–ಶರತ್ ಚಂದ್ರ
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ತನ್ನ ಲುಕ್ ಮತ್ತು ಹೈಟ್ ಮೂಲಕ ಭರವಸೆ ಮೂಡಿಸಿರುವ ಉಪ್ಪಿ ಅಣ್ಣನ ಮಗ ನಿರಂಜನ್ ಸುಧೀಂದ್ರ ಇನ್ನೊಂದು ಸಿನಿಮಾಗೆ ಸೈನ್ ಮಾಡಿದ್ದಾರೆ. ಬಿಡುಗಡೆಯಾದ ಚಿತ್ರಗಳು ಅಷ್ಟು ಯಶಸ್ವಿಯಾಗದಿದ್ದರೂ, ನಿರಂಜನ್ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಂಬಿಕೆಯಿದೆ.ಭರದಿಂ ಚಿತ್ರೀಕರಣ ನಡೆಯುತ್ತಿರುವ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ ‘ ಮೂಲಕ ಈಗಾಗಲೇ ಚಿತ್ರರಂಗದ ಗಮನ ಸೆಳೆದಿರುವ ನಿರಂಜನ್ ‘ಸ್ಪಾರ್ಕ್ ‘ ಎಂಬ ಹೊಸ ಚಿತ್ರದಲ್ಲಿ ಪತ್ರಕರ್ತನಾಗಿ ಪೆನ್ನು ಹಿಡಿಯಲ್ಲಿದ್ದಾರೆ.
ಐಟಿ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಅವಿನಾಶ್ ವಸಿಷ್ಠ ಮತ್ತು ಡಾ. ಗರಿಮ ದಂಪತಿಗಳು ಗರಿಮ ಅವಿನಾಶ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಪ್ರಪ್ರಥಮ ಚಿತ್ರದ ಮುಹೂರ್ತ ಇತ್ತೀಚಿಗೆ ಮಹಾಲಕ್ಷ್ಮಿ ಲೇ ಔಟ್ ನ ವೀರಾಂಜನೇಯ ದೇವಸ್ಥಾನದಲ್ಲಿ ನಡೆಯಿತು .
ಲಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ‘ಸ್ಪಾರ್ಕ್ ‘ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮುಹೂರ್ತ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.ಚಿತ್ರದ ನಾಯಕಿ ರಚನಾ ಇಂದರ್ ಹಾಗೂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಧರ್ಮಣ್ಣ ಕಡೂರ್, ನಟ ನವೀನ್ ಶಂಕರ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದರು.
ನಂತರ ಪತ್ರಿಕಾಗೋಷ್ಠಿ ಯಲ್ಲಿ ನಾಯಕ ನಟ ನಿರಂಜನ್ ಮಾತನಾಡಿ ‘ಸ್ಪಾರ್ಕ್ ಅಂದರೆ ಕಿಡಿ,ಅದು ಪ್ರತಿಯೊಬ್ಬ ಪತ್ರಕರ್ತನಲ್ಲಿ ಅಡಕವಾಗಿರುತ್ತದೆ. ನೈಜ್ಯ ಘಟನೆಗಳಿಂದ ಪ್ರೇರಿತರಾಗಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ, ಪತ್ರಕರ್ತರ ಘನತೆ ಗೆ ಕುಂದು ಬರದಂತೆ ಚಿತ್ರದಲ್ಲಿ ತೋರಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಒಂದಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ರಚನಾ ಇಂದರ್ ಈ ಚಿತ್ರದಲ್ಲಿ ಎಂ. ಬಿ. ಬಿ. ಎಸ್ ಸ್ಟೂಡೆಂಟ್ ಆಗಿ ನಟಿಸುತ್ತಿದ್ದೂ ನಿರ್ಮಾಪಕಿ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಜೇಮ್ಸ್, ಭರಾಟೆ ಸೇರಿ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವುಳ್ಳ ಡಿ. ಮಹಾಂತೇಶ್ ಹಂದ್ರಾಳ್ ಸ್ಪಾರ್ಕ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳಲಿದ್ದಾರೆ.ರಘು ನೀಡುವಳ್ಳಿ ಸಂಭಾಷಣೆ ಬರೆದಿದ್ದು, ಯುವ ಸಂಗೀತ ನಿರ್ದೇಶಕ ಸಚಿನ್ ಬಸ್ರುರ್ ಸಂಗೀತ ನೀಡಲಿದ್ದಾರೆ.
ಸದ್ಯದಲ್ಲಿ ಚಿತ್ರೀಕರಣ ಆರಂಭವಾಗಳಲಿದ್ದು ಚಿತ್ರದ ಉಳಿದ ತಾರಾಬಳಗದ ಕುರಿತು ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ