ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ 9 ತಿಂಗಳ ಬಾಹ್ಯಾಕಾಶ ವಾಸ ಕೊನೆಗೂ ಮುಗಿಯಲಿದೆ. ಮಾರ್ಚ್ 16ರಂದು ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಗುಡ್ ನ್ಯೂಸ್ ನೀಡಿದೆ.
ಗಗನ ನೌಕೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಇಬ್ಬರು ಗನನಯಾತ್ರಿಗಳು ಬಾಹ್ಯಾಕಾಶದಲ್ಲೇ ಕಾಲಕಳೆಯುವಂತಾಗಿದ್ದು ಕಳೆದ 9 ತಿಂಗಳಿನಿಂದ ಅನಿವಾರ್ಯವಾಗಿ ಬಾಹ್ಯಾಕಾಶದಲ್ಲಿ ಉಳಿದುಕೊಂಡಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಲ್ಯಾಂಡ್ ಆಗೋ ದಿನಾಂಕ ಫಿಕ್ಸ್ ಆಗಿದೆ ಅಂತಾ ನಾಸಾ ಅಧಿಕೃತವಾಗಿ ಹೇಳಿದೆ.
ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಡ್ರ್ಯಾಗನ್ ಗಗನ ನೌಕೆಯು ಪರ್ಯಾಯ ಗಗನಯಾನಿಗಳೊಂದಿಗೆ ಮುಂದಿನ ವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಪ್ರಯಾಣಿಸಲಿದ್ದು, ಅಲ್ಲಿಂದ ಸುನೀತಾ ಮತ್ತು ಬೆರ್ರಿ ವಿಲ್‌ಮೋರ್ ಅವರನ್ನು ಭೂಮಿಗೆ ಕರೆತರಲಾಗುತ್ತದೆ. 10 ದಿನಗಳ ಅವಧಿಗಾಗಿ ಐಎಸ್ಎಸ್ಗೆ ತೆರಳಿದ್ದ ಸುನಿತಾ ಹಾಗೂ ವಿಲ್ಮೋರ್ ತಾಂತ್ರಿಕ ಕಾರಣದಿಂದ ಅಲ್ಲೇ ಸಿಲುಕಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುನೀತಾ ವಿಲಿಯಮ್ಸ್ ಮತ್ತು ಬೆರ್ರಿ ವಿಲ್‌ಮೋರ್ ಅವರನ್ನು ಭೂಮಿಗೆ ಮರಳಿ ಕರೆತರುವಂತೆ, ಸ್ಪೇಸ್‌ಎಕ್ಸ್ ಮಾಲೀಕ ಎಲಾನ್ ಮಸ್ಕ್ ಅವರಿಗೆ ಸೂಚನೆ ನೀಡಿದ್ದರು. ಅದರಂತೆ “ಡ್ರ್ಯಾಗನ್ ಗಗನ ನೌಕೆಯಲ್ಲಿ ಇಬ್ಬರೂ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಸಿದ್ಧತೆ ನಡೆಸಲಾಗುತ್ತಿದೆ..” ಎಂದು ಎಲಾನ್ ಮಸ್ಕ್ ಮಾಹಿತಿ ನೀಡಿದ್ದರು.
10 ದಿನದ ಮಿಷನ್ಗಾಗಿ ಬೋಯಿಂಗ್ ಸ್ಟರ್ಲೈನರ್ ಕ್ಯಾಪ್ಸುಲ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್ ಹಲವು ತಾಂತ್ರಿಕ ತೊಂದರೆಗಳಿಂದ ವಾಪಸ್ ಬರಲು ಆಗಲಿಲ್ಲ. ಹಲವು ತಿಂಗಳುಗಳ ಕಾಲ ನಡೆದ ಅನೇಕ ಬೆಳವಣಿಗೆಗಳ ಬಳಿಕ ನಾಸಾ ಸ್ಪೇಸ್ ಎಕ್ಸ್ ಡ್ರಾಗನ್ ಕ್ಯಾಪ್ಸುಲ್ ಮೂಲಕ ಫೆಬ್ರವರಿಯಲ್ಲಿ ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಸ್ ಬರಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರು ಸ್ಪೇಸ್ X ಸಹಯೋಗದೊಂದಿಗೆ ಮಾರ್ಚ್ 16ರಂದು ಸುನೀತಾ ವಿಲಿಯಮ್ಸ್ ಸೇಫ್ ಲ್ಯಾಂಡ್ ಆಗುವ ಭರವಸೆ ಸಿಕ್ಕಿದೆ.