮಾಶಾದಲ್ಲಿ ಸಾಕಷ್ಟು ದಮ್ ಇದೆ ಅನಿಸುತ್ತದೆ. 2015ರ ವಿನ್ನರ್‌ ನತಾಶಾ ಹೆಮಿಂಗ್‌ ಹೊಸ ಮಿಸ್‌ ಇಂಗ್ಲೆಂಡ್‌ಕಾಂಟೆಸ್ಟ್ ಗೆ ಬಂದವಳು ಹಾಗೂ ಹೊಸಬರಿಗೆ ಈ ರೀತಿ ಮಿಸ್‌ ಆಗುವುದು ಎಷ್ಟು ಲಾಭಕರ ಎಂದು ಬೋಧಿಸಿದಳು. ಸುಂದರ ಹುಡುಗಿಯರು ತಮ್ಮ ಯೌವನದಲ್ಲಿ ಹೇಗೆ ತಮ್ಮ ದೇಹವನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಮೇಕಪ್‌, ನಡಿಗೆಯ ಶೈಲಿ ಮತ್ತು ಆಯೋಜಕರನ್ನು ಖುಷಿಯಾಗಿಟ್ಟುಕೊಳ್ಳುವುದು ಹೇಗೆ ಹಾಗೂ ಮುಖದಲ್ಲಿ ತುಸು ಮಾತ್ರಾ ಸುಕ್ಕು ಕಂಡರೂ ತಾವು ಹೇಗೆ ಹೊರಗೆಸೆಯಲ್ಪಡುತ್ತೇವೆ ಎಂಬುದನ್ನೂ ವಿವರಿಸಿದಳು. ಈ ಸ್ಪರ್ಧೆಗಳು ಕೇವಲ ಮನರಂಜನೆಗಾಗಿ ಮಾತ್ರ, ಆದರೆ ಬಹುತೇಕರು ಇದನ್ನು ಕೆರಿಯರ್‌ ಆಗಿಸಿಕೊಳ್ಳಲು ಯತ್ನಿಸಿ ಕಷ್ಟಕ್ಕೆ ಸಿಲುಕುತ್ತಾರೆ.

ಧರ್ಮದ ಕುತಂತ್ರಕ್ಕೆ ಬಲಿ :

62c5aba0aa36110009f1ed45

ಮ್ಯಾನ್ಮಾರ್‌ ಅಂದರೆ ಬರ್ಮಾ ಸದಾ ಸೇನೆಯ ವಶದಲ್ಲಿ ಇರುತ್ತದೆ. ಏಕೆಂದರೆ ಅಲ್ಲಿನ ಬೌದ್ಧ ಪಂಡಾಗಳನ್ನು ಸೇನೆ ಸದಾ ಖುಷಿಯಾಗಿಡುತ್ತದೆ ಹಾಗೂ ಅವರಿಗೆ ಪಗೋಡಾಗಳನ್ನು ಕಟ್ಟಿಸಿಕೊಡುತ್ತಿರುತ್ತದೆ. ಇತ್ತೀಚೆಗೆ ಅಲ್ಲಿ ಪ್ರಜಾಪ್ರಭುತ್ವ ಬಂದಿದ್ದರೂ ಸೇನೆಯು ಪಗೋಡಾಗಳ ನಿಯಂತ್ರಣದಿಂದ ತಪ್ಪಿಲ್ಲ. ಆದರೆ ಅಲ್ಲೂ ಸಹ ಧರ್ಮದ ಕುತಂತ್ರ ಅರಿತಿದ್ದರೂ, ಜೈಲು ಸೇರಲು ಸಿದ್ಧರಿದ್ದು, ಧರಣಿ ನಡೆಸುವ ಮಟ್ಟಕ್ಕೆ ಜನ ಇಳಿದು ಬರುತ್ತಾರೆ. ಬೌದ್ಧ ಪಂಡಾಗಳು ಶ್ರೀಲಂಕಾ ಮತ್ತು ಮ್ಯಾನ್ಮಾರ್‌ ಎರಡನ್ನೂ ಹಾಳು ಮಾಡಿಟ್ಟಿದ್ದಾರೆ.

ಹಾಡು ಕೇಳುವುದೋ….. ಬ್ಯೂಟಿ ನೋಡುವುದೋ? :

3K9A8645-insta-1229x1536

ಜಿಸು, ಜಿನಿ, ರೋಸ್‌, ಲೀನಾ ನೋಡಲು ಕಪ್ಪೂ ಅಲ್ಲ ಪಿಂಕ್‌ ಸಹ ಅಲ್ಲ. ಅವರ ಮ್ಯೂಸಿಕ್‌ ಗ್ರೂಪ್‌ ಹೆಸರು ಮಾತ್ರ ಬ್ಲ್ಯಾಕ್‌ ಪಿಂಕ್‌. ಇತ್ತೀಚೆಗೆ ಈ ತಂಡ ವಿಶ್ವ ಪರ್ಯಟನೆಗಾಗಿ ಒಂದು ಹೊಸ ಆಲ್ಬಂ ರೆಕಾರ್ಡ್‌ ಮಾಡುತ್ತಿದೆ, ಶೂಟಿಂಗ್‌ ಸಹ. ಈ ತಂಡದ ಲಕ್ಷಾಂತರ ಅಭಿಮಾನಿಗಳು 2020ರಲ್ಲಿ ಇವರ ಆಲ್ಬಂನ್ನು ಹಿಟ್‌ಮಾಡಿಸಿದ್ದರು. ಫಿಲಿಪೈನ್ಸ್ ಗೆ ಸಂಬಂಧಿಸಿದ ಈ ತಂಡ ತಮ್ಮ ಹೊಸ ಪ್ರಾಜೆಕ್ಟ್ ಗಾಗಿ ಬಲು ಉತ್ಸಾಹಗೊಂಡಿದೆ, ಕಷ್ಟಪಡುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ