ಜಾಗೀರ್ದಾರ್*

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, "ಕರ್ವ" ಖ್ಯಾತಿಯ ನವನೀತ್ ನಿರ್ದೇಶಿಸಿರುವ ಹಾಗೂ ಹೆಸರಾಂತ ನಟ ಶರಣ್ ನಾಯಕರಾಗಿ ನಟಿಸಿರುವ "ಛೂ‌ ಮಂತರ್" ಚಿತ್ರ ಕಳೆದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ವಿಭಿನ್ನ‌ ಕಥಾಹಂದರದ ಮೂಲಕ ಜನಮನ ಗೆದ್ದಿರುವ ಈ ಚಿತ್ರ ಈಗ ಕರ್ನಾಟಕದ ಕೆಲವು ಚಿತ್ರಮಂದಿರಗಳಲ್ಲಿ 50 ದಿನ ಪ್ರದರ್ಶನ ಕಂಡಿದೆ. ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಚಿತ್ರಮಂದಿರಗಳಿಗೆ ಜನರೇ ಬರುತ್ತಿಲ್ಲ ಎಂದು ಹೇಳುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು 50 ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಸಂತಸದ ಸಂಗತಿ. ಚಿತ್ರಕ್ಕೆ ಸಿಕ್ಕಿರುವ ಪ್ರಶಂಸೆಗೆ ಚಿತ್ರತಂಡ ಸಹ ಖುಷಿಯಾಗಿದೆ. ಇದು ಈ ವರ್ಷದ ಮೊದಲ ಕನ್ನಡದ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕನ್ನಡದಲ್ಲಿ ಸಾಮಾನ್ಯವಾಗಿ ಸಂಕ್ರಾಂತಿ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾದರೆ ಓಡುವುದಿಲ್ಲ‌ ಎಂಬ ನಂಬಿಕೆಯಿತ್ತು. ಆದರೆ ನಮ್ಮ ಚಿತ್ರವನ್ನು ಸಂಕ್ರಾಂತಿ ಸಮಯಕ್ಕೆ ಬಿಡುಗಡೆ ಮಾಡಿದ್ದೆವು. ಈಗ 50 ದಿನಗಳ ಪ್ರದರ್ಶನ ಕಂಡು ಆ ಅಪವಾದವನ್ನು ನಮ್ಮ‌ ಚಿತ್ರ ದೂರ ಮಾಡಿದೆ ಎಂದು ತಿಳಿಸಿರುವ ನಿರ್ಮಾಪಕ ತರುಣ್ ಶಿವಪ್ಪ ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ‌ಹೇಳಿದ್ದಾರೆ.

ಶರಣ್ , ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಅವರ ಸಂಗೀತ ನಿರ್ದೇಶನವಿರುವ "ಛೂ ಮಂತರ್" ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ