ಆಲ್ ಟೈಮ್ ಹಾಟ್‌, ಗಾರ್ಜಿಯಸ್‌ ಅಂಡ್‌ ಫ್ಯಾಬ್ಯುಲಸ್‌ ಲುಕ್ಸ್ ಪಡೆಯಲು ಬಯಸುವಿರಾದರೆ ಬದಲಾಗುತ್ತಿರುವ ಫ್ಯಾಷನ್‌ ಟ್ರೆಂಡ್‌ ಬಗ್ಗೆ ತಿಳಿದುಕೊಂಡು, ಅರ್ಥ ಮಾಡಿಕೊಂಡು ಮತ್ತು ಅದನ್ನು ಅಳವಡಿಸಿಕೊಂಡು ನಿಮ್ಮ ಪರ್ಸನಾಲಿಟಿಗೆ ಮೆರುಗು ತರಬೇಕಾಗುತ್ತದೆ. ಹೀಗೆ ಮೇಕಪ್‌ ಟ್ರೆಂಡ್‌ ನ್ನು ಅನುಸರಿಸಿ ನಿಮ್ಮ ಸೌಂದರ್ಯಕ್ಕೆ ಟೆನ್‌ ಆನ್‌ ಟೆನ್‌ಬ್ಯೂಟಿ ಲುಕ್‌ಒದಗಿಸಬಹುದು.

ಕ್ರಿಸ್ಟಲ್ ಕ್ಲಿಯರ್ಮೇಕಪ್

ಈ ಹೊಸ ವರ್ಷದಲ್ಲಿ ಕ್ರಿಸ್ಟಲ್ ಕ್ಲಿಯರ್‌ ಮೇಕಪ್‌ ಚಾಲ್ತಿಯಲ್ಲಿರುತ್ತದೆ. ಇದು ಟ್ರಾನ್ಸ್ ಪರೆಂಟ್‌ ಮೇಕಪ್‌ ನ ಅಡ್ವಾನ್ಸ್ ರೂಪವಾಗಿದ್ದು, ಮೊದಲಿಗಿಂತ ಉತ್ತಮವಾಗಿರುತ್ತದೆ. ಆದ್ದರಿಂದ ನೀವು ಫ್ರೆಶ್‌, ನ್ಯಾಚುರಲ್, ಕ್ಲಿಯರ್‌ ಸಾಫ್ಟ್ ಲುಕ್ ಪಡೆಯಬೇಕೆಂದಿದ್ದರೆ, ಕ್ರಿಸ್ಟಲ್ ಕ್ಲಿಯರ್‌ ಮೇಕಪ್‌ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ಮೇಕಪ್‌ ಪ್ರಾಡಕ್ಟ್ ಗಳನ್ನು ಕೊಳ್ಳುವಾಗ ಗಾಢವಾದ ಕಲರ್‌ ಶೇಡ್‌ ಇರದಂತೆ ಗಮನವಿಡಿ.

ಕ್ರಿಸ್ಟಲ್ ಕ್ಲಿಯರ್‌ ಮೇಕಪ್‌ ನಲ್ಲಿ ನಿಮ್ಮ ಸ್ಕಿನ್‌ ಟೋನ್‌ ಗೆ ಅನುಸಾರವಾದ ನಾರ್ಮಲ್ ಫೌಂಡೇಶನ್‌ ಬದಲು ಸ್ಟಿಕ್ ಲೂಮಿನೈಸರ್‌ ಫೌಂಡೇಶನ್‌ ನ್ನು ಆರಿಸಿ. ಇದರಲ್ಲಿರುವ ನ್ಯಾಚುರಲ್ ಪಿಗ್ಮೆಂಟ್‌ ಗಳು ನಿಮ್ಮ ಚರ್ಮಕ್ಕೆ ಸಾಫ್ಟ್ ಲುಕ್‌ ನೀಡುತ್ತವೆ. ಈ ಫೌಂಡೇಶನ್‌ ಅನ್‌ ಈವೆನ್‌ ಸ್ಕಿನ್‌ ಟೋನ್‌ ನ್ನು ತೋರಗೊಡದೆ ಈವೆನ್‌ ಟೋನ್‌ ಒದಗಿಸುತ್ತದೆ.

ನ್ಯಾಚುರಲ್ ಪೇಸ್ಟವೇ ಶೇಡ್‌ ನ ಐಶ್ಯಾಡೋ, ಎಚ್‌ ಡಿ ವ್ಯಾಲ್ಯುಮೈಸಿಂಗ್‌ ಮಸ್ಕರಾ ಮತ್ತು ಜೆಲ್ ಲೈನರ್‌, ಆರ್ಟಿಫಿಶಿಯಲ್ ಲ್ಯಾಶೆಸ್‌, ಚೀಕ್‌ ಬೋನ್‌ ಗಾಗಿ ಹೈಲೈಟರ್‌ ನೊಂದಿಗೆ ಲೈಟ್‌ ಬ್ಲಶರ್‌ ಸ್ಟ್ರೋಕ್ಸ್, ಲಾಂಗ್‌ ಲಾಸ್ಟಿಂಗ್‌ ಹೈಗ್ಲಾಸ್‌ ಅಥವಆ ಲಿಪ್ ಸ್ಟಿಕ್‌. ಇವುಗಳಿಂದ ನಿಮ್ಮ ಮೇಕಪ್‌ ನ್ನು ಪೂರ್ಣಗೊಳಿಸಿ. ಕ್ರಿಸ್ಟಲ್ ಕ್ಲಿಯರ್‌ ಮೇಕಪ್‌ ಗೆ ಬೇಬಿ ಬ್ರೌನ್‌, ಲೆಯೊರಿಯಲ್ ಮುಂತಾದವು ಉತ್ತಮ. ಓವರ್‌ ಮೇಕಪ್‌ ಮಾಡಿಕೊಳ್ಳುವ ಅಭ್ಯಾಸದಿಂದ ದೂರವಿರಿ.

ಗ್ರಾಫಿಕ್ ಮೇಕಪ್

ಈ ಸಲ ಸ್ಮೋಕಿ ಐಸ್‌ ನೊಂದಿಗೆ ಗ್ರಾಫಿಕ್‌ ಲೈನರ್‌ ಚಾಲ್ತಿಯಲ್ಲಿರುತ್ತದೆ. ಸ್ಮೋಕಿ ಐಸ್‌ ಎಫೆಕ್ಟ್ ಗಾಗಿ ಅಪ್ಪರ್‌ ಮತ್ತು ಲೋಯರ್‌ ಲಿಡ್‌ ಮೇಲೆ ಲೈನರ್‌ ಹಾಗೂ ಕಾಜಲ್ ನ್ನು ಐಶೇಡ್‌ ನೊಂದಿಗೆ ಸ್ಮಜ್‌ ಮಾಡಿದರೆ, ಗ್ರಾಫಿಕ್‌ ಲೈನರ್‌ ನಲ್ಲಿ ಕಣ್ಣುಗಳಿಗೆ ಲೈನರ್ ನಿಂದ ಕ್ಲಿಯರ್‌ ಅಂಡ್‌ ಮಾಡರ್ನ್‌ ಲುಕ್‌ ನೀಡಲಾಗುತ್ತದೆ. ಐಶೇಡ್ಸ್ ನಲ್ಲಿ ವೈಬ್ರೆಂಟ್‌, ಮಿಕ್ಸ್ ಫ್ಯಾಮಿಲಿ ಕಲರ್‌ ಶೇಡ್ಸ್, ಫೈನಲ್ ಪಾರ್ಟಿಕ್‌ ಶಿಮರ್‌, ನಿಯಾನ್‌ ಮತ್ತು ಡಸ್ಟೀ ಕಲರ್‌ ಶೇಡ್‌ ಗಳು ಬಳಕೆಯಲ್ಲಿರುತ್ತವೆ.

ಹೈ ಶೈನ್‌ ಈ ಸೀಸನ್‌ ನಲ್ಲಿ ತುಟಿಗಳ ಅಂದನ್ನು ಹೆಚ್ಚಿಸಲು ಲಿಪ್‌ ಸ್ಟಿಕ್‌ ನ ಬೋಲ್ಡ್ ಶೇಡ್‌ ಗಳನ್ನು ಹೈ ಶೈನ್‌ ಗ್ಲಾಸ್‌ ಜೊತೆಯಲ್ಲಿ ಡಿಫೈನ್‌ ಮಾಡಿ. ಒಂದೆಡೆ ಕ್ರಿಸ್ಟಲ್ ಕ್ಲಿಯರ್‌ ಮೇಕಪ್‌ ನ ಸೊಬಗು ಇದ್ದರೆ, ಇನ್ನೊಂದೆಡೆ ತುಟಿಗಳ ಸೌಂದರ್ಯ ಎದ್ದು ತೋರುವಂತೆ ಮಾಡಲು ಬ್ಲಡ್‌ ರೆಡ್‌, ಬರ್ಗಂಡೀ, ಮೆರೂನ್‌, ಪ್ಲಮ್, ಪೇಸ್ಟಲ್, ಬ್ರೈಟ್‌ ಪಿಂಕ್‌ ಮತ್ತು ನ್ಯೂಡ್‌ ನ್ಯಾಚುಲರ್ ಕಲರ್‌ ಗಳ ಕ್ರೇಜ್‌ ಕಂಡುಬರುತ್ತದೆ. ಮೆಬಿಲಿನ್‌, ಕಲರ್‌ ಬಾರ್‌, ಕ್ರೋವೆನ್‌, ಲ್ಯಾಕ್ಮೆ  ಪ್ರಾಡಕ್ಟ್ ಗಳಿಂದ ಆರಿಸಿಕೊಳ್ಳಬಹುದು.

ಆರ್ಚ್ಐಬ್ರೋಸ್ವಿತ್ಬ್ರೋಸ್

ಯಾವುದೇ ಮೇಕಪ್‌ ಇಲ್ಲದೆ ಕೇವಲ ಪರ್ಫೆಕ್ಟ್ ಐ ಬ್ರೋಸ್‌ ನಿಂದಲೇ ನಿಮ್ಮ ಮುಖ ಸೌಂದರ್ಯ ಹೆಚ್ಚುವಂತಾಗಬಹುದು. ಈ ಸಲ ಸ್ಪೆಶಲೀ ಆರ್ಚ್‌ ಶೇಪ್‌ ವಿತ್‌ ಲಾಂಗ್‌ ಲೆಂತ್‌ ಐ ಬ್ರೋಸ್‌ ಚಾಲ್ತಿಯಲ್ಲಿರುತ್ತದೆ. ಇದರೊಂದಿಗೆ ಕಲರ್‌ ಐಬ್ರೋಸ್‌ ಮೇಕಪ್‌ಪೆಲೆಟ್‌ ನ ಸಹಾಯದಿಂದ ಐಡಿಯಲ್ ಲುಕ್‌ ನೀಡಬಹುದು. ಐಬ್ರೋ ಪೆನ್ಸಿಲ್ ‌ನ್ನು ಆಲಿವ್ ‌ಎಣ್ಣೆಯಲ್ಲಿ ನೆನೆಸಿಟ್ಟಿದ್ದು. ಅದನ್ನು ಕಣ್ಣಿಗೆ ಹಚ್ಚಿಕೊಳ್ಳಿ ಮತ್ತು ಟ್ರಾನ್ಸ್ ಪರೆಂಟ್‌ ಮಸ್ಕರಾದಿಂದ ಸೆಟ್‌ ಮಾಡಿ.

ಬ್ಲಾಂಡ್ಹೇರ್

ಕೂದಲಿನ ಸೌಂದರ್ಯಕ್ಕಾಗಿ ಲೋವೈಟ್‌ ಮತ್ತು ಹೈಲೈಟ್‌ ಕಲರ್‌ ಬ್ಲಾಂಡ್‌ ನ ಕ್ರೇಜ್‌ ನ್ನು ನೋಡಬಹುದು. ಇದರೊಂದಿಗೆ ಮಲ್ಟಿಕಲರ್‌ ಹೇರ್‌ ಟೆಕ್ಸ್ ಚರ್‌, ಥಿನ್‌ ಹೈಲೈಟ್‌, ಫಂಕಿ ಹೈಲೈಟ್‌, ಟೆಕ್ಸ್ ಚರ್‌ ವಾಲ್ಯೂಮ್ ಹೈಲೈಟ್‌, ಫಾಯಿಲ್ ‌ಹೈಲೈಟ್ ಮೊದಲಾದ ಉತ್ತಮ ಆಪ್ಶನ್‌ ಗಳನ್ನು ನೀವು ಪ್ರಯತ್ನಿಸಬಹುದು.

ಕಲರ್ಲ್ಯಾಶೆಸ್ಇದು ಫನ್

ಲವಿಂಗ್‌ ಮತ್ತು ಎಕ್ಸ್ ಪೆರಿಮೆಂಟ್‌ ನ ಸೀಸನ್‌ ಆಗಿದೆ. ರೆಪ್ಪೆಗಳ ಸೌಂದರ್ಯಕ್ಕಾಗಿ ಆರ್ಟಿಫಿಶಿಯಲ್ ಲ್ಯಾಶೆಸ್‌ ಹೆಚ್ಚು ಚಾಲ್ತಿಯಲ್ಲಿರುತ್ತದೆ. ಇದರಲ್ಲಿ  ರನ್‌ ವೇ ಲ್ಯಾಶೆಸ್‌, ಡಬಲ್ ಅಪ್‌ ಲ್ಯಾಶೆಸ್‌, ಕಲರ್‌ ಲ್ಯಾಶೆಸ್‌, ಜ್ಯೂವೆಲ್‌, ಕೊಸೆಂಟ್‌, ಕರ್ಲೀ, ಸ್ಪಾರ್ಕೀ ಮುಂತಾದ ಆಯ್ಕೆಗಳಿರುತ್ತವೆ.

3ಡಿ ನೇಲ್ ಆರ್ಟ್

ಮೇಕಪ್‌ ಮಂತ್ರದಲ್ಲಿ ನೇಲ್ ‌ಆರ್ಟ್‌ ಮತ್ತು ನೇಲ್ ‌ಪೇಂಟ್‌ ಗೆ ಪ್ರತ್ಯೇಕ ಸ್ಥಾನವಿದೆ. ಹಾಟ್‌ ನೇಲ್ ‌ಜೆಲ್ ‌ಕಲರ್‌, ನ್ಯೂಡ್, ಮೆಟಾಲಿಕ್‌ ಗೋಲ್ಡ್ ಮ್ಯಾಗ್ನೆಟಿಕ್‌ ಕಲರ್‌, ಬ್ರಾಂಜ್‌, ಡೀಪ್‌ ಲೈನ್‌, ನಿಯಾನ್‌, ವೈಬ್ರೆಂಟ್‌ ಮುಂತಾದ ಬಣ್ಣಗಳಲ್ಲದೆ, ನೇಲ್‌ ಆರ್ಟ್‌ ನಲ್ಲಿ 3ಡಿ, ಫ್ಯಾಂಟೆಸಿ, ಹಾಫ್‌ ಮೂನ್‌, ಸ್ಟೋನ್‌ ಮತ್ತು ಫ್ಲವರ್‌ ನೇಲ್ ‌ಆರ್ಟ್‌, ಆ್ಯಕ್ವಾ ನೇಲ್‌ ಆರ್ಟ್‌ ಥೀಮ್ ಬೇಸ್ಡ್ ನೇಲ್ ‌ಆರ್ಟ್‌, ಫ್ರೆಂಚ್‌ ವಿತ್‌ ಸ್ಟೋನ್‌ ನೇಲ್ ‌ಆರ್ಟ್‌, ಟೂ ಅಂಡ್‌ ಥ್ರೀ ಕಲರ್‌ ನೇಲ್ ‌ಆರ್ಟ್‌, ಪೇಪರ್‌ ನೇಲ್ ‌ಆರ್ಟ್‌, ಮಾರ್ಬಲ್ ನೇಲ್ ‌ಆರ್ಟ್‌, ಪ್ರಿಂಟೆಡ್‌ ನೇಲ್ ‌ಆರ್ಟ್‌ ಗಳು ಚಾಲ್ತಿಯಲ್ಲಿರುತ್ತವೆ. ಇದಲ್ಲದೆ ನೇಲ್ ‌ಆರ್ಟ್‌ ಕಿಟ್‌ ಮತ್ತು ನೇಲ್ ‌ಸ್ಟಿಕರ್‌ ನ ಸಹಾಯದಿಂದ ನೀವು ಕೆಲವೇ ನಿಮಿಷಗಳಲ್ಲಿ ನೇಲ್ ‌ಡಿಸೈನ್‌ ಮಾಡಬಲ್ಲಿರಿ.

ಡಿಸೈನರ್ಡ್ರೆಸ್

ಕಡೆಯ ಬ್ಯೂಟಿ ಫ್ಯಾಷನ್‌ ಮಂತ್ರವೆಂದರೆ ಡಿಸೈನರ್‌ ಡ್ರೆಸ್‌. ಇದರಲ್ಲಿ ಅನಾರ್ಕಲಿ ಡ್ರೆಸ್‌, ಲಹಂಗಾ ಚೋಲಿ, ಡಿಸೈನರ್‌ ಬ್ಲೌಸ್ ವಿತ್‌ ಲೈಟ್‌ ವರ್ಕ್‌ ಸ್ಯಾರಿ, ಡಿಸೈನರ್‌ ಸ್ಯಾರಿ ವಿತ್‌ ಕಾಂಟ್ರಾಸ್ಟ್ ಕಲರ್‌, ಸ್ಟೈಲಿಶ್‌ ಗೌನ್‌, ಸ್ಟೈಲಿಶ್‌ ಕುರ್ತಿ, ಡಿಜಿಟಲ್ ಪ್ರಿಂಟ್ ಸ್ಯಾರಿ, ಡ್ರೇಪಿಂಗ್‌ ಸ್ಯಾರಿ, ಎತ್ನಿಕ್‌ ಡಿಸೈನ್‌ ಸ್ಯಾರಿ, ಹ್ಯಾಂಡ್‌ ವರ್ಕ್‌ ಸ್ಯಾರಿ, ನೆಟ್‌ ಸ್ಯಾರಿ, ಒನ್‌ ಮಿನಿಟ್‌ ಡ್ರೇಪ್‌ ಸ್ಯಾರಿ, ಸ್ಲಿಮ್ ಲುಕ್‌ ಸ್ಯಾರಿ ಇತ್ಯಾದಿ… ಉಡುಪುಗಳು ನಿಮ್ಮ ಆಯ್ಕೆಗೆ ಬರುತ್ತವೆ.

ಈ ಡ್ರೆಸ್‌ ಗಳಲ್ಲಿ ಪೇಸ್ಟಲ್ ನೊಂದಿಗೆ ಬೋಲ್ಡ್ ಕಲರ್‌ ನ ಮಿಕ್ಸ್ ಮ್ಯಾಚ್‌ ಕಾಂಬಿನೇಶನ್‌ ಹೆಚ್ಚು ಬಳಕೆಯಲ್ಲಿರುತ್ತದೆ. ಇದಲ್ಲದೆ ನಿಯಾನ್‌, ಮಲ್ಟಿಕಲರ್‌, ಕ್ರೀಮ್ ವಿತ್‌ ಡಾರ್ಕ್‌ ಮೆರೂನ್‌, ಪಿಂಕ್‌ ವಿತ್‌ ಆಕ್ಸಿಡೈಸ್ಡ್ ಕಲರ್‌,  ಗೋಲ್ಡ್ ಅಂಡ್‌ ಆ್ಯಕ್ವಾ ಫ್ಯೂಶಿಯಾ ಕಲರ್‌, ಇವೆಲ್ಲ ಹೆಚ್ಚು ಬೇಡಿಕೆಯಲ್ಲಿರುತ್ತವೆ.

ಹೇರ್‌ ಸ್ಟೈಲ್ ‌ರಿಂಗ್‌ ಲೆಟ್ಸ್, ಶೈನ್‌, ಸ್ಟ್ರೇಟ್‌ ನಿಂಗ್‌, ಕ್ರಾಪಿಂಗ್‌, ಹಾಟ್‌ ರೋಲರ್‌, ಫಿಂಗರ್‌ ವೇವ್ ‌ಮೊದಲಾದವುಗಳಿಂದ ಕೂದಲಿಗೆ ನ್ಯೂ ಲುಕ್ಸ್ ಕೊಡಬಹುದು. ಜೊತೆಗೆ ಕರ್ಲೀ ಫಂಕೀ ಪೋನಿ, ಕರ್ಲ್ ವಿತ್‌ ಫ್ರಿಂಜ್‌, ಸೈಡ್‌ ಬನ್‌, ಫ್ರೆಂಚ್‌ ಪೋನಿ ಬನ್, ಫಿಶ್‌ ವೆಟ್‌ ಲೂಸ್‌ ಪೋನಿ ಬನ್‌ ಮತ್ತು ರೆಟ್ರೊ ಬನ್‌, ಹೈ ಬನ್‌, ಡಬಲ್ ಅಂಡ್‌ ಟ್ರಿಪ್‌ ಟ್ವಿಸ್ಟ್ ನಾಟ್‌, ನೀಡ್‌ ವರ್ಕ್‌, ಫಂಕೀ ಬೋಲ್ಡ್ ಬನ್‌ ಮುಂತಾದವುಗಳ ಕ್ರೇಜ್‌ ಕಾಣಬಹುದು. ಈ ವಿವಿಧ ಹೇರ್‌ ಸ್ಟೈಲ್ ‌ಗಳಿಗೆ ಬಗೆಬಗೆಯ ಆ್ಯಕ್ಸೆಸರೀಸ್‌ ನಿಂದ ಫೈನಲ್ ಟಚ್‌ನೀಡಲಾಗುವುದು.

ಪ್ರೀತಿ ಜೈನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ