ಟ್ರಾಫಿಕ್ಪೊಲೀಸ್‌ : ಈಗಲೇ ನಿನಗೆ ಫೈನ್‌ ಹಾಕ್ಬೇಕು. ರಸೀತಿ ಬರೀತೀನಿ, ನಿನ್ನ ಪೂರ್ಣ ಹೆಸರು ಹೇಳು.

ಹೊಸ ಡ್ರೈವರ್‌ : ದೇವನಹಳ್ಳಿ ವೀರಭದ್ರಯ್ಯ ವೆಂಕಟಪ್ಪ ವರದಾಚರ ವಿಶ್ವೇಶ್ವರಯ್ಯ….

ಟ್ರಾಫಿಕ್ಪೊಲೀಸ್‌: ಸಾಕು, ಸಾಕು…. ಈ ಬಾರಿ ಬಿಟ್ಟಿದ್ದೀನಿ. ಮುಂದಿನ ಸಲ ಟ್ರಾಫಿಕ್‌ ಸಿಗ್ನಲ್ ಜಂಪ್‌ ಮಾಡದಂತೆ ಎಚ್ಚರಿಕೆಯಿಂದ ಗಾಡಿ ಓಡಿಸು!

ಟೀಚರ್‌ : ಕಂಜೂಸ್‌ ಎಂದು ಯಾರನ್ನು ಹೇಳುತ್ತಾರೆ?

ಗುಂಡ : 100 ಮೆಸೇಜ್‌ ಕಳುಹಿಸಿದರೂ ಒಂದಕ್ಕೂ ಉತ್ತರ ಕೊಡದೆ ಇರುವಂಥರು.

ಟೀಚರ್‌: ಶಭಾಷ್‌! ಎಲ್ಲಿ…… ಅಂಥ ವ್ಯಕ್ತಿಗೊಂದು ಉದಾ ಕೊಡು, ನೋಡೋಣ.

ಗುಂಡ : ನಿಮ್ಮ ಮಗಳಿಗಿಂತ ಬೇರೆ ಬೇಕೇ…..?

ರಾಮಯ್ಯನನ್ನು ಸರ್ಜರಿಗೆಂದು ಆಪರೇಷನ್‌ ಥಿಯೇಟರ್‌ ಗೆ ಕರೆತರಲಾಯಿತು. ಆತನಿಗೆ ಅಲ್ಲಿ ಆ ಆಪರೇಷನಿಂದ ಮುಂದೆ ಅಪಾಯ ತಪ್ಪಿದ್ದಲ್ಲ ಎಂದು ಅರಿವಾಯಿತು. ಎಲ್ಲಕ್ಕೂ ಮುಖ್ಯ… ಸರ್ಜರಿ ಮಾಡುವವನು ಇವರ ಅಳಿಯ ಡಾ. ನಾಣಿ ಆಗಿದ್ದ! ಕೊನೆಗೆ ರಾಮಯ್ಯ ಅಳಿಯನನ್ನು ಕರೆಸಿಕೊಂಡು ಹೇಳಿದರು, “ನೋಡಪ್ಪ, ನೀನೊಬ್ಬ ನುರಿತ ಸರ್ಜನ್‌ ಎಂಬುದರಲ್ಲಿ  2 ಮಾತಿಲ್ಲ. ಏನೋ…. ನನ್ನ ಮಗಳು ಆಗಾಗ ನಿನ್ನನ್ನು ಶೋಷಿಸುತ್ತಾಳೆ ಎಂಬುದನ್ನು ಬಿಟ್ಟರೆ ಅವಳೂ ಒಳ್ಳೆ ಹೆಂಡತಿಯೇ…. ಆ ಸೇಡನ್ನು ನನ್ನ ಮೇಲೆ ತೀರಿಸಿಕೊಳ್ಳಬೇಡ! ಒಂದು ವಿಷಯ ನೆನಪಿರಲಿ, ಈ ಆಪರೇಷನ್‌ ಆದ ಮೇಲೆ ನಾನೇದರೂ ಅಕಸ್ಮಾತ್ ಗೊಟಕ್‌ ಅಂದುಬಿಟ್ಟರೆ, ನಿಮ್ಮತ್ತೆ ನಿಮ್ಮಿಬ್ಬರ ಜೊತೆ ಇರುತ್ತಾಳೆ, ಅದನ್ನು ನೆನಪಿಟ್ಟುಕೊಂಡು ಆಪರೇಷನ್‌ ಮುಂದುವರಿಸು,” ಎಂದು ಕಿವಿಮಾತು ಹೇಳಿದರು.

ಆಪರೇಷನ್‌ ಯಶಸ್ವಿಯಾಗಿ ರಾಮಯ್ಯ ಹೆಂಡತಿ ಜೊತೆ ಸುಖವಾಗಿದ್ದಾರಂತೆ!

ಗುಂಡ : ಅಲ್ವೋ ಸೀನ, ಅಂಥ ಒಳ್ಳೆ ಆಸ್ಪತ್ರೆ, ಎಷ್ಟು ಒಳ್ಳೆ ಡಾಕ್ಟರ್‌ ಇರೋವಾಗ, ಆಪರೇಷನ್‌ ದಿನ ಹೇಳದೆ ಕೇಳದೆ ನೀನ್ಯಾಕೋ ಅಲ್ಲಿಂದ ತಪ್ಪಿಸಿಕೊಂಡು ಓಡಿಬಂದೆ?

ಸೀನ : ಅಲ್ವೋ….. ಅಲ್ಲಿನ ನರ್ಸ್‌ ಮತ್ತೆ ಮತ್ತೆ ಏನು ಹೇಳ್ತಿದ್ದಳು ಗೊತ್ತಾ? ಏನೂ ಭಯಪಡಬೇಡ್ರಿ ಧೈರ್ಯವಾಗಿರಿ. ಹೇಗೋ ಆಗುತ್ತೆ, ದೇವರ ಮೇಲೆ ಭಾರ ಹಾಕಿ… ಅಂತೆಲ್ಲ ಅನ್ನೋದೇ?

ಗುಂಡ : ಸರಿಯಾಗೇ ಹೇಳಿದ್ದಾಳಲ್ಲೋ… ಇದರಲ್ಲಿ ತಪ್ಪೇನು ಬಂತು?

ಸೀನ : ಏ ಸುಮ್ನಿರಪ್ಪ… ಆ ಮಾತು ಆಕೆ ನನಗೆ ಹೇಳಿದ್ದಲ್ಲ…. ಆಪರೇಷನ್‌ ಮಾಡುವ ಡಾಕ್ಟರಿಗೆ!

ರಾಮು : ಶ್ಯಾಮು, ನೀನು ಬಹಳ ಸ್ಮಾರ್ಟ್‌ ಅಂತ ಆಗಾಗ ಹೇಳ್ತಾ ಇರ್ತೀಯಲ್ಲ…. ಎಲ್ಲಿ ಒಂದು ಉದಾಹರಣೆ ಕೊಡು ನೋಡೋಣ.

ಶ್ಯಾಮು : ನೋಡು, ನನ್ನ ಸ್ಮಾರ್ಟ್‌ನೆಸ್‌ ಬಗ್ಗೆ ಹೇಳಬೇಕೆಂದರೆ ಒಂದಾ ಎರಡಾ….? ಇರಲಿ, ಒಂದು ಉದಾಹರಣೆ ಕೇಳುವವನಾಗು. ನಾನು 110ನೇ ತರಗತಿಯವರೆಗೂ ಶಾಲೆಯಲ್ಲಿ ಕಲಿಯುವಾಗ ಇತಿಹಾಸ, ಪೌರನೀತಿ, ಭೂಗೋಳದ ಪರೀಕ್ಷೆ ಬಂದಾಗೆಲ್ಲ ಅದಕ್ಕೆ ಸಂಬಂಧಿಸಿದ ಉತ್ತರಗಳು ನನಗೆ ಗೊತ್ತಾಗದೆ ಹೋದರೆ ನಾನು ಎಂದೂ ಕಾಪಿ ಮಾಡಲು ಹೋಗುತ್ತರಲಿಲ್ಲ….. ಬದಲಿಗೆ ಅಂತಹ ಅನೇಕ ಕಷ್ಟದ ಪ್ರಶ್ನೆಗಳನ್ನು ಹಾಗೇ ಬಿಟ್ಟುಬಿಡುತ್ತಿದ್ದೆ.

ರಾಮು : ಇದರಲ್ಲಿ ನಿನ್ನ ಸ್ಮಾರ್ಟ್‌ ನೆಸ್‌ ಏನು ಬಂತು ಮಣ್ಣು……?

ಶ್ಯಾಮು : ಅಂದ್ರೆ…. ಅದರಿಂದ ಪ್ರತಿ ಕ್ಲಾಸಿನಲ್ಲೂ 2-3 ಸಲ ಫೇಲಾಗುತ್ತಿದ್ದೆ ಅನ್ನೋದು ನಿಜ, ಆದರೆ ನಾನೆಂದೂ ಇತಿಹಾಸ ಅಥವಾ ಭೂಗೋಳವನ್ನು ನನಗಿಷ್ಟ ಬಂದಂತೆ ತಿರುಚಿ ಬರೆಯಲಿಲ್ಲ, ಪ್ರಾಮಾಣಿಕತೆ ಪ್ರದರ್ಶಿಸಿದ್ದೆ!

ಒಂದು ವಿಷಯವನ್ನು ಎಂದೂ ಮರೆಯಬೇಡಿ! ನೀವು ಯಾವುದೇ ಕ್ರೀಡಾರಂಗದಲ್ಲಿ ನುರಿತ ಆಟಗಾರ್ತಿಯರನ್ನು ನೋಡಿ, ಆ ಹುಡುಗಿಯರ ಕೋಚ್‌ ಖಂಡಿತಾ ಗಂಡಸರೇ ಆಗಿರುತ್ತಾರೆ! ಅಂದ್ರೆ ಅಂಥ ಗಂಡಸರ ಮಾತು ಕೇಳಿ ಆ ಹುಡುಗಿಯರೆಲ್ಲ ಯಶಸ್ವಿಯಾಗಿದ್ದಾರೆ ಅನ್ನೋದು ಲೋಕಕ್ಕೇ ತಿಳಿದ ವಿಚಾರ. ಅಂದಮೇಲೆ ಪ್ರತಿ ಯಶಸ್ವೀ ಹೆಣ್ಣಿನ ಹಿಂದೆಯೂ ಒಬ್ಬ ಗಂಡಸಿದ್ದಾನೆ ಅಂತ ಆಯ್ತಲ್ಲ….? ಅಪ್ಪಿತಪ್ಪಿಯೂ ಈ ಮಾತನ್ನು ನಿಮ್ಮ ಹೆಂಡತಿ ಮುಂದೆ ಮಾತ್ರ ಆಡಬೇಡಿ, ಅದರಲ್ಲೂ ಆಕೆ ಬೆಳಗಿನ ತಿಂಡಿ ಅಥವಾ ಮಧ್ಯಾಹ್ನದ ಊಟಕ್ಕೆ ಅಡುಗೆ ತಯಾರಿಸುತ್ತಿರುವಾಗ…..!

ಈ ಕಟು ಸತ್ಯ ಬಲ್ಲಿರಾ….?`ಜೀವನ ನಶ್ವರ. ಈ ಲೋಕದಲ್ಲಿನ ಸಂಬಂಧಗಳೆಲ್ಲ ಮಿಥ್ಯೆ. ವ್ಯಾಮೋಹ ಅನ್ನುವುದನ್ನು ಅಂಟಿಸಿಕೊಳ್ಳಲೇ ಬಾರದು…. ಹಣ, ಕಾಸು, ದುಡ್ಡು, ಐಶ್ವರ್ಯ, ಒಡವೆ, ಆಸ್ತಿಪಾಸ್ತಿ ಎಲ್ಲವನ್ನೂ ಇಲ್ಲೇ ಬಿಟ್ಟುಹೋಗಬೇಕು. ಜೀವವೇ ಹೋಗುತ್ತೆ ಅಂತ ತಿಳಿದ ಮೇಲೆ ಇದಕ್ಕೇಕೆ ಬೆಲೆ ಕೊಡುತ್ತೀರಿ…..?’

ಹೀಗೆಲ್ಲ ವ್ಯಾಖ್ಯಾನಿಸಿ ಪ್ರಚವನ ನೀಡುವ ಬಾಬಾ, ತನ್ನ 1 ಗಂಟೆಯ ಬೋಧನೆಗೆ ಪ್ರತಿಯೊಬ್ಬ ಪ್ರೇಕ್ಷಕರೂ ಕನಿಷ್ಠ 1 ಲಕ್ಷ ರೂ. ಫೀಸ್‌ ಕಟ್ಟಿರಬೇಕು ಎನ್ನುತ್ತಾನೆ!

ರತ್ನಾ : ಏನ್ರಿ…. ನಿದ್ದೆ ಮಾಡಿದ್ದು ಸಾಕು, ಎದ್ದು ಬೇಗ ಬೇಗ ಕಾಫಿ ತಿಂಡಿ ರೆಡಿ ಮಾಡಿ. ಇತ್ತು ಮಧ್ಯಾಹ್ನ ನನ್ನ ತಂಗಿ, ತಮ್ಮ ಬರುತ್ತಾರೆ. ಊಟಕ್ಕೆ ವಿಶೇಷ ಮಾಡೋದು ಮರೆಯಬೇಡಿ. ಅವಳ ಗಂಡ ಪ್ರಭಾಕರ್‌ ಸೀದಾ ಎದ್ದು ಮುಖ ತೊಳೆದವನೇ ಬೇಗ ಬಟ್ಟೆ ಬದಲಿಸಿ, ಹೊರಗೆ ಹೊರಟ.

ರತ್ನಾ : ಈ ಬೆಳ್ಳಂಬೆಳಗ್ಗೆ 7 ಗಂಟೆಗೆ ಎಲ್ಲಿಗೆ ಹೊರಟಿರಿ?

ಪ್ರಭಾಕರ : ತಕ್ಷಣ ವಕೀಲರನ್ನು ಕಂಡು ಡೈವೋರ್ಸ್‌ ಗೆ ಅರ್ಜಿ ಕೊಟ್ಟು ಬರ್ತೀನಿ.

1 ಗಂಟೆ ಬಿಟ್ಟುಕೊಂಡು ಬಂದ ಗಂಡ ಸೀದಾ ಅಡುಗೆಮನೆಗೆ ಹೋಗಿ ಕಾಫಿ ತಿಂಡಿಯ ತಯಾರಿ ಶುರು ಮಾಡಿದಾಗ ಅವಾಕ್ಕಾದ ರತ್ನಾ, “ವಕೀಲರ ಬಳಿ ವಿಚ್ಛೇದನಕ್ಕೆ ಅರ್ಜಿ ಹಾಕಲ್ಲಿಲವೇ?” ಎಂದು ಕೇಳಿದಳು.

ಅದಕ್ಕೆ ಆತ, “ಇಲ್ಲ ಬಿಡು….. ಅವರೇ ಅಲ್ಲಿ ಮನೆ ಒರೆಸುತ್ತಾ, ಮಧ್ಯೆ ಮಧ್ಯೆ ಕುಕ್ಕರ್‌ ಕೂಗಿದಾಗ ಅದನ್ನು ಆಫ್‌ ಮಾಡಲು ಧಾವಿಸುತ್ತಿದ್ದರು,” ಎನ್ನುವುದೇ?

ಮಾಲ್ ‌ಬಳಿ ಸಿಕ್ಕಿದ ಬಾಯ್‌ ಫ್ರೆಂಡ್‌ ನ್ನು ತಬ್ಬಿಕೊಂಡ ಗರ್ಲ್ ಫ್ರೆಂಡ್‌, ಅವನನ್ನು ಗಟ್ಟಿಯಾಗಿ ಅಪ್ಪುತ್ತಾ, “ನನ್ನ ಹೃದಯದ ಬಡಿತ ಹೆಚ್ಚುವಂತೆ ಏನಾದರೂ ಒಂದಿಷ್ಟು ಮಾತನಾಡುವ ಡಾರ್ಲಿಂಗ್‌!” ಎಂದು ಪಲುಕಿದಳು.

“ನೀನು ಒಂದಿಷ್ಟು ಕದಲದೆ, ಮುಖ ಹೊರಳಿಸದೆ ಹಾಗೆ ನನ್ನ ಹಿಡಿದುಕೊಂಡಿರು…. ನಮ್ಮ ಹಿಂದೆ ನಿನ್ನ ಅಪ್ಪ ಟ್ರಾಲಿ ತಳ್ಳಿಕೊಂಡು ಬರುತ್ತಿದ್ದಾರೆ,” ಎನ್ನುವುದೇ?

ಮನೆಗೆ ಬಂದಿದ್ದ ಅತಿಥಿ ಪೊಗರ್ದಾಸ್ತಾಗಿ ಸವಿಯುತ್ತಾ ಸಾವಧಾನವಾಗಿ ಗುಂಡನನ್ನು ಕೇಳಿದರು, “ಮುಂದೆ ಏನು ಮಾಡಬೇಕು ಅಂತಿದ್ದೀಯಪ್ಪಾ….!”

ಗುಂಡ ಸ್ವಲ್ಪ ಸಂಕೋಚವಿಲ್ಲದೆ, “ನೀವು ಸಮೋಸಾದ ಹೊರ ಪದರ ಮಾತ್ರ ತಿಂದು ಒಳಗಿನ ಆಲೂ ಪಲ್ಯ ಬಿಟ್ಟಿದ್ದೀರಲ್ಲ, ನೀವು ಹೊರಟ ಮೇಲೆ ನಿನ್ನೆ ಉಳಿದಿರೋ ರೊಟ್ಟಿಗೆ ನನಗೆ ಅದೇ ಪಲ್ಯ ಗತಿ ಅಂತ ಗೊತ್ತಿತ್ತು….. ನೀವು ಹೊರಡಲಿ ಅಂತ ಕಾಯ್ತಿದ್ದೀನಿ,” ಎನ್ನುವುದೇ?

ರಾಮಯ್ಯ : ಮಗು ಸಂದೀಪ್‌, ನಾಡಿದ್ದು ಅಜ್ಜಿ ಬರ್ತ್‌ ಡೇ ಇದೆ. ಅವರಿಗೆ ಯಾವ ಗಿಫ್ಟ್ ಕೊಡಬೇಕು ಅಂತಿದ್ದೀಯಾ?

ಸಂದೀಪ್‌ : ಅಪ್ಪ, ಈ ಸಲ ಅಜ್ಜಿಗೆ ಒಂದು ಒಳ್ಳೆ ಕಂಪನಿಯ ಹೊಸ? ಫುಟ್‌ ಬಾಲ್ ‌ತಂದುಕೊಡೋಣ ಅಂತಿದ್ದೀನಿ.

ರಾಮಯ್ಯ : ಅಲ್ಲಯ್ಯ, ಈ ವಯಸ್ಸಿನಲ್ಲಿ ನಿನ್ನ ಫುಟ್ಬಾಲ್ ‌ಇಟ್ಟುಕೊಂಡು ಅವರು ಯಾವ ಮ್ಯಾಚಿಗೆ ಪ್ರಾಕ್ಟೀಸ್‌ ಮಾಡಬೇಕಿದೆ? ಹೈಸ್ಕೂಲ್ ‌ಹುಡುಗ, ನಿನಗೆ ಅಷ್ಟು ಗೊತ್ತಾಗೋಲ್ವೇ?

ಸಂದೀಪ್‌ : ಅದೆಲ್ಲ ನನಗೆ ಗೊತ್ತಿಲ್ಲ… ಕಳೆದ ತಿಂಗಳು ನನ್ನ ಬರ್ತ್‌ ಡೇ ಗೆ ಅಜ್ಜಿ ನನಗೆ ಧಾರ್ಮಿಕ ಗ್ರಂಥವನ್ನು ಗಿಫ್ಟ್ ಆಗಿ ಕೊಟ್ಟಿದ್ದರು ತಾನೇ? ನಾನು ಯಾವ ಪುರಾಣ ಪ್ರವಚನಕ್ಕೆ ಹೋಗ್ತೀನಿ….?

ಗುಂಡ : ರಜನಿಕಾಂತ್‌ 200 ವರ್ಷಗಳ ಹಿಂದೆ ಹುಟ್ಟಿದ್ದಿದ್ದರೆ ಏನಾಗ್ತಿತ್ತು…?

ಸೀನ : ಆಗ ಬ್ರಿಟಿಷರು ತಮ್ಮ ಸ್ವಾತಂತ್ರ್ಯಕ್ಕೆ ಈವರೆಗೂ ಹೋರಾಡುತ್ತಿದ್ದರಂತೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ