ಆಲ್ ಟೈಮ್ ಹಾಟ್, ಗಾರ್ಜಿಯಸ್ ಅಂಡ್ ಫ್ಯಾಬ್ಯುಲಸ್ ಲುಕ್ಸ್ ಪಡೆಯಲು ಬಯಸುವಿರಾದರೆ ಬದಲಾಗುತ್ತಿರುವ ಫ್ಯಾಷನ್ ಟ್ರೆಂಡ್ ಬಗ್ಗೆ ತಿಳಿದುಕೊಂಡು, ಅರ್ಥ ಮಾಡಿಕೊಂಡು ಮತ್ತು ಅದನ್ನು ಅಳವಡಿಸಿಕೊಂಡು ನಿಮ್ಮ ಪರ್ಸನಾಲಿಟಿಗೆ ಮೆರುಗು ತರಬೇಕಾಗುತ್ತದೆ. ಹೀಗೆ ಮೇಕಪ್ ಟ್ರೆಂಡ್ ನ್ನು ಅನುಸರಿಸಿ ನಿಮ್ಮ ಸೌಂದರ್ಯಕ್ಕೆ ಟೆನ್ ಆನ್ ಟೆನ್‌ಬ್ಯೂಟಿ ಲುಕ್‌ಒದಗಿಸಬಹುದು.
ಕ್ರಿಸ್ಟಲ್ ಕ್ಲಿಯರ್ ಮೇಕಪ್
ಈ ಹೊಸ ವರ್ಷದಲ್ಲಿ ಕ್ರಿಸ್ಟಲ್ ಕ್ಲಿಯರ್ ಮೇಕಪ್ ಚಾಲ್ತಿಯಲ್ಲಿರುತ್ತದೆ. ಇದು ಟ್ರಾನ್ಸ್ ಪರೆಂಟ್ ಮೇಕಪ್ ನ ಅಡ್ವಾನ್ಸ್ ರೂಪವಾಗಿದ್ದು, ಮೊದಲಿಗಿಂತ ಉತ್ತಮವಾಗಿರುತ್ತದೆ. ಆದ್ದರಿಂದ ನೀವು ಫ್ರೆಶ್, ನ್ಯಾಚುರಲ್, ಕ್ಲಿಯರ್ ಸಾಫ್ಟ್ ಲುಕ್ ಪಡೆಯಬೇಕೆಂದಿದ್ದರೆ, ಕ್ರಿಸ್ಟಲ್ ಕ್ಲಿಯರ್ ಮೇಕಪ್ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ಮೇಕಪ್ ಪ್ರಾಡಕ್ಟ್ ಗಳನ್ನು ಕೊಳ್ಳುವಾಗ ಗಾಢವಾದ ಕಲರ್ ಶೇಡ್ ಇರದಂತೆ ಗಮನವಿಡಿ.
ಕ್ರಿಸ್ಟಲ್ ಕ್ಲಿಯರ್ ಮೇಕಪ್ ನಲ್ಲಿ ನಿಮ್ಮ ಸ್ಕಿನ್ ಟೋನ್ ಗೆ ಅನುಸಾರವಾದ ನಾರ್ಮಲ್ ಫೌಂಡೇಶನ್ ಬದಲು ಸ್ಟಿಕ್ ಲೂಮಿನೈಸರ್ ಫೌಂಡೇಶನ್ ನ್ನು ಆರಿಸಿ. ಇದರಲ್ಲಿರುವ ನ್ಯಾಚುರಲ್ ಪಿಗ್ಮೆಂಟ್ ಗಳು ನಿಮ್ಮ ಚರ್ಮಕ್ಕೆ ಸಾಫ್ಟ್ ಲುಕ್ ನೀಡುತ್ತವೆ. ಈ ಫೌಂಡೇಶನ್ ಅನ್ ಈವೆನ್ ಸ್ಕಿನ್ ಟೋನ್ ನ್ನು ತೋರಗೊಡದೆ ಈವೆನ್ ಟೋನ್ ಒದಗಿಸುತ್ತದೆ.
ನ್ಯಾಚುರಲ್ ಪೇಸ್ಟವೇ ಶೇಡ್ ನ ಐಶ್ಯಾಡೋ, ಎಚ್ ಡಿ ವ್ಯಾಲ್ಯುಮೈಸಿಂಗ್ ಮಸ್ಕರಾ ಮತ್ತು ಜೆಲ್ ಲೈನರ್, ಆರ್ಟಿಫಿಶಿಯಲ್ ಲ್ಯಾಶೆಸ್, ಚೀಕ್ ಬೋನ್ ಗಾಗಿ ಹೈಲೈಟರ್ ನೊಂದಿಗೆ ಲೈಟ್ ಬ್ಲಶರ್ ಸ್ಟ್ರೋಕ್ಸ್, ಲಾಂಗ್ ಲಾಸ್ಟಿಂಗ್ ಹೈಗ್ಲಾಸ್ ಅಥವಆ ಲಿಪ್ ಸ್ಟಿಕ್. ಇವುಗಳಿಂದ ನಿಮ್ಮ ಮೇಕಪ್ ನ್ನು ಪೂರ್ಣಗೊಳಿಸಿ. ಕ್ರಿಸ್ಟಲ್ ಕ್ಲಿಯರ್ ಮೇಕಪ್ ಗೆ ಬೇಬಿ ಬ್ರೌನ್, ಲೆಯೊರಿಯಲ್ ಮುಂತಾದವು ಉತ್ತಮ. ಓವರ್ ಮೇಕಪ್ ಮಾಡಿಕೊಳ್ಳುವ ಅಭ್ಯಾಸದಿಂದ ದೂರವಿರಿ.
ಗ್ರಾಫಿಕ್ ಐ ಮೇಕಪ್
ಈ ಸಲ ಸ್ಮೋಕಿ ಐಸ್ ನೊಂದಿಗೆ ಗ್ರಾಫಿಕ್ ಲೈನರ್ ಚಾಲ್ತಿಯಲ್ಲಿರುತ್ತದೆ. ಸ್ಮೋಕಿ ಐಸ್ ಎಫೆಕ್ಟ್ ಗಾಗಿ ಅಪ್ಪರ್ ಮತ್ತು ಲೋಯರ್ ಲಿಡ್ ಮೇಲೆ ಲೈನರ್ ಹಾಗೂ ಕಾಜಲ್ ನ್ನು ಐಶೇಡ್ ನೊಂದಿಗೆ ಸ್ಮಜ್ ಮಾಡಿದರೆ, ಗ್ರಾಫಿಕ್ ಲೈನರ್ ನಲ್ಲಿ ಕಣ್ಣುಗಳಿಗೆ ಲೈನರ್ ನಿಂದ ಕ್ಲಿಯರ್ ಅಂಡ್ ಮಾಡರ್ನ್ ಲುಕ್ ನೀಡಲಾಗುತ್ತದೆ. ಐಶೇಡ್ಸ್ ನಲ್ಲಿ ವೈಬ್ರೆಂಟ್, ಮಿಕ್ಸ್ ಫ್ಯಾಮಿಲಿ ಕಲರ್ ಶೇಡ್ಸ್, ಫೈನಲ್ ಪಾರ್ಟಿಕ್ ಶಿಮರ್, ನಿಯಾನ್ ಮತ್ತು ಡಸ್ಟೀ ಕಲರ್ ಶೇಡ್ ಗಳು ಬಳಕೆಯಲ್ಲಿರುತ್ತವೆ.
ಹೈ ಶೈನ್ ಈ ಸೀಸನ್ ನಲ್ಲಿ ತುಟಿಗಳ ಅಂದನ್ನು ಹೆಚ್ಚಿಸಲು ಲಿಪ್ ಸ್ಟಿಕ್ ನ ಬೋಲ್ಡ್ ಶೇಡ್ ಗಳನ್ನು ಹೈ ಶೈನ್ ಗ್ಲಾಸ್ ಜೊತೆಯಲ್ಲಿ ಡಿಫೈನ್ ಮಾಡಿ. ಒಂದೆಡೆ ಕ್ರಿಸ್ಟಲ್ ಕ್ಲಿಯರ್ ಮೇಕಪ್ ನ ಸೊಬಗು ಇದ್ದರೆ, ಇನ್ನೊಂದೆಡೆ ತುಟಿಗಳ ಸೌಂದರ್ಯ ಎದ್ದು ತೋರುವಂತೆ ಮಾಡಲು ಬ್ಲಡ್ ರೆಡ್, ಬರ್ಗಂಡೀ, ಮೆರೂನ್, ಪ್ಲಮ್, ಪೇಸ್ಟಲ್, ಬ್ರೈಟ್ ಪಿಂಕ್ ಮತ್ತು ನ್ಯೂಡ್ ನ್ಯಾಚುಲರ್ ಕಲರ್ ಗಳ ಕ್ರೇಜ್ ಕಂಡುಬರುತ್ತದೆ. ಮೆಬಿಲಿನ್, ಕಲರ್ ಬಾರ್, ಕ್ರೋವೆನ್, ಲ್ಯಾಕ್ಮೆ ಪ್ರಾಡಕ್ಟ್ ಗಳಿಂದ ಆರಿಸಿಕೊಳ್ಳಬಹುದು.