ಯಾವುದೇ ಸಭೆ ಸಮಾರಂಭವಿರಲಿ.. ಫ್ಯಾಮಿಲಿ ಫಂಕ್ಷನ್ ಇರಲಿ.. ದೇಶದ ಸರ್ಕಾರಿ ಕಾರ್ಯಕ್ರಮವಾಗಿರಲಿ.. ಎಂಥದ್ದೇ ಪ್ರೋಗ್ರಾಂನಲ್ಲೂ ದೇಶದ ಪ್ರಖ್ಯಾತ ಮಹಿಳಾ ಖ್ಯಾತ ಉದ್ಯಮಿ ನೀತಾ ಅಂಬಾನಿ ಮಾತ್ರ ಸದಾ ಲವಲವಿಕೆಯಿಂದ ಓಡಾಡುತ್ತಿರುತ್ತಾರೆ. ಅವರದ್ದೇ ಆದ ಸೆಲೆಕ್ಟೀವ್​​ ಸೀರೆಗಳ ಜೊತೆ ಡ್ರೆಸ್​​ಗಳ ಜೊತೆ ಸಾಂಪ್ರಾಯಿಕ ಉಡುಗೆಗಳ ಜೊತೆ ಮಿರಮಿರನೇ ಮಿಂಚುತ್ತಿರುತ್ತಾರೆ.

neetha ambani5

ಎಂಥವರನ್ನೂ ನಾಚಿಸುವಂತಹ.. ಯುವತಿಯರೇ ತಲೆತಗ್ಗಿಸುವಂತೆ.. ನಟಿಯರ ಬ್ಯೂಟಿನೇ ಮಂಕಾಗುವಂತೆ ಅತಿ ಸುಂದರವಾಗಿ ಕಾಣುವ ನೀತಾ ಅಂಬಾನಿಯ ಬ್ಯೂಟಿ ಮತ್ತು ಫಿಟ್ನೆಸ್​​​​​ ಹಿಂದೆ ಒಂದು ರಹಸ್ಯವೂ ಇದೆ. ಒಂದು ಕಾಲದಲ್ಲಿ ಮೋಹಕ ಚಿತ್ರನಟಿಯಾಗಿದ್ದ ನೀತಾ ಅಂಬಾನಿಗೆ ಈಗ 61 ವರ್ಷ ಅಂದ್ರೆ ಯಾರೂ ನಂಬೋದೇ ಇಲ್ಲ. ಈ ವಯಸ್ಸಿನಲ್ಲೂ 25ರ ಹುಡ್ಗೀರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಬೆರಗುಗೊಳಿಸುವಂತಹ ತಾಜಾ ಸೌಂದರ್ಯ, ಬಾಡಿ ಫಿಟ್ನೆಸ್​​ ಮತ್ತು ಹೈ ಎನರ್ಜಿ ಹೊಂದಿರುವ ಇವರದ್ದು ಶಿಸ್ತುಬದ್ಧ ಜೀವನ.

neetha ambani3

ನೀತಾ ಅಂಬಾನಿಯನ್ನು ನೋಡಿದ ಅದೆಷ್ಟೋ ಮಂದಿ ಟೀಕಿಸಿದವರೂ ಇದ್ದಾರೆ. ಜಗತ್ತಿನಲ್ಲೇ ಅತಿ ದುಬಾರಿ ಸೌಂದರ್ಯ ಚಿಕಿತ್ಸೆ, ಡಯಟ್​, ಲಕ್ಷಾನುಗಟ್ಟಲೇ ಬೆಲೆಬಾಳುವ ಪೇಯ ಸೇವಿಸಿ ಸಖತ್ ಫಿಟ್ನೆಸ್​ ಹೊಂದಿದ್ದಾರೆ ಅಂತಾ ಆಡಿಕೊಂಡವರೂ ಇದ್ದಾರೆ. ಆದ್ರೆ, ಅದ್ಯಾವುದೂ ಇವರ ಫಿಟ್ನೆಸ್​​ಗೆ ಕಾರಣ ಅಲ್ವೇ ಅಲ್ಲ. ನೀತಾ ಅಂಬಾನಿಯ ಫಿಟ್ & ಫೈನ್​​ ಹಿಂದಿರೋ ಅಸಲಿ ರಹಸ್ಯವೇ ನಡಿಗೆ, ಯೋಗ ಅನ್ನೋದು ಈಗ ಗೊತ್ತಾಗಿದೆ.

neetha ambani4

ಮೊನ್ನೆ ನಡೆದ ವುಮೆನ್ಸ್‌ ಡೇ ಪ್ರಯುಕ್ತ ಮಾತನಾಡಿರುವ ಉದ್ಯಮಿ ನೀತಾ ಅಂಬಾನಿ, ಎಲ್ಲಾ ಹೆಣ್ಮಕ್ಕಳಿಗೂ ಫಿಟ್‌ ಆಗಿರುವಂತೆ ಕಿವಿಮಾತು ಹೇಳಿದ್ದಾರೆ. ಸ್ವತಂ ನೀತಾ ಅಂಬಾನಿ ಯೋಗ, ಜಿಮ್‌ ಮಾಡುತ್ತಿರೋ ವಿಡಿಯೋ ಮೂಲಕ ಮಾತನಾಡಿ, ‘ಪ್ರತಿಯೊಬ್ಬ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ವಯಸ್ಸು ಅನ್ನೋದು ಕೇವಲ ಸಂಖ್ಯೆಯಷ್ಟೇ.. ಎಲ್ಲಾ ವಯಸ್ಸಿನ ಹೆಣ್ಮಕ್ಕಳೂ ಫಿಟ್ನೆಸ್‌ ಕಾಪಾಡಿಕೊಳ್ಳಬೇಕು, ಹೆಣ್ಮಕ್ಕಳು ಆರೋಗ್ಯವಾಗಿದ್ದರೆ ಇಡೀ ಕುಟುಂಬ, ದೇಶವೇ ಆರೋಗ್ಯವಾಗಿರುತ್ತದೆ’ ಎಂದು ಹೇಳಿದ್ದಾರೆ.

neetha ambani2

ತಮ್ಮ ಬಾಡಿ ಫಿಟ್ನೆಸ್​​​ನ ರಹಸ್ಯ ಯೋಗ, ಸ್ಟ್ರೆಂತ್​​​ ಟ್ರೇನಿಂಗ್, ನಡಿಗೆ, ಅಕ್ವಾ ವ್ಯಾಯಾಮ, ಈಜು ಮತ್ತು ಡಾನ್ಸ್​​ ಅಂತಾ ನೀತಾ ಹೇಳಿದ್ದಾರೆ. ಯಾವ ಯಾವ ವ್ಯಾಯಾಮಗಳಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಹೇಗೆ ವರ್ಕೌಟ್‌ ಮಾಡಬೇಕೆಂದು ಕೂಡ ಹೇಳಿದ್ದಾರೆ. ಜೊತೆಗೆ ನಾನು ಫಿಟ್‌ ಆಗಿರೋಕೆ ಮುಖ್ಯ ಕಾರಣ ಸಸ್ಯಾಹಾರ ಅಂತಾನೂ ಹೇಳಿರೋದು ಎಲ್ಲರನ್ನು ಅಚ್ಚರಿಗೊಳಿಸಿದೆ. ‘ಮೊದಲಿಗೆ ಸರಳ ವ್ಯಾಯಾಮದಿಂದ ದಿನಚರಿ ಆರಂಭಿಸಿ, ದಿನ 30 ನಿಮಿಷಗಳನ್ನು ಇದಕ್ಕೆ ಮೀಸಲಿಟ್ಟು ಆರೋಗ್ಯಕ್ಕೆ ಆದ್ಯತೆ ನೀಡಿ’ ಅಂತಾ ಹೆಲ್ತ್ ಟಿಪ್ಸ್​ ಕೊಟ್ಟಿರೋದು ಈಗ ದೇಶದೆಲ್ಲೆಡೆ ಹೆಣ್ಣುಮಕ್ಕಳಿಗೆ ಫಿಟ್ನೆಸ್​​ ಪಾಠ ಮಾಡಿದಂತಾಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ