ತಾನು ಮಾಡಿದ್ದೆಲ್ಲಾ ಸರಿ ಎಂಬ ಹಠಮಾರಿ ಸ್ವಭಾವದ ಸಂಯುಕ್ತಾ, ಕಂಡೂ ಕೇಳರಿಯದ ಯಾವುದೋ ಅಪರಿಚಿತನನ್ನು ನಂಬಿಕೊಂಡು, ಮನೆಯವರ ವಿರೋಧದ ನಡುವೆ, ಅವನನ್ನೇ ವರಿಸಿ ವಿದೇಶಕ್ಕೆ ಹಾರಿದಳು. ಮುಂದೆ ಅವಳ ಭವಿಷ್ಯ.......?

ಸಂಯುಕ್ತಾ ಬಹಳ ಹುಡುಗಾಟ ಸ್ವಭಾವದ ಹುಡುಗಿ. ಈ ಸಾಮಾಜಿಕ ಜಾಲತಾಣದ ಮಾಯಾಜಾಲಕ್ಕೆ ಸಂಪೂರ್ಣವಾಗಿ ಮಾರುಹೋಗಿದ್ದಳು. ಆಗ ತಾನೇ ಪದವಿ ಶಿಕ್ಷಣವನ್ನು ಮುಗಿಸಿದ್ದಳು. ಅವಳ ಮನೆಯವರು ಅವಳಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಅವಳಿಗೂ ಸಮ್ಮತಿ ಇತ್ತು. ಆದರೆ ಹೆತ್ತವರು ಯಾವ ಹುಡುಗನನ್ನು ತೋರಿಸಿದರೂ ಸಂಯಕ್ತಾ ಒಪ್ಪುತ್ತಿರಲಿಲ್ಲ. ಅವಳ ಮದುವೆಯ ಕಲ್ಪನೆಯೇ ಬೇರೆಯಾಗಿತ್ತು. ಬಹಳಷ್ಟು ಸಮಯ ಫೇಸ್‌ ಬುಕ್‌, ಇನ್‌ ಸ್ಟ್ರಾಗ್ರಾಮ್ ನಲ್ಲಿಯೇ ಕಳೆಯುತ್ತಿದ್ದಳು.

ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕುತ್ತಾ ತನಗೆ ಬರುವ ಪ್ರತಿಕ್ರಿಯೆಗಳನ್ನು ಎಣಿಸುತ್ತಾ ದಿನವಿಡೀ ಅದರಲ್ಲಿ ಮಗ್ನಳಾಗಿರುತ್ತಿದ್ದಳು. ಗೆಳತಿಯರು ಹಾಕುವ ಫೋಟೋಗಳನ್ನು ನೋಡುತ್ತಾ ತಾನೂ ಕೂಡ ಇಂತಹ ಜಾಗಕ್ಕೆ ಹೋಗಿ ಫೋಟೋ ತೆಗೆಸಿಕೊಳ್ಳಬೇಕು, ಫಾರಿನ್‌ ಟ್ರಿಪ್‌ ಗೆ ಹೊರಡಬೇಕು, ವಿದೇಶದಲ್ಲಿರುವ ಹುಡುಗನನ್ನೇ ಮದುವೆಯಾಗಬೇಕು. ವಾರಾಂತ್ಯದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಫೋಟೋ ತೆಗೆದು ಜಾಲತಾಣದಲ್ಲಿ ಹಾಕುತ್ತಾ ಮೆರೆಯಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ಸಾಮಾಜಿಕ ಜಾಲತಾಣಗಳು ಇಲ್ಲದೇ ಬದುಕಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಮಾರುಹೋಗಿದ್ದಳು.

ಹೀಗಿರುವಾಗ ಫೇಸ್‌ ಬುಕ್‌ ನಲ್ಲಿ ಸಂತೋಷ್‌ ಎಂಬ ಹುಡುಗನ ಪರಿಚಯವಾಯಿತು. ಅವನ ರಂಗು ರಂಗಿನ ಮಾತಿಗೆ ಮರುಳಾದ ಸಂಯುಕ್ತಾ ಅವನನ್ನು ಪ್ರೀತಿಸತೊಡಗಿದಳು. ಅವನು ಹೊರದೇಶದಲ್ಲಿ ವಾಸವಾಗಿದ್ದ. ಇವಳಿಗೂ ಹೊರದೇಶದ ವ್ಯಾಮೋಹ ಹೆಚ್ಚಾಗಿದ್ದರಿಂದ ಅವನಿಗೆ ಬೇಗ ಮನಸೋತಳು. ಮನೆಯಲ್ಲಿ ತಾಯಿ ತಂದೆ ಬಳಿ ಅವನನ್ನೇ ಮದುವೆ ಆಗ್ತೀನಿ ಎಂದು ಹಠ ಹಿಡಿದಳು. ಅವಳ ಮನೆಯವರು ಇದಕ್ಕೆ ಸ್ವಲ್ಪ ಒಪ್ಪಿಗೆ ಕೊಡಲಿಲ್ಲ. ಬೇರೆ ದೇಶ, ಕುಲ ಗೋತ್ರ ಒಂದೂ ಗೊತ್ತಿಲ್ಲ, ಅವನ ಪೋಷಕರು ಬಂಧು ಬಳಗದವರ ವಿವರಗಳೂ ತಿಳಿಯುತ್ತಿಲ್ಲ. ಈ ಮದುವೆ  ಬೇಡವೆಂದು ಪರಿಪರಿಯಾಗಿ ಹೇಳಿದರೂ ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಸಾಮ ದಾನ ಭೇದ ದಂಡೋಪಾಯಗಳನ್ನು ಪ್ರಯೋಗಿಸಿದರೂ ಅವಳು ಪಟ್ಟು ಸಡಿಲಿಸಲಿಲ್ಲ. ಅವಳ ಸ್ನೇಹಿತೆಯರಿಂದ, ಪ್ರೀತಿ ಪಾತ್ರರಿಂದ ಹೇಳಿಸಿ ನೋಡಿದರು. ಅವಳು ಯಾವುದಕ್ಕೂ ಬಗ್ಗಲಿಲ್ಲ. ಅವಳ ತಾಯಿ ಮಗಳಿಗೆ ಅಕ್ಕರೆ ಪ್ರೀತಿಯಿಂದ, ``ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ಹತ್ತಿರ ಹೋದರೆ ಅದರ ನಿಜಸ್ವರೂಪ ತಿಳಿಯುವುದು. ನಿನಗೆ ತಿಳಿವಳಿಕೆ ಕಡಿಮೆ, ಬದುಕಿನ ಅರಿವಿಲ್ಲ. ನಿನ್ನ ನಿರ್ಧಾರ ಬದಲಿಸಿಕೊ,'' ಎಂದು ಪರಿಪರಿಯಾಗಿ ಬೇಡಿಕೊಂಡರೂ ಅವಳು ತನ್ನ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಸಂತೋಷ್‌ ಕೆಲಸದ ನಿಮಿತ್ತ ಭಾರತಕ್ಕೆ ಬಂದ ಸಂದರ್ಭದಲ್ಲಿ ಇಬ್ಬರೂ ರಿಜಿಸ್ಟರ್‌ ಮದುವೆಯಾದರು. ಇವರಿಬ್ಬರ ಮನೆಯಿಂದ ಯಾರೂ ಉಪಸ್ಥಿತರಿರಲಿಲ್ಲ. ಮದುವೆಯಾಗಿ ಸಂಯುಕ್ತಾ ಸಂತೋಷ್‌ ನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು. ಮಗಳ ನಡವಳಿಕೆಯಿಂದ ಮನನೊಂದ ಮನೆಯವರು ಈ ಮದುವೆಗೆ ತಮ್ಮ ಒಪ್ಪಿಗೆ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರಿಂದ ಹೋಟೆಲ್ ‌ನಲ್ಲಿ ಉಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ